ಇಂದು ಬಳ್ಳಾರಿಯಲ್ಲಿ ಅಮೃತೇಶ್ವರ ಸನ್ನಿಧಿಯಲ್ಲಿ ಸ್ಫಟಿಕ ಲಿಂಗ ಪ್ರಾಣ ಪ್ರತಿಷ್ಠಾಪನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಇಲ್ಲಿಗೆ ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಟಾರ್ ಫಿಲ್ಮ್ ಮೇಕರ್ ಎಸ್ ಎಸ್ ರಾಜಮೌಳಿ ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು. ಇವರನ್ನ ನೋಡೋದಕ್ಕೆ ಸಾಗರೋಪಾದಿಯಲ್ಲಿ ಜನ ಸೇರಿದ್ದರು. ರಾಕಿಭಾಯ್ ಎಂಟ್ರಿಕೊಟ್ಟಿದ್ದೇ ತಡ ಸೆಲ್ಫಿಗಾಗಿ ಫ್ಯಾನ್ಸ್ ಮುಗಿಬಿದ್ದರು. ಈ ವೇಳೆ ಕಹಿ ಘಟನೆಯೊಂದು ಸಂಭವಿಸಿದೆ. ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಪಟ್ಟಣದ ವಸಂತ ಎಂಬ ಯುವಕನ ಕಾಲಿನ ಮೇಲೆ ಯಶ್ ಬೆಂಗಾವಲ ಪಡೆಯ ವಾಹನ ಹರಿದಿರುವುದಾಗಿ ಸುದ್ದಿಯಾಗ್ತಿದೆ.
ರಾಕಿಭಾಯ್ ಬರ್ತ್‌ಡೇ ದಿನದಂದು ನಡೆದ ದುರ್ಘಟನೆಯ ಕಹಿ ನೆನಪು ಹಸಿಯಾಗಿರುವಾಗಲೇ ಮತ್ತೊಂದು ಘಟನೆ ಸಂಭವಿಸಿರುವುದು ಯಶ್‌ಗೆ ಬೇಸರವನ್ನುಂಟು ಮಾಡಿದೆ. ಎಷ್ಟೇ ಬುದ್ದಿ ಹೇಳಿದರೂ ಕೂಡ ಕೇಳದೇ ಅಭಿಮಾನದ ಹೆಸರಲ್ಲಿ ಅಂಧಕಾರ ಪ್ರದರ್ಶಿಸಲಿಕ್ಕೆ ಹೋಗಿ ಏನಾದರೊಂದು ಅನಾಹುತ ಮಾಡಿಕೊಳ್ತಾರೆ. ಇದರಿಂದ ಸಹಜವಾಗಿ ಸ್ಟಾರ್‌ಗಳಿಗೆ ಬೇಸರವಾಗೋದು, ಯಾವ ಕಾರ್ಯಕ್ರಮಕ್ಕೆ ಹೋಗಲೇಬಾರದು ಎನಿಸೋದು ಸಹಜ. ಆದರೆ, ದೊಡ್ಡವರ ಮಾತಿಗೆ ಬೆಲೆಕೊಟ್ಟು ಬಿಡುವು ಮಾಡಿಕೊಂಡು ದಿವ್ಯಕಾರ್ಯಕ್ರಮಗಳಲ್ಲಿ ಸ್ಟಾರ್ಸ್ ಭಾಗಿಯಾಗ್ತಾರೆ. ಅವರನ್ನ ಬೆನ್ನತ್ತದೇ, ಅವರಿಗೆ ತೊಂದರೆ ಕೊಡದೇ ಎಲ್ಲಾ ಅಭಿಮಾನಿಗಳು ಶಾಂತ ರೀತಿಯಿಂದ ವರ್ತಿಸಿದರೆ ಇಂತಹ ಅನಾಹುಗಳು ಸಂಭವಿಸೋದಿಲ್ಲ ಅಲ್ಲವೇ.
ಸದ್ಯ ಯಶ್ ‘ಟಾಕ್ಸಿಕ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಶೀಘ್ರದಲ್ಲೇ ಈ ಚಿತ್ರದ ಶೂಟಿಂಗ್ ಶುರುವಾಗಲಿದೆ. ನ್ಯಾಷನಲ್ ಅವಾರ್ಡ್ ವಿನ್ನರ್ ಆಗಿರುವ ಮಲೆಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಅವರು ಟಾಕ್ಸಿಕ್ ಸಿನಿಮಾ ಡೈರೆಕ್ಟ್ ಮಾಡ್ತಿದ್ದು, ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಹಾಗೂ ಕೆವಿಎನ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಚಿತ್ರ ಮೂಡಿಬರಲಿದೆ. ಟಾಕ್ಸಿಕ್ ಸ್ಟಾರ್‌ಕಾಸ್ಟ್ ಮತ್ತು ತಂತ್ರಜ್ಞರ ಬಳಗದ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.