ಕನ್ನಡ ಕಿರುತೆರೆ ಲೋಕದಲ್ಲಿ ಖಳನಾಯಕಿಯಾಗಿ ಮಿಂಚುತ್ತಿರುವ ಈ ನಟಿ ಬಗ್ಗೆ 18 ವರ್ಷಗಳ ಹಿಂದೆಯೇ ವರನಟ ಡಾ. ರಾಜ್‍ಕುಮಾರ್ ಅವರು ಭವಿಷ್ಯ ನುಡಿದಿದ್ದರಂತೆ. ಕೊನೆಗೂ ಅಣ್ಣಾವ್ರು ಹೇಳಿದಂತೆಯೇ ಆಗಿದೆ. ಇಂದು ಆಕೆ ಸ್ಟಾರ್ ವಿಲನ್ನಾಗಿ ಮಿಂಚು ಹರಿಸುತ್ತಿದ್ದಾರೆ. ಹಾಗಾದ್ರೆ ಆ ನಟಿ ಯಾರು? ಆ ಬಗ್ಗೆ ಕಂಪ್ಲೀಟ್ ಸ್ಟೋರಿ ಇಲ್ಲಿದೆ ನೋಡಿ
ಯಾರು ಆ ನಟಿ? ಈ ಕುತೂಹಲಕ್ಕೆ ಬ್ರೇಕ್ ಹಾಕ್ಬೇಕು ಅಂದರೆ ಆ ನಟಿ ಹೆಸರನ್ನ ಹೇಳಲೇಬೇಕು. ಯಸ್, ಆ ನಾಯಕಿ ಹೆಸರು ನಿಶಿತಾ ಗೌಡ. ಪ್ರತಿದಿನ ನಿಮ್ಮನೆ ಪುಟ್ಟ ಪರದೆಯ ಮೇಲೆ ಈಕೆಯನ್ನ ನೋಡಿರ್ತೀರಿ. ಕೆಲವರು ಈಕೆಯನ್ನ ಮನಸಾರೆ ಹೊಗಳ್ತಾರೆ, ಇನ್ನೂ ಕೆಲವರು ಬೈಯ್ತಾರೆ. ಯಾಕಂದ್ರೆ, ಇಶಿತಾ ಖಳನಾಯಕಿಯಾಗಿ ಅವರೆದುರು ನಿಂತಿದ್ದಾರೆ. ನೆಗೆಟಿವ್ ಶೇಡ್ ಪಾತ್ರಗಳಲ್ಲಿಯೇ ಹೆಚ್ಚು ಕಾಣಿಸಿಕೊಂಡಿದ್ದಾರೆ. ಬಜಾರಿ ಕ್ಯಾರೆಕ್ಟರ್‍ಗಳಿಂದ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಹೀಗಾಗಿ, ಕೆಲವರ ಕಣ್ಣಲ್ಲಿ ನಿಶಿತಾ ವಿಲನ್ ಆಗಿದ್ದಾರೆ. ಬಟ್ ಅಂತಹ ಪಾತ್ರಗಳಿಗೆ ಜೀವತುಂಬಿ ಅಭಿನಯಿಸುತ್ತಿದ್ದಾರೆ.
ಇಲ್ಲಿತನಕ ನಿಶಿತಾ ಸುಮಾರು 50 ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕಾದಂಬರಿ, ಸುಕನ್ಯಾ, ಬಣ್ಣ, ನಾನು ಮತ್ತು ನನ್ನ ಕನಸು, ‘ಗೀತಾಂಜಲಿ’ ಮುಂತಾದ ಧಾರಾವಾಹಿಗಳಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪೊಲೀಸ್ ಆಫೀಸರ್ ಮಗಳಾಗಿರುವ ನಿಶಿತಾ, ‘ಗೀತಾಂಜಲಿ’ ಧಾರಾವಾಹಿಯಲ್ಲಿ ಖಡಕ್ ಆಫೀಸರ್ ಭಾರ್ಗವಿಯಾಗಿ ಎಲ್ಲರ ಗಮನ ಸೆಳೆದಿದ್ದರು. ಇನ್ನೂ ನಟನೆಯ ಜೊತೆಗೆ ನಿರೂಪಣೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಮಾಡೆಲಿಂಗ್ ಜಗತ್ತಿನಲ್ಲಿಯೂ ಗುರುತಿಸಿಕೊಂಡಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲೂ ನಟಿಸಿದ್ದಾರೆ. ಅಪ್ಪು ಅಭಿನಯದ ‘ಆಕಾಶ್’ ಸಿನಿಮಾ ಮಾಡುವಾಗ ಅಣ್ಣಾವ್ರು ನಿಶಿತಾಳನ್ನ ಶ್ಲಾಘಿಸಿದ್ದರಂತೆ. ‘ನಿನ್ನ ಕಣ್ಣು ಚೆನ್ನಾಗಿದೆಯಮ್ಮ, ಇದನ್ನು ಬಳಸಿಕೋ, ದೊಡ್ಡ ಕಲಾವಿದೆಯಾಗುತ್ತೀಯಾ’ ಅಂತ ಹೇಳಿದ್ದರು ಎಂದು ನಿಶಿತಾ ಖಾಸಗಿ ಪತ್ರಿಕೆಯೊಂದರ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಅಂದ್ಹಾಗೇ, ನಿಶಿತಾ ಬಣ್ಣದ ಲೋಕಕ್ಕೆ ಬಂದು 18 ವರ್ಷಗಳು ಕಳೆದಿವೆ. ಈ ಹದಿನೆಂಟು ವರ್ಷದಲ್ಲಿ ನಟನೆ, ನಿರೂಪಣೆ, ಮಾಡೆಲಿಂಗ್ ಹೀಗೆ ಎಲ್ಲಾ ಕ್ಷೇತ್ರದಲ್ಲೂ ಅದೃಷ್ಟ ಪರೀಕ್ಷೆ ಮಾಡಿ ಮುಗಿಸಿದ್ದಾರೆ. ಡೈರೆಕ್ಟರ್ ಹ್ಯಾಟ್ ತೊಟ್ಟು ಆ್ಯಕ್ಷನ್ ಕಟ್ ಹೇಳಬೇಕು ಎನ್ನುವ ಕನಸಿನ ಬೆನ್ನತ್ತಿರೋ ಈಕೆ, ಕಥೆ ರೆಡಿಮಾಡಿಕೊಳ್ಳೋದ್ರಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರಂತೆ. ಈಗಾಗಲೇ ಹಲವು ಸ್ಟೋರಿಗಳನ್ನ ಬರೆದಿಟ್ಟುಕೊಂಡಿದ್ದಾರಂತೆ. ಇವರ ಪತಿ ಪ್ರಸನ್ನ ಅವರು ಸಿನಿಮಾ ಹಾಗೂ ಸೀರಿಯಲ್ ಕ್ಷೇತ್ರದಲ್ಲಿ ಸಿನಿಮಾಟೋಗ್ರಾಫರ್ ಆಗಿ ಗುರ್ತಿಸಿಕೊಂಡಿದ್ದಾರೆ. ಮುಂದೊಂದು ದಿನ ಪತ್ನಿಯ ಕನಸಿನ ಕಥೆಗೆ ಪ್ರಸನ್ನ ಅವರೇ ಕ್ಯಾಮಾರಾ ಕಣ್ಣಾದ್ರೂ ಅಚ್ಚರಿಯಿಲ್ಲ. ಇತ್ತೀಚಿಗೆ ‘ರಾಜಾ ರಾಣಿ’ ಶೋ ನಲ್ಲಿ ಒಟ್ಟಿಗೆ ಭಾಗವಹಿಸಿದ್ದರು. ಸದ್ಯ ನಿಶಿತಾ ಗೌಡ ಅವರು ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ‘ಜೇನುಗೂಡು’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಸಮಾಜಮುಖಿ ಕೆಲಸಗಳಲ್ಲೂ ತೊಡಗಿಸಿಕೊಳ್ಳುವ ಇರಾದೆ ಇರೋದ್ರಿಂದ ಚಾರಿಟಿ ಶುರು ಮಾಡಿದ್ದಾರೆ.