ಬಹುಭಾಷಾ ನಟ ಪ್ರಭುದೇವ ಸದ್ಯ ‘ವುಲ್ಫ್’ ಸಿನಿಮಾದಲ್ಲಿ ಅಭಿನಯಿಸುತ್ತಿರುವುದು ಗೊತ್ತಿರಬಹುದು. ಈಗಾಗಲೇ ಸೈಲೆಂಟಾಗಿ ‘ವುಲ್ಫ್’ ಶೂಟಿಂಗ್ ಮುಗಿದಿದ್ದು, ‘ವುಲ್ಫ್’ ಸಿನಿಮಾದ ಮೊದಲ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿ ಹೊರಗೆ ಬಂದಿದೆ. ‘ಸಂದೇಶ್ ಪ್ರೊಡಕ್ಷನ್ಸ್’ ಬ್ಯಾನರಿನಲ್ಲಿ ನಿರ್ಮಾಣವಾಗುತ್ತಿರುವ ‘ವುಲ್ಫ್’ ಕನ್ನಡ , ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆೆ ತಯಾರಾಗುತ್ತಿದೆ.
‘ವುಲ್ಫ್’ ಸಿನಿಮಾದಲ್ಲಿ ಪ್ರಭುದೇವ ಅವರೊಂದಿಗೆ ವಸಿಷ್ಠ ಸಿಂಹ, ಅನುಸೂಯ ಭಾರದ್ವಾಜ್, ಲಕ್ಷ್ಮೀ ರೈ, ಅಂಜು ಕುರಿಯನ್ ಮುಂತಾದ ಕಲಾವಿದರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಸಿನಿಮಾದ ಮೂಲಗಳ ಪ್ರಕಾರ, ಈಗಾಗಲೇ ‘ವುಲ್ಫ್’ ಸಿನಿಮಾದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದ್ದು, ಸಿನಿಮಾದ ಅಂತಿಮ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಜೋರಾಗಿ ನಡೆಯುತ್ತಿದೆ. ಇದೇ ವೇಳೆ ನಿಧಾನವಾಗಿ ಸಿನಿಮಾದ ಪ್ರಚಾರ ಕಾರ್ಯಗಳಿಗೂ ಚಾಲನೆ ನೀಡಿರುವ ಚಿತ್ರತಂಡ, ಇತ್ತೀಚೆಗೆ ಮೊದಲ ಹಂತದಲ್ಲಿ ‘ವುಲ್ಫ್’ ಸಿನಿಮಾದ ಮೊದಲ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.
ಇನ್ನು ಇದೇ ಮೊದಲ ಬಾರಿಗೆ ತಮಿಳು ನಟ ವಿಜಯ್ ಸೇತುಪತಿ ‘ವುಲ್ಫ್’ ಸಿನಿಮಾದ ಗೀತೆಯೊಂದಕ್ಕೆೆ ಧ್ವನಿಯಾಗಿದ್ದು, ಈ ಗೀತೆಯನ್ನು ಇದೇ ತಿಂಗಳು ಬಿಡುಗಡೆ ಮಾಡುವ ಯೋಜನೆಯಲ್ಲಿದೆ ಚಿತ್ರತಂಡ. ‘ವುಲ್ಫ್’ ಸಿನಿಮಾಕ್ಕೆೆ ವಿನು ವೆಂಕಟೇಶ್ ನಿರ್ದೇಶನವಿದ್ದು, ಅರುಳ್ ವಿನ್ಸೆೆಂಟ್ ಛಾಯಾಗ್ರಹಣವಿದೆ. ಖ್ಯಾತ ತಾರೆ ಜಯಸುಧಾ ಅವರ ಪುತ್ರ ಹಾಗೂ ಖ್ಯಾತ ಸಂಗೀತ ನಿರ್ದೇಶಕ ಅಮರೀಶ್ ‘ವುಲ್ಫ್’ ಸಿನಿಮಾದ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಅಂದಹಾಗೆ, ಇದೇ ಸೆಪ್ಟೆೆಂಬರ್ ವೇಳೆಗೆ ‘ವುಲ್ಫ್’ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.