Vijay Deverakonda: ʻಅರ್ಜುನ್ ರೆಡ್ಡಿʼ ಸಿನಿಮಾ ಮೂಲಕ ಸೌತ್ ಸಿನಿ ರಂಗದಲ್ಲಿ ಸೆನ್ಸೇಶನ್ ಕ್ರಿಯೇಟ್ ಮಾಡಿದ ಯಂಗ್ ಎಂಡ್ ಹ್ಯಾಂಡ್ಸಮ್ ನಟ ವಿಜಯ್ ದೇವರಕೊಂಡ(Vijay Deverakonda). ʻಅರ್ಜುನ ರೆಡ್ಡಿʼ ಸಕ್ಸಸ್ ಜೊತೆಗೆ ಸೆನ್ಸೇಷನ್ ಕ್ರಿಯೇಟ್ ಮಾಡಿದ ವಿಜಯ್‌ಗೆ ʻಸೆನ್ಸೇಷನಲ್ ಸ್ಟಾರ್ʼ ಎಂಬ ಪಟ್ಟವೂ ಸಿಕ್ಕಿತ್ತು. ತಮ್ಮ ಸ್ಟೈಲ್, ಲುಕ್ ಮೂಲಕ ಟಾಲಿವುಡ್ ಅಂಗಳದಲ್ಲಿ ಹೊಸ ಛಾರ್ಮ್ ಕ್ರಿಯೇಟ್ ಮಾಡಿದ ವಿಜಯ್ ಅದೃಷ್ಟವೂ ಖುಲಾಯಿಸಿತು.
ʻಅರ್ಜುನ್ ರೆಡ್ಡಿʼ(Arjun Reddy) ಸೂಪರ್ ಹಿಟ್ ಬೆನ್ನಲ್ಲೇ ʻಗೀತ ಗೋವಿಂದಂʼ ಸಿನಿಮಾ ಕೂಡ ಬ್ಲಾಕ್ ಬಸ್ಟರ್ ಹಿಟ್ ಆಯ್ತು. ನೋಡು ನೋಡುತ್ತಿದ್ದಂತೆ ಸ್ಟಾರ್ ಪಟ್ಟಕ್ಕೇರಿದ್ರು ವಿಜಯ್. ಅವರದ್ದೇ ಆದ ಫ್ಯಾನ್ ಫಾಲೋಯರ್ಸ್ ಹುಟ್ಟಿಕೊಂಡ್ರು. ಇವರ ಸಿನಿಮಾ ಬಗ್ಗೆ ಇನ್ನಿಲ್ಲದ ನಿರೀಕ್ಷೆ ಕ್ರಿಯೇಟ್ ಆಗಲು ಶುರುವಾಯ್ತು. ಎಲ್ಲಾ ಸ್ಟಾರ್‌ಗಳನ್ನು ಹಿಂದಿಕ್ಕುತ್ತಾರೆ ಅನ್ನೋವಾಗಲೇ ಟ್ಯಾಕ್ಸಿವಾಲಾ, ಡಿಯರ್ ಕಾಂಮ್ರೆಡ್, ವರ್ಲ್ಡ್ ಫೇಮಸ್ ಲವರ್, ಲೈಗರ್ ಸಿನಿಮಾಗಳು ಮಕಾಡೆ ಮಲಗಿ, ಸಾಲು ಸಾಲು ಸಿನಿಮಾಗಳ ಸೋಲಿನಲ್ಲಿ ಸಿಲುಕಿದ್ರು. ʻಖುಷಿʼ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಕಮಾಯಿ ಮಾಡಿದರೂ ಹೇಳಿಕೊಳ್ಳುವಂತ ಸಕ್ಸಸ್ ಸಿಗಲಿಲ್ಲ. ಸದ್ಯ ʻಗೀತ ಗೋವಿಂದಂʼ ನಿರ್ದೇಶಕ ಪರಸುರಾಮ್ ಜೊತೆಗೂಡಿ ʻಫ್ಯಾಮಿಲಿ ಸ್ಟಾರ್ʼ ಮೂಲಕ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ ಸೆನ್ಸೇಷನಲ್ ಸ್ಟಾರ್.
ಸಾಲು ಸಾಲು ಸಿನಿಮಾಗಳ ಸೋಲಿನ ಸುಳಿಯಲ್ಲಿರುವ ವಿಜಯ್ ದೇವರಕೊಂಡ (Vijay Deverakonda) ಗೆಲುವಿಗಾಗಿ ಹಪ ಹಪಿಸುತ್ತಿದ್ದಾರೆ. ಸೋಲಿನಿಂದ ಕಂಗೆಟ್ಟಿರುವ ವಿಜಯ್ ಸಿನಿಮಾದಿಂದ ಕೊಂಚ ಬ್ರೇಕ್ ತೆಗದುಕೊಳ್ಳಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಓಡಾಡ್ತಿದೆ.
ʻಫ್ಯಾಮಿಲಿ ಸ್ಟಾರ್ʼ(Family Star) ಬಳಿಕ ಜೆರ್ಸಿ ಸಿನಿಮಾ ನಿರ್ದೇಶಕರೊಂದಿಗೆ ಕೈ ಜೋಡಿಸಿದ್ದು, ಈ ಸಿನಿಮಾ ಹೊರತು ಪಡಿಸಿ ಬೇರ್ಯಾವ ಸಿನಿಮಾಗಳು ವಿಜಯ್ ಬಳಿ ಇಲ್ಲ. ಸಿನಿಮಾ ಆಯ್ಕೆ ವಿಚಾರದಲ್ಲೂ ಕೊಂಚ ಚ್ಯುಸಿಯಾಗುವ ನಿರ್ಧಾರಕ್ಕೆ ಸೆನ್ಸೇಷನಲ್ ಸ್ಟಾರ್ ಬಂದಿದ್ದಾರಂತೆ. ಅಭಿಮಾನಿಗಳು ಕೂಡ ನೆಚ್ಚಿನ ಹೀರೋ ಸಿನಿಮಾ ಗೆಲುವಿಗಾಗಿ ಪ್ರಾರ್ಥಿಸುತ್ತಿದ್ದು, ವಿಜಯ್ (Vijay Deverakonda) ತೆಗೆದುಕೊಂಡಿರುವ ನಿರ್ಧಾರ ಅವ್ರ ಅಭಿಮಾನಿಗಳಿಗೂ ಶಾಕ್ ನೀಡಿದೆ.