ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಬಾಲಿವುಡ್ಗೆ ಲಗ್ಗೆ ಇಡಲು ರೆಡಿಯಾದರಾ? ಟಾಲಿವುಡ್, ಕಾಲಿವುಡ್ ಬೆನ್ನಲ್ಲೇ ಮಾಲಿವುಡ್ಗೆ ಗ್ರ್ಯಾಂಡ್ ಎಂಟ್ರಿಕೊಡಲು ಸಜ್ಜಾಗಿರುವ ಶಿವಣ್ಣ, ಬಿಟೌನ್ ಅಖಾಡಕ್ಕೆ ಇಳಿಯಲು ಮನಸ್ಸು ಮಾಡಿದರಾ? ದಿ ಕೇರಳ ಸ್ಟೋರಿ ಡೈರೆಕ್ಟರ್ ಜೊತೆ ಕೈ ಜೋಡಿಸಿದರಾ? ಅಷ್ಟಕ್ಕೂ, ಬಾಲಿವುಡ್ನ ಆ ನಿರ್ದೇಶಕ ದೊಡ್ಮನೆಗೆ ಭೇಟಿಕೊಟ್ಟಿದ್ಯಾಕೆ? ಮಾಸ್ ಲೀಡರ್ ನ ಮೀಟ್ ಮಾಡಿದ್ದು ಸಿನಿಮಾ ಮಾಡಲಿಕ್ಕಾ ಅಥವಾ ಬಂಗಾರ ಸನ್ ಆಫ್ ಬಂಗಾರದ ಮನುಷ್ಯನ ಕ್ಷೇಮ ಸಮಾಚಾರ ವಿಚಾರಿಸಲಿಕ್ಕಾ? ಶ್ರೀ ಮುತ್ತು ನಿವಾಸಕ್ಕೆ ಬಂದು ಹೋದ ಸುದೀಪ್ತೋ ಸೇನ್ ಹೇಳಿದ್ದೇನು? ದಿ ಕೇರಳ ಸ್ಟೋರಿ ಕ್ಯಾಪ್ಟನ್ಗೆ ಕರುನಾಡ ಚಕ್ರವರ್ತಿ ಕಾಲ್ಶೀಟ್ ಕೊಟ್ಟರೇನು? ಈ ಬಗೆಗಿನ ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ
ಸೆಂಚುರಿ ಸ್ಟಾರ್ ಶಿವಣ್ಣ ಸ್ಯಾಂಡಲ್ವುಡ್ನ ಮೋಸ್ಟ್ ಬ್ಯುಸಿಯೆಸ್ಟ್ ಆ್ಯಕ್ಟರ್ ಅನ್ನೋದು ನಿಮಗೆಲ್ಲ ಗೊತ್ತೆಯಿದೆ. ವಯಸ್ಸು 60 ಆದ್ರೂ ಕೂಡ ದುನಿಯಾದಲ್ಲಿ ಡಿಮ್ಯಾಂಡ್ ಕಳೆದುಕೊಳ್ಳದ ದೊಡ್ಮನೆ ದೊರೆ ಈಗ ಸ್ಯಾಂಡಲ್ವುಡ್ ಸ್ಟಾರ್ಗಳಿಗೆ ಮಾತ್ರವಲ್ಲ ಸೌತ್ ಸೂಪರ್ ಸ್ಟಾರ್ಗಳಿಗೂ ಟಕ್ಕರ್ ಕೊಡ್ತಿದ್ದಾರೆ. ಇಲ್ಲಿತನಕ ಶಿವಣ್ಣ ಕನ್ನಡಕ್ಕೆ ಮಾತ್ರ ಸೀಮಿತವಾಗಿದ್ದರು. ಆದರೆ, ಜೈಲರ್ ಬಿಡುಗಡೆ ನಂತರ ಬೇಡಿಕೆ ಹೆಚ್ಚಿದೆ. ತೆಲುಗು, ತಮಿಳು, ಮಲೆಯಾಳಂ ಸಿನಿಮಾ ಪ್ರೇಕ್ಷಕರು ಮಾತ್ರವಲ್ಲ ಅಲ್ಲಿನ ಸ್ಟಾರ್ ಗಳು ಕೂಡ ಸೆಂಚುರಿ ಸ್ಟಾರ್ ನಮ್ಮ ಸಿನಿಮಾದ ಭಾಗವಾಗಬೇಕು ಅಂತ ಆಸೆಪಡ್ತಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ಹಲವು ಪ್ರಯತ್ನಗಳು ನಡೆದಿವೆ. ಅದ್ರಲ್ಲಿ ಮಲೆಯಾಳಂ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಯಶ ಕಂಡಿದ್ದಾರೆ. ಮಾಸ್ ಲೀಡರ್ ಕಾಲ್ಶೀಟ್ ಗಿಟ್ಟಿಸಿಕೊಂಡು ತಮ್ಮ ಅಪ್ಕಮ್ಮಿಂಗ್ ಸಿನಿಮಾ ಶುರು ಮಾಡಲು ಕಾತುರರಾಗಿದ್ದಾರೆ.
ಅಷ್ಟಕ್ಕೂ, ಪೃಥ್ವಿರಾಜ್ ಸುಕುಮಾರನ್ ಶಿವಣ್ಣನ ಕಾಲ್ಶೀಟ್ ಪಡೆದಿರುವುದು ಟೈಸನ್ ಸಿನಿಮಾಗಾ ಅಥವಾ ಎಂಪುರಾನ್ ಚಿತ್ರಕ್ಕಾ ಎನ್ನುವ ಗುಟ್ಟು ರಟ್ಟಾಗಿಲ್ಲ. ನಟ ಶಿವರಾಜ್ಕುಮಾರ್ ಕೂಡ ಈ ಸೀಕ್ರೇಟ್ನ ರಿವೀಲ್ ಮಾಡಿಲ್ಲ. ಆದರೆ, ಟೈಸನ್ ಹಾಗೂ ಎಂಪುರಾನ್ ಎರಡು ಕೂಡ ಇಡೀ ಸೌತ್ ಸಿನಿಮಾ ಇಂಡಸ್ಟ್ರಿ ಎದುರುನೋಡ್ತಿರುವ ಚಿತ್ರಗಳು. ಹೀಗಾಗಿ, ನಿರೀಕ್ಷೆ ಬೆಟ್ಟದಷ್ಟಿದೆ. ಈ ಮಧ್ಯೆ ಸಿನಿದುನಿಯಾದಲ್ಲಿ ಹೊಸದೊಂದು ಸಂಚಲನ ಸೃಷ್ಟಿಸಿದ ನಿರ್ದೇಶಕರ ಜೊತೆಗೆ ಕಾಣಿಸಿಕೊಂಡು ಸೆಂಚುರಿಸ್ಟಾರ್ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ಮಾಲಿವುಡ್ ಬೆನ್ನಲ್ಲೇ ಬಾಲಿವುಡ್ ಗೆ ಲಗ್ಗೆ ಇಡಲು ರೆಡಿಯಾದರಾ? ಹೀಗೊಂದು ಅನುಮಾನ ದಟ್ಟವಾಗಲು ಕಾರಣವಾಗಿದ್ದಾರೆ.
ಈಗಾಗಲೇ ಮೇಲೆ ತಿಳಿಸಿರುವಂತೆ ಹ್ಯಾಟ್ರಿಕ್ ಹೀರೋ ಶಿವಣ್ಣ ದಿ ಕೇರಳ ಸ್ಟೋರಿ ಡೈರೆಕ್ಟರ್ ಜೊತೆ ಕಾಣಿಸಿಕೊಂಡಿದ್ದಾರೆ. ಅಷ್ಟಕ್ಕೂ, ಶಿವಣ್ಣ ಏನು ಅವರನ್ನ ಭೇಟಿ ಮಾಡಲು ಹೋಗಿಲ್ಲ. ಬದಲಾಗಿ, ದಿ ಕೇರಳ ಸ್ಟೋರಿ ನಿರ್ದೇಶಕರೇ ಶ್ರೀ ಮುತ್ತು ನಿವಾಸಕ್ಕೆ ಎಂಟ್ರಿಕೊಟ್ಟು ಹೋಗಿದ್ದಾರೆ. ಮುತ್ತಣ್ಣನ ಜೊತೆ ಕುಂತು ಮಾತುಕತೆ ನಡೆಸಿದ ನಿರ್ದೇಶಕ ಸುದೀಪ್ತೋ ಸೇನ್ ಅವರು ಅಣ್ಣಾವ್ರ ಭಾವಚಿತ್ರದ ಮುಂದೆ ಶಿವಣ್ಣನ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಅದನ್ನ ತಮ್ಮ ಸೋಷಿಯಲ್ ಪುಟದಲ್ಲಿ ಹಂಚಿಕೊಂಡಿರುವ ಅವರು, ಮೋಸ್ಟ್ ಹಂಬಲ್ ಸೂಪರ್ ಸ್ಟಾರ್ ನ ಭೇಟಿ ಮಾಡಿದೆ ಎಂದು ಟ್ವೀಟ್ ಮಾಡಿದ್ದಾರೆ. ಸದ್ಯ ಈ ಫೋಟೋ ಸೋಷಿಯಲ್ ಜಗತ್ತಿನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ದಿ ಕೇರಳ ಸ್ಟೋರಿ ಕ್ಯಾಪ್ಟನ್ ಜೊತೆ ಕರುನಾಡ ಚಕ್ರವರ್ತಿ ಕೈ ಜೋಡಿಸಿರಬಹುದಾ? ಬಾಲಿವುಡ್ ಲೋಕಕ್ಕೆ ಜಿಗಿಯಲು ದೊಡ್ಮನೆ ದೊರೆ ಸಜ್ಜಾಗಿರಬಹುದಾ? ಹೀಗೊಂದಿಷ್ಟು ಸಂಶಯಾಸ್ಪದ ಪ್ರಶ್ನೆಗಳು ಹುಟ್ಟಿಕೊಂಡಿವೆ. ಆದರೆ, ಆ ಪ್ರಶ್ನೆಗೆ ಸದ್ಯಕ್ಕೆ ನಮ್ಮ ಬಳಿಯೂ ಉತ್ತರವಿಲ್ಲ.
ಅಂದ್ಹಾಗೇ, ಶಿವಣ್ಣ 2016ರಲ್ಲಿ ಮೊದಲ ಭಾರಿಗೆ ಕರುನಾಡಿನಿಂದ ಕಾಲು ಹೊರಗಿಟ್ಟರು. ಎನ್ಟಿಆರ್ ಕುಟುಂಬದ ಜೊತೆಗಿದ್ದ ಒಡನಾಟದಿಂದ ನಂದಮೂರಿ ಬಾಲಕೃಷ್ಣ ಅವ್ರೊಟ್ಟಿಗೆ `ಗೌತಮಿಪುತ್ರ ಶಾತಕರ್ಣಿ’ ಸಿನಿಮಾದಲ್ಲಿ ಅಭಿನಯಿಸಿದ್ದರು. ಅನಂತರ ಕನ್ನಡ ಸಿನಿಮಾಗಳಲ್ಲೇ ಬ್ಯುಸಿಯಾಗಿದ್ದ ಹ್ಯಾಟ್ರಿಕ್ ಹೀರೋ, ಸೂಪರ್ ಸ್ಟಾರ್ ರಜನಿಕಾಂತ್ ಜೊತೆಗಿನ ಸ್ನೇಹ-ಸಂಬಂಧಕ್ಕೆ ಸಾಕ್ಷಿಯಾಗಿ `ಜೈಲರ್’ ಚಿತ್ರದ ಭಾಗವಾದರು. ಮಂಡ್ಯ ಮೂಲದ ಡಾನ್ ನರಸಿಂಹನ ಪಾತ್ರಕ್ಕೆ ಬಣ್ಣ ಹಚ್ಚಿದರು.ಕೆಲವೇ ಕೆಲವು ನಿಮಿಷಗಳ ಕಾಲವಷ್ಟೇ ತೆರೆಮೇಲೆ ಬರುವ ಶಿವಣ್ಣನ ಈ ಪಾತ್ರ ಅದೆಷ್ಟರ ಮಟ್ಟಿಗೆ ಹವಾ ಎಬ್ಬಿಸಿದೆ ಅಂದರೆ, ತೆಲುಗು, ತಮಿಳು, ಮಲೆಯಾಳಂ ಈ ಮೂರು ಇಂಡಸ್ಟ್ರಿಯ ಸಿನಿಮಾಮಂದಿ ನಮ್ಮ ಕರುನಾಡ ಚಕ್ರವರ್ತಿಯ ಮನೆಮುಂದೆ ಕ್ಯೂ ನಿಲ್ಲುವಷ್ಟು.
ಅಚ್ಚರಿ ಅಂದರೆ ದೊಡ್ಮನೆ ದೊರೆ ಮನೆಮುಂದೆ ಕನ್ನಡ ಸಿನಿಮಾ ಇಂಡಸ್ಟ್ರಿಯ ಎಷ್ಟೋ ಜನ ನಿರ್ದೇಶಕರು, ನಿರ್ಮಾಪಕರು ಈಗಲೂ ಕ್ಯೂ ನಿಂತಿದ್ದಾರೆ. ಮುತ್ತಣ್ಣ ಒಪ್ಪಿಕೊಂಡಿರೋ ಸಿನಿಮಾಗಳನ್ನ ಆದಷ್ಟು ಬೇಗ ಮುಗಿಸಿಕೊಟ್ಟು ನಮಗೊಂದು ಕಾಲ್ಶೀಟ್ ಕೊಡ್ತಾರೆ ಅಂತ ಕಾಯ್ತಿದ್ದಾರೆ. ಹೀಗಿರುವಾಗಲೇ ಕಾಲಿವುಡ್, ಟಾಲಿವುಡ್, ಮಾಲಿವುಡ್ ಸಿನಿಮಾ ಇಂಡಸ್ಟ್ರಿಯವರು ನಮ್ಮ ಮಾಸ್ ಲೀಡರ್ ನ ಅಲ್ಲೆ ಲಾಕ್ ಮಾಡಿಕೊಳ್ಳೋಕೆ ನೋಡ್ತಿದ್ದಾರೆ. ರಜನಿಕಾಂತ್ ಅಳಿಯ ಧನುಷ್ ಜೊತೆಗಿನ ಕ್ಯಾಪ್ಟನ್ ಮಿಲ್ಲರ್ ಚಿತ್ರ ಮುಗಿಸಿಕೊಟ್ಟು ಶಿವಣ್ಣ ವಾಪಾಸ್ ಬರ್ತಾರೆ ಎಂದುಕೊಳ್ಳುತ್ತಿರುವಾಗಲೇ, ಮಲೆಯಾಳಂ ಸಿನಿಮಾ ಇಂಡಸ್ಟ್ರಿಯವರು ಮಾಸ್ ಲೀಡರ್ನ ಕ್ಯಾಚ್ ಹಾಕ್ಕೊಂಡಿದ್ದಾರೆ. ಈಗ ದಿ ಕೇರಳ ಸ್ಟೋರಿ ಡೈರೆಕ್ಟರ್ ದೊಡ್ಮನೆಗೆ ಬಂದು ಹೋಗಿದ್ದಾರೆ. ಇವರ ಭೇಟಿ ಸಿನಿಮಾ ಉದ್ದೇಶವೇ ಆಗಿದ್ದರೆ, ಶಿವಣ್ಣ ಬಾಲಿವುಡ್ಗೆ ಜಿಗಿಯೋದು ಗ್ಯಾರಂಟಿ.
ಇನ್ನೂ ಕಳೆದ 37 ವರ್ಷಗಳಿಂದ ಗಂಧದಗುಡಿಯ ರಜತಪರದೆಯನ್ನ ಬೆಳಗುತ್ತಾ ಬಂದಿರುವ ಸನ್ ಆಫ್ ಬಂಗಾರದ ಮನುಷ್ಯ, ಸ್ನೇಹ, ಪ್ರೀತಿ, ಬಾಂದವ್ಯಕ್ಕೆ ಬೆಲೆಕೊಟ್ಟು ಪರಭಾಷೆಯ ಆಪ್ತರ ಸಿನಿಮಾಗಳನ್ನ ಒಪ್ಪಿಕೊಳ್ತಿದ್ದಾರೆ. ಕೆಲ ಪಾತ್ರಗಳು ಕರುನಾಡ ಚಕ್ರವರ್ತಿಯನ್ನೇ ಡಿಮ್ಯಾಂಡ್ ಮಾಡ್ತಿರೋದ್ರಿಂದ ಅವುಗಳನ್ನೂ ಒಪ್ಪಿಕೊಳ್ಳಬೇಕಿದೆ. ಗಡಿಯ ಹಂಗು ತೊರೆದು ಧಗಧಗಿಸಬೇಕಿದೆ. ಅದೇ ಕೆಲಸವನ್ನ ಹ್ಯಾಟ್ರಿಕ್ ಹೀರೋ ಅಚ್ಚುಕಟ್ಟಾಗಿ ನಿಭಾಯಿಸ್ತಿದ್ದಾರೆ. ತೆಲುಗು-ತಮಿಳು ನಂತ್ರ ಮಲೆಯಾಳಂ ಸಿನಿಮಾ ಒಪ್ಪಿಕೊಂಡಿದ್ದಾರೆ. ಸದ್ಯ ಶಿವಣ್ಣನ ಕೈಯಲ್ಲಿ ಒಂದು ಡಜನ್ಗಿಂತ ಜಾಸ್ತಿ ಸಿನಿಮಾಗಳಿವೆ. ಹೆಚ್ಚು ಕಮ್ಮಿ ಮೂರ್ನಾಲ್ಕು ವರ್ಷಗಳ ಕಾಲ ನಿರಂತರವಾಗಿ ಕೆಲಸ ಮಾಡುವಷ್ಟು ಸಿನಿಮಾಗಳನ್ನ ಸೆಂಚುರಿ ಸ್ಟಾರ್ ಒಪ್ಪಿಕೊಂಡಿದ್ದಾರೆ. ಘೋಸ್ಟ್, ಭೈರತಿ ರಣಗಲ್, ಕಬ್ಜ-2, ಕರಟಕ ದಮನಕ, 45, ಸೇರಿದಂತೆ ಇನ್ನೂ ಅನೇಕ ಚಿತ್ರಗಳು ನಿರೀಕ್ಷೆ ಹುಟ್ಟಿಸಿವೆ. ದಸರಾ ಹಬ್ಬಕ್ಕೆ ಘೋಸ್ಟ್ ಬಿಡುಗಡೆಯಾಗಲಿದೆ.