ಟಾಕ್ಸಿಕ್… (Toxic) ರಾಕಿಂಗ್ ಸ್ಟಾರ್ ಯಶ್ (Yash) ನಟನೆಯ ಮೋಸ್ಟ್ ಅವೈಟೆಡ್ ಚಿತ್ರ. ಈ ಚಿತ್ರಕ್ಕಾಗಿ ಇಡೀ ಚಿತ್ರಜಗತ್ತು ಚಾತಕ ಪಕ್ಷಿಯಂತೆ ಕಾದುಕುಳಿತಿದೆ. ಟಾಕ್ಸಿಕ್ ಟೈಟಲ್ ಟೀಸರ್ ರಿಲೀಸ್ ಆದ್ಮೇಲಂತೂ, ಸಿನಿಮಾ ಶೂಟಿಂಗ್ ಯಾವಾಗ ಶುರುವಾಗುತ್ತೆ? ರಾಕಿಭಾಯ್ (Yash) ನಯಾ ಲುಕ್ಕು ಹೇಗಿರುತ್ತೆ ಅಂತ ತಿಳಿದುಕೊಳ್ಳೋಕೆ ಕುತೂಹಲಭರಿತರಾಗಿದ್ದಾರೆ. ಹೀಗಿರುವಾಗಲೇ ಟಾಕ್ಸಿಕ್ (Toxic) ಅಖಾಡದಿಂದ ಕೆಲ ಫೋಟೋಗಳು ಹಾಗೂ ವಿಡಿಯೋಗಳು ಹೊರಬಿದ್ದಿವೆ. ಗೋವಾದ ಕಡಲತೀರದಲ್ಲಿ ಚಿತ್ರೀಕರಣಕ್ಕೆ ರಾಕಿಭಾಯ್ ಹಾಗೂ ನಿರ್ದೇಶಕಿ ಗೀತು ಮೋಹನ್‌ದಾಸ್ (Geetu Mohandas) ತಮ್ಮ ಟೀಮ್ ಜೊತೆ ಪ್ಲಾನ್ ಮಾಡುತ್ತಿರುವಾಗ ಯಾರೋ ಅಭಿಮಾನಿಗಳು ಫೋಟೋ ಸೆರೆಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.
A few glimpses of @TheNameIsYash alongside director #GeethuMohandas preparing for much anticipated #Toxic has been making rounds on the internet.
Looks like the team is gearing up for an electrifying shoot.
Are you eagerly awaiting more updates on #Toxic? Let your voices reach… pic.twitter.com/IoJ3Zj2DPB— A Sharadhaa (@sharadasrinidhi) March 14, 2024
ಸದ್ಯ ಸೋಷಿಯಲ್ ಸಮುದ್ರದಲ್ಲಿ ವೈರಲ್ ಆಗಿರೋ ಫೋಟೋ ಹಾಗೂ ವಿಡಿಯೋಗಳಲ್ಲಿ ಮಾನ್‌ಸ್ಟರ್ ಯಶ್ (Yash) ನಯಾ ಲುಕ್‌ನಲ್ಲಿ ಕಂಡಿದ್ದಾರೆ. ಇತ್ತೀಚೆಗೆ ಗಣಿನಾಡಿನ ಕಾರ್ಯಕ್ರಮದಲ್ಲಿ ಹಾಗೂ ಅವರ ಆಪ್ತರ ಮದುವೆಯಲ್ಲಿ ಹೊಸ ಲುಕ್‌ನಲ್ಲಿ ಯಶ್ (Yash) ಕಾಣಸಿಕ್ಕಿದ್ದರು. ಆಗಲೇ ಅವರ ಅಭಿಮಾನಿಗಳು ಇದು ಟಾಕ್ಸಿಕ್ (Toxic) ಸಿನಿಮಾದ ಲುಕ್ ಅಂತ ಫಿಕ್ಸ್ ಆಗಿದ್ದರು. ಕೊನೆಗೂ ಫ್ಯಾನ್ಸ್ ಪ್ರಿಡಿಕ್ಷನ್ ನಿಜವಾಗಿದೆ. ಕ್ರೇಜಿ ಲುಕ್‌ನಲ್ಲಿ ಕೆಜಿಎಫ್ ಕಿಂಗ್ ಕಣಕ್ಕಿಳಿದಿದ್ದಾಗಿದೆ. ಇನ್ನೇನಿದ್ರು, ಟಾಕ್ಸಿಕ್ (Toxic) ಶೂಟಿಂಗ್ ಶುರುವಾಗವೇಕು, ಧಮಾಕೇದಾರ್ ಅಪ್‌ಡೇಟ್ ಮಾನ್‌ಸ್ಟರ್ ಅಂಗಳದಿಂದ ಅಧಿಕೃತವಾಗಿ ಹೊರಬೀಳಬೇಕು ಅಷ್ಟೇ.
ಅಂದ್ಹಾಗೇ, ಟಾಕ್ಸಿಕ್ (Toxic) ಬಹುಕೋಟಿ ವೆಚ್ಚದ ಸಿನಿಮಾ. ಗೋವಾದ ಡ್ರಗ್ ಮಾಫಿಯಾ ಕಥೆಯುಳ್ಳ ಚಿತ್ರ ಇದಾಗಿದ್ದು, ಮಲಯಾಳಂನ ಖ್ಯಾತ ನಿರ್ದೇಶಕಿ ಗೀತು ಮೋಹನ್‌ದಾಸ್ (Geetu Mohandas) ಆಕ್ಷನ್ ಕಟ್ ಹೇಳ್ತಿದ್ದಾರೆ. ಇದೇ ಮೊದಲ ಭಾರಿಗೆ ರಾಕಿಭಾಯ್ ಜೊತೆ ಕಾಣಿಸಿಕೊಂಡಿದ್ದಾರೆ. ಸದ್ಯ, ಟಾಕ್ಸಿಕ್ (Toxic) ಟೀಮ್ ಗೋವಾದಲ್ಲಿ ಬೀಡುಬಿಟ್ಟಿರೋದು ಖಚಿತವಾಗಿದೆ. ಇಷ್ಟು ದಿನ ಪ್ರಿಪ್ರೊಡಕ್ಷನ್ ವರ್ಕ್‌ನಲ್ಲಿ ಪಿನ್ ಟು ಪಿನ್ ವರ್ಕ್ ಮಾಡಿ ಫೀಲ್ಡ್‌ಗಿಳಿದಿರೋ ಟಾಕ್ಸಿಕ್ ತಂಡ ಇನ್ಮೇಲೆ ಬ್ಲಾಕ್‌ಬಸ್ಟರ್ ಅಪ್‌ಡೇಟ್‌ಗಳನ್ನ ನೀಡುತ್ತಾ ಬೆರಗುಗೊಳಿಸೋದ್ರಲ್ಲಿ ನೋ ಡೌಟ್. ಅಷ್ಟಕ್ಕೂ, ಟಾಕ್ಸಿಕ್‌ನಲ್ಲಿ ಯಾರೆಲ್ಲಾ ಇದ್ದಾರೆ. ಯಾರೆಲ್ಲಾ ಘಟಾನುಘಟಿ ತಾರೆಯರು ಸುಲ್ತಾನ್‌ಗೆ ಸಾಥ್ ನೀಡ್ತಿದ್ದಾರೆ. ಮಾನ್‌ಸ್ಟರ್ ಸಿನಿಮಾಗೆ ಯಾವೆಲ್ಲಾ ಟೆಕ್ನಿಷಿಯನ್ಸ್‌ಗಳು ವರ್ಕ್ ಮಾಡ್ತಿದ್ದಾರೆ ಅನ್ನೋದನ್ನ ಚಿತ್ರತಂಡ ಗೌಪ್ಯವಾಗಿರಿಸಿದೆ. ಕೆವಿಎನ್ ಹಾಗೂ ಮಾನ್‌ಸ್ಟರ್ ಕ್ರಿಯೇಷನ್ಸ್ ಜಂಟಿಯಾಗಿ ಟಾಕ್ಸಿಕ್ (Toxic) ಚಿತ್ರ ನಿರ್ಮಾಣ ಮಾಡ್ತಿದೆ. ಮೂಲಗಳ ಪ್ರಕಾರ ಗೀತು ಮೋಹನ್‌ದಾಸ್ ಪತಿಯೇ ಈ ಸಿನಿಮಾಗೆ ಕ್ಯಾಮೆರಾ ಹಿಡಿಯಲಿದ್ದಾರೆ ಎನ್ನಲಾಗುತ್ತಿದೆ. ಫಿಕ್ಸಾದ ಡೇಟ್‌ಗೆ ಅಂದರೆ ಏಪ್ರಿಲ್ 10 2025ಕ್ಕೆ ಟಾಕ್ಸಿಕ್ (Toxic) ತೆರೆಮೇಲೆ ಅನಾವರಣಗೊಳ್ಳಲಿದೆ.