Prabhas: ಟಾಲಿವುಡ್ ಚಿತ್ರರಂಗದ ಸ್ಟಾರ್ ನಟ, ಅಭಿಮಾನಿಗಳ ಪಾಲಿನ ಡಾರ್ಲಿಂಗ್. ಬಾಹುಬಲಿ ಸಿನಿಮಾ ಮೂಲಕ ಪ್ಯಾನ್ ವರ್ಲ್ಡ್ ಅಭಿಮಾನಿಗಳನ್ನು ಸೂರೆಗೊಂಡ ಅಮರೇಂದ್ರ ಬಾಹುಬಲಿ ಪ್ರಭಾಸ್(Prabhas). ಅಪಾರ ಅಭಿಮಾನಿ ಬಳಗ ಹೊಂದಿರುವ ಪ್ಯಾನ್ ಇಂಡಿಯಾ ನಟನಿಗೆ ಈ ನಡುವೆ ಸಿನಿಮಾಗಳು ಕೈ ಹಿಡಿಯುತ್ತಿಲ್ಲ. ಅದೃಷ್ಟ ಕೈ ಕೊಟ್ಟಂತಿದೆ.
ಅಮರೇಂದ್ರ ಬಾಹುಬಲಿಯಾಗಿ ರಾಜಮೌಳಿ ಸಿನಿಮಾದಲ್ಲಿ ಮಿಂಚಿದ ಪ್ರಭಾಸ್(Prabhas) ಅಪಾರ ಜನಪ್ರಿಯತೆ ಗಳಿಸಿಕೊಂಡ್ರು. ಟಾಲಿವುಡ್ ರೇಂಜ್‌ಗಿದ್ದ ಅಭಿಮಾನ ಬಳಗ ಪ್ಯಾನ್ ವರ್ಲ್ಡ್ ಲೆವೆಲ್‌ನಲ್ಲಿ ದೊಡ್ಡದಾಗಿ ಬೆಳೆಯಿತು. ಹೈಟು, ಪರ್ಸನಾಲಿಟಿ, ಡಾನ್ಸ್, ಆಕ್ಟಿಂಗ್ ಎಲ್ಲದರಲ್ಲೂ ಅವ್ರ ಅಭಿಮಾನಿ ಬಳಗಕ್ಕೆ ಡಾರ್ಲಿಂಗ್ ಅಚ್ಚುಮೆಚ್ಚು. ಪ್ರಭಾಸ್ ಕ್ರೇಜ಼್ ಕಂಡು ಎಲ್ಲರೂ ದಂಗಾಗಿದ್ರು. 2017ರ ವರೆಗೆ ಎಲ್ಲವೂ ಸರಿಯಾಗಿಯೇ ಇತ್ತು. ಆದ್ರೆ ಆ ನಂತರದಲ್ಲಿ ಬಂದ ಸಿನಿಮಾಗಳು ಸೂಪರ್ ಸ್ಟಾರ್ ನಟನಿಗೆ ಗೆಲುವು ನೀಡುತ್ತಿಲ್ಲ. ಹೀನಾಯ ಸೋಲು ಪ್ರಭಾಸ್ ಸ್ಟಾರ್‌ಡಂಗೆ ಪೆಟ್ಟು ನೀಡಿದೆ, ಅದೃಷ್ಟ ದೇವತೆ ಮಿರ್ಚಿ ನಟನಿಗೆ ಕೈ ಕೊಟ್ಟಿದೆ.
ಬಾಹುಬಲಿ ನಂತರ ವರ್ಲ್ಡ್ ಸಿನಿಪ್ರಿಯರು ಪ್ರಭಾಸ್(Prabhas) ಸಿನಿಮಾಗಾಗಿ ಕಾದು ಕುಳಿತಿದ್ರು. ಬಿಗ್ ಬಜೆಟ್‌ನಲ್ಲಿ ತೆರೆಕಂಡ ‘ಸಾಹೋ’, ‘ರಾಧೆ ಶ್ಯಾಮ್’, ‘ಆದಿ ಪುರುಷ್’ ಸಿನಿಮಾಗಳು ಕಮಾಲ್ ಮಾಡಲೇ ಇಲ್ಲ, ಬದಲಾಗಿ ನೆಗೆಟಿವ್ ಕಮೆಂಟ್ಸ್‌ಗಳಿಗೆ ಗುರಿಯಾದವು. ಸತತ ಸೋಲುಗಳು ಡಾರ್ಲಿಂಗ್ ಸ್ಟಾರ್‌ಡಂ ಕುತ್ತು ತಂದಿತ್ತು, ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾಗಳ ಹೀನಾಯ ಸೋಲು ಪ್ರಭಾಸ್ ನಿದ್ದೆ ಗೆಡಿಸಿದೆ. ಅದಾರ ನಂತರ ಬಂದ ಸಲಾರ್ ಕೊಂಚ ನಿರಾಳತೆ ತಂದಿದ್ದರು, ಪ್ರಭಾಸ್ ಭಕ್ತಗಣ ತೃಪ್ತಿಯಾಗಿಲ್ಲ. ಇದೀಗ ಪ್ರಭಾಸ್ ಕೈಯಲ್ಲಿ ನಾಲ್ಕು ಸಿನಿಮಾಗಳಿವೆ. ನಾಲ್ಕು ಸಿನಿಮಾಗಳು ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾಗಳು. ಈ ಸಿನಿಮಾಗಳ ಮೇಲೆ ಪ್ರಭಾಸ್ ಒಳಗೊಂಡಂತೆ, ಪ್ರಭಾಸ್ ಆರಾಧಕರು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಪ್ರಭಾಸ್(Prabhas) ಅಭಿನಯದ ‘ಕಲ್ಕಿ’(Kalki) ಜೂನ್ ತಿಂಗಳಲ್ಲಿ ಬಿಡುಗಡೆಯಾಗುತ್ತಿದೆ. ಬಹುಕೋಟಿ ವೆಚ್ಚದ ಮಲ್ಟಿ ಸ್ಟಾರರ್ ಸಿನಿಮಾ ಇದಾಗಿದೆ. ಹಾರಾರ್ ಕಾಮಿಡಿ ಸಿನಿಮಾ ‘ದಿ ರಾಜಾ ಸಾಬ್’(The Raja Saab) ಮೂಲಕ ಯುವ ನಿರ್ದೇಶಕ ಮಾರುತಿ ಸಿನಿಮಾದಲ್ಲಿ ಡಾರ್ಲಿಂಗ್ ನಟಿಸುತ್ತಿದ್ದಾರೆ. ಈ ಚಿತ್ರ ಮುಂದಿನ ವರ್ಷ ತೆರೆ ಕಾಣುತ್ತಿದೆ. ಸೆನ್ಸೇಶನಲ್ ಡೈರೆಕ್ಟರ್ ಸಂದೀಪ್ ರೆಡ್ಡಿ ವಂಗ ನಿರ್ದೇಶನದ ಸ್ಪಿರಿಟ್(Spirit) ಸಿನಿಮಾದಲ್ಲಿ ಬಾಹುಬಲಿ ನಟ ನಟಿಸುತ್ತಿದ್ದಾರೆ. ಇದಲ್ಲದೆ ನಿರ್ದೇಶಕ ಹನು ರಾಘವಪುಡಿ ಹೇಳಿದ ಕಥೆ ಕೇಳಿ ಥ್ರಿಲ್ ಆಗಿ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಒಂದಿಷ್ಡು ಆಲೋಚಿಸಿ ಹೊಸ ಹೆಜ್ಜೆ ಇಟ್ಟಿರುವ ಡಾರ್ಲಿಂಗ್ ಸ್ಟ್ರಾಂಗ್ ಕಂ ಬ್ಯಾಕ್ ಮಾಡ್ತಾರಾ..? ಅಮರೇಂದ್ರ ಬಾಹುಬಲಿ ಪ್ಯಾನ್ ವರ್ಲ್ಡ್ ಅಭಿಮಾನಿಗಳ ಹೃದಯವನ್ನು ಮತ್ತೆ ಕಬ್ಜ ಮಾಡಿಕೊಳ್ತಾರ ಕಾದು ನೋಡ್ಬೇಕು.