ಗುರುವಾರ, ಜುಲೈ 23, 2026
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

ಸೌತ್ ಸಿನಿಮಾ ನೋಡದಂತೆ ಕರೆಕೊಟ್ಟ`ಕೆ ಆರ್ ಕೆ’ ! ಅಂದು `ಪಠಾಣ್’ ಡಿಸಾಸ್ಟರ್ ಎಂದ ಕಮಲ್ ಇಂದು `ಜವಾನ್’ ಪರ ಬ್ಯಾಟಿಂಗ್!

Vishalakshi Pby Vishalakshi P
13/09/2023
in Majja Special
Reading Time: 1 min read
ಸೌತ್ ಸಿನಿಮಾ ನೋಡದಂತೆ ಕರೆಕೊಟ್ಟ`ಕೆ ಆರ್ ಕೆ’ !  ಅಂದು `ಪಠಾಣ್’ ಡಿಸಾಸ್ಟರ್ ಎಂದ ಕಮಲ್ ಇಂದು `ಜವಾನ್’ ಪರ ಬ್ಯಾಟಿಂಗ್!

`ಜವಾನ್’ ಸಿನಿಮಾ ಮೂಲಕ ಅಖಾಡಕ್ಕಿಳಿದಿರುವ ಬಾಲಿವುಡ್ ಬಾದ್‍ಷಾ ಬೆಳ್ಳಿತೆರೆನಾ ರೂಲ್ ಮಾಡುತ್ತಿದ್ದಾರೆ. ದ್ವಿಪಾತ್ರದಲ್ಲಿ ಬಿಗ್‍ಸ್ಕ್ರೀನ್ ಮೇಲೆ ಧಗಧಗಿಸ್ತಿರೋ ಕಿಂಗ್ ಖಾನ್ ಶಾರುಖ್, ಬಾಕ್ಸ್ ಆಫೀಸ್‍ನಲ್ಲಿ ಕೋಟಿ ಕೋಟಿ ಲೂಟಿ ಮಾಡ್ತಿದ್ದಾರೆ. ಕಣಕ್ಕಿಳಿದ ನಾಲ್ಕೇ ದಿನದಲ್ಲಿ 250 ಕೋಟಿ ಕೊಳ್ಳೆಹೊಡೆದು, ಸೌತ್-ನಾರ್ತ್ ಸಿನಿಮಾಗಳ ರೆಕಾರ್ಡ್‍ನ ಬ್ರೇಕ್ ಮಾಡಿರೋ ಜವಾನ್, ಆರು ದಿನದಲ್ಲಿ 300 ಕೋಟಿ ಗಳಿಕೆ ಕಂಡು ಕೇಕೆಹೊಡೆಯುತ್ತಿದ್ದಾನೆ. ಹೀಗಿರುವಾಗ ಸೌತ್ ಸಿನಿಮಾಪ್ರೇಮಿಗಳು ಹಿಂದಿ ಸಿನಿಮಾ ನೋಡಲ್ಲ, ಅವರು ಬಾಲಿವುಡ್ ಚಿತ್ರಗಳನ್ನ ಹಾಗೂ ಬಾಲಿವುಡ್ ಸ್ಟಾರ್ ಗಳನ್ನ ದ್ವೇಷಿಸುತ್ತಾರೆ. ಹೀಗಾಗಿ ನೀವ್ಯಾರು ಕೂಡ ಸೌತ್ ಸಿನಿಮಾ ನೋಡ್ಬೇಡಿ, ನಾನು ಇನ್ಮೇಲೆ ಸೌತ್ ಪಿಕ್ಚರ್ ಗಳನ್ನ ನೋಡಲ್ಲ ಅಂತ ವಿಮರ್ಶಕ ಕೆ ಆರ್ ಕೆ ಅಲಿಯಾಸ್ ಕಮಲ್ ಆರ್ ಖಾನ್ ಟ್ವೀಟ್ ಮಾಡಿದ್ದಾರೆ.

 

ಅರ್ರೇ, ಯಾರ್ರೀ ಕಮಲ್ ಆರ್ ಖಾನ್ ಅಂತೀರಾ? ವೃತ್ತಿಯಲ್ಲಿ ನಟರಾಗಿ, ನಿರ್ಮಾಪಕರಾಗಿ, ಬರಹಗಾರರಾಗಿ ಹಿಂದಿ ಹಾಗೂ ಭೋಜ್‍ಪುರಿ ಚಿತ್ರರಂಗದಲ್ಲಿ ಗುರ್ತಿಸಿಕೊಂಡರೂ ಕೂಡ ಹೆಚ್ಚು ಸುದ್ದಿಯಲ್ಲಿರುವುದು ವಿವಾದಾತ್ಮಕ ಹೇಳಿಕೆಗಳಿಂದ. ಹೌದು, ದೊಡ್ಡ ದೊಡ್ಡ ನಟರ ಬಗ್ಗೆ ಆಗಾಗ ನಾಲಿಗೆ ಹರಿಬಿಡುತ್ತಾ, ಅವಹೇಳನಕಾರಿಯಾಗಿ ಮಾತನಾಡುತ್ತಾ, ವೈಯಕ್ತಿಕ ತೇಜೋವಧೆ ಮಾಡುವ ಕೆಆರ್‍ಕೆ, ಸ್ಟಾರ್‍ನಟರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುವುದರ ಜೊತೆಗೆ ಪೊಲೀಸ್ ಸ್ಟೇಷನ್‍ಗೂ ಹೋಗಿಬರುತ್ತಾರೆ. ಆದ್ರೂ, ಕಮೆಂಟ್ ಮಾಡುವ, ಕಾಲೆಳೆಯುವ ಕಾಯಕವನ್ನ ಮಾತ್ರ ನಿಲ್ಲಿಸುವುದಿಲ್ಲ.

ಹೌದು, ಬಡಾಸ್ಟಾರ್ ಗಳ ಬಗ್ಗೆ ಬಾಯಿಗೆ ಬಂದ್ಹಾಗೇ ಮಾತನಾಡುವ ಕಮಲ್ ಆರ್ ಖಾನ್, ತಮ್ಮದೇ ಯೂಟ್ಯೂಬ್ ಚಾನಲ್ ಮೂಲಕ ಸೌತ್-ನಾರ್ತ್ ಸಿನಿಮಾಗಳ ವಿಮರ್ಶೆ ಕೂಡ ಮಾಡ್ತಾರೆ. ಮೂಲಗಳ ಪ್ರಕಾರ ಚಿತ್ರೋದ್ಯಮದಲ್ಲಿ ಕಮಾಲ್ ಬರೇ ಸೋಲನ್ನೇ ಕಂಡಿದ್ದಾರೆ. ಹೀಗಾಗಿ ಬೇರೆ ನಟ ನಟಿಯರ ಚಿತ್ರಗಳ ಬಗ್ಗೆ ಅವಹೇಳನಕಾರಿಯಾಗಿ ಕಾಮೆಂಟ್ ಮಾಡುವುದು ಟ್ವೀಟ್ ಮಾಡುವುದು, ಅಸಭ್ಯ ಭಾಷೆಗಳನ್ನು ಬಳಸುವುದನ್ನು ಕೆಆರ್‌ಕೆ ಕಾಯಕವನ್ನಾಗಿ ಮಾಡಿಕೊಂಡಿದ್ದಾರೆ.

 

ಪುಷ್ಪ-2 ಪೋಸ್ಟರ್ ನೋಡಿ ಕಾಲೆಳೆಯೋ ಪ್ರಯತ್ನ ಮಾಡಿದ್ದರು. ಆಗಲೇ ಬನ್ನಿ ಫ್ಯಾನ್ಸ್ ಎಕ್ಕಾಮಕ್ಕಾ ತರಾಟೆಗೆ ತೆಗೆದುಕೊಂಡಿದ್ದರು. ಇದಕ್ಕೆಲ್ಲಾ ಬಗ್ಗದ ಕೆ ಆರ್ ಕೆ ಈಗ ಸೌತ್ ಸಿನಿಮಾ ಪ್ರೇಮಿಗಳ ಬಗ್ಗೆ ಟ್ವೀಟ್ ಮಾಡಿ ವಿವಾದಕ್ಕೆ ಗುರಿಯಾಗಿದ್ದಾರೆ. ಅಷ್ಟಕ್ಕೂ, ಅವರು ಮಾಡಿರುವ ಟ್ವೀಟ್ ಈ ಕೆಳಗಿನಂತಿದೆ ನೋಡಿ

ಇಂಡಿಯಾದಲ್ಲಿ `ಜವಾನ್’ ಸಿನಿಮಾ ಬ್ಲಾಕ್‍ಬಸ್ಟರ್ ಹಿಟ್ ಆಗಿದೆ. ಬಟ್ ಸೌತ್ ಮಂದಿ `ಜವಾನ್’ ಸಿನಿಮಾವನ್ನ ನೋಡುತ್ತಿಲ್ಲ. ಕಾರಣ ಅವರು ಬಾಲಿವುಡ್ ಸ್ಟಾರ್ ಗಳನ್ನ ಹಾಗೂ ಅವರ ಸಿನಿಮಾಗಳನ್ನ ದ್ವೇಷಿಸುತ್ತಾರೆ. ಹೀಗಾಗಿ, ನಾನು ಹಿಂದಿ ಭಾಷಿಕರಲ್ಲಿ ಮನವಿ ಮಾಡಿಕೊಳ್ಳುವುದೇನಂದರೆ ಯಾವುದೇ ಕಾರಣಕ್ಕೂ ಸೌತ್ ಸಿನಿಮಾಗಳನ್ನು ನೋಡುವುದಕ್ಕೆ ಹೋಗ್ಬೇಡಿ. ನಾನು ಕೂಡ ಇನ್ಮುಂದೆ ದಕ್ಷಿಣ ಭಾರತೀಯ ಚಿತ್ರಗಳನ್ನು ನೋಡುವುದಿಲ್ಲ.

ಇದಕ್ಕೆ ಸಾಕಷ್ಟು ಜನ ಕಮೆಂಟ್ ಮಾಡಿದ್ದಾರೆ. ಕೆಲವರು ಕಮಲ್ ಮಾತಿಗೆ ಬದ್ದರಾದರೆ, ಇನ್ನೂ ಕೆಲವರು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲಾ, ಸೌತ್ ಸಿನಿಮಾ ಪ್ರೇಕ್ಷಕರು ಚಿತ್ರ ನೋಡದೇನೇ `ಜವಾನ್’ 300 ಕೋಟಿ ಕಲೆಕ್ಷನ್ ಮಾಡ್ತಾ? ಒಂದ್ವೇಳೆ ದಕ್ಷಿಣ ಭಾರತೀಯ ಚಿತ್ರಪ್ರೇಮಿಗಳು ಬಾಲಿವುಡ್ ಸಿನಿಮಾ ನೋಡಲ್ಲ ಅಂತಾನೇ ಇಟ್ಕೊಳ್ಳೋಣ. ಈ ಸತ್ಯ ಗೊತ್ತಿದ್ರೂ ಕೂಡ ಹಿಂದಿ ಫಿಲ್ಮ್ ಮೇಕರ್ಸ್ ತಮ್ಮ ಸಿನಿಮಾಗಳನ್ನ ತೆಲುಗು, ತಮಿಳು, ಕನ್ನಡಕ್ಕೆ ಡಬ್ ಮಾಡಿ ರಿಲೀಸ್ ಯಾಕೆ ಮಾಡ್ತಾರೆ. ಹೈಯಸ್ಟ್ ಕಲೆಕ್ಷನ್ ಆಗ್ತಿರೋದು ಸೌತ್‍ನಲ್ಲಿ ಸ್ವಲ್ಪ ಬಾಕ್ಸ್ ಆಫೀಸ್ ರಿಪೋರ್ಟ್ ತೆಗೆದು ನೋಡಪ್ಪ ಕಮಲ್? ಹೀಗೆ ಹಲವರು ಕೆ ಆರ್ ಕೆ ಗೆ ಪ್ರಶ್ನೆ ಮಾಡಿದ್ದಾರೆ. ಅಲ್ಲೊಬ್ಬ ನೆಟ್ಟಿಗ ಪಠಾಣ್ ಸಿನಿಮಾ ಡಿಸಾಸ್ಟರ್ ಎಂದವನು ನೀನು, ಸಿನಿಮಾ ಹಿಟ್ ಆದ್ಮೇಲೆ ವರಸೆ ಬದಲಿಸಿ ಕಿಂಗ್ ಖಾನ್‍ರನ್ನ ಅಟ್ಟಕ್ಕೇರಿಸಿದ್ದನ್ನ ನಾವು ನೋಡಿದ್ದೇವೆ ಅಂತ ಕಮೆಂಟ್ ಮಾಡಿದ್ದಾನೆ. ಬಾದ್‍ಷಾ ಜೊತೆ ಯಾವಾಗ ಪ್ಯಾಚಪ್ ಆದ್ಯಪ್ಪ? ಅವರ ಬಗ್ಗೆ ಇಲ್ಲಸಲ್ಲದನ್ನೆಲ್ಲಾ ಮಾತನಾಡುತ್ತಿದ್ದೆ. ಹೀಗ್ಯಾಕೆ ಕಿಂಗ್ ಖಾನ್ ಮೇಲೆ ಇಷ್ಟೊಂದು ಲವ್ವು ಅಂತ ಕೊಶ್ಚನ್ ಕೇಳಿದ್ದಾನೆ. ಇದ್ಯಾವುದಕ್ಕೂ ಕೆ ಆರ್ ಕೆ ಉತ್ತರ ಕೊಟ್ಟಿಲ್ಲ, ಕೊಡುವುದು ಇಲ್ಲ ಅನ್ಸುತ್ತೆ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
ರಮೇಶ್-ಗಣೇಶ್ ಜೋಡಿಯ ಹೊಸ ಚಿತ್ರಕ್ಕೆ ವಿಖ್ಯಾತ್ ನಿರ್ದೇಶನ

ರಮೇಶ್-ಗಣೇಶ್ ಜೋಡಿಯ ಹೊಸ ಚಿತ್ರಕ್ಕೆ ವಿಖ್ಯಾತ್ ನಿರ್ದೇಶನ

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.