Vadivelu:ತಮಿಳು ಚಿತ್ರರಂಗದ ಹೆಸರಾಂತ ಹಾಸ್ಯ ನಟ ವಡಿವೇಲು(Vadivelu). ಒಂದ್ ಕಾಲದಲ್ಲಿ ಇವರಿಲ್ಲದ ಸಿನಿಮಾಗಳೇ ಇರುತ್ತಿರಲಿಲ್ಲ. ವಡೀವೇಲು(Vadivelu) ಮಾಡದ ಪಾತ್ರಗಳಿಲ್ಲ, ಇವರ ಕಾಮಿಡಿ ಪಂಚ್ ಗೆ ನಗದವರಿಲ್ಲ. ಮ್ಯಾನರಿಸಂಗೆ ಚಪ್ಪಾಳೆ ತಟ್ಟದವರಿಲ್ಲ. ತಮ್ಮದೇ ಅಭಿಮಾನಿ ಬಳಗ ಹೊಂದಿರುವ ವಡಿವೇಲು ಈಗಲೂ ವಿಭಿನ್ನ ಪಾತ್ರಗಳಲ್ಲಿ ತಮ್ಮ ಕಾಮಿಡಿ ಟೈಮಿಂಗ್ ನಿಂದ ನಗಿಸುತ್ತಿದ್ದಾರೆ. ಆದ್ರೆ ಈ ನಡುವೆ ಕಾಮಿಡಿ ವಿಚಾರಕ್ಕಿಂತ ಹೆಚ್ಚಾಗಿ ಆರೋಪಗಳೇ ಇವರ ಮೇಲೆ ಕೇಳಿ ಬರ್ತಿದೆ.
ವಡೀವೇಲು(Vadivelu) ಮೇಲೆ ಈ ಬಾರಿ ಗಂಭೀರ ಆರೋಪಗಳನ್ನು ಹೊರಿಸಿರೋದು ಅವರದ್ದೇ ಚಿತ್ರರಂಗದ ನಟ ಹಾಗೂ ಪತ್ರಕರ್ತ ಬೈಲ್ವಾನ್ ರಂಗನಾಥನ್(Bayilvan Ranganathan). ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ವಡೀವೇಲು(Vadivelu) ವ್ಯಕ್ತಿತ್ವಕ್ಕೆ ಮಸಿ ಬಳಿಯುವಂತ ಮಾತುಗಳಾಡಿದ್ದು, ಇದನ್ನು ಕೇಳಿ ಕಾಲಿವುಡ್ ಮಂದಿ ದಂಗಾಗಿದ್ದಾರೆ. ಸ್ಟಾರ್ ಪಟ್ಟಕ್ಕೇರಿದ ಮೇಲೆ ವಡೀವೇಲು(Vadivelu) ತಮ್ಮ ಸಿನಿಮಾಗಳಲ್ಲಿ ಅವರಿಗೆ ಬೇಕಾದ ನಟಿಯರಿಗೆ ಅವಕಾಶ ನೀಡುತ್ತಿದ್ರು. ಸುವರ್ಣ ಮ್ಯಾಥಿವ್ಸ್, ಸೋನಾ, ಕೋವೈ ಸರಳಾ ಸೇರಿದಂತೆ ಹಲವು ನಟಿಯರಿಗೆ ತಮ್ಮ ಸಿನಿಮಾಗಳಲ್ಲಿ ಅವಕಾಶ ನೀಡುತ್ತಿದ್ರು. ಒಂದೆರಡು ಸಿನಿಮಾ ಆದ ನಂತರ ಕೈ ಬಿಡುತ್ತಿದ್ರು ಎಂದಿದ್ದಾರೆ. ನಟಿ ಅಂಬಿಕಾ(Ambika) ಖ್ಯಾತಿ ಕಡಿಮೆಯಾದಾಗ ಸ್ವತಃ ಅವರೇ ವಡೀವೇಲು(Vadivelu) ಅವರ ಬಳಿ ಹೋಗಿ ಅವಕಾಶ ಕೇಳಿದ್ರು. ಅವರಿಗೂ ಒಂದೆರಡು ಸಿನಿಮಾದಲ್ಲಿ ಅವಕಾಶ ನೀಡಿದ್ರು. ಇಂದಿಗೂ ನಟಿ ಕೋವೈ ಸರಳಾ(Kovai Sarala) ಮದುವೆಯಾಗದೇ ಇರೋದಕ್ಕೆ ವಡಿವೇಲು ಕಾರಣ ಎಂಬ ಗಂಭೀರ ಆರೋಪ ಮಾಡಿದ್ದಾರೆ ಬೈಲ್ವಾನ್ ರಂಗನಾಥನ್.
ಶ್ರಿಯಾ ಶರಣ್(Shriya saran), ಸದಾ(Sadha) ಸೇರಿದಂತೆ ಇನ್ನೂ ಹಲವು ನಟಿಮಣಿಯರಿಗೆ ವಡೀವೇಲು(Vadivelu) ಅವಕಾಶ ನೀಡಿದ್ದಾರೆ. ಕೇವಲ ಅಷ್ಟೇ ಅಲ್ಲ ಚೆನ್ನೈನಲ್ಲಿರುವ ತಮ್ಮ ಫಾರ್ಮ್ ಹೌಸ್ ಗೆ ಹಲವು ನಟಿಮಣಿಯರನ್ನು ಆಹ್ವಾನಿಸಿದ್ದಾರೆ. ಆ ಲಿಸ್ಟ್ ನಲ್ಲಿ ಇತ್ತೀಚಿನ ಸಾಲಿನ ನಟಿಯರಾದ ಪ್ರಿಯಾ ಶಂಕರ್ ಭವಾನಿ(Priya Shankar Bhavani), ಶಿವಾನಿ(Shivani) ಕೂಡ ಇದ್ದಾರೆ ಎಂದು ಬಹಿರಂಗ ಆರೋಪವನ್ನು ಬೈಲ್ವಾನ್ ರಂಗನಾಥನ್ ಮಾಡಿದ್ದಾರೆ.
ಅಂದ್ಹಾಗೆ ವಡೀವೇಲು(Vadivelu) ಮೇಲೆ ಕೇಳಿ ಬರ್ತಿರೋ ಆರೋಪಗಳು ಇದೇ ಮೊದಲೇನಲ್ಲ. ಈ ಹಿಂದೆ ನಟಿ ಶಕೀಲಾ(Shakeela), ಪ್ರೇಮಾ ಪ್ರಿಯಾ(Prema Priya) ಕೂಡ ಸಿನಿಮಾ ಸೆಟ್ ನಲ್ಲಿ ವಡಿವೇಲು ವರ್ತನೆ ಸರಿ ಇರುತ್ತಿರಲಿಲ್ಲ ಎಂದು ಆರೋಪ ಮಾಡಿದ್ರು. ಇದೀಗ ಬೈಲ್ವಾನ್ ರಂಗನಾಥನ್ ಕೂಡ ಅಂತದ್ದೇ ಅಪಾದನೆ ಮಾಡಿದ್ದಾರೆ. ಆದ್ರೆ ಇದೆಲ್ಲ ಸತ್ಯಕ್ಕೆ ಹತ್ತಿರವಾಗಿದ್ಯಾ,? ಆರೋಪನಾ..? ಅಪಪ್ರಚಾರನಾ..? ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆ.