Zaid khan: ಬನಾರಸ್(Banaras) ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಅಂಗಳಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ರಾಯಲ್ ಹುಡುಗ ಝೈದ್ ಖಾನ್(Zaid khan). ಕೇವಲ ಸ್ಯಾಂಡಲ್ ವುಡ್ ಅಂಗಳ ಮಾತ್ರವಲ್ಲ ಮೊದಲ ಸಿನಿಮಾದಲ್ಲೇ ಪ್ಯಾನ್ ಇಂಡಿಯಾ ಹೀರೋ ಆಗಿ ಅದ್ದೂರಿಯಾಗಿ ಲಾಂಚ್ ಆದವರು ಇವರು. ನೋಡೋಕೆ ಬಾಲಿವುಡ್ ಹೀರೋಗಳಂತೆ ಕಾಣುವ ಇವರು ಬನಾರಸ್ ಮೂಲಕ ಚಾಕೋಲೇಟ್ ಹೀರೋ ಆಗಿ ಹುಡುಗಿಯರ ಮನಸ್ಸು ಕದ್ದಿದ್ರು. ಈ ಚಿತ್ರ ಹೇಳಿಕೊಳ್ಳುವಂತ ಗೆಲುವು ಕಾಣದಿದ್ರು ಝೈದ್ ಖಾನ್ ಪರ್ಫಾಮೆನ್ಸ್ ವಿಚಾರದಲ್ಲಿ ಗೆದ್ದಿದ್ರು. ಇದೀಗ ಎರಡನೇ ಸಿನಿಮಾಗೆ ಚಾಕೋಲೇಟ್ ಬಾಯ್ ಸಿದ್ದರಾಗ್ತಿದ್ದು, ಚಿತ್ರದ ಪೋಸ್ಟರ್ ವೊಂದು ರಿಲೀಸ್ ಆಗಿ ಗಮನ ಸೆಳೆಯುತ್ತಿದೆ.
ಬನಾರಸ್(Banaras)ನಲ್ಲಿ ಟೈಮ್ ಟ್ರಾವೆಲ್ ಜಾಡು ಹಿಡಿದಿದ್ದ ಝೈದ್ ಖಾನ್(Zaid khan) ಈ ಬಾರಿ ಪಕ್ಕಾ ಲವರ್ ಬಾಯ್ ಆಗಿ ಕಣಕ್ಕಿಳಿಯುತ್ತಿದ್ದಾರೆ. ಪಾಗಲ್ ಪ್ರೇಮಿಯಾಗಿ ಕಾಣಿಸಿಕೊಳ್ಳೋದು ಪಕ್ಕಾ ಅನ್ನೋದಕ್ಕೆ ಪೋಸ್ಟರ್ ಸಾಕ್ಷಿಯಾಗಿದೆ. ಪೋಸ್ಟರ್ ನಲ್ಲಿ ಬ್ಲಡಿ ಲವ್ ಎಂಬ ಬರಹವಿದ್ದು, ಒಂದು ಕೈಯಲ್ಲಿ ಎಣ್ಣೆ ಬಾಟಲ್, ಇನ್ನೊಂದು ಕೈಯಲ್ಲಿ ಸಿಗರೇಟ್ ಹಿಡಿದು ಹುಡುಗಿಯ ಫೋಟೋ ನೋಡುವ ದೃಶ್ಯ ಕಾಣಸಿಗುತ್ತದೆ. ಈ ಒಂದು ಪೋಸ್ಟ್ ಸಾಕು ಅದೆಷ್ಟು ಇಂಟೆನ್ಸ್ ಲವ್ ಸ್ಟೋರಿ ಸಿನಿಮಾದಲ್ಲಿದೆ & ಪಾಗಲ್ ಪ್ರೇಮಿಯಾಗಿ ಝೈದ್ ಇಲ್ಲಿ ಕಾಣಸಿಗಲಿದ್ದಾರೆ ಎನ್ನೋದಕ್ಕೆ. ಪೋಸ್ಟರ್ ನಲ್ಲಿ ರುವ ಕ್ಯಾಪ್ಷನ್ ಇದು ರಕ್ತಸಿಕ್ತ ಪ್ರೇಮಕಥೆ ಅನ್ನೋದನ್ನು ಹೇಳುತ್ತಿದೆ.
ಝೈದ್ ಖಾನ್(Zaid khan) ಎರಡನೇ ಸಿನಿಮಾ ನಿರ್ದೇಶನ ಮಾಡ್ತಿರೋದು ದಿಲ್ ವಾಲಾ(Dilwala), ರ್ಯಾಂಬೋ(Rambo), ಉಪಾಧ್ಯಕ್ಷ(Upadhyaksha) ಸಿನಿಮಾ ಖ್ಯಾತಿಯ ಅನಿಲ್ ಕುಮಾರ್(Anil Kumar). ಬನಾರಸ್(Banaras) ನಂತರ ಹಲವು ಕಥೆ ಕೇಳಿರುವ ಝೈದ್ ಖಾನ್(Zaid khan) ನಿರ್ದೇಶಕ ಅನಿಲ್ ಕುಮಾರ್(Anil Kumar) ಕಥೆ ಕೇಳಿ ಇಂಪ್ರೆಸ್ ಆಗಿದ್ದಾರೆ. ಸದ್ಯದಲ್ಲೇ ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ಬಿಡುಗಡೆಯಾಗಲಿದ್ದು ಅಂದೇ ಸಿನಿಮಾದ ಹಲವು ವಿಚಾರಗಳು ಹೊರ ಬೀಳಲಿವೆ.
ಆಶ್ರಿತ್ ಸಿನಿಮಾಸ್ ಈ ಚಿತ್ರದ ನಿರ್ಮಾಣ ಜವಾಬ್ದಾರಿ ಹೊತ್ತಿದ್ದು. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ(Arjun Janya) ಸಂಗೀತ, ಕೆಂ.ಎಂ. ಪ್ರಕಾಶ್(K.M.Prakash) ಸಂಕಲನ, ರವಿವರ್ಮಾ(Ravivarma) ಸಾಹಸ ನಿರ್ದೇಶನ ಚಿತ್ರಕ್ಕಿರಲಿದೆ.