ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವುದು? ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಯಶ್-19 ಸಿನಿಮಾ ಅಧಿಕೃತವಾಗಿ ಘೋಷಣೆಯಾಗಿದೆ. ಚಿತ್ರಕ್ಕೆ `ಟಾಕ್ಸಿಕ್’ ಅನ್ನೋ ಶೀರ್ಷಿಕೆ ಫಿಕ್ಸ್ ಮಾಡಲಾಗಿದ್ದು, ಪ್ಯಾನ್ ಇಂಡಿಯಾ ಮಾತ್ರವಲ್ಲ ಪ್ಯಾನ್ ವರ್ಲ್ಡ್ ನ ಟಾರ್ಗೆಟ್ ಮಾಡಿರೋದು ಟೈಟಲ್ನಿಂದಲೇ ಸಾಬೀತಾಗಿದೆ. ಮಲೆಯಾಳಂ ನಿರ್ದೇಶಕಿ ಗೀತು ಮೋಹನ್ದಾಸ್ `ಯಶ್-19′ ಡೈರೆಕ್ಟ್ ಮಾಡ್ತಾರೆನ್ನುವ ಸುದ್ದಿ ಜೋರಾಗಿ ಕೇಳಿಬಂದಿತ್ತು ಕೊನೆಗೂ ಆ ಸುದ್ದಿ ನಿಜವಾಗಿದೆ.
ರಾಕಿಭಾಯ್ `ಟಾಕ್ಸಿಕ್’ ಚಿತ್ರದ ನಿರ್ದೇಶನದ ಜವಬ್ದಾರಿ ಗೀತು ಮೋಹನ್ದಾಸ್ ಹೆಗಲೇರಿದೆ. ಕೆವಿಎನ್ ಪ್ರೊಡಕ್ಷನ್ ಹಾಗೂ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ ಜಂಟಿಯಾಗಿ `ಟಾಕ್ಸಿಕ್’ ಸಿನಿಮಾ ನಿರ್ಮಾಣ ಮಾಡ್ತಿದೆ. ಕೆಜಿಎಫ್ ರಣಧೀರನ ಸಿನಿಮಾ ಹಾಲಿವುಡ್ ಮೀರಿಸಲಿದೆ ಅನ್ನೋದು ಶೀರ್ಷಿಕೆಯಿಂದಲೇ ತಿಳಿಯುತ್ತಿದೆ. ಸದ್ಯಕ್ಕೆ ಟೈಟಲ್ ಘೋಷಣೆ ಮಾಡಲಾಗಿದ್ದು, ಶೀಘ್ರದಲ್ಲೇ ಚಿತ್ರದ ತಾರಾಬಳಗ ಹಾಗೂ ತಂತ್ರಜ್ಞರ ಬಳಗವನ್ನ ರಾಕಿ ಅಫೀಷಿಯಲ್ಲಾಗಿ ಅನೌನ್ಸ್ ಮಾಡಲಿದ್ದಾರೆ. ಜಗದಗಲದ ನಿರೀಕ್ಷೆಯನ್ನ ಫುಲ್ ಫಿಲ್ ಮಾಡೋದಕ್ಕೆ ಮತ್ತೆ ಗನ್ ಹೆಗಲೇರಿಸಿಕೊಂಡು ಹೊರಟು ನಿಂತಿದ್ದಾರೆ.