Yuva Rajkumar: ದೊಡ್ಮೆನ ಹುಡುಗ ಯುವ ರಾಜ್‌ಕುಮಾರ್(Yuva Rajkumar) ಯುವ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಅಂಗಳಕ್ಕೆ ನಾಯಕನಾಗಿ ಎಂಟ್ರಿ ಕೊಟ್ಟಿದ್ದಾರೆ. ಮಾರ್ಚ್ 29ರಂದು ತೆರೆಕಂಡ ʻಯುವʼ(Yuva) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಕಲೆಕ್ಷನ್ ಜೋರಾಗೆ ಮಾಡ್ತಿದೆ. ಯೂತ್ ಹಾಗೂ ಫ್ಯಾಮಿಲಿ ಎಂಟಟೈನ್ಮೆಂಟ್ ಕಟೆಂಟ್ ಒಳಗೊಂಡ ಈ ಚಿತ್ರ ಇಂದಿನಿಂದ ಯುಎಸ್‌ಎ ನಲ್ಲೂ ರಿಲೀಸ್ ಆಗುತ್ತಿದೆ.
ಯುವ ರಾಜ್‌ಕುಮಾರ್(Yuva Rajkumar), ಸಂತೋಷ್ ಆನಂದ್‌ರಾಮ್ ಕಾಂಬಿನೇಶನ್ ನಲ್ಲಿ ಬಂದ ʻಯುವʼ(Yuva)ಸಿನಿಮಾ ಸ್ಯಾಂಡಲ್‌ವುಡ್ ಅಂಗಳದಲ್ಲಿ ಸಂಚಲನ ಸೃಷ್ಟಿಸಿತ್ತು. ಗಲ್ಲಾಪೆಟ್ಟಿಗೆಯಲ್ಲಿ ಯುವ ಚೊಚ್ಚಲ ಸಿನಿಮಾ ನಿರೀಕ್ಷೆಗೂ ಮೀರಿದ ಕಲೆಕ್ಷನ್ ಮಾಡುತ್ತಿದೆ. ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ಸಿನಿಮಾವನ್ನು ಚಿತ್ರತಂಡ ಯುಎಸ್‌ಎ ನಲ್ಲಿ ಬಿಡುಗಡೆ ಮಾಡಲು ತೀರ್ಮಾನಿಸಿತ್ತು. ಅದರಂತೆ ಇಂದಿನಿಂದ ಅಮೇರಿಕಾದಲ್ಲೂ ʻಯುವʼ ಪ್ರದರ್ಶನ ಕಾಣಲಿದೆ.
ಯುವ ರಾಜ್‌ಕುಮಾರ್(Yuva Rajkumar)ರನ್ನು ಹೀರೋ ಆಗಿ ತೆರೆಮೇಲೆ ನೋಡೋ ಅಭಿಮಾನಿಗಳ ಕನಸು ಯುವ ಮೂಲಕ ಈಡೇರಿತ್ತು. ಬಹು ನಿರೀಕ್ಷೆಯಂತೆ ಯುವ ಹಾಗೂ ಸಿನಿಮಾಗೆ ಗ್ರ್ಯಾಂಡ್ ವೆಲ್‌ಕಂ ಕೂಡ ಸಿಕ್ಕಿತ್ತು. ಯುವ ಆಕ್ಟಿಂಗ್, ಡಾನ್ಸ್ ಎಲ್ಲವನ್ನೂ ಪ್ರೇಕ್ಷಕ ಪ್ರಭು ಮೆಚ್ಚಿ ಒಪ್ಪಿಕೊಂಡಿದ್ದಾನೆ. ಫ್ಯಾಮಿಲಿ ಎಂಟಟೈನ್ಮೆಂಟ್ ಸಿನಿಮಾ ಸಕ್ಸಸ್ ನೀಡಿದ್ದು, ಮೊದಲ ಗೆಲುವಿನ ಖುಷಿಯಲ್ಲಿದ್ದಾರೆ ಯುವ ರಾಜ್‌ಕುಮಾರ್.