Yash:‘ದಂಗಲ್’ ಖ್ಯಾತಿಯ ನಿತೇಶ್ ತಿವಾರಿ ಸೂತ್ರಧಾರರಾಗಿರುವ ‘ರಾಮಾಯಣ’(Ramayana) ಸಿನಿಮಾದತ್ತ ಇಡೀ ಭಾರತೀಯ ಚಿತ್ರರಂಗದ ಕಣ್ಣು ನೆಟ್ಟಿದೆ. ಅದು ತಾರಾಬಳಗದ ಕಾರಣಕ್ಕಾಗಿಯೂ ಹೌದು, ನಿರ್ದೇಶಕರ ಕಾರಣಕ್ಕೂ ಹೌದು, ಬಜೆಟ್ನ ವಿಚಾರಕ್ಕೂ ಹೌದು. ಇಂತಹ ಕ್ರೇಜ಼್ ಕ್ರಿಯೇಟ್ ಮಾಡಿರೋ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ಗೆ ರಾವಣನ ಪಾತ್ರಕ್ಕೆ ಆಹ್ವಾನವಿತ್ತು. ಆದ್ರ ರಾಕಿ ಭಾಯ್ ಅದೆಲ್ಲದಕ್ಕೂ ಮೀರಿ ನಿರ್ಮಾಪಕ ಸ್ಥಾನದಲ್ಲಿ ಕುಳಿತಿದ್ದಾರೆ. ಅದಕ್ಕೀಗ ಕಾರಣವೂ ಬಿಚ್ಚಿಟ್ಟಿದ್ದಾರೆ.
‘ರಾಮಾಯಣ’(Ramayana) ರಾವಣನಾಗಿ ನ್ಯಾಶನಲ್ ಸ್ಟಾರ್ ಯಶ್(Yash) ಬಣ್ಣ ಹಚ್ಚುತ್ತಾರೆ ಎನ್ನೋ ಬಝ್ ತಿಂಗಳಾನುಗಟ್ಟಲೇ ಸೋಶಿಯಲ್ ಮೀಡಿಯಾದಲ್ಲಿ ಬಝ್ನಲ್ಲಿತ್ತು. ಆದ್ರೆ ಯಶ್ ಯಾವುದಕ್ಕೂ ಪ್ರತಿಕ್ರಿಯೆ ನೀಡಿರಲಿಲ್ಲ. ರಾವಣನಾಗೊಲ್ಲ ನಿರ್ಮಾಪಕನಾಗುತ್ತೇನೆ ಎಂದು ಅಪ್ಡೇಟ್ ನೀಡಿ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಶನ್ ಕ್ರಿಯೇಟ್ ಮಾಡಿದ್ರು. ಇದಕ್ಕೆಲ್ಲ ಕಾರಣವನ್ನೀಗ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ.
ಇಂಡಿಯನ್ ಸಿನಿಮಾವನ್ನು ಗ್ಲೋಬಲ್ ಲೆವೆಲ್ನಲ್ಲಿ ತೆರೆದಿಡಬೇಕು ಎಂಬ ಬಹುಕಾಲದ ಬಹುದೊಡ್ಡ ಕನಸಿತ್ತು. ಅದಕ್ಕೆಂದೇ ಲಾಸ್ ಏಂಜಲೀಸ್ನಲ್ಲಿರುವ ಖ್ಯಾತ VFX ಸ್ಟುಡಿಯೋ ಜೊತೆ ಕೈ ಜೋಡಿಸಲು ಹೋಗಿದ್ದೆ ಆದ್ರೆ ಅಲ್ಲಿ ಹೋದ ಮೇಲೆ ತಿಳಿಯಿತು ಆ ಸ್ಟುಡಿಯೋ ನಿರ್ಮಾಪಕ ನಮಿತ್ ಮಲ್ಹೋತ್ರ ಅವರದೆಂದು. ನಂತರ ಅವರನ್ನು ಭೇಟಿ ಮಾಡಿ ಇಬ್ಬರೂ ಸಿನಿಮಾ ಆಲೋಚನೆಗಳನ್ನು ಹಂಚಿಕೊಂಡ್ವಿ. ಇಬ್ಬರೂ ಸೇರಿ ಸಿನಿಮಾಗಾಗಿ ಬಹುದೊಡ್ಡ ಕೊಡುಗೆ ನೀಡುವ ಬಗ್ಗೆ ಆಲೋಚನೆಯ ನ್ನು, ಕನಸುಗಳನ್ನು ಹಂಚಿಕೊಂಡ್ವಿ ಎಂದಿದ್ದಾರೆ.
ಮುಂದುವರೆದು ಮಾತನಾಡಿರುವ ಯಶ್(Yash) ಇಬ್ಬರ ಐಡಿಯಾಗಳನ್ನು ಹಂಚಿಕೊಂಡ್ವಿ, ಒಂದಿಷ್ಟು ಚರ್ಚೆ ನಡೆಸಿದ ನಂತರ ‘ರಾಮಾಯಣ’ ಸಿನಿಮಾ ಮಾಡಲು ನಿರ್ಧರಿಸಿದೆವು ಎಂದಿದ್ದಾರೆ. ಇಬ್ಬರಿಗೂ ಸಬ್ಜೆಕ್ಟ್ ಓಕೆ ಆದ ಮೇಲೆ ಆಲೋಚಿಸಿ, ಸಮಯ ತೆಗೆದುಕೊಂಡು ಇಂತಹದ್ದೊಂದು ದೊಡ್ಡ ನಿರ್ಧಾರ ತೆಗೆದುಕೊಂಡ್ವಿ ಎಂದಿದ್ದಾರೆ ಯಶ್.