ಟಾಲಿವುಡ್ ಯಂಗ್ ಟೈಗರ್ ಜೂನಿಯರ್ ಎನ್‌ಟಿಆರ್(J.NTR) ನಟನೆಯ ಮೋಸ್ಟ್ ಅವೈಟೆಡ್ ಮೂವೀ ʻದೇವರʼ (Devara). ಆರ್ ಆರ್ ಆರ್ (RRR) ನಂತರ ತಾರಕ್ ಬಣ್ಣ ಹಚ್ಚಿರೋ ಬಹುನಿರೀಕ್ಷಿತ ಸಿನಿಮಾ ಇದಾಗಿದ್ದು, ಈ ಚಿತ್ರಕ್ಕಾಗಿ ಈ ಭಾರಿ ದಕ್ಷಿಣ ಭಾರತೀಯ ಚಿತ್ರರಂಗ ಮಾತ್ರವಲ್ಲ ಭಾರತೀಯ ಚಿತ್ರರಂಗವೇ ಎದುರು ನೋಡ್ತಿದೆ. ಆಸ್ಕರ್ ಕೊಳ್ಳೆ ಹೊಡೆದು ಕೇಕೆ ಹಾಕಿರೋ ಕೊಮರಮ್ ಭೀಮ್, ದೇವರ ಚಿತ್ರದಲ್ಲಿ ಮತ್ಯಾವ ಹೊಸ ಅವತಾರ ತಾಳಿದ್ದಾರೆ, ಅದ್ಹೇಗೆ ಕಾಣಲಿದ್ದಾರೆ ಅಂತ ನೋಡೋದಕ್ಕೆ ಪ್ಯಾನ್ ವರ್ಲ್ಡ್ ಫ್ಯಾನ್ಸ್ ಕೂಡ ಕಣ್ಣರಳಿಸಿದ್ದಾರೆ. ಅಟ್ ದಿ ಸೇಮ್ ಟೈಮ್ ಕೆಜಿಎಫ್ ಕಿಂಗ್, ನರಾಚಿ ಲೋಕದ ರಣಧೀರ ರಾಕಿಭಾಯ್ ಯಶ್(Yash) ನಟನೆಯ ʻಟಾಕ್ಸಿಕ್ʼ(Toxic) ಚಿತ್ರಕ್ಕೋಸ್ಕರವೂ ಇಡೀ ಪ್ಯಾನ್ ವರ್ಲ್ಡ್ ಕಣ್ಣರಳಿಸಿದೆ. ಹೇಗಿರಲಿದೆ ಟಾಕ್ಸಿಕ್? ಹೇಗ್ ಕಾಣ್ತಾರೆ ಮಾನ್‌ಸ್ಟರ್ ಅಂತ ನೋಡಲಿಕ್ಕೆ ಕುತೂಹಲಭರಿತರಾಗಿ ಕಾಯ್ತಿದ್ದಾರೆ. ಹೀಗಿರುವಾಗಲೇ ಇಂಟ್ರೆಸ್ಟಿಂಗ್ ಸಮಾಚಾರವೊಂದು ಹೊರಬಿದ್ದಿದೆ. ಗೋವಾದ ಸಮುದ್ರ ತಟದಲ್ಲಿ ʻದೇವರʼ(Devara) ಹಾಗೂ ʻಟಾಕ್ಸಿಕ್ʼ (Toxic) ಚಿತ್ರೀಕರಣ ನಡೆಯೋ ತಾಜಾ ಸಮಾಚಾರ ಕಡಲತಡಿಯಿಂದ ಹಾಗೆಯೇ ತೇಲಿಬಂದಿದೆ.
ಇತ್ತೀಚೆಗಷ್ಟೇ ರಾಕಿಭಾಯ್ (Yash) ಹಾಗೂ ನಿರ್ದೇಶಕಿ ಗೀತು ಮೋಹನ್‌ದಾಸ್ ಅವ್ರು ತಮ್ಮ ತಂಡದ ಜೊತೆಗೆ ಗೋವಾ ತೀರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರೀಕರಣಕ್ಕೆ ಸ್ಕೆಚ್ ರೂಪಿಸುತ್ತಾ ʻಟಾಕ್ಸಿಕ್ʼ(Toxic) ಕ್ಯಾಪ್ಚರ್ ಮಾಡಲು ಅಣಿಯಾಗ್ತಿರುವ ದೃಶ್ಯವನ್ನ ಅಭಿಮಾನಿಗಳು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಏಪ್ರಿಲ್‌ನಿಂದ ಟಾಕ್ಸಿಕ್(Toxic) ಟೀಮ್ ಅಖಾಡಕ್ಕೆ ಇಳಿಯಲಿದ್ದು, ಈ ಹಿನ್ನಲೆಯಲ್ಲಿ ಗೋವಾದಲ್ಲಿ ಬೀಡುಬಿಟ್ಟಿದೆ ಅಂತ ಎಲ್ಲೆಡೆ ಸುದ್ದಿಯಾಗಿತ್ತು. ಇದೀಗ, ʻದೇವರʼ(Devara) ಟೀಮ್ ಒಂದು ಫೋಟೋ ಬಿಟ್ಟು ಗೋವಾದ ಸಮುದ್ರ ತಟದಲ್ಲಿ ಚಿತ್ರೀಕರಣಕ್ಕೆ ಸಜ್ಜಾಗಿರೋ ಸುದ್ದಿ ಹಂಚಿಕೊಂಡಿದೆ. ಬಹುನಿರೀಕ್ಷಿತ ದೇವರ(Devara) ಚಿತ್ರದ ಕೆಲ ಟಾಕಿಪೋಶನ್ ಹಾಗೂ ಸಾಂಗ್ ಶೂಟಿಂಗ್ ಬ್ಯಾಲೆನ್ಸ್ ಇದ್ದು, ಅದನ್ನ ಕಡಲತಡಿಯಲ್ಲೇ ಕ್ಯಾಪ್ಚರ್ ಮಾಡುವುದಾಗಿ ಹೇಳಿಕೊಂಡಿದೆ.
ಶೀಘ್ರದಲ್ಲೇ ʻದೇವರʼ (Devara) ಫಿಲ್ಮ್ ಟೀಮ್ ಗೋವಾಗೆ ಹಾರಲಿದೆ. ಗೋವಾ ಬೀಚ್‌ನಲ್ಲಿ ತಾರಕ್ (Jntr) ಹಾಗೂ ಬಾಲಿವುಡ್ ನಟಿ ಜಾನ್ವಿ ಕಪೂರ್(Janhvikapoor) ಕಾಂಬಿನೇಷನ್ ಡ್ಯುಯೆಟ್ ಸಾಂಗ್ ಚಿತ್ರೀಕರಣ ನಡೆಯಲಿದ್ದು, ರಾಜು ಸುಂದರಂ ಕೊರಿಯಾಗ್ರಫಿ ಮಾಡಲಿದ್ದಾರೆ. ಸೆನ್ಸೇಷನಲ್ ಮ್ಯೂಸಿಕ್ ಕಂಪೋಸರ್ ಪ್ಲಸ್ ಸಿಂಗರ್ ಅನಿರುದ್ದ್ ರವಿಚಂದರ್ ʻದೇವರʼ ಹಾಡಿಗೆ ಕ್ಯಾಚಿ ಟ್ಯೂನ್ ಹಾಕಿಕೊಟ್ಟಿದ್ದು, ಯಂಗ್ ಟೈಗರ್ (Jntr) ಹಾಗೂ ದಢಕ್ ಬ್ಯೂಟಿ(Janhvikapoor) ಆ ಹಾಡಿನಲ್ಲಿ ಬೊಂಬಾಟಾಗಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾಟೋಗ್ರಫರ್ ಆರ್ ರತ್ನವೇಲು ತಮ್ಮ ಕ್ಯಾಮೆರಾ ಕಣ್ಣಲ್ಲಿ ಈ ಸ್ಪೆಷಲ್ ಸಾಂಗ್‌ನ ಸೆರೆಹಿಡಿಯಲಿದ್ದಾರೆ.
ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಯುಗಾದಿ ಹಬ್ಬಕ್ಕೆ ಸ್ಪೆಷಲ್ಲಾಗಿ ತೆರೆಗೆ ಬರಬೇಕಿತ್ತು. ಆದರೆ, ಕಾರಣಾಂತರಗಳಿಂದ ʻದೇವರʼ(Devara) ಚಿತ್ರವನ್ನ ದಸರಾ ಹಬ್ಬಕ್ಕೆ ಮುಂದೂಡಿದ್ದಾರೆ. ಅಂದ್ಹಾಗೇ, ದೇವರ ಚಿತ್ರ ಎರಡು ಭಾಗಗಳಲ್ಲಿ ತಯಾರಾಗ್ತಿದೆ. ಅದರ ಒಂದು ಭಾಗ ಅಕ್ಟೋಬರ್ 10 2024ರಂದು ಬಿಡುಗಡೆಯಾಗ್ತಿದೆ. ಸಮುದ್ರ ತಟದಲ್ಲಿ ನಡೆಯುವ ಕತೆ ಇದಾಗಿದ್ದು, ಈ ಸಮುದ್ರ ಮೀನುಗಳಿಗಿಂತ ಕತ್ತಿನಾ, ರಕ್ತಾನಾ ಜಾಸ್ತಿ ನೋಡೈತೆ, ಅದಕ್ಕೆ ಇದನ್ನ ಕೆಂಪುಸಮುದ್ರ ಅಂತಾರೇ. ಹೀಗೊಂದು ಡೈಲಾಗ್ ಬಿಟ್ಟು ಕೊಮರಮ್ ಭೀಮ್ ʻದೇವರʼ ಮೇಲಿನ ಕುತೂಹಲ ಹೆಚ್ಚಿದ್ದಾರೆ. ಜೂ ಎನ್‌ಟಿಆರ್ ಜೊತೆಗೆ ಬಾಲಿವುಡ್ ಬೆಡಗಿ ಜಾನ್ಹವಿ ಕಪೂರ್ (Janhvikapoor) ನಾಯಕಿಯಾಗಿ ನಟಿಸಿದ್ದಾರೆ. ಮುಖ್ಯ ವಿಲನ್ ಪಾತ್ರದಲ್ಲಿ ಸೈಫ್ ಅಲಿ ಖಾನ್ ಇದ್ದಾರೆ. ಪ್ರಕಾಶ್ ರಾಜ್, ಶ್ರೀಕಾಂತ್, ಮುರುಳಿ ಶರ್ಮಾ, ಶೈನ್ ಟಾಮ್ ಚಾಕೋ ಸೇರಿದಂತೆ ಹಲವರು ಪಾತ್ರವರ್ಗದಲ್ಲಿದ್ದಾರೆ.
ದೇವರ (Devara)ಬಹುಕೋಟಿ ವೆಚ್ಚದ ಸಿನಿಮಾ. ಬರೀ ವಿಎಫೆಕ್ಟ್ ಗೆ 150 ಕೋಟಿ ಬಂಡವಾಳ ಸುರಿದಿದ್ದಾರೆನ್ನುವ ನ್ಯೂಸ್ ಹೊರಬಂದಿತ್ತು. ಅಷ್ಟಕ್ಕೂ, ಈ ಸುದ್ದಿನಾ ಅಲ್ಲೆಗಳೆಯುವಂತಿಲ್ಲ. ಯಾಕಂದ್ರೆ, ತಾರಕ್ ಈಗ ಬರೀ ಸೌತ್ ಸ್ಟಾರ್ ಆಗಿ ಉಳಿದಿಲ್ಲ. ಬದಲಾಗಿ ನ್ಯಾಷನಲ್ ಸ್ಟಾರ್ ಪಟ್ಟಕ್ಕೇರಿದ್ದಾರೆ. ಆಸ್ಕರ್ ಅವಾರ್ಡ್ ಮುಡಿಗೇರಿಸಿಕೊಂಡ ಮೇಲೆ ಹಾಲಿವುಡ್ ಜಗತ್ತು ಕೂಡ ತಾರಕ್ ಸಿನಿಮಾದತ್ತ ಕಣ್ಣಿಟ್ಟಿದೆ. ಹೀಗಾಗಿಯೇ `ದೇವರ’(Devara) ಚಿತ್ರವನ್ನ ನಿರ್ದೇಶಕ ಕೊರಟಾಲ ಶಿವ)Koratalashiva) ಅದ್ದೂರಿಯಾಗಿ ಕಟ್ಟಿಕೊಟ್ಟಿದ್ದಾರೆ. ಜನತಾ ಗ್ಯಾರೇಜ್ ಸಿನಿಮಾದ ನಂತರ ತಾರಕ್ ಹಾಗೂ ಕೊರಟಾಲ ಶಿವ ಮತ್ತೆ ಒಂದಾಗಿದ್ದಾರೆ. ಇವರಿಬ್ಬರ ಕಾಂಬೋ ರಿಪೀಟ್ ಆಗಿರೋದ್ರಿಂದಲೂ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ. ಈಗಾಗಲೇ ಸಿನಿಮಾದ ಒನ್ಲೈನ್ ಕಥೆ ಹೊರಬಿದ್ದಿದ್ದು, ತಂದೆ-ಮಗನ ಪಾತ್ರದಲ್ಲಿ ಭೀಮ್ (Jntr) ಅಬ್ಬರಿಸಿ ಬೊಬ್ಬಿರಿಯಬಹುದಾ ಎನ್ನುವ ಸಂಶಯ ಕಾಡ್ತಿದೆ.