Sridevi: ಭಾರತೀಯ ಚಿತ್ರರಂಗದ ಮೊದಲ ಲೇಡಿ ಸೂಪರ್ ಸ್ಟಾರ್ ನಟಿ ಶ್ರೀದೇವಿ(Sridevi). ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದ ಅಭಿನಯ ಅಪ್ಸರೆಗೆ ಮನಸೋಲದವರಿಲ್ಲ. ೨೦೧೮ರಲ್ಲಿ ಇಹಲೋಕ ತ್ಯಜಿಸಿದ ಈ ನಟಿಯ ನೆನಪು ಕೋಟ್ಯಾಂತರ ಅಭಿಮಾನಿಗಳಲ್ಲಿ ಎಂದಿಗೂ ಅಜರಾಮರ. ಇಂತಹ ಸೂಪರ್ ಸ್ಟಾರ್ ಬದುಕು ತೆರೆ ಮೇಲೆ ಅನಾವರಣ ಆದ್ರೆ ಹೇಗಿರುತ್ತೆ..? ಇಂತಹದ್ದೊಂದು ಸುದ್ದಿ ಹರಿದಾಡಲು ಕಾರಣ ಪತಿ ಬೋನಿ ಕಪೂರ್(Boney Kapoor).
ನೋಡಲು ಅಪ್ಸರೆ, ಅಷ್ಟೇ ಚೆಂದದ ಅಭಿನಯ, ಕೋಟ್ಯಾಂತರ ಅಭಿಮಾನಿಗಳು, ಸೂಪರ್ ಸ್ಟಾರ್ ಪಟ್ಟ, ಹತ್ತು ಹಲವು ಪ್ರಶಸ್ತಿಗಳು ಇದೆಲ್ಲವೂ ನಟಿ ಶ್ರೀದೇವಿ(Sridevi)ಸಂಪಾದನೆ. ಇಂತಹ ನಟಿ ಸಾವು ಮಾತ್ರ ನುಂಗಲಾರದ ತುತ್ತು. ಅವರ ಹಠಾತ್ ಸಾವು ಈಗಲೂ ನಂಬಲಸಾಧ್ಯ. ಇದೀಗ ಈ ಸೂಪರ್ ಸ್ಟಾರ್ ಬದುಕು ತೆರೆ ಮೇಲೆ ತರುವ ಯೋಜನೆಯಲ್ಲಿದ್ದಾರೆ ಪತಿ ಬೋನಿ ಕಪೂರ್(Boney Kapoor).
ʻಮೈದಾನ್́ ಸಿನಿಮಾ ಪ್ರಮೋಷನ್ ವೇಳೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಬೋನಿ ಕಪೂರ್(Boney Kapoor) ಇಂತಹದ್ದೊಂದು ಸುಳಿವು ನೀಡಿದ್ದಾರೆ. ಶ್ರೀದೇವಿ ಸೂಪರ್ ಸ್ಟಾರ್ ಆಗಿದ್ದರೂ ಕೂಡ ಆಕೆಯ ಬದುಕು ಖಾಸಗಿಯಾಗಿಯೇ ಉಳಿದಿತ್ತು. ಆಕೆಯ ಜೀವನದ ಎಷ್ಟೋ ವಿಚಾರಗಳ ಬಗ್ಗೆ ಎಲ್ಲರಿಗೂ ತಿಳಿದಿಲ್ಲ. ಇನ್ನೂ ಮುಂದೆ ಹಾಗೇ ಆಗೋದಿಲ್ಲ ಎಂದಿದ್ದಾರೆ. ಬೋನಿ ಕಪೂರ್ ನೇರವಾಗಿ ಶ್ರೀದೇವಿ ಬಯೋಪಿಕ್ ಬಗ್ಗೆ ಮಾತನಾಡದಿದ್ರು, ಆವರ ಮಾತಿನ ಅರ್ಥ ಬಯೋಪಿಕ್ ಮೂಲಕ ಶ್ರೀದೇವಿ ಜೀವನವನ್ನು ತೆರೆ ಮೇಲೆ ತೆರೆದಿಡುವುದೇ ಆಗಿದೆ ಎನ್ನುವುದು ಸಂದರ್ಶನ ನೋಡಿದವರ ಉವಾಚ.
ಶ್ರೀದೇವಿ(Sridevi) ಬದುಕನ್ನು ಕುರಿತ ʻಲೈಫ್ ಆಫ್ ಎ ಲೆಜೆಂಡ್ʼ ಎಂಬ ಪುಸ್ತಕವನ್ನು ಧೀರಜ್ ಕುಮಾರ್ ಬರೆದಿದ್ದಾರೆ. ಇದೀಗ ಸಿನಿಮಾವಾಗಿ ಶ್ರೀದೇವಿ ಬದುಕಿನ ಚಿತ್ರಣ ತೆರೆ ಮೇಲೆ ನೋಡಲು ಕೋಟ್ಯಾಂತರ ಮಂದಿ ಕಾತುರರಾಗಿದ್ದಾರೆ. ಬೋನಿ ಕಪೂರ್ ಆ ಆಸೆ ನೆರವೇರಿಸುತ್ತಾರಾ..? ಒಂದು ವೇಳೆ ಬಯೋಪಿಕ್ ಬರುವುದು ನಿಜವೇ ಆದರೇ ಶ್ರೀದೇವಿ ಪಾತ್ರಕೆ ಬಣ್ಣ ಹಚ್ಚುವರ್ಯಾರು..? ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.