ಕನ್ನಡ ಚಿತ್ರರಂಗದಲ್ಲಿ ಈಗ ನಿಧಾನವಾಗಿ ಕಂಟೆಂಟ್ ಆಧಾರಿತ ಕೋರ್ಟ್ ರೂಂ ಡ್ರಾಮಾ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಸಾಲಿಗೆ ಈಗ ಸೇರ್ಪಡೆಯಾಗುತ್ತಿರುವ ಹೊಲ ಸಿನಿಮಾ ‘ಯಥಾಭವ’. ಹೌದು, ಗೌತಮ್ ಬಸವರಾಜ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ ‘ಯಥಾಭವ’ ಸಿನಿಮಾದ ಚಿತ್ರೀಕರಣವನ್ನು ಸದ್ದಿಲ್ಲದೆ ಮುಗಿಸಿರುವ ಚಿತ್ರತಂಡ, ಈಗ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳತ್ತ ಮುಖ ಮಾಡಿದೆ. ಇದೇ ಜುಲೈ ತಿಂಗಳಲ್ಲಿ ‘ಯಥಾಭವ’ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದ್ದು, ಇತ್ತೀಚೆಗೆ ಸಿನಿಮಾದ ಡಬ್ಬಿಂಗ್ ಕಾರ್ಯಗಳೂ ಕೂಡ ಪೂರ್ಣಗೊಂಡಿದೆ. ಇದೀಗ ಸಿನಿಮಾದ ಹಿನ್ನೆಲೆ ಸಂಗೀತ ಮತ್ತಿತರ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದ್ದು, ಇದೇ ಆಗಸ್ಟ್ 25 ರಂದು ಸಿನಿಮಾದ ಮೊದಲ ಟೀಸರ್ ಬಿಡುಗಡೆ ಮಾಡುವ ಯೋಜನೆಯಲ್ಲಿದೆ ಚಿತ್ರತಂಡ.
ಕೋರ್ಟ್ ರೂಂ ಡ್ರಾಾಮಾ ಹೊಂದಿರುವ ‘ಯಥಾಭವ’ ಸಿನಿಮಾದಲ್ಲಿ ಯುವ ಪ್ರತಿಭೆಗಳಾದ ಪವನ್ ಶಂಕರ್, ಸಹನಾ ಸುಧಾಕರ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಹಿರಿಯ ನಟ ದತ್ತಣ್ಣ ನ್ಯಾಯಾಧೀಶರಾಗಿ, ಗೋಪಾಲಕೃಷ್ಣ ದೇಶಪಾಂಡೆ ವಕೀಲರಾಗಿ, ಬಾಲ ರಾಜವಾಡಿ ಗೃಹ ಸಚಿವರಾಗಿ ಅಭಿನಯಿಸಿದ್ದಾರೆ. ಗೌತಮ್ ಸುಧಾಕರ್. ಮಾ. ಶಮಂತ್, ನೀನಾಸಂ ಆನಂದ್, ಉಮಾ ಹೆಬ್ಬಾರ್ ಮೊದಲಾದವರು ಇತರ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಸುಜಾತ ಕುಮಾರಿ ಹಾಗೂ ಅನಿಲ್ ಕುಮಾರ್ ಬಿ.ಎನ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ‘ಯಥಾಭವ’ ಸಿನಿಮಾಕ್ಕೆೆ ಹರ್ಷ್ ಮಿಶ್ರ ಛಾಯಾಗ್ರಹಣ, ಹರೀಶ್ ಚೌಧರಿ ಸಂಕಲನವಿದೆ. ಸಿನಿಮಾದ ನಾಲ್ಕು ಹಾಡುಗಳಿಗೆ ಉತ್ಸವ್ ಶ್ರೇಯಸ್ ಸಂಗೀತ ಸಂಯೋಜಿಸಿದ್ದು, ಸುರೇಶ್ ರೆಡ್ಡಿ ಹಾಗೂ ಅಭಿಷೇಕ್ ಅಕ್ಕಣ್ಣನವರ್ ಗೀತೆಗಳಿಗೆ ಸಾಹಿತ್ಯ ರಚಿಸಿದ್ದಾಾರೆ. ಸುಚಿತ್ ಚವ್ಹಾಣ್ ನೃತ್ಯ ಸಂಯೋಜನೆ, ಸ್ಮಿತಾ ಕುಲಕರ್ಣಿ ಕಲಾ ನಿರ್ದೇಶನ ಹಾಗೂ ಕುಂಗ್ಫು ಚಂದ್ರು ಸಾಹಸ ನಿರ್ದೇಶನ ಚಿತ್ರಕ್ಕಿದೆ. ಸದ್ಯ ‘ಯಥಾಭವ’ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿರುವ ಚಿತ್ರತಂಡ ಈ ವರ್ಷದ ಕೊನೆಯೊಳಗೆ ಸಿನಿಮಾವನ್ನು ಥಿಯೇಟರಿಗೆ ತರುವ ತಯಾರಿ ಮಾಡಿಕೊಳ್ಳುತ್ತಿದೆ.