Ashika Ranganath: ʻಕ್ರೇಜಿ಼ಬಾಯ್ʼ ಮೂಲಕ ಚಂದನವನದಲ್ಲಿ ಭರವಸೆ ಮೂಡಿಸಿದ ನಟಿ ಆಶಿಕಾ ರಂಗನಾಥ್(Ashika Ranganath). ಡಾನ್ಸರ್ ಆಗಿ ಕೆರಿಯರ್ ಆರಂಭಿಸಿ ನಂತರ ಹೀರೋಯಿನ್ ಆಗಿ ಬಣ್ಣ ಹಚ್ಚಿದವರು ಆಶಿಕಾ. ʻಕ್ರೇಜಿ಼ಬಾಯ್ʼ ನಂತರ ಸ್ಯಾಂಡಲ್‌ವುಡ್ ಅಂಗಳದಲ್ಲಿ ಬ್ಯುಸಿಯಾದ ಈಕೆ ಹಿಂತಿರುಗಿ ನೋಡಿದ್ದಿಲ್ಲ. ಆದ್ರೆ ಆರಂಭದಲ್ಲಿ ಮೇಲ್ಮುಕವಾಗಿ ಸಾಗಿದ್ದ ʻಮುಗುಳು ನಗೆʼ ಹುಡುಗಿಯ ಡಿಮ್ಯಾಂಡ್ ಗ್ರ್ಯಾಫ್ ಈಗ್ಯಾಕೋ ಇಳಿಮುಖವಾಗಿದೆ.
ಆಶಿಕಾ ರಂಗನಾಥ್(Ashika Ranganath) ಪ್ರತಿಭಾವಂತ ನಟಿ ಅನ್ನೋದರಲ್ಲಿ ಎರಡು ಮಾತಿಲ್ಲ. ಡಾನ್ಸ್, ಆಕ್ಟಿಂಗ್, ಲುಕ್ ಎಲ್ಲದರಲ್ಲೂ ಪರ್ಫೆಕ್ಟ್ ಈ ಕನ್ನಡದ ಮಿಲ್ಕಿ ಬ್ಯೂಟಿ. ʻಕ್ರೇಜಿ಼ಬಾಯ್ʼ ಸಿನಿಮಾ ನಂತರ ʻಮಾಸ್ ಲೀಡರ್ʼ, ʻಮುಗುಳು ನಗೆʼ, ʻರ್ಯಾಂಬೊ-2ʼ, ʻತಾಯಿಗೆ ತಕ್ಕ ಮಗʼ, ʻಮದಗಜʼʻ, ʻರೇಮೋʼ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಈಕೆಗೆ ದೊಡ್ಡದೊಂದು ಗೆಲುವು ಮರೀಚಿಕೆಯಾಗೇ ಉಳಿದಿದೆ. ರ್ಯಾಂಬೊ-2 ಹೆಸರು ತಂದುಕೊಟ್ಟರೂ ಆ ನಂತರದ ಯಾವ ಕನ್ನಡ ಸಿನಿಮಾಗಳು ಹೇಳಿಕೊಳ್ಳೋ ಮ್ಯಾಜಿಕ್ ಮಾಡಲಿಲ್ಲ.
ಟಾಲಿವುಡ್ ಅಂಗಳದಲ್ಲೊಮ್ಮೆ ಅದೃಷ್ಟ ಪರೀಕ್ಷೆ ಮಾಡೇ ಬಿಡುವ ಎಂದು ʻನಾ ಸಾಮಿ ರಂಗʼ, ʻಅಮಿಗೋಸ್ʼʻ, ಪಕ್ಕದ ತಮಿಳಿನಲ್ಲಿ ʻಪಟ್ಟತ್ತು ಅರಸನ್ʼ ಸಿನಿಮಾಗಳಲ್ಲೂ ಬಣ್ಣ ಹಚ್ಚಿದ್ದಾರೆ. ಆದ್ರೆ ಅಲ್ಲೂ ಕನ್ನಡತಿಗೆ ಗೆಲುವು ಸಿಗುತ್ತಿಲ್ಲ. ಹೀಗೆ ಸಾಲು ಸೋಲುಗಳು ಆಶಿಕಾ(Ashika Ranganath) ಕೆರಿಯರನ್ನ ಯಾಕೋ ಮಂಕು ಕವಿದಂತೆ ಮಾಡಿದೆ. ʻರೇಮೋʼ ಬಿಗ್ ಹೈಪ್ ಕ್ರಿಯೇಟ್ ಮಾಡಿದ್ರು ಸಿನಿಮಾ ಹೀನಾಯ ಸೋಲು ಕಂಡಿದೆ. ಸದ್ಯಕ್ಕೀಗ ಎಲ್ಲರಂತೆ ಆಶಿಕ ಕೂಡ ಸಾಲು ಸಿನಿಮಾಗಳ ಸೋಲಿನ ಸುಳಿಯಲ್ಲಿ ಸಿಲುಕಿದ್ದು, ಯಾವ ಸ್ಟಾರ್ ಹೀರೋಗಳ ನಯಾ ಪ್ರಾಜೆಕ್ಟ್ ಕನ್ನಡತಿ ಕೈಯಲಿಲ್ಲ.
ಶರಣ್ ಅಭಿನಯದ ಅವತಾರ ಪುರುಷ-2 (Avathara Purusha-2), ಓ2(O2) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಅವತಾರ ಪುರುಷ ಶರಣ್(Sharan) ಕಾರಣಕ್ಕಾಗಿ ಸುದ್ದಿಯಲ್ಲಿದ್ರು ಸಿನಿಮಾ ಬಗ್ಗೆ ಹೇಳಿಕೊಳ್ಳುವಂತ ಬಝ್ ಕ್ರಿಯೇಟ್ ಆಗಿಲ್ಲ. ಮೊದಲ ಪಾರ್ಟ್ ಕೂಡ ಅಷ್ಟೇನೂ ಕಮಾಲ್ ಮಾಡಿಲ್ಲ. ಒಂದು ವೇಳೆ ಅವತಾರ ಪುರುಷ-2 ಕ್ಲಿಕ್ ಆದ್ರೆ ಆಶಿಕಾ(Ashika Ranganath) ಸಿನಿ ಕೆರಿಯರ್ ಕೂಡ ಶೈನ್ ಆಗೋದ್ರಲ್ಲಿ ಡೌಟ್ ಇಲ್ಲ.