ಒಬ್ಬನೇ ಕಲಾವಿದ, ಇಪ್ಪತ್ತ ನಾಲ್ಕು ಪಾತ್ರಗಳು, ನಾಲ್ಕು ಹಾಡುಗಳು ಹಾಗೂ ಹನ್ನೆರಡು ಪ್ರಾಸಂಗಿಕ ಹಾಡುಗಳು ಹೊಂದಿರುವ ರವೀಂದ್ರನಾಥ್ ಠಾಗೂರ್ ಅವರ ಕಾದಂಬರಿ ಆಧರಿತ ಚಿತ್ರ ‘ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ’ ಇತ್ತೀಚೆಗೆ ಸದ್ದಿಲ್ಲದೆ ತೆರೆಗೆ ಬಂದಿದೆ.

ರವೀಂದ್ರನಾಥ್ ಠಾಗೂರ್ ಅವರ ‘Once There was a King’ ಕಾದಂಬರಿಯನ್ನು ಸುಮಾರು ಇಪ್ಪತ್ತೊಂದು ವರ್ಷಗಳ ಹಿಂದೆ ರಂಗ ರೂಪಕ್ಕೆ ತಂದಿದ್ದ ಯೋಗೇಶ್ ಮಾಸ್ಟರ್ ಅದನ್ನು ಏಕವ್ಯಕ್ತಿ ಪ್ರದರ್ಶನದ ಪ್ರಯೋಗವಾಗಿಸಿದ್ದರು. ಅದೇ ಕಾದಂಬರಿ ಆಧಾರಿತ ರಂಗ ಪ್ರಯೋಗವನ್ನು ‘ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ’ ಚಿತ್ರದ ಮೂಲಕ ತೆರೆಮೇಲೆ ತರಲಾಗಿದೆ. ಇದೊಂದು ವಿಶ್ವಮಟ್ಟದ ರಂಗಭೂಮಿ ಅನುಭವದ ಚಿತ್ರ. ಸಿನಿಮಾ ತಂತ್ರಗಾರಿಕೆಯಲ್ಲಿ ರಂಗಭೂಮಿಯ ನಿರೂಪಣೆ ಮಾಡಲಾಗಿದೆ ಎಂಬುದು ಚಿತ್ರತಂಡದ ಮಾತು.

‘ದೃಷ್ಟಿ ಮೀಡಿಯಾ’ ಸಂಸ್ಥೆ ಈ ಪ್ರಯೋಗವನ್ನು, ರಂಗಭೂಮಿಯಿಂದ ಚಲನಚಿತ್ರ ಮಾಧ್ಯಮ ತರುವ ಸಾಹಸ ಮಾಡಿದೆ. ಸದ್ಯ ‘ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ’ ಚಿತ್ರವು ‘ಝೇಂಕಾರ್ ಮ್ಯೂಸಿಕ್ ಮೂವೀಸ್’ ಡಿಜಿಟಲ್ ಪ್ಲಾಟ್ಫಾರ್ಮ್ ನಲ್ಲಿ ಬಿಡುಗಡೆಗೊಂಡಿದ್ದು, ನಿಧಾನವಾಗಿ ನೋಡುಗರ ಗಮನ ಸೆಳೆಯುತ್ತಿದೆ.





