‘ಇಂಡಸ್ ಹರ್ಬ್ಸ್’ ನ ಟಿ. ಸಿ. ರವೀಂದ್ರ ತುಂಬರಮನೆ ನಿರ್ಮಿಸಿ, ರಮೇಶ್ ಬೇಗಾರ್ ಶೃಂಗೇರಿ ರಚಿಸಿ ನಿರ್ದೇಶಿಸಿರುವ ‘ಜಲಪಾತ’ ಚಿತ್ರದ 2ನೇ ಹಾಡು (ಲವ್ ಸಾಂಗ್) ಇತ್ತೀಚೆಗೆ ಬಿಡುಗಡೆಯಾಯಿತು.
ಇತ್ತೀಚೆಗೆ ಚಿತ್ರತಂಡ ಆಯೋಜಿಸಿದ್ದ ‘ಜಲಪಾತ ಮಲೆನಾಡು ಉತ್ಸವ’ ಎಂಬ ಸಾಂಸ್ಕೃತಿಕ ಮೇಳದಲ್ಲಿ ಪ್ರಸಿದ್ಧ ನಟಿ ಜಯಮಾಲ, ‘ಎಲ್ಲಿ ಹೋದನೇ ಸಖಿ…’ ಎಂಬ ಹಾಡನ್ನು ಪ್ರೇಮಗೀತೆಯನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
‘ಎಲ್ಲಿ ಹೋದನೆ ಸಖೀ…’ ಎಂಬ ಈ ಹಾಡನ್ನು ವನಿತಾ ವೆಂಕಟೇಶ್ ಬರೆದಿದ್ದು, ಸಾದ್ವಿನಿ ಕೊಪ್ಪ ಸಂಗೀತ ಸಂಯೋಜನೆಯಲ್ಲಿ ಈ ಹಾಡು ಮೂಡಿಬಂದಿದೆ. ಗಾಯಕಿ ಶ್ರೀನಿಧಿ ಶಾಸ್ತ್ರೀ ಈ ಹಾಡಿಗೆ ಧ್ವನಿಯಾಗಿದ್ದಾರೆ. ಸದ್ಯ ಹಾಡುಗಳ ಬಿಡುಗಡೆಯ ಮೂಲಕ ‘ಜಲಪಾತ’ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇದೇ ಸೆಪ್ಟೆಂಬರ್ 29 ಕ್ಕೆ ಸಿನಿಮಾವನ್ನು ತೆರೆಗೆ ತರುತ್ತಿದೆ.





