Yuva Rajkumar:`ಯುವ'(Yuva) ಸಿನಿಮಾ ಮೂಲಕ ಯುವ ರಾಜ್ ಕುಮಾರ್(Yuva Rajkumar)ಸ್ಯಾಂಡಲ್ ವುಡ್ ಅಂಗಳಕ್ಕೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಡ್ತಿದ್ದಾರೆ. ಸೆಟ್ಟೇರಿದ ದಿನದಿಂದಲೇ ಬಝ್ ಕ್ರಿಯೇಟ್ ಮಾಡಿರುವ ಈ ಚಿತ್ರ ಬಿಡುಗಡೆಗೆ ಬೆರಳೆಣಿಕೆ ದಿನವಷ್ಟೇ ಬಾಕಿ. ಯುವನನ್ನು ಹೊತ್ತು ಮೆರೆಸಲು ದೊಡ್ಮೆನೆ ಅಭಿಮಾನಿ ಬಳಗ, ಪವರ್ ಸ್ಟಾರ್ ಆರಾಧಕರು ಕಾತರದಿಂದ ಕಾಯುತ್ತಿದ್ದಾರೆ. ಅದಕ್ಕೆ ಸಾಕ್ಷಿಯಾಗಿರೋದು ಹೊಸಪೇಟೆಯಲ್ಲಿ ಸಿಕ್ಕ ಅಪಾರ ಪ್ರೀತಿ.
ಎಲ್ಲಾ ಅಂದುಕೊಂಡಂತೆ ಆಗಿದ್ರೆ ʻಯುವ ರಣಧೀರ ಕಂಠೀರವʼ ಸಿನಿಮಾ ಮೂಲಕ ಯುವ(Yuva) ನಾಯಕನಾಗಿ ಲಾಂಚ್ ಆಗಿರಬೇಕಿತ್ತು. ಕಾರಣಾಂತರಗಳಿಂದ ಆ ಸಿನಿಮಾ ನಿಂತು ಹೋಯ್ತು. ನಂತರ ಯುವನನ್ನು ಲಾಂಚ್ ಮಾಡುವ ಜವಾಬ್ದಾರಿ ಹೊಂಬಾಳೆ ಫಿಲ್ಮ್ಸ್ ಹೊತ್ತುಕೊಂಡಿತ್ತು, ಇದೀಗ ʻಯುವʼನಾಗಿ ತೆರೆ ಮೇಲೆ ಬರಲು ಸಜ್ಜಾಗಿರುವ ಯುವ ರಾಜ್ ಕುಮಾರ್(Yuva Rajkumar) ಪವರ್ ನೋಡಲು ಅಭಿಮಾನಿ ಬಳಗ ಕಾತುರದಿಂದ ಕಾಯುತ್ತಿದೆ.
ಅಪ್ಪು ಅಗಲಿಕೆಯ ನೋವಲ್ಲಿರುವ ಅಭಿಮಾನಿಗಳು ಯುವ(Yuva)ನಲ್ಲಿ ಪವರ್ ಸ್ಟಾರ್(Power Star) ಕಾಣಲು ಹೊರಟಿದ್ದಾರೆ. ಆದ್ರೆ ಅಪ್ಪುಗೆ ಅಪ್ಪುನೇ ಸಾಟಿ ಅನ್ನೋದು ಎಂದೂ ಬದಲಾಗದ ಸತ್ಯ. ಅದೇನೇ ಇರ್ಲಿ ಯುವನಲ್ಲಿ ಆ ಪವರ್ ಕಾಣಲು ಹೊರಟ ದೊಡ್ಮನೆ ಬಳಗ ಇನ್ನಿಲ್ಲದ ಪ್ರೀತಿ, ಅಭಿಮಾನ ತೋರುತ್ತಿದ್ದಾರೆ. ಹೊಸಪೇಟೆಯಲ್ಲಿ ನಡೆದ ಪ್ರಿರಿಲೀಸ್ ಇವೆಂಟ್ನಲ್ಲಿ ಕ್ಕಿಕ್ಕಿರಿದು ಸೇರಿದ ದೊಡ್ಮನೆ ಅಭಿಮಾನಿ ಸೇನೆ ಇದಕ್ಕೆ ಉದಾಹರಣೆ. ಯುವನನ್ನು ಮನೆ ಮಗನಂತೆ ಕಾಣುತ್ತಿರುವ ಅಭಿಮಾನಿಗಳು, ಪಟ್ಟಾಭಿಷೇಕ ಮಾಡಲು ಈಗಾಗಲೇ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.
ʻಯುವʼ(Yuva) ಸಿನಿಮಾ ಟ್ರೇಲರ್, ಹಾಡುಗಳು ಕೂಡ ಟ್ರೆಂಡಿಂಗ್ನಲ್ಲಿವೆ. ಮೊದಲ ಸಿನಿಮಾವಾದ್ರೂ ಟ್ರೇಲರ್ ಬಿಡುಗಡೆಯಾದ ಐದೇ ದಿನದಲ್ಲಿ ಐದು ಮಿಲಿಯನ್ಗಿಂತ ಹೆಚ್ಚಿನ ವೀಕ್ಷಣೆ ಕಂಡು ಟ್ರೆಂಡಿಂಗ್ನಲ್ಲಿದೆ. ಚೊಚ್ಚಲ ಸಿನಿಮಾ ಬಿಡುಗಡೆಗೂ ಮುನ್ನ ಸಿಗುತ್ತಿರುವ ಅಭಿಮಾನಕ್ಕೆ ಸ್ವತಃ ದೊಡ್ಮನೆಯೂ ಅಚ್ಚರಿಗೊಂಡಿದೆ. ಈ ಅಪ್ಪುಗೆಗಿಂತ ಇನ್ನೇನು ಬೇಕು ಎನ್ನುತ್ತಿದೆ.
ಹೊಂಬಾಳೆ ಫಿಲ್ಮ್ಸ್(Hombale Films), ʻರಾಜಕುಮಾರʼ, ʻರಾಮಾಚಾರಿʼ ಸಿನಿಮಾ ಖ್ಯಾತಿಯ ನಿರ್ದೇಶಕ ಸಂತೋಷ್ ಆನಂದ್ ರಾಮ್(Santhosh Ananddram, ನಾಯಕನಾಗಲು ಯುವ ನಡೆಸಿರುವ ತಾಲೀಮು ಇವೆಲ್ಲವೂ ಸಿನಿಮಾ ಮೇಲೆ ಅಪಾರ ನಿರೀಕ್ಷೆ ಹುಟ್ಟಲು ಕಾರಣ. ಆ ನಿರೀಕ್ಷೆಗೆ ತಕ್ಕಂತೆ ಸಿನಿಮಾ ತುಣುಕುಗಳಲ್ಲಿ ಯುವ ಪರ್ಫಾಮೆನ್ಸ್ ಕೂಡ ಭರವಸೆ ಮೂಡಿಸಿದೆ. ಸಿನಿಮಾ ರಿಲೀಸ್ಗೂ ಮೊದಲೇ ಸಿಕ್ಕಿರೋ ಈ ಅಭಿಮಾನ, ರಿಲೀಸ್ ನಂತರದಲ್ಲಿ ಗೆಲುವಾಗಿ ಪರಿವರ್ತನೆಯಾದ್ರೆ, ಯುವನಿಗೆ ಮೊದಲ ಗೆಲುವು ನಿಶ್ಚಿತ.