Blink: ಮಾರ್ಚ್ 8ರಂದು ತೆರೆಕಂಡ ʻಬ್ಲಿಂಕ್ʻ ಸಿನಿಮಾ ಸಖತ್ ಸುದ್ದಿಯಲ್ಲಿದೆ. ಹೊಸತಂಡದ ಕಂಪ್ಲೀಟ್ ಟೀಂ ವರ್ಕ್ ಬಗ್ಗೆ ಸಖತ್ ಒಳ್ಳೆ ಟಾಕ್ ಕೇಳಿ ಬರ್ತಿದೆ. ದೀಕ್ಷಿತ್ ಶೆಟ್ಟಿ ನಾಯಕ ನಟನಾಗಿ ನಟಿಸಿರುವ ಶ್ರೀನಿಧಿ ಬೆಂಗಳೂರು ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬಂದ ಚಿತ್ರ ಸೈನ್ಸ್ ಫಿಕ್ಷನ್ ಜೊತೆಗೆ ಟೈಮ್ ಟ್ರಾವೆಲ್ ಜಾನರ್ ಒಳಗೊಂಡಿದೆ. ನಮ್ಮಲ್ಲೂ ವಿನೂತನ ಪ್ರಯತ್ನಗಳಾಗುತ್ತಿವೆ ಎನ್ನುವುದಕ್ಕೆ ಕೈಗನ್ನಡಿ ʻಬ್ಲಿಂಕ್ʻ. ಹೆಸರಿಗೆ ತಕ್ಕ ಹಾಗೆ ಸಿನಿಮಾ ನೋಡುವಾಗಲು ಕಣ್ಣು ಮಿಟುಕಿಸದಂತೆ ನೋಡಿಸಿಕೊಂಡು ಹೋಗುವ ಸಿನಿಮಾ…ಫಸ್ಟ್ ಹಾಫ್ ಮುಗಿದಾಗ ಅರೆ ಸಿನಿಮಾ ಶುರುವಾಗಿ 10 ನಿಮಿಷವಾಯ್ತಲ್ಲ ಅನ್ನೋ ಅನುಭವ.. ಸೆಕೆಂಡ್ ಹಾಫ್ ಅಲ್ಲೋ ಇಲ್ಲೋ ಅರೇ ಟೈಮ್ ಟ್ರಾವೆಲ್ ಮಾಡ್ದೆ ಅಂತ ಮತ್ ಮತ್ ಹೇಳ್ತಿದ್ದಾರಲ್ಲ ಅನ್ಸಿದ್ರು ನೆಕ್ಸ್ಟ್ ಏನ್ ಟ್ವಿಸ್ಟ್ ಕೊಟ್ಟಿರ್ಬೋದು ಅನ್ನೋ ಕ್ಯೂರಿಯಾಸಿಟಿ ಕೊಂಚ ಮಟ್ಟಿಗಿನ ಬೇಸರವನ್ನು ಅಳಿಸಿ ಹಾಕಿಬಿಡುತ್ತೆ. ಕ್ಲೈಮ್ಯಾಕ್ಸ್ ನಲ್ಲಿ ಕೊಡುವ ಟ್ವಿಸ್ಟ್ ಗಳು ನೋಡುಗರ ಊಹೆಗೆ ಸಿಗದ ಕಾರಣ ಸೀನ್ ಮುಗಿದ ಮೇಲೆ ಶಿಳ್ಳೆ ಚಪ್ಪಾಳೆಗೇನು ಕೊರತೆಯಿಲ್ಲ. ಒಟ್ನಲ್ಲಿ, ಸಿನಿಮಾ ಮುಗಿತ್ತಿದ್ದಂಗೆ ಸಖತ್ ಆಗ್ ಸಿನಿಮಾ ಮಾಡಿದ್ದಾರೆ ಅನ್ನೋ ಪ್ರಶಂಸೆ ಮಾತುಗಳನ್ನ ಹೇಳದೇ ಇರೋಕೆ ಸಾಧ್ಯವಾಗೋದಿಲ್ಲ.
ಇನ್ಮುಂದೆ ದೀಕ್ಷಿತ್ ಶೆಟ್ಟಿ ಯಾವ ಸಿನಿಮಾ ಮಾಡಿದ್ರು ಕೂಡ ʻಬ್ಲಿಂಕ್ʻ ಅವ್ರ ಸಿನಿ ಕೆರಿಯರ್ ಗೆ ಬಿಗ್ ಪ್ಲಸ್ ಪಾಯಿಂಟ್ ಆಗೋದ್ರಲ್ಲಿ ದೂಸ್ರ ಮಾತಿಲ್ಲ. ಚಿತ್ರದಲ್ಲಿ ಅವ್ರ ದಿ ಬೆಸ್ಟ್ ಪರ್ಫಾಮೆನ್ಸ್ ತೆರೆ ಮೇಲೆ ಅನಾವರಣವಾಗಿದೆ. ಪ್ರತಿ ಸೀನ್ ಗೂ ಸಿಕ್ಸರ್ ಹೊಡೆದಂತೆ ಅಭಿನಯಿಸಿದ್ದಾರೆ. ಈ ಸಿನಿಮಾ ನಂತರ ಸಖತ್ ಬ್ಯುಸಿಯಾಗೋದ್ರಲ್ಲಿ ಡೌಟ್ ಇಲ್ಲ. ನಾಯಕ ನಟನ ಪರ್ಫಾಮೆನ್ಸ್ ಒಂದ್ ಕಡೆಯಾದ್ರೆ ನಿರ್ದೇಶಕ ಶ್ರೀನಿಧಿ ಬೆಂಗಳೂರು ಕಥೆ ಹೆಣೆದ ಪರಿ, ಕಟ್ಟಿಕೊಟ್ಟ ಪರಿ ಸೀನ್ ಸೀನ್ ಗೂ ಫುಲ್ ಮಾರ್ಕ್ಸ್ ಸ್ಕೋರ್ ಮಾಡಿದೆ. ನಿರ್ದೇಶಕರ ಮೊದಲ ಸಿನಿಮಾ ಆದ್ರು ಕೂಡ ಸಿನಿಮಾ ಮೇಲಿನ ಪ್ಯಾಶನ್, ಪ್ರತಿ ಸೀನ್, ಫ್ರೇಮ್ ಮೇಲಿನ ಹಿಡಿತ ಅಂಡ್ ಕ್ಲ್ಯಾರಿಟಿ ಚಿತ್ರರಂಗದಲ್ಲಿ ಬಹು ದೂರ ಸಾಗುತ್ತಾರೆ ಅನ್ನೋ ಗ್ರೀನ್ ಸಿಗ್ನಲ್ ಕೊಟ್ಟಿದೆ. ಸಿನಿಮಾ ಎಡಿಟರ್ ಸಂಜೀವ್ ಜಾಗಿರ್‌ದಾರ್ ಗೆ ಚಿತ್ರದ ಯಶಸ್ಸಿನ ಪಾಲು ಸಲ್ಲಲ್ಲೇ ಬೇಕು. ನಿರ್ದೇಶಕರ ವಿಶನ್ ಕರೆಕ್ಟ್ ಆಗಿ ತೆರೆ ಮೇಲೆ ಕಟ್ಟಿಕೊಡುವಲ್ಲಿ ಇವ್ರ ಶ್ರಮ ಬಹುಪಾಲಿದೆ. ಕ್ಯಾಮೆರಾ ವರ್ಕ್, ಮ್ಯೂಸಿಕ್ ಪ್ರತಿಯೊಂದು ಪರ್ಫೆಕ್ಟ್ ಆಗಿ ಕಥೆಯೊಂದಿಗೆ ಬೆರೆತಿದೆ. ಹಾಡುಗಳು ಎಲ್ಲೂ ಕಥೆಯ ಪರಿಧಿ ಬಿಟ್ಟು ಸಾಗದೆ ಮತ್ತೊಮ್ಮೆ ಕೇಳಬೇಕು ಎನ್ನುವ ಭಾವ ಮೂಡಿಸುತ್ತೆ.
ಬ್ಯೂಟಿ ಫುಲ್ ಸ್ಟೋರಿ ಟೆಲ್ಲಿಂಗ್, ಬ್ಯೂಟಿಫುಲ್ ನರೇಶನ್, ಎಷ್ಟು ಚೆನ್ನಾಗಿ ಎಲ್ಲವನ್ನು ಬ್ಲೆಂಡ್ ಮಾಡಿದ್ದಾರೆ. ಇದು ನಮ್ಮ್ ಇಂಡಸ್ಟ್ರಿಗೆ ಬೇಕಾಗಿರೋದು ಎನ್ನೋ ಮಾತೆಲ್ಲ ಸಿನಿಮಾ ನೋಡಿ ಆಚೆ ಬರೋವಾಗ ಕಿವಿಗೆ ಕೇಳಿಸದೇ ಇರೋದಿಲ್ಲ. ಈ ರೀತಿಯ ಟೈಮ್ ಟ್ರಾವೆಲ್, ಸೈನ್ಸ್ ಫಿಕ್ಷನ್ ಸಿನಿಮಾಗಳೆಲ್ಲ ಕನ್ನಡಿಗರಿಗೆ ಹೊಸತು. ಆದ್ರೆ, ನಮ್ ಕನ್ನಡ ಸಿನಿಮಾ ಆ ಭಾಷೆ ಥರ, ಆ ಸಿನಿಮಾ ಥರ ಯಾಕಿಲ್ಲ ಅನ್ನೋರಿಗೆಲ್ಲ ಈ ಸಿನಿಮಾ ಆ ಹಸಿವೆಲ್ಲ ತಣಿಸುತ್ತೆ. ನಮ್ಮಲ್ಲೂ ಟ್ಯಾಲೆಂಟೆಂಡ್ ನಿರ್ದೇಶಕ್ರು ಇದಾರ್ ಕಂಡ್ರಿ ಅಂತ ಹೆಮ್ಮೆಯಿಂದ ಹೇಳ್ಕೋಬೋದು. ಒಟ್ನಲ್ಲಿ, ಸಿಂಪಲ್ಲಾಗ್ ಹೇಳಬೇಕಂದ್ರೆ ʻಬ್ಲಿಂಕ್ʻ ಚಿತ್ರ ಜಸ್ಟ್ ʻವಾವ್ʻ. ಇಲ್ಲಿ ಟೀಂ ವರ್ಕ್ ಗೆದ್ದಿದೆ. ಇನ್ನೇನ್ನಿದ್ರು ಜನ ನೋಡಿ ಹರಸಬೇಕಷ್ಟೆ.