ಟಾಲಿವುಡ್‌ನ ಯಂಗ್ ಟೈಗರ್ ಜೂನಿಯರ್ ಎನ್‌ಟಿಆರ್ ಅಭಿನಯದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ʻದೇವರʼ.. ಆರ್ ಆರ್ ಆರ್ ನಂತರ ತಾರಕ್ ಬಣ್ಣ ಹಚ್ಚಿರೋ ಬಹುನಿರೀಕ್ಷಿತ ಸಿನಿಮಾ ಇದಾಗಿದ್ದು, ಈ ಚಿತ್ರಕ್ಕಾಗಿ ಈ ಭಾರಿ ದಕ್ಷಿಣ ಭಾರತೀಯ ಚಿತ್ರರಂಗ ಮಾತ್ರವಲ್ಲ ಭಾರತೀಯ ಚಿತ್ರರಂಗವೇ ಎದುರು ನೋಡ್ತಿದೆ. ಆಸ್ಕರ್ ಕೊಳ್ಳೆ ಹೊಡೆದು ಕೇಕೆ ಹಾಕಿರೋ ಕೊಮರಮ್ ಭೀಮ್, ದೇವರ ಚಿತ್ರದಲ್ಲಿ ಮತ್ಯಾವ ಹೊಸ ಅವತಾರ ತಾಳಿದ್ದಾರೆ, ಅದ್ಹೇಗೆ ಕಾಣಲಿದ್ದಾರೆ ಅಂತ ನೋಡೋದಕ್ಕೆ ಪ್ಯಾನ್ ವರ್ಲ್ಡ್ ಫ್ಯಾನ್ಸ್ ಕೂಡ ಕಣ್ಣರಳಿಸಿದ್ದಾರೆ. ಹೀಗಿರುವಾಗಲೇ ದೇವರ ದರ್ಶನ ತಡವಾಗುವ ಸುದ್ದಿ ಹೊರಬಿದ್ದಿದೆ. ಯುಗಾದಿ ಹಬ್ಬಕ್ಕೆ ಸ್ಪೆಷಲ್ಲಾಗಿ ತೆರೆಗೆ ಬರಬೇಕಿದ್ದ ದೇವರ ದಸರಾ ಹಬ್ಬಕ್ಕೆ ವಿಶೇಷವಾಗಿ ತೆರೆಕಾಣುವ ಸುದ್ದಿನಾ ಸ್ವತಃ ಚಿತ್ರತಂಡವೇ ಹೊರಹಾಕಿದೆ.
ಹೌದು, ಏಪ್ರಿಲ್ 05-2024ಕ್ಕೆ ತೆರೆಕಾಣಬೇಕಿದ್ದ ತಾರಕ್ ನಟನೆಯ ʻದೇವರʼ ಚಿತ್ರ, ಅಕ್ಟೋಬರ್ 10 2024ಕ್ಕೆ ಮುಂದೂಡಲಾಗಿದೆ. ಈ ಕುರಿತಾಗಿ ಯಂಗ್ ಟೈಗರ್ ಸೇರಿದಂತೆ ಚಿತ್ರತಂಡ ಪೋಸ್ಟರ್ ರಿಲೀಸ್ ಮಾಡಿ ಹೊಸ ರಿಲೀಸ್ ಡೇಟ್‌ನ ಅನೌನ್ಸ್ ಮಾಡಿದೆ. ಈ ಸುದ್ದಿ ಕೇಳಿ ಕೆಲವರು ಅಪ್‌ಸೆಟ್ ಆದರೆ, ಅವರ ಫ್ಯಾನ್ಸ್ ಮಾತ್ರ ದೇವರ ಲೇಟಾದ್ರೂ ಲೇಟೆಸ್ಟಾಗಿ ದರ್ಶನ ಮಾಡಿಸೋದು ಸತ್ಯ ಅಂತಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ದೇವರ ಪಾರ್ಟ್1 ಗ್ಲಿಂಪ್ಸ್ ನೋಡಿದರೆ ಗೊತ್ತಾಗುತ್ತೆ, ತಾರಕ್ ಹಾಗೂ ಕೊರಟಾಲ ಕಾಂಬಿನೇಷನ್‌ನಲ್ಲಿ ಬರ್ತಿರೋ ʻದೇವರʼ ಎಷ್ಟು ಲೇಟೆಸ್ಟ್ ಆಗಿ ತಯಾರಾಗಿದೆ ಅಂತ.
ನಿಮಗೆಲ್ಲ ಗೊತ್ತಿರುವ ಹಾಗೇ ಈಗ ಸಿನಿದುನಿಯಾದಲ್ಲಿ ಪ್ಯಾನ್ ಇಂಡಿಯಾ ಟ್ರೆಂಡ್ ಜೊತೆಗೆ ಸೀಕ್ವೆಲ್ ಟ್ರೆಂಡ್ ಕೂಡ ಚಾಲ್ತಿಯಲ್ಲಿದೆ. ಬಾಹುಬಲಿ ಸಿನಿಮಾ ನಂತರ ಬಿಗ್ ಬಜೆಟ್‍ನಲ್ಲಿ ಮೂಡಿಬರುತ್ತಿರುವ ಬಹುತೇಕ ಸಿನಿಮಾಗಳು ಸೀಕ್ವೆಲ್ ನಲ್ಲೇ ಸಿದ್ದಗೊಳ್ತಿವೆ. ಅದರಂತೇ, `ದೇವರ’ ಸಿನಿಮಾ ಮೇಕರ್ಸ್‍ಗಳು ಕೂಡ ಈ ಸಿನಿಮಾವನ್ನ ಎರಡು ಭಾಗಗಳಲ್ಲಿ ನಿರ್ಮಾಣ ಮಾಡಿದ್ದಾರೆ. ಅದರ ಒಂದು ಭಾಗ ಅಕ್ಟೋಬರ್ 10 2024ರಂದು ಬಿಡುಗಡೆಯಾಗ್ತಿದೆ. ಸಮುದ್ರ ತಟದಲ್ಲಿ ನಡೆಯುವ ಕತೆ ಇದಾಗಿದ್ದು, ಈ ಸಮುದ್ರ ಮೀನುಗಳಿಗಿಂತ ಕತ್ತಿನಾ, ರಕ್ತಾನಾ ಜಾಸ್ತಿ ನೋಡೈತೆ, ಅದಕ್ಕೆ ಇದನ್ನ ಕೆಂಪುಸಮುದ್ರ ಅಂತಾರೇ. ಹೀಗೊಂದು ಡೈಲಾಗ್ ಬಿಟ್ಟು ಕೊಮರಮ್ ಭೀಮ್ ʻದೇವರʼ ಮೇಲಿನ ಕುತೂಹಲ ಹೆಚ್ಚಿದ್ದಾರೆ. ಜೂ ಎನ್‌ಟಿಆರ್ ಜೊತೆಗೆ ಬಾಲಿವುಡ್ ಬೆಡಗಿ ಜಾನ್ಹವಿ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ. ಮುಖ್ಯ ವಿಲನ್ ಪಾತ್ರದಲ್ಲಿ ಸೈಫ್ ಅಲಿ ಖಾನ್ ಇದ್ದಾರೆ.
ದೇವರ ಬಹುಕೋಟಿ ವೆಚ್ಚದ ಸಿನಿಮಾ. ಬರೀ ವಿಎಫೆಕ್ಟ್ ಗೆ 150 ಕೋಟಿ ಬಂಡವಾಳ ಸುರಿದಿದ್ದಾರೆನ್ನುವ ನ್ಯೂಸ್ ಹೊರಬಂದಿತ್ತು. ಅಷ್ಟಕ್ಕೂ, ಈ ಸುದ್ದಿನಾ ಅಲ್ಲೆಗಳೆಯುವಂತಿಲ್ಲ. ಯಾಕಂದ್ರೆ, ತಾರಕ್ ಈಗ ಬರೀ ಸೌತ್ ಸ್ಟಾರ್ ಆಗಿ ಉಳಿದಿಲ್ಲ. ಬದಲಾಗಿ ನ್ಯಾಷನಲ್ ಸ್ಟಾರ್ ಪಟ್ಟಕ್ಕೇರಿದ್ದಾರೆ. ಆಸ್ಕರ್ ಅವಾರ್ಡ್ ಮುಡಿಗೇರಿಸಿಕೊಂಡ ಮೇಲೆ ಹಾಲಿವುಡ್ ಜಗತ್ತು ಕೂಡ ತಾರಕ್ ಸಿನಿಮಾದತ್ತ ಕಣ್ಣಿಟ್ಟಿದೆ. ಹೀಗಾಗಿಯೇ `ದೇವರ’ ಚಿತ್ರವನ್ನ ನಿರ್ದೇಶಕ ಕೊರಟಾಲ ಶಿವ ಅದ್ದೂರಿಯಾಗಿ ಕಟ್ಟಿಕೊಟ್ಟಿದ್ದಾರೆ. ಜನತಾ ಗ್ಯಾರೇಜ್ ಸಿನಿಮಾದ ನಂತರ ತಾರಕ್ ಹಾಗೂ ಕೊರಟಾಲ ಶಿವ ಮತ್ತೆ ಒಂದಾಗಿದ್ದಾರೆ. ಇವರಿಬ್ಬರ ಕಾಂಬೋ ರಿಪೀಟ್ ಆಗಿರೋದ್ರಿಂದಲೂ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ. ಈಗಾಗಲೇ ಸಿನಿಮಾದ ಒನ್ಲೈನ್ ಕಥೆ ಹೊರಬಿದ್ದಿದ್ದು, ತಂದೆ-ಮಗನ ಪಾತ್ರದಲ್ಲಿ ಭೀಮ್ ಅಬ್ಬರಿಸಿ ಬೊಬ್ಬಿರಿಯಬಹುದಾ ಎನ್ನುವ ಸಂಶಯ ಕಾಡ್ತಿದೆ.