ಮಂಗಳವಾರ, ಜುಲೈ 21, 2026
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

36 ವರ್ಷಗಳಾದ್ಮೇಲೆ ಮತ್ತೆ ಒಂದಾಗ್ತಿದ್ದಾರೆ ಮಣಿರತ್ನಂ-ಕಮಲ್ ಹಾಸನ್ ! `KH 234′ ಚಿತ್ರದಲ್ಲಿ ತ್ರಿಷಾ-ಜಯಂ ರವಿ-ದುಲ್ಕರ್ ಸಲ್ಮಾನ್?

Vishalakshi Pby Vishalakshi P
12/09/2023
in Majja Special
Reading Time: 1 min read
36 ವರ್ಷಗಳಾದ್ಮೇಲೆ ಮತ್ತೆ ಒಂದಾಗ್ತಿದ್ದಾರೆ ಮಣಿರತ್ನಂ-ಕಮಲ್ ಹಾಸನ್ ! `KH 234′ ಚಿತ್ರದಲ್ಲಿ ತ್ರಿಷಾ-ಜಯಂ ರವಿ-ದುಲ್ಕರ್ ಸಲ್ಮಾನ್?

ಖ್ಯಾತ ಬಹುಭಾಷಾ ನಿರ್ದೇಶಕ ಮಣಿರತ್ನಂ ಹಾಗೂ ಬಹುಮುಖ ಪ್ರತಿಭಾವಂತ ನಟ ಕಮಲ್‍ಹಾಸನ್ ಮತ್ತೆ ಒಂದಾಗಿದ್ದಾರೆ. 1987ರಲ್ಲಿ ಇಬ್ಬರು ಕೂಡಿ `ನಾಯಗನ್’ ಚಿತ್ರ ಮಾಡಿದ್ದರು. ಈಗ ಭರ್ತಿ 36 ವರ್ಷಗಳು ಕಳೆದ್ಮೇಲೆ ಈ ಜೋಡಿ ಮತ್ತೆ ಕೈ ಜೋಡಿಸಿದ್ದು, ದಕ್ಷಿಣ ಭಾರತೀಯ ಸಿನಿಮಾರಂಗ ಮಾತ್ರವಲ್ಲ ಇಡೀ ವಿಶ್ವಸಿನಿದುನಿಯಾವೇ ಕಣ್ಣರಳಿಸುವಂತೆ ಮಾಡಿದೆ. ಇವರಿಬ್ಬರ ಜುಗಲ್‍ಬಂಧಿಯಲ್ಲಿ ಮೂಡಿಬರಲಿರುವ ಸಿನಿಮಾದ ಬಗ್ಗೆ ಸಪ್ತಸಾಗರದಾಚೆಯೂ ನಿರೀಕ್ಷೆ ಹಬ್ಬಿಕೊಂಡಿದ್ದು, ತಾರಾಗಣದ ಕುರಿತಾಗಿ ಅದೊಂದು ಸುದ್ದಿ ಹೊರಬಿದ್ದಿದೆ. ಕಾಲಿವುಡ್ ಸೂಪರ್ ಸ್ಟಾರ್‍ಗಳ ಜೊತೆ ಪ್ಯಾನ್ ಇಂಡಿಯಾ ಸ್ಟಾರ್ ಗಳು ಸಮಾಗಮಗೊಳ್ಳುವ ಕಥನ ತಮಿಳು ಅಂಗಳದಿಂದ ದಿಬ್ಬಣ ಹೊರಟು ಸೋಷಿಯಲ್ ಸಮುದ್ರ ಸೇರಿದೆ.

ಅಷ್ಟಕ್ಕೂ, ಆ ಸ್ಟಾರ್ ಗಳು ಯಾರು? ಈ ಕುತೂಹಲಕ್ಕೆ ಉತ್ತರ ಕೊಡಬೇಕು ಅಂದರೆ ಪಾಪ್ಯೂಲರ್ ಪ್ಯಾನ್ ಇಂಡಿಯಾ ಸ್ಟಾರ್ ದುಲ್ಕರ್ ಸಲ್ಮಾನ್ ಹಾಗೂ ಕಾಲಿವುಡ್ ಆ್ಯಕ್ಟರ್ ಜಯಂ ರವಿಯವರ ಹೆಸರನ್ನ ಹೇಳಲೇಬೇಕು. ಹೌದು, ಈ ಇಬ್ಬರು ಸೂಪರ್ ಸ್ಟಾರ್ ಗಳು ಕಮಲ್ ಹಾಸನ್ ಜೊತೆಗೆ ಸ್ಕ್ರೀನ್ ಶೇರ್ ಮಾಡಲಿದ್ದು ಮೇಜರ್ ರೋಲ್‍ನ ಪ್ಲೇ ಮಾಡುತ್ತಿದ್ದಾರೆನ್ನುವ ಸುದ್ದಿ ಹೊರಬಿದ್ದಿದೆ. ಈಗಾಗಲೇ ಈ ಜೋಡಿ ಮಣಿರತ್ನಂ ನಿರ್ದೇಶನದ ಪೊನ್ನಿಯನ್ ಸೆಲ್ವನ್ ಹಾಗೂ ಓಕೆ ಕಣ್ಮಣಿ ಚಿತ್ರದಲ್ಲಿ ಮಿಂಚಿದ್ದರು. ಇದೀಗ ಮತ್ತೊಮ್ಮೆ ಸ್ಟಾರ್ ಮೇಕರ್ ಮಣಿರತ್ನಂ ಡೈರೆಕ್ಷನ್ ಪಿಕ್ಚರ್ ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಉಳಗ ನಾಯಗನ್ ಜೊತೆ ತೆರೆಹಂಚಿಕೊಳ್ಳಲು ಒಪ್ಪಿಕೊಂಡಿದ್ದಾರೆನ್ನುವ ಸಮಾಚಾರ ಬ್ರೇಕಿಂಗ್ ನ್ಯೂಸ್ ಆಗಿದೆ. ಜೊತೆಗೆ ಸೌತ್ ಸಿನಿಮಾಗಳ ಲೀಡಿಂಗ್ ಲೇಡಿ ತ್ರಿಷಾ ಕೂಡ ಈ ಚಿತ್ರದಲ್ಲಿ ಮಿಂಚ್ತಾರೆನ್ನುವ ಸುದ್ದಿಯಿದೆ. ಆದರೆ, ಈ ಬಗ್ಗೆ ಸಿನಿಮಾದ ಸಾರಥಿ ಕಡೆಯಿಂದಾಗ್ಲೀ, ಅಧಿಪತಿ ಕಡೆಯಿಂದಾಗ್ಲೀ ಅಪ್‍ಡೇಟ್ ಲಭ್ಯವಾಗಿಲ್ಲ

 

ಕಳೆದ ವರ್ಷ ಅಧಿಕೃತವಾಗಿ ಈ ಚಿತ್ರ ಘೋಷಣೆಯಾಗಿತ್ತು. ಇವರಿಬ್ಬರ ಕಾಂಬಿನೇಷನ್‍ನಲ್ಲಿ ಬರಲಿರೋ ಸಿನಿಮಾಗೆ `ಕೆಎಚ್234′ ಹೆಸರು ಸೂಚಿಸಲಾಗಿತ್ತು. ಇಬ್ಬರು ಕೂಡ ಬೇರೆ ಬೇರೆ ಪ್ರಾಜೆಕ್ಟ್ ಗಳಲ್ಲಿ ತೊಡಗಿಸಿಕೊಂಡಿದ್ದರು. ಫೈನಲೀ, ಒಟ್ಟಾಗಿ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ. ವಿಕ್ರಮ್ ಸಿನಿಮಾದ ಮೂಲಕ ಹಳೆಯ ಫಾರ್ಮ್‍ಗೆ ಮರಳಿ ಬೆಳ್ಳಿತೆರೆ ರೂಲ್ ಮಾಡಿದ ಉತ್ತಮ್ ವಿಲನ್ ನ, ಮಗದೊಂದು ರೂಪವನ್ನ ವಿಶ್ವಕ್ಕೆ ದರ್ಶನ ಮಾಡಿಸಲು ಮಣಿರತ್ನಂ ಪ್ಲ್ಯಾನ್ ರೂಪಿಸಿದ್ದಾರೆ. ಕಮಲ್‍ಹಾಸನ್ 234 ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ಡೈರೆಕ್ಷನ್ ಮಾಡಲು ಹೊರಟು ನಿಂತಿದ್ದಾರೆ. ಥ್ರಿಲ್ಲರ್ ಜಾನರ್‍ನಲ್ಲಿ ಸಿನಿಮಾ ಮೂಡಿಬರಲಿದ್ದು, ಎ ಆರ್ ರೆಹಮಾನ್ ಸಂಗೀತ ಚಿತ್ರಕ್ಕಿರಲಿದೆ. ಕಮಲ್ ಹಾಸನ್, ಮಣಿರತ್ನಂ, ಜಿ ಮಹೇಂದ್ರನ್, ಶಿವ ಅನಂತ್ ಸಹಯೋಗದಲ್ಲಿ ರಾಜ್‍ಕಮಲ್ ಫಿಲ್ಮ್ ಇಂಟರ್ ನ್ಯಾಷನಲ್ ಅಂಡ್ ಮದ್ರಾಸ್ ಟಾಕೀಸ್ ಬ್ಯಾನರ್ ಅಡಿಯಲ್ಲಿ ಚಿತ್ರ ಮೂಡಿಬರಲಿದೆ. ಒಂದೆರಡು ವಾರಗಳಲ್ಲಿ ಚಿತ್ರತಂಡದ ಕಡೆಯಿಂದ ಮ್ಯಾಸೀವ್ ಅಪ್‍ಡೇಟ್ ಹೊರಬೀಳಲಿದೆಯಂತೆ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
ಅಣ್ಣನ ಸಿನಿಮಾಕ್ಕೆ ತಮ್ಮನ ಸಾಥ್; ಚಿರು ‘ರಾಜಮಾರ್ತಂಡ’ ಚಿತ್ರಕ್ಕೆ ಧ್ರುವ ಸರ್ಜಾ ಧ್ವನಿ

ಅಣ್ಣನ ಸಿನಿಮಾಕ್ಕೆ ತಮ್ಮನ ಸಾಥ್; ಚಿರು ‘ರಾಜಮಾರ್ತಂಡ’ ಚಿತ್ರಕ್ಕೆ ಧ್ರುವ ಸರ್ಜಾ ಧ್ವನಿ!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.