ಸೋಮವಾರ, ಜುಲೈ 20, 2026
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

ಜೈಲರ್, ಕ್ಯಾಪ್ಟನ್ ಮಿಲ್ಲರ್, ಕಣ್ಣಪ್ಪ ನಂತ್ರ ಮೆಗಾ ಪ್ರಿನ್ಸ್ ಸಿನಿಮಾಗೆ ಶಿವಣ್ಣ ಗ್ರೀನ್ ಸಿಗ್ನಲ್!

Vishalakshi Pby Vishalakshi P
06/12/2023
in Majja Special
Reading Time: 1 min read
ಜೈಲರ್, ಕ್ಯಾಪ್ಟನ್ ಮಿಲ್ಲರ್, ಕಣ್ಣಪ್ಪ ನಂತ್ರ ಮೆಗಾ ಪ್ರಿನ್ಸ್ ಸಿನಿಮಾಗೆ ಶಿವಣ್ಣ ಗ್ರೀನ್ ಸಿಗ್ನಲ್!

ಸೆಂಚುರಿ ಸ್ಟಾರ್ ಶಿವಣ್ಣ ಸ್ಯಾಂಡಲ್‍ವುಡ್‍ನ ಮೋಸ್ಟ್ ಬ್ಯುಸಿಯೆಸ್ಟ್ ಆ್ಯಕ್ಟರ್ ಅನ್ನೋದು ನಿಮಗೆಲ್ಲ ಗೊತ್ತೆಯಿದೆ. ವಯಸ್ಸು 62 ಆದ್ರೂ ಕೂಡ ದುನಿಯಾದಲ್ಲಿ ಡಿಮ್ಯಾಂಡ್ ಕಳೆದುಕೊಳ್ಳದ ದೊಡ್ಮನೆ ದೊರೆ ಈಗ ಸ್ಯಾಂಡಲ್‍ವುಡ್ ಸ್ಟಾರ್‍ಗಳಿಗೆ ಮಾತ್ರವಲ್ಲ ಸೌತ್ ಸೂಪರ್ ಸ್ಟಾರ್ ಗಳಿಗೂ ಟಕ್ಕರ್ ಕೊಡ್ತಿದ್ದಾರೆ. ಇಲ್ಲಿತನಕ ಶಿವಣ್ಣ ಕನ್ನಡಕ್ಕೆ ಮಾತ್ರ ಸೀಮಿತವಾಗಿದ್ದರು. ಆದರೆ, ಜೈಲರ್ ಬಿಡುಗಡೆ ನಂತರ ಬೇಡಿಕೆ ಹೆಚ್ಚಿದೆ. ತೆಲುಗು, ತಮಿಳು, ಮಲೆಯಾಳಂ ಸಿನಿಮಾ ಪ್ರೇಕ್ಷಕರು ಮಾತ್ರವಲ್ಲ ಅಲ್ಲಿನ ಸ್ಟಾರ್ ಗಳು ಕೂಡ ಸೆಂಚುರಿ ಸ್ಟಾರ್ ನಮ್ಮ ಸಿನಿಮಾದ ಭಾಗವಾಗಬೇಕು ಅಂತ ಆಸೆಪಡ್ತಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ಹಲವು ಪ್ರಯತ್ನಗಳು ನಡೆದಿವೆ. ಅದ್ರಲ್ಲಿ ಮಲೆಯಾಳಂ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಹಾಗೂ ತೆಲುಗು ನಟ ವಿಷ್ಣುಮಂಚು ಯಶ ಕಂಡಿದ್ದಾರೆ. ದೊಡ್ಮನೆ ದೊರೆಯ ಕಾಲ್‍ಶೀಟ್ ಗಿಟ್ಟಿಸಿಕೊಂಡು ರತ್ನಗಂಬಳಿ ಮೇಲೆ ಕರೆದೊಯ್ಯಲು ಅವರು ಸಜ್ಜಾಗಿದ್ದಾರೆ. ಈ ಮಧ್ಯೆ ನಿರ್ದೇಶಕ ಬುಚ್ಚಿ ಬಾಬು ಕೂಡ ಮಾಸ್ ಲೀಡರ್ ಮನೆಯ ಕದ ತಟ್ಟಲು ಬರುತ್ತಿದ್ದಾರೆ. ಮೆಗಾ ಪವರ್ ಸ್ಟಾರ್ ರಾಮ್‍ಚರಣ್ ಸಿನಿಮಾದಲ್ಲಿ ಸೆಂಚುರಿ ಸ್ಟಾರ್ ಸ್ಪೆಷಲ್ ಎಂಟ್ರಿ ಕೊಡಿಸಲು ತೀರ್ಮಾನಿಸಿದ್ದು ಇದಕ್ಕೆ ಶಿವಣ್ಣ ಕೂಡ ಓಕೆ ಹೇಳಿದ್ದಾರಂತೆ.

ಅಷ್ಟಕ್ಕೂ, ನಾವ್ ಇವತ್ತು ದೊಡ್ಮನೆ ದೊರೆಯ ಬಗ್ಗೆ ಮಾತನಾಡ್ತಿರೋದಕ್ಕೆ ಕಾರಣ ಖುದ್ದು ದೊರೆಯೇ ಧಮಾಕೇದಾರ್ ಅಪ್‍ಡೇಟ್ ಕೊಟ್ಟಿದ್ದಾರೆ. ಘೋಸ್ಟ್ ಸಿನಿಮಾದ ಸಕ್ಸಸ್‍ನ ಸೆಲಬ್ರೇಟ್ ಮಾಡೋದಕ್ಕೆ ಶ್ರೀ ಮುತ್ತು ನಿವಾಸದಲ್ಲೇ ಮಾಧ್ಯಮಮಿತ್ರರನ್ನ ಆಹ್ವಾನಿಸಿದ್ದ ಶಿವಣ್ಣ, ಕೈಯಲ್ಲಿರುವ ಸಾಲು ಸಾಲು ಸಿನಿಮಾಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಘೋಸ್ಟ್ ಪಾರ್ಟ್-2, ಭೈರತಿ ರಣಗಲ್ ಸಿನಿಮಾಗಳ ಬಗ್ಗೆ ಅಪ್‍ಡೇಟ್ ನೀಡಿದ ಹ್ಯಾಟ್ರಿಕ್ ಹೀರೋ, ತನ್ನ ಮುಂದಿನ ಸಿನಿಮಾದಲ್ಲಿ ನ್ಯಾಚುರಲ್ ಸ್ಟಾರ್ ನಾನಿ ಇರುವುದನ್ನ ಖಚಿತಪಡಿಸಿದರು. ಆದರೆ, ಅದು ಯಾವ್ ಸಿನಿಮಾ? ಏನು ಅನ್ನೋದನ್ನ ಶಿವಣ್ಣ ಗುಟ್ಟಾಗಿಟ್ಟರು.

ಸದ್ಯ ಏನಿಲ್ಲ ಅಂದ್ರೂ ಶಿವಣ್ಣನ ಕೈಯಲ್ಲಿ ಐದಾರು ಚಿತ್ರಗಳಿವೆ ಸಿನಿಮಾಗಳಿವೆ.. ತಮಿಳಿನ ಕ್ಯಾಪ್ಟನ್‌ ಮಿಲ್ಲರ್‌ ಮತ್ತು ಕನ್ನಡದ ಕರಟಕ ದಮನಕ ತೆರೆಗೆ ಬರಲು ಸಜ್ಜಾಗಿವೆ.. ಇದ್ರ ಜೊತೆಗೆ ಭೈರತಿ ರಣಗಲ್‌ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮದೇ ಹೋಮ್‌‌ ಬ್ಯಾನರ್‌ನಲ್ಲಿ ಈ ಸಿನಿಮಾ ಮಾಡ್ತಿದ್ದು, ಮಫ್ತಿ ಬಳಿಕ ಮತ್ತೆ ರಣಗಲ್‌ ಅವತಾರದಲ್ಲಿ ರಣಾಂಗಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾ ಈಗಾಗ್ಲೆ ಶೇಖಡಾ 50ರಷ್ಟು ಶೂಟಿಂಗ್‌ ಕಂಪ್ಲೀಟ್‌ ಆಗಿರೋ ಬಗ್ಗೆ, ಖುದ್ದು ಶಿವಣ್ಣನೇ ಮಾಹಿತಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ ಘೋಸ್ಟ್-2 ಸಿನಿಮಾದ ರನ್‌ ಟೈಂ ಮಾಹಿತಿ ನೀಡಿದ್ದು, ಘೋಸ್ಟ್‌ ಸೀಕ್ವೆಲ್‌ 2 ಗಂಟೆ 10 ನಿಮಿಷ ಇರಲಿದ್ಯಂತೆ.. ಸದ್ಯದಲ್ಲೇ ಸಿನಿಮಾ ಟೇಕಾಫ್‌ ಆಗಲಿದ್ದು, ಮುಂದಿನ ವರ್ಷವೇ ತೆರೆಗೆ ಅಪ್ಪಳಿಸಲಿದೆ.

ಅಚ್ಚರಿ ಅಂದರೆ ದೊಡ್ಮನೆ ದೊರೆ ಮನೆಮುಂದೆ ಕನ್ನಡ ಸಿನಿಮಾ ಇಂಡಸ್ಟ್ರಿಯ ಎಷ್ಟೋ ಜನ ನಿರ್ದೇಶಕರು, ನಿರ್ಮಾಪಕರು ಈಗಲೂ ಕ್ಯೂ ನಿಂತಿದ್ದಾರೆ. ಮುತ್ತಣ್ಣ ಒಪ್ಪಿಕೊಂಡಿರೋ ಸಿನಿಮಾಗಳನ್ನ ಆದಷ್ಟು ಬೇಗ ಮುಗಿಸಿಕೊಟ್ಟು ನಮಗೊಂದು ಕಾಲ್‍ಶೀಟ್ ಕೊಡ್ತಾರೆ ಅಂತ ಕಾಯ್ತಿದ್ದಾರೆ. ಹೀಗಿರುವಾಗಲೇ ಕಾಲಿವುಡ್, ಟಾಲಿವುಡ್, ಮಾಲಿವುಡ್ ಸಿನಿಮಾ ಇಂಡಸ್ಟ್ರಿಯವರು ನಮ್ಮ ಮಾಸ್ ಲೀಡರ್ ನ ಅಲ್ಲೆ ಲಾಕ್ ಮಾಡಿಕೊಳ್ಳೋಕೆ ನೋಡ್ತಿದ್ದಾರೆ. ರಜನಿಕಾಂತ್ ಅಳಿಯ ಧನುಷ್ ಜೊತೆಗಿನ ಕ್ಯಾಪ್ಟನ್ ಮಿಲ್ಲರ್ ಚಿತ್ರ ಮುಗಿಸಿಕೊಟ್ಟು ಶಿವಣ್ಣ ವಾಪಾಸ್ ಬರ್ತಾರೆ ಎಂದುಕೊಳ್ಳುತ್ತಿರುವಾಗಲೇ, ಮಲೆಯಾಳಂ ಸಿನಿಮಾ ಇಂಡಸ್ಟ್ರಿಯವರು ಮಾಸ್ ಲೀಡರ್‍ನ ಕ್ಯಾಚ್ ಹಾಕ್ಕೊಂಡಿದ್ದಾರೆ. ಸೈಕಲ್ ಗ್ಯಾಪ್‍ನಲ್ಲಿ ಕರುನಾಡ ಚಕ್ರವರ್ತಿಯ ಕಾಲ್‍ಶೀಟ್ ಪಡೆದು ಅಗ್ರಿಮೆಂಟ್‍ಗೆ ಸೈನ್ ಹಾಕಿಸಿಕೊಂಡಿದ್ದಾರೆ. ಸ್ನೇಹ, ಪ್ರೀತಿ, ಬಾಂದವ್ಯಕ್ಕೆ ಬೆಲೆಕೊಟ್ಟು ಪರಭಾಷೆಯ ಆಪ್ತರ ಸಿನಿಮಾಗಳನ್ನ ಒಪ್ಪಿಕೊಳ್ತಿದ್ದಾರೆ. ಕೆಲ ಪಾತ್ರಗಳು ಕರುನಾಡ ಚಕ್ರವರ್ತಿಯನ್ನೇ ಡಿಮ್ಯಾಂಡ್ ಮಾಡ್ತಿರೋದ್ರಿಂದ ಅವುಗಳನ್ನೂ ಒಪ್ಪಿಕೊಳ್ಳಬೇಕಿದೆ. ಗಡಿಯ ಹಂಗು ತೊರೆದು ಧಗಧಗಿಸಬೇಕಿದೆ. ಅದೇ ಕೆಲಸವನ್ನ ಹ್ಯಾಟ್ರಿಕ್ ಹೀರೋ ಅಚ್ಚುಕಟ್ಟಾಗಿ ನಿಭಾಯಿಸ್ತಿದ್ದಾರೆ. 62ರಲ್ಲೂ ಹ್ಯಾಟ್ರಿಕ್ ಹೀರೋಗಿರುವ ಡಿಮ್ಯಾಂಡ್ ಕಂಡು ಕೆಲವರು ಮೂಗಿನ ಮೇಲೆ ಬೆರಳಿಟ್ಕೊಂಡಿದ್ದಾರೆ. ಸ್ಯಾಂಡಲ್‍ವುಡ್, ಕಾಲಿವುಡ್, ಟಾಲಿವುಡ್, ಮಾಲಿವುಡ್ ಆಯ್ತು ನೆಕ್ಸ್ಟ್ ಬಾಲಿವುಡ್ ಗೆ ಲಗ್ಗೆ ಇಡೋದು ಫಿಕ್ಸು ಎನ್ನುತ್ತಿದ್ದಾರೆ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
ಟ್ರೇಲರ್ ನಲ್ಲೇ ಕುತೂಹಲ ಮೂಡಿಸಿದ `ಮಂಚ’ !

ಟ್ರೇಲರ್ ನಲ್ಲೇ ಕುತೂಹಲ ಮೂಡಿಸಿದ `ಮಂಚ' !

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.