ಗುರುವಾರ, ಜುಲೈ 23, 2026
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

ಬಾಹುಬಲಿ-2 ಹಾಗೂ ಕೆಜಿಎಫ್-2 ರೆಕಾರ್ಡ್ ಬ್ರೇಕ್ ಮಾಡಿದ ಜವಾನ್ !

Vishalakshi Pby Vishalakshi P
12/09/2023
in Majja Special
Reading Time: 1 min read
ಎರಡೇ ದಿನಕ್ಕೆ 200 ಕೋಟಿ ಕ್ಲಬ್ ಸೇರಿದ ‘ಜವಾನ್’; ಒಂದೇ ವರ್ಷದಲ್ಲಿ ಎರಡು ಬಾರಿ ಬಾಕ್ಸಾಫೀಸ್ ದೋಚಿದ ಶಾರೂಖ್ ಖಾನ್!

ಕೆಜಿಎಫ್ ಹೊಡೆತಕ್ಕೆ ಕಿಂಗ್ ಖಾನ್ ಜೀರೋ ಆಗಿದ್ದು, ದುನಿಯಾ ಸಹವಾಸವೇ ಬೇಡ ಅಂತ ಸಿನಿಮಾ ಜಗತ್ತಿನಿಂದ ಭರ್ತಿ 4 ವರ್ಷಗಳು ದೂರ ಉಳಿದಿದ್ದು, ಕೊನೆಗೆ ಪಠಾಣ್ ಸಿನಿಮಾ ಮೂಲಕ ಪವರ್ ಫುಲ್ ಕಂಬ್ಯಾಕ್ ಮಾಡಿದ್ದು ನಿಮಗೆಲ್ಲ ಗೊತ್ತಿರೋ ವಿಚಾರವೇ. ಈಗ ಜವಾನ್ ಆಗಿ ಕಣಕ್ಕಿಳಿದಿರುವ ಕಿಂಗ್ ಖಾನ್ ಶಾರುಖ್ ತಾವು ಬಾಕ್ಸ್ ಆಫೀಸ್ ಬಾದ್‍ಷಾ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಅಖಾಡಕ್ಕಿಳಿದ ನಾಲ್ಕೇ ದಿನದಲ್ಲಿ ಬಾಹುಬಲಿ-2 ಹಾಗೂ ಕೆಜಿಎಫ್-2 ಚಿತ್ರಕ್ಕೆ ಟಕ್ಕರ್ ಕೊಟ್ಟು ಆ ರೆಕಾರ್ಡ್ ಬ್ರೇಕ್ ಮಾಡಿರುವ ಬಾಜೀಘರ್ ಹೀರೋ, ಮೈ ನೇಮ್ ಈಸ್ ಖಾನ್ ಎನ್ನುತ್ತಾ ಗಹಗಹಿಸುತ್ತಿದ್ದಾರೆ.

ದಿಲ್‍ವಾಲೇ, ಫ್ಯಾನ್, ಡಿಯರ್ ಜಿಂದಗಿ, ರಯೀಸ್, ಜೀರೋ ಹೀಗೆ ಸಾಲು ಸಾಲು ಸಿನಿಮಾಗಳು ಕೈ ಕೊಟ್ಟಿದ್ದರಿಂದ ಶಾರುಖ್ ಸೋಲಿನ ಸುಳಿಗೆ ಸಿಲುಕಿದ್ದರು. ಸಕ್ಸಸ್ ಕಾಣದೇ, ಯಶಸ್ಸು ಸಿಗದೇ ಕಂಗ್ ಕಂಗಾಲಾಗಿದ್ದರು. ನಾಲ್ಕು ವರ್ಷಗಳ ಬ್ರೇಕ್‍ನ ನಂತರ ಮೈ ಕೊಡವಿಕೊಂಡು ಅಖಾಡಕ್ಕಿಳಿದ ಕಿಂಗ್ ಖಾನ್, ಪಠಾಣ್ ಮೂಲಕ 1000 ಕೋಟಿ ಮೂಟೆ ಕಟ್ಟಿದ್ದರು. ಇದೀಗ `ಜವಾನ್’ ಸಿನಿಮಾ ಮೂಲಕ ಫೀಲ್ಡಿಗಿಳಿದು ನಾಲ್ಕೇ ನಾಲ್ಕು ದಿನದಲ್ಲಿ `250′ ಕೋಟಿ ಕೊಳ್ಳೆ ಹೊಡೆದಿದ್ದಾರೆ. ಈ ಮೂಲಕ ಬಾಹುಬಲಿ-2 ಹಾಗೂ ಕೆಜಿಎಫ್ 2 ಸೇರಿದಂತೆ ಸೌತ್-ನಾರ್ತ್ ಸಿನಿಮಾಗಳ ಕಲೆಕ್ಷನ್ ದಾಖಲೆನಾ ಮುರಿದು ಬಿಸಾಕಿದ್ದಾರೆ

ಅಂದ್ಹಾಗೇ, ಗಲ್ಲಾಪೆಟ್ಟಿಗೆಯಲ್ಲಿ 250 ಕೋಟಿ ಬಾಚಿಕೊಳ್ಳಲು ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ-2 ಸಿನಿಮಾ ಬರೋಬ್ಬರಿ 8 ದಿನಗಳನ್ನು ತೆಗೆದುಕೊಂಡಿತ್ತು. ಪ್ರಶಾಂತ್ ನೀಲ್ ಕಲ್ಪನೆಯ ಕೆಜಿಎಫ್-2 ಚಿತ್ರ 7 ದಿನದಲ್ಲಿ 250 ಕೋಟಿ ಕಲೆಕ್ಷನ್ ಮಾಡಿತ್ತು. ಇತ್ತೀಚೆಗೆ ತೆರೆಕಂಡ ಸನ್ನಿಡಿಯೋಲ್ ಅಭಿನಯದ `ಗದರ್-2′ ಚಿತ್ರ 6 ದಿನದಲ್ಲಿ 250 ಕೋಟಿ ಕೊಳ್ಳೆಹೊಡೆದಿತ್ತು. ಅದಕ್ಕೂ ಮೊದಲು ಬಂದ ಬಾದ್‍ಷಾ ನಟನೆಯ `ಪಠಾಣ್’ ಮೂವೀ ಐದೇ ದಿನದಲ್ಲಿ 250 ಕೋಟಿ ಬಾಚಿಕೊಂಡಿತ್ತು. ಆದ್ರೀಗ ಅದೇ ಜವಾನ್ ಕೇವಲ ನಾಲ್ಕು ದಿನದಲ್ಲಿ 250 ಕೋಟಿ ಲೂಟಿ ಮಾಡಿ ಎಲ್ಲಾ ಪ್ಯಾನ್ ಇಂಡಿಯಾ ಸಿನಿಮಾಗಳ ಆಲ್‍ಟೈಮ್ ರೆಕಾರ್ಡ್‍ನ ಬ್ರೇಕ್ ಮಾಡಿದ್ದಾನೆ. ಫಾಸ್ಟೆಸ್ ಕಲೆಕ್ಷನ್ ಮೂವೀ ಎನ್ನುವ ಕಿರೀಟ ಹೊತ್ಕೊಂಡು ಕೇಕೆ ಹೊಡೆಯುತ್ತಿದ್ದಾನೆ.

ಸದ್ಯ ಜವಾನ್ ಹವಾ ಜೋರಾಗಿದೆ. ಸೆಪ್ಟೆಂಬರ್ 07ರಂದು ವಿಶ್ವದಾದ್ಯಂತ ತೆರೆಗೆ ಬಂದ `ಜವಾನ್’ ಜಲ್ವಾಗೆ ಗಲ್ಲಾಪೆಟ್ಟಿಗೆಯಿಂದ ಕೋಟಿ ಕೋಟಿ ಹಣ ಹರಿದುಬರುತ್ತಿದೆ. 4 ದಿನದಲ್ಲಿ 250 ಕೋಟಿ ಕ್ಲಬ್ ಸೇರಿರೋ `ಜವಾನ್’ 4 ವಾರ ಕಳೆಯುವಷ್ಟರಲ್ಲಿ 1000 ಕೋಟಿ ಲೂಟಿ ಮಾಡೋದ್ರಲ್ಲಿ ನೋ ಡೌಟ್ ಎನ್ನಲಾಗುತ್ತಿದೆ. ಈ ಬ್ಲಾಕ್‍ಬಸ್ಟರ್ ಸಕ್ಸಸ್‍ಗೆ `ಜವಾನ್’ ಸಾರಥಿ ಮೊದಲ ಕಾರಣ ಅಂದರೆ ಬಹುಷಃ ತಪ್ಪಾಗಲಿಕ್ಕಿಲ್ಲ. ಹೌದು, ಬಾದ್‍ಷಾನ ಭಿನ್ನ-ವಿಭಿನ್ನ ಅವತಾರದಲ್ಲಿ ತೋರಿಸಿ, ಭರ್ಜರಿ ಆ್ಯಕ್ಷನ್ ಇಟ್ಟು, ಮಾಸ್ ಮಸಾಲಾ ಸಿನಿಮಾ ಕಟ್ಟಿಕೊಟ್ಟಿರೋ ಆಟ್ಲಿ ಅಲಿಯಾಸ್ ಅರುಣ್ ಕುಮಾರ್, ಶಾರುಖ್ ಬಾಕ್ಸ್ ಆಫೀಸ್ ಕಿಂಗ್ ಅನ್ನೋದನ್ನ ಮತ್ತೆ ಪ್ರೂ ಮಾಡಿಸಿದ್ದಾರೆ. ರೆಡ್ ಚಿಲ್ಲಿಸ್ ಬ್ಯಾನರ್‍ಗೆ ಭರ್‍ಪೂರ್ ಹಣ ಹೊಳೆಯಾಗಿ ಹರಿದುಬರುವಂತೆ ನೋಡಿಕೊಂಡಿದ್ದಾರೆ. ಪಠಾಣ್ ನಂತರ ಮಗದೊಂದು ಸಕ್ಸಸ್ ನೋಡಿರೋ ಶಾರುಖ್ ಖಾನ್ ಮತ್ತೆ ಹಳೆಯ ಫಾರ್ಮ್‍ಗೆ ಮರಳಿದ್ದಾರೆ. ಇದೇ ವರ್ಷ ಡಿಸೆಂಬರ್‍ನಲ್ಲಿ ರಾಜ್‍ಕುಮಾರ್ ಹಿರಾನಿ ನಿರ್ದೇಶನದ `ಡಂಕಿ’ ಸಿನಿಮಾ ಮೂಲಕ ಮತ್ತೆ ಅಖಾಡಕ್ಕಿಳಿಯಲಿದ್ದಾರೆ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
36 ವರ್ಷಗಳಾದ್ಮೇಲೆ ಮತ್ತೆ ಒಂದಾಗ್ತಿದ್ದಾರೆ ಮಣಿರತ್ನಂ-ಕಮಲ್ ಹಾಸನ್ ! `KH 234′ ಚಿತ್ರದಲ್ಲಿ ತ್ರಿಷಾ-ಜಯಂ ರವಿ-ದುಲ್ಕರ್ ಸಲ್ಮಾನ್?

36 ವರ್ಷಗಳಾದ್ಮೇಲೆ ಮತ್ತೆ ಒಂದಾಗ್ತಿದ್ದಾರೆ ಮಣಿರತ್ನಂ-ಕಮಲ್ ಹಾಸನ್ ! `KH 234' ಚಿತ್ರದಲ್ಲಿ ತ್ರಿಷಾ-ಜಯಂ ರವಿ-ದುಲ್ಕರ್ ಸಲ್ಮಾನ್?

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.