ಗುರುವಾರ, ಜುಲೈ 23, 2026
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

11 ಕೆಜಿ ಲಾಸ್-125 ಕೋಟಿ ಇನ್ವೆಸ್ಟ್-1000 ಕೋಟಿ ಟಾರ್ಗೆಟ್; ಡಿವೈನ್‍ಸ್ಟಾರ್ ನಯಾ ಸಮಾಚಾರ್!

Vishalakshi Pby Vishalakshi P
15/09/2023
in Majja Special
Reading Time: 1 min read
11 ಕೆಜಿ ಲಾಸ್-125 ಕೋಟಿ ಇನ್ವೆಸ್ಟ್-1000 ಕೋಟಿ ಟಾರ್ಗೆಟ್; ಡಿವೈನ್‍ಸ್ಟಾರ್ ನಯಾ ಸಮಾಚಾರ್!

ಹೆಡ್ಡಿಂಗ್ ನೋಡಿದಾಕ್ಷಣವೇ ಇದು ಕಾಂತಾರ ಪಾರ್ಟ್-2 ಲೆಕ್ಕಚ್ಚಾರ ಅನ್ನೋದು ಗೊತ್ತಾಗಿರುತ್ತೆ. ಅಫ್‍ಕೋರ್ಸ್ ಇದು ಕಾಂತಾರ ಚಾಪ್ಟರ್-2 ಸಮಾಚಾರ. ಇಲ್ಲಿ ಶೆಟ್ರು ತೂಕ ಇಳಿಸಿಕೊಂಡಿರುವ ಮ್ಯಾಟ್ರಿದೆ. ಬಹುನಿರೀಕ್ಷಿತ ಚಿತ್ರಕ್ಕಾಗಿ ಹೊಂಬಾಳೆ ಹೂಡುತ್ತಿರುವ ಬಂಡವಾಳದ ಖಬರ್ ಇದೆ. ಜೊತೆಗೆ ಡಿವೈನ್‍ಸ್ಟಾರ್ ಟಾರ್ಗೆಟ್ ಪ್ಲಸ್ ಬಾಕ್ಸ್ ಆಫೀಸ್ ಪ್ರಾಫಿಟ್ ಕಥನವೂ ಕೇಕೆಹೊಡೆಯುತ್ತಿದೆ. ಸೋ ಕಣ್ಣರಳಿಸಿ ನೋಡಿ ಪ್ಲಸ್ ಓದಿ

ಶೆಟ್ರು ಯಾಕೋ ಸೈಲೆಂಟಾದ್ರು ಅನ್‍ಸ್ತಿಲ್ವಾ? ಅವರು ಮನಸ್ಸು ಮಾಡಿದ್ದರೆ ಇಷ್ಟೊತ್ತಿಗೆ ಪಾರ್ಟ್-2 ರೆಡಿಯಾಗ್ಬೇಕಿತ್ತು. ಕಾಂತಾರ ಚಿತ್ರದ ಮೊದಲ ವರ್ಷದ ಆ್ಯನಿವರ್ಸರಿಗೆ ಸ್ಪೆಷಲ್ಲಾಗಿ ಕಾಂತಾರ ಪ್ರೀಕ್ವೆಲ್ ರಿಲೀಸ್ ಆಗ್ಬೇಕಿತ್ತು. ಆದರೆ, ಅದ್ಯಾಕೋ ಶೆಟ್ರು ಸ್ಪೀಡ್ ಬ್ರೇಕ್ ಹಾಕಿದಂತೆ ಕಾಣ್ತಿದೆ. ಹೀಗಾಗಿಯೇ ಕಾಂತಾರ ಚಾಪ್ಟರ್-2 ಡಿಲೇ ಆಗ್ತಿದೆ ಅಂತ ಚಿತ್ರಪ್ರೇಮಿಗಳು ಮಾತನಾಡಿಕೊಳ್ತಿರುವಾಗ್ಲೇ `ಕಾಂತಾರ-2′ ಅಪ್‍ಡೇಟ್ ಸಿಕ್ಕಿದೆ. ಡಿವೈನ್‍ಸ್ಟಾರ್ ಬರಹಗಾರರ ಬಳಗ ಮಂಗಳೂರಿಗೆ ಶಿಫ್ಟ್ ಆಗಿರುವ ಬಗ್ಗೆ, ಶೆಟ್ರು 11 ಕೆಜಿ ತೂಕ ಇಳಿಸಿಕೊಂಡು ಅಖಾಡಕ್ಕಿಳಿಯಲು ರೆಡಿಯಾಗಿರುವ ಬಗ್ಗೆ ಡೀಟೈಲ್ಸ್ ಲಭ್ಯವಾಗಿದೆ.

ಕಾಂತಾರ ಡಿವೈನ್ ಹಿಟ್‍ಲಿಸ್ಟ್ ಸೇರಿರುವುದರಿಂದ ನಿರೀಕ್ಷೆ ಸಪ್ತಸಾಗರ ದಾಟಿದೆ. ಪ್ಯಾನ್ ಇಂಡಿಯಾ ಜವಬ್ದಾರಿ ರಿಷಬ್ ಹೆಗಲೇರಿದೆ. ಹೌದು, ಕಾಂತಾರ ಫಸ್ಟ್ ಪಾರ್ಟ್ ಬರುವಾಗ ಬರೀ ಕನ್ನಡಿಗರು ಮಾತ್ರ ಕಣ್ಣರಳಿಸಿದ್ದರು. ಆದ್ರೀಗ, ಚಾಪ್ಟರ್2 ಗಾಗಿ ಆಲ್ ಓವರ್ ಇಂಡಿಯಾದ ಸಿನಿಮಾ ಪ್ರೇಮಿಗಳು ಕಣ್ಣರಳಿಸಿದ್ದಾರೆ. ಹೀಗಾಗಿ, ಶೆಟ್ರು ಮೈಯೆಲ್ಲಾ ಕಣ್ಣಾಗಿಸಿಕೊಂಡು ಕಥೆ ಕೆತ್ತಿ ಮುಗಿಸಿದ್ದಾರೆ. ಆ ಸ್ಟೋರಿ ಬೋರ್ಡ್ ಜೊತೆ ಮಂಗಳೂರಿಗೆ ಹೋಗಿ ನೆಲೆಸಿರುವ ಅನಿರುದ್ದ್ ಮಹೇಶ್ ಹಾಗೂ ಶನೀಲ್ ಗುರು ತಂಡ, ಅಲ್ಲಿನ ಜನರೊಟ್ಟಿಗೆ ಬೆರೆಯುತ್ತಾ, ಪ್ರಕೃತಿಯ ಮಡಲಲ್ಲಿ ಉಸಿರಾಡುತ್ತಾ ಚಿತ್ರಕಥೆ ರಚಿಸುವುದರಲ್ಲಿ ನಿರತವಾಗಿದೆ.

ನಟ ರಿಷಬ್‌ಶೆಟ್ಟಿ ಅವರು ‘ಕಾಂತಾರ 2’ ಚಿತ್ರಕ್ಕಾಗಿ ಭಾರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಮುಖ್ಯವಾಗಿ ಅವರ ದೇಹತೂಕ ಕಮ್ಮಿ ಆಗಲಿದೆ. ಹೌದು, ‘ಕಾಂತಾರ 2’ ಚಿತ್ರದಲ್ಲಿ ರಿಷಬ್ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದು, ಅದಕ್ಕಾಗಿ 11 ಕೆಜಿ ದೇಹತೂಕವನ್ನು ಕಮ್ಮಿ ಮಾಡಿಕೊಳ್ಳಲಿದ್ದಾರೆ. ಇನ್ನು, ‘ಕಾಂತಾರ 2′ ಕಥೆಯು ಕ್ರಿ ಶ 400ರಲ್ಲಿ ನಡೆಯಲಿದೆಯಂತೆ. ಈ ವಿಚಾರವೇ ಈಗ ಬಹಳ ಕುತೂಹಲ ಮೂಡಿಸಿದೆ. ಸದ್ಯ ಪ್ರಿಪ್ರೊಡಕ್ಷನ್ ವರ್ಕ್ ನಡೀತಿದ್ದು, ನವೆಂಬರ್ ನಿಂದ ಶೂಟಿಂಗ್ ಹೊರಡಲು ಪ್ಲ್ಯಾನ್ ಮಾಡಿದ್ದಾರಂತೆ. ಫಸ್ಟ್ ಷೆಡ್ಯೂಲ್ಡ್ ಕುಂದಾಪುರದಲ್ಲಿ ನಡೆಯಲಿದ್ದು, ನಂತರ ಮಂಗಳೂರು ಭಾಗದಲ್ಲಿ ಶೂಟಿಂಗ್ ಮಾಡಲು ನಿರ್ಧರಿಸಿರುವುದಾಗಿ ಕೆಲ ವೆಬ್ ಸೈಟ್‍ಗಳ ಜೊತೆ ರಿಷಬ್ ಹೇಳಿಕೊಂಡಿದ್ದಾರೆ. ಶೂಟಿಂಗ್ ಇಷ್ಟೇ ದಿನದಲ್ಲಿ ಮುಗುಸ್ಬೇಕು ಅನ್ನೋ ಪ್ಲ್ಯಾನ್ ಏನು ಹಾಕಿಕೊಂಡಿಲ್ಲ. ಕಥೆ ಎಷ್ಟು ದಿನ ಡಿಮ್ಯಾಂಡ್ ಮಾಡುತ್ತೋ, ಅಷ್ಟು ದಿನ `ಕಾಂತಾರ-ಪ್ರೀಕ್ವೆಲ್’ ಕಥೆಯ ಚಿತ್ರೀಕರಣ ಸಾಗುತ್ತೆ ಎಂದಿದ್ದಾರೆ

ರಿಷಬ್ ಶೆಟ್ಟಿ ಜೊತೆಗೆ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ನವೀನ್ ಡಿ ಪಡೀಲ್, ದೀಪಕ್ ರೈ ಪಾಣಾಜೆ, ಮಾನಸಿ ಸುಧೀರ್, ಪ್ರಕಾಶ್ ತುಮ್ಮಿನಾಡು ಮುಂತಾದವರು ನಟಿಸಿದ್ದರು. ಇದೀಗ ಪಾರ್ಟ್ 2ರಲ್ಲಿ ಇವರಲ್ಲಿ ಯಾರೆಲ್ಲ ಇರಲಿದ್ದಾರೆ? ಯಾರೆಲ್ಲ ಹೊಸದಾಗಿ ಎಂಟ್ರಿ ಕೊಡಲಿದ್ದಾರೆ ಎಂಬ ಕುತೂಹಲ ಸಿನಿಪ್ರಿಯರಲ್ಲಿ ಇದೆ. ಕಾಂತಾರ ಪಾರ್ಟ್-2 ಚಿತ್ರದ ಬಜೆಟ್ ಕುರಿತಾಗಿ ಸುದ್ದಿಯೊಂದು ಹೊರಬಿದ್ದಿದೆ. ಕೆಜಿಎಫ್ ಚಾಪ್ಟರ್1 ಹಾಗೂ ಚಾಪ್ಟರ್2ಗಿಂತ ಅಧಿಕ ವೆಚ್ಚದಲ್ಲಿ ಕಾಂತಾರ ಪಾರ್ಟ್-2 ನಿರ್ಮಿಸಲು ಸಿದ್ದತೆ ನಡೆದಿದೆಯಂತೆ. ಕಾಂತಾರ ಪಾರ್ಟ್1 ಗಿಂತ ಎಂಟು ಪಟ್ಟು ಅಂದರೆ ಸುಮಾರು 125 ಕೋಟಿ ವೆಚ್ಚದಲ್ಲಿ `ಕಾಂತಾರ’ ಪ್ರೀಕ್ವೆಲ್ ಮೂಡಿಬರಲಿದೆಯಂತೆ. ಈ ಬಗ್ಗೆ ಪಿಂಕ್ ವಿಲ್ಲಾ ಸೇರಿದಂತೆ ಹಲವು ವೆಬ್ ಸೈಟ್‍ಗಳು ವರದಿ ಮಾಡಿವೆ. ನಿಮಗೆಲ್ಲ ಗೊತ್ತಿರುವಂತೆ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ `ಕಾಂತಾರ ಚಾಪ್ಟರ್ 1′ ಬರೀ 16 ಕೋಟಿ ವೆಚ್ಚದಲ್ಲಿ ತಯ್ಯಾರಾಗಿತ್ತು. ಗಲ್ಲಾಪೆಟ್ಟಿಗೆಯಲ್ಲಿ 400 ಕೋಟಿ ಕಲೆಕ್ಷನ್ ಮಾಡುವ ಮೂಲಕ ಹೊಸ ದಾಖಲೆಯನ್ನ ಬರೆದಿತ್ತು. ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲಿ ಯಾರೂ ತಿಕ್ಕಿ ಅಳಿಸಲಾಗದ ಇತಿಹಾಸಕ್ಕೆ ಸಾಕ್ಷಿಯಾಗಿತ್ತು. ತುಳುನಾಡಿನ ದೈವಾರಾಧನೆ ಹಾಗೂ ಕರಾವಳಿ ಮಣ್ಣಿನ ಸೊಗಡಿರುವ `ಕಾಂತಾರ’ ನೋಡಿ ದೇಶಕ್ಕೆ ದೇಶವೇ ಮೆಚ್ಚಿಕೊಂಡಿತ್ತು. ಈಗ ಅದೇ ದೇಶ ಮತ್ತು ಹೊರದೇಶದ ಮಂದಿ `ಕಾಂತಾರ ಪಾರ್ಟ್-2′ ಗಾಗಿ ಕಣ್ಣರಳಿಸಿದ್ದಾರೆ. ಕಾಂತಾರ ಪಾರ್ಟ್-2 ಹೇಗಿರಲಿದೆ? ಯಾವಾಗ ಸೆಟ್ಟೇರಲಿದೆ? ಅಂತ ಕುತೂಹಲದಿಂದ ಎದುರುನೋಡ್ತಿದ್ದಾರೆ.

ಇನ್ನದಿನೈದು ದಿನ ಕಳೆದರೆ `ಕಾಂತಾರ’ ರಿಲೀಸ್ ಆಗಿ ಭರ್ತಿ ಒಂದು ವರ್ಷ ತುಂಬುತ್ತೆ. ಬಹುಷಃ ಆ ದಿನವೇ `ಕಾಂತಾರ-2′ ಚಿತ್ರ ಸೆಟ್ಟೇರಬಹುದು. ಅದೇ ದಿನ ಮುಹೂರ್ತ ಮಾಡಿ ಚಿತ್ರೀಕರಣಕ್ಕೆ ಚಾಲನೆಯೂ ಕೊಡಬಹುದು. ಈ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆಯಂತೂ ಇದೆ. ಸೆಪ್ಟೆಂಬರ್ 30ರಂದು ಸಿನಿಮಾ ಬಗ್ಗೆ ಅಪ್‍ಡೇಟ್ ಸಿಗುವ ಬಗ್ಗೆ ಕಾತುರವೂ ಇದೆ. ಅಭಿಮಾನಿಗಳ ಕಾತುರಕ್ಕೆ ಕಾಂತಾರ ಬಳಗ ಬ್ರೇಕ್ ಹಾಕುತ್ತಾ? ಬಿಗ್ ಅಪ್‍ಡೇಟ್ ಕೊಟ್ಟು ಕೇಕೆ ಹೊಡೆಯುವಂತಾ ಮಾಡುತ್ತಾ? ಕಾದು ನೋಡಬೇಕು. ಒಟ್ನಲ್ಲಿ ಕಾಂತಾರ ಎನ್ನುವ ಮೂರಕ್ಷರದ ಮುತ್ತಿನಂತಹ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ರೀಚ್ ಆಗಿರೋ ಶೆಟ್ರು, ಈ ಭಾರಿ ಪ್ಯಾನ್ ವರ್ಲ್ಡ್ ರೀಚ್ ಆಗುವ ಮಹಾ ಪ್ಲ್ಯಾನ್ ಮಾಡಿದ್ದಾರೋ ಏನೋ ಗೊತ್ತಿಲ್ಲ.ಬಟ್ ಕಾಂತಾರ-2ಗಾಗಿ ಹೊಂಬಾಳೆ ಹೂಡ್ತಿರೋ ಬಜೆಟ್ ನೋಡಿದರೆ ಸಿನಿಮಾ ಪ್ಯಾನ್ ವಲ್ರ್ಡ್ ಲೆವೆಲ್ಗೆ ರೆಡಿಯಾಗೋದಂತೂ ಪಕ್ಕಾ. ಎನಿವೇ, ಆದಷ್ಟು ಬೇಗ ಶೆಟ್ರು ಅಖಾಡಕ್ಕೆ ಇಳಿಯಲಿ. 16 ಕೋಟಿ ಹಾಕಿಸಿ 400 ಕೋಟಿ ಬಾಚಿಕೊಟ್ಟ ಡಿವೈನ್ ಸ್ಟಾರ್, 125 ಕೋಟಿ ಇನ್ವೆಸ್ಟ್ ಮಾಡಿಸ್ತಿರೋದು ನಿಜಾನಾ ಇಲ್ಲವಾ ಗೊತ್ತಿಲ್ಲ. ಒಂದ್ವೇಳೆ ನಿಜ ಆದರೆ 1000 ಕೋಟಿ ಟಾರ್ಗೆಟ್ ರಿಷಬ್ ಮುಂದಿದೆ ಅನ್ನೋದ್ರಲ್ಲಿ ಡೌಟೇ ಇಲ್ಲ

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
ತೆಲುಗಿನತ್ತ ‘ಸಪ್ತಸಾಗರದಾಚೆ ಎಲ್ಲೋ’ ಚಿತ್ರ! ಟಾಲಿವುಡ್ ಅಂಗಳದಲ್ಲಿ ಮನು-ಪ್ರಿಯಾ ಪ್ರೇಮಕಥೆ

ತೆಲುಗಿನತ್ತ ‘ಸಪ್ತಸಾಗರದಾಚೆ ಎಲ್ಲೋ’ ಚಿತ್ರ! ಟಾಲಿವುಡ್ ಅಂಗಳದಲ್ಲಿ ಮನು-ಪ್ರಿಯಾ ಪ್ರೇಮಕಥೆ

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.