ಭಾರತೀಯ ಸಿನಿಪ್ರಪಂಚದಲ್ಲಿ ಹೊಂಬಾಳೆ ಯಶಸ್ಸಿನ ಕಹಳೆ ಮೊಳಗಿಸ್ತಿದೆ. ಕೆಜಿಎಫ್ ಸರಣಿ ಸಿನಿಮಾ, ಕಾಂತಾರ ಈಗ ಸಲಾರ್ ಮೂಲಕ ಬೆಳ್ಳಿತೆರೆ ಬಾನಂಗಳಲ್ಲಿ ಗೆಲುವಿನ ಚಿತ್ತಾರ ಮೂಡಿಸಲು ಸಕಲ ರೀತಿಯಿಂದ ಸನ್ನದ್ಧವಾಗಿದೆ. ಸಾಲು ಸಾಲು ಮೆಗಾ ಹಿಟ್ ಕೊಟ್ಟಿರುವ..ಕೊಡಲು ಅಣಿಯಾಗ್ತಿರುವ ಹೊಂಬಾಳೆ ಭತ್ತಳಿಕೆ ಬಹುನಿರೀಕ್ಷಿತ ಸಿನ್ಮಾಗಳಲ್ಲೊಂದು ಬಘೀರ.

ರೋರಿಂಗ್ ಸ್ಟಾರ್ ಶ್ರೀಮುರಳಿ, ಹೊಂಬಾಳೆ ಹಾಗೂ ಸೂರಿ..ಈ ಮೂವರ ಸಂಗಮದಿಂದಲೇ ಬಘೀರ ದೊಡ್ಡ ಮಟ್ಟಿಗಿನ ಹೈಪ್ ಪಡೆದುಕೊಂಡಿದೆ. ಅದರ ಹೊರತಾಗಿ ಬಘೀರ ಸೌತ್ ಇಂಡಸ್ಟ್ರಿಯಲ್ಲಿಯೂ ಬಜ್ ಕ್ರಿಯೇಟ್ ಮಾಡೋದಿಕ್ಕೆ ಕಾರಣ ಕೆಜಿಎಫ್ ಅಧಿಪತಿ ಪ್ರಶಾಂತ್ ನೀಲ್..ಬಘೀರನಿಗೆ ಕಥೆ ಎಣೆದಿರೋದು ಮಿಸ್ಟರ್ ನೀಲ್ ಗಾರು..ಪ್ರಶಾಂತ್ ನೀಲ್ ಕಥೆ ಅಂದ್ಮೇಲೆ ಕೇಳ್ಬೇಕೆ..ನಿರೀಕ್ಷೆ ಜಗದಗಲ..ರೋರಿಂಗ್ ಸ್ಟಾರ್ ಫ್ಯಾನ್ಸ್ ಕಿಲಕಿಲ..ಎಲ್ಲವೂ ಅಂದುಕೊಂಡಂತೆ ಆಗಿದ್ರೆ ಇಷ್ಟರಲ್ಲಾಗಲೇ ಬಘೀರ ಅಂಗಳದಿಂದ ಒಂದೊಂದಾಗಿ ಬೊಂಬಾಟ್ ಸಮಾಚಾರ ಹೊರಬೀಳ್ಬೇಕಿತ್ತು. ಆದ್ರೆ ಏನ್ ಮಾಡೋದು ಅದೊಂದು ಕಾರಣದಿಂದ ಸಿನ್ಮಾದಿಂದ ಚಿಕ್ಕದೊಂದು ಅಪ್ ಡೇಟ್ ಸಿಕ್ಕಿರಲಿಲ್ಲ.

ಬಘೀರ ಶೂಟಿಂಗ್ ವೇಳೆ ಶ್ರೀಮುರಳಿ ಕಾಲಿಗೆಪೆಟ್ಟು ಮಾಡಿಕೊಂಡು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ರು. ಹೀಗಾಗಿ ಬಘೀರನ ಬಳಗದಿಂದ ಒಂದು ಪೋಸ್ಟರ್ ಕೂಡ ಬಂದಿಲ್ಲ. ಆದ್ರೀಗ ನಿರ್ದೇಶಕ ಸೂರಿ ರೋರಿಂಗ್ ಸ್ಟಾರ್ ಫ್ಯಾನ್ಸ್ ಗೆ ಭರ್ಜರಿ ಬಾಡೂಟ ನೀಡೋದಿಕ್ಕೆ ಐ ಹ್ಯಾಮ್ ರೆಡಿ ಎಂದಿದ್ದಾರೆ. ಪೋಸ್ಟರ್ ಏನ್ ಗುರು ಬಘೀರ ಟೀಸರ್ ನಿಮ್ಮ ಮುಂದೆ ಹಾಜರಾಗ್ತಿದೆ. ಅದು ವಿಶೇಷ ದಿನದಂದೇ ಅನ್ನೋದು ಮತ್ತೊಂದು ಕ್ರೇಜಿ ಮ್ಯಾಟರ್. ಡಿಸೆಂಬರ್ ಸ್ಯಾಂಡಲ್ ವುಡ್ ಪಾಲಿಗೆ ಲಕ್ಕಿ ಮಂತ್..ಹಾಗೇ ಶ್ರೀಮುರಳಿ ಪಾಲಿಗೂ ವೆರಿ ವೆರಿ ಸ್ಪೆಷಲ್..ಯಾಕಂದ್ರೆ ರೋರಿಂಗ್ ಸ್ಟಾರ್ ಜನ್ಮತಾಳಿದ್ದೇ ಇದೇ ತಿಂಗಳಲ್ಲಿ. ಅತಾರ್ಥ್ ಇದೇ ತಿಂಗಳ 17ಕ್ಕೆ ಶ್ರೀಮುರಳಿ ಜನ್ಮದಿನ..ಈ ದಿನದಂದೇ ಬಘೀರ ಟೀಸರ್ ನ ಮದಗಜನ ಹುಟ್ದಬ್ಬಕ್ಕೆ ಉಡುಗೊರೆಯಾಗಿ ನೀಡಲು ಚಿತ್ರತಂಡ ಸಜ್ಜಾಗಿದೆ. ರಾಕಿಂಗ್ ಸ್ಟಾರ್ ಯಶ್ ಗೆ ಲಕ್ಕಿ ಸಿನ್ಮಾ ಡೈರೆಕ್ಷನ್ ಮಾಡಿದ್ದ ಡಾ,ಸೂರಿ ಬರೋಬ್ಬರಿ 10 ವರ್ಷದ ನಂತ್ರ ಮತ್ತೆ ಡೈರೆಕ್ಷನ್ ಕ್ಯಾಪ್ ತೊಟ್ಟು ಶ್ರೀಗೆ ಆಕ್ಷನ್ ಕಟ್ ಹೇಳಿದ್ದಾರೆ.

ಎಜೆ ಶೆಟ್ಟಿ ಕ್ಯಾಮೆರಾ ಕೈಚಳಕ, ಅಜನೀಶ್ ಲೋಕನಾಥ್ ಮ್ಯೂಸಿಕ್ ಪುಳಕ, ರಂಗಾಯಣ ರಘು, ಅಚ್ಯುತ್ ಕುಮಾರ್ ನಂತಹ ದಿಗ್ಗಜ ತಾರೆಯರ ಅಭಿನಯದ ಮೆರಗು ತುಂಬಿರುವ ಬಘೀರನಿಗೆ ರುಕ್ಮಿಣಿ ವಸಂತ ಜೋಡಿ..ಸೂರಿ ಟೇಕಿಂಗ್, ಶ್ರೀ ಆಕ್ಟಿಂಗ್, ಹೊಂಬಾಳೆ ಫಂಡಿಂಗ್ ನ ಈ ಚಿತ್ರ ಕೊನೆ ಹಂತದ ಶೂಟಿಂಗ್ ನಲ್ಲಿದೆ. ಬಘೀರ ಘರ್ಜನೆ ಹೇಗಿರಲಿದೆ ಅನ್ನೋದಕ್ಕೆ ಇದೇ 17ರಂದು ಸಣ್ಣದೊಂದು ಹಿಂಟ್ ಸಿಗಲಿದೆ.





