Yuva:ʻಯುವʼ ಸಿನಿಮಾ ಮೂಲಕ ಯುವರಾಜ್ ಕುಮಾರ್(Yuva Rajkumar) ಸ್ಯಾಂಡಲ್ ವುಡ್ ಅಂಗಳಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಯುವ ಗ್ರ್ಯಾಂಡ್ ಎಂಟ್ರಿಗೆ ಹೊಂಬಾಳೆ ಪಿಲ್ಮ್ಸ್(Hombale Films) ವೇದಿಕೆ ಸಜ್ಜು ಮಾಡಿದ್ದು, ಮಾರ್ಚ್̳ 23 ರಂದು ದೊಡ್ಮನೆಯ ಫೇವರೇಟ್ ಪ್ಲೇಸ್ ಹೊಸಪೇಟೆಯಲ್ಲಿ ಅದ್ದೂರಿ ಪ್ರಿ ರಿಲೀಸ್ ಈವೆಂಟ್ ನಡೆಸಲು ಪ್ಲ್ಯಾನ್ ಮಾಡಿಕೊಂಡಿದೆ. ಈಗಾಗಲೇ ಎಲ್ಲಾ ರೀತಿಯಲ್ಲೂ ಹೊಸಪೇಟೆಯಲ್ಲಿ ತಯಾರಿ ನಡೆಯುತ್ತಿದೆ. ʻಟಗರುʼ ಸಿನಿಮಾ ನಂತರ ದೊಡ್ಮನೆಗೆ ಸಂಬಂಧಿಸಿದ ಯಾವ ಸಿನಿಮಾ ಕಾರ್ಯಕ್ರಮ ಅಲ್ಲಿ ನಡೆದಿರಲಿಲ್ಲ ಆಫ್ಟರ್ ಟಗರು ʻಯುವʼ ಪ್ರಿರಿಲೀಸ್ ಇವೆಂಟ್ ಹೊಸಪೇಟೆಯಲ್ಲಿ ನಡೆಯುತ್ತಿರೋದು ಅಭಿಮಾನಿಗಳ ಸಂತಸ ಹೆಚ್ಚಿಸಿದೆ.
ಹೊಸಪೇಟೆಯಲ್ಲಿ ದೊಡ್ಮನೆಗೆ ಅಪಾರ ಅಭಿಮಾನ ಬಳಗವಿದೆ. ಅದರಲ್ಲೂ ಪವರ್ ಸ್ಟಾರ್ ಪುನೀತ್ ರಾಜ್(Puneeth Rajkumar) ಕುಮಾರ್ ಅಭಿಮಾನಿ ಬಳಗ ದೊಡ್ಡದಿದೆ. ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ ಹೊಸಪೇಟೆ ಅಪ್ಪು ಅಡ್ಡಾ ಎನ್ನಬಹುದು. ಅಭಿಮಾನಿಗಳು ಕೂಡ ಹೊಸಪೇಟೆಯಲ್ಲಿ ಪ್ರಿ ರಿಲೀಸ್ ಇವೆಂಟ್ ಮಾಡಬೇಕು ಎಂದು ಚಿತ್ರತಂಡವನ್ನು ಒತ್ತಾಯಿಸಿದ್ದರು ಫೈನಲಿ ಹೊಸಪೇಟೆ ಅಭಿಮಾನಿಗಳ ಆಸೆ ನೆರವೇರಿದೆ.
ಹೊಸಪೇಟೆಯಲ್ಲಿಯೇ ಪ್ರಿರಿಲೀಸ್ ಮಾಡಬೇಕು ಎಂಬುದು ಚಿತ್ರತಂಡದ ಒಮ್ಮತದ ನಿರ್ಧಾರ ಎಂದು ನಿರ್ದೇಶಕ ಸಂತೋಷ್ ಆನಂದ್ ರಾಮ್(Santhosh Ananddram) ತಿಳಿಸಿದ್ದಾರೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಅಶ್ವಿನಿ ಪುನೀತ್ ರಾಜ್ ಕುಮಾರ್(Ashwini Puneeth Rajkumar) ಭಾಗವಹಿಸಲಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್(ShivaRajkumar) ಕೂಡ ಹಾಜರಾಗುವ ಸಾಧ್ಯತೆ ಇದೆ ಎಂದು ಸಂತೋಷ್ ಆನಂದ್ ರಾಮ್ ಮಾಹಿತಿ ಹಂಚಿಕೊಂಡಿದ್ದಾರೆ. ಖ್ಯಾತ ಗಾಯಕ ವಿಜಯ್ ಪ್ರಕಾಶ್, ನವೀನ್ ಸಜ್ಜು ಗಾಯನ ಹಾಗೂ ನಿಶ್ವಿಕಾ ನಾಯ್ಡು ಡಾನ್ಸ್ ಪರ್ಫಾಮೆನ್ಸ್ ಪ್ರಿ ರಿಲೀಸ್ ರಂಗು ಹೆಚ್ಚಿಸಲಿದೆ.
ಮೊದಲು ಸಿನಿಮಾವನ್ನು 28ರಂದು ಬಿಡುಗಡೆ ಮಾಡೋದಾಗಿ ಚಿತ್ರತಂಡ ಅನೌನ್ಸ್ ಮಾಡಿತ್ತು. ಇದೀಗ ಅಂತಿಮವಾಗಿ 29ರಂದು ಸಿನಿಮಾ ಬಿಡುಗಡೆ ಮಾಡುತ್ತಿದೆ. ಇದಕ್ಕೆ ಕಾರಣ 29 ಸಾರ್ವಜನಿಕರ ರಜೆ ಇದೇ, ಶನಿವಾರ, ಭಾನುವಾರ ವೀಕೆಂಡ್ ಆಗಿರೋದ್ರಿಂದ ಸಿನಿಮಾ ನೋಡಲು ಹೆಚ್ಚು ಜನರು ಬರ್ತಾರೆ ಅನ್ನೋದು ಚಿತ್ರತಂಡದ ಲೆಕ್ಕಾಚಾರ. ʻಯುವʼ ಸಿನಿಮಾದ ನೈಟ್ ಶೋ, ಪ್ರೀಮಿಯರ್ ಶೋ ಇರೋದಿಲ್ಲ ಎಂದು ಚಿತ್ರತಂಡ ಕ್ಲಾರಿಟಿ ನೀಡಿದೆ.