Nabha Natesh: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ವಜ್ರಕಾಯ ಮೂಲಕ ಎಲ್ಲರ ದಿಲ್ ಗೆದ್ದ ನಟಿ ನಭಾ ನಟೇಶ್(Nabha Natesh). ಮೊದಲ ಸಿನಿಮಾದಲ್ಲೇ ಗೆಲುವಿನ ಮುದ್ರೆ ಒತ್ತಿದ ಕನ್ನಡತಿ. ನೋಡ ನೋಡುತ್ತಿದ್ದಂತೆ ಟಾಲಿವುಡ್ ಅಂಗಳಕ್ಕೆ ಹಾರಿದ ನಭಾ(Nabha) ʻಇಸ್ಮಾರ್ಟ್ ಶಂಕರ್ʼ (Ismart Shankar) ಸಿನಿಮಾ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡ್ರು. ಹೀಗೆ ಸೂಪರ್ ಡೂಪರ್ ಹಿಟ್ ಕೊಟ್ಟ ಬ್ಯೂಟಿಪೂಲ್ ನಟಿ ಇದ್ದಕ್ಕಿದ್ದ ಹಾಗೆ ಕಣ್ಮರೆಯಾಗಿ ಇದೀಗ ಮತ್ತೆ ಕಂಬ್ಯಾಕ್ ಮಾಡಿದ್ದಾರೆ.
ಟಾಲಿವುಡ್ ಅಂಗಳದಲ್ಲಿ ಅಪಾರ ಬೇಡಿಕೆ ಗಳಿಸಿಕೊಂಡ ನಭಾ(Nabha) ರಾಮ್ ಪೋತಿನೇನಿ, ರವಿತೇಜ, ಸಾಯಿ ಧರ್ಮ ತೇಜ್, ನಿತಿನ್ ಜೊತೆ ಸ್ಕ್ರೀನ್ ಶೇರ್ ಮಾಡಿ ಪಾಫ್ಯುಲರ್ ಆದ್ರು. ಒಂದಾದ ಮೇಲೆ ಅವಕಾಶಗಳು ಕೈ ಬೀಸಿ ಕರೆಯುವಾಗಲೇ ಕಾರ್ ಅಪಘಾತವಾಯ್ತು. ಆಕ್ಸಿಡೆಂಟ್‌ನಿಂದಾಗಿ ಎರಡು ವರ್ಷ ವನವಾಸ ಅನುಭವಿಸಿದ್ದ ನಟಿ ಇದೀಗ ಕಂ ಬ್ಯಾಕ್ ಮಾಡುತ್ತಿದ್ದಾರೆ. ಇಸ್ಮಾರ್ಟ್ ಬ್ಯೂಟಿ ಎರಡೆರಡು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ.
ʻಕಾರ್ತಿಕೇಯʼ ಖ್ಯಾತಿಯ ನಿಖಿಲ್ ಸಿದ್ದಾರ್ಥ್ ನಟನೆಯ ʻಸ್ವಯಂಭುʼ(Swayambu) ಸಿನಿಮಾದಲ್ಲಿ ಸೆಕೆಂಡ್ ಲೀಡ್ ರೋಲ್ ನಲ್ಲಿ ನಭಾ(Nabha) ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಇದರ ಜೊತೆಗೆ ʻಹನುಮಾನ್́ ಸಿನಿಮಾ ನಿರ್ಮಾಣ ಮಾಡಿದ್ದ ಕೆ. ನಿರಂಜನ್ ರೆಡ್ಡಿ ನಿರ್ಮಾಣದ ಮಹಿಳಾ ಪ್ರಧಾನ ಸಿನಿಮಾದಲ್ಲೂ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಎರಡು ವರ್ಷದ ನಂತರ ಕಂ ಬ್ಯಾಕ್ ಮಾಡ್ತಿರುವ ನಭಾ ಬ್ಯಾಕ್ ಟು ಬ್ಯಾಕ್ ಸಿನಿಮಾ ಒಪ್ಪಿಕೊಂಡು ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.