‘ಸಲಗ’ ಸಿನಿಮಾದ ನಂತರ ನಟ ದುನಿಯಾ ವಿಜಯ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮತ್ತೊಂದು ಮಾಸ್ ಕಮರ್ಷಿಯಲ್ ಎಂಟರ್ಟೈನರ್ ‘ಭೀಮ’ ಸಿನಿಮಾದ ಕೆಲಸಗಳು ಜೋರಾಗಿ ನಡೆಯುತ್ತಿದೆ. ಈಗಾಗಲೇ ‘ಭೀಮ’ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಕೊನೆಯ ಹಂತದಲ್ಲಿದ್ದು, ಚಿತ್ರತಂಡ ಇದೀಗ ಒಂದೊಂದೇ ಹಾಡನ್ನ ರಿಲೀಸ್ ಮಾಡೋದಕ್ಕೆ ಸಜ್ಜಾಗಿದೆ.
ಅದರಂತೆ, ‘ಭೀಮ’ ಸಿನಿಮಾದ ಮೊದಲ ಹಾಡನ್ನ ಇದೇ 18ನೇ ತಾರೀಖು ಸೋಮವಾರ ಗೌರಿ ಗಣೇಶ ಹಬ್ಬದ ಪ್ರಯುಕ್ತ ಚಿತ್ರತಂಡ ರಿಲೀಸ್ ಮಾಡುತ್ತಿದೆ. ಮ್ಯೂಸಿಕ್ ಡೈರೆಕ್ಟರ್ ಚರಣ್ ರಾಜ್ ಜೊತೆಗೆ ವಿಜಯ್ ‘ಸಲಗ’ ಸಿನಿಮಾದ ಹಾಡಿನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ಆದಾದ ಮೇಲೆ ‘ಭೀಮ’ ಮೂಲಕ ಮತ್ತೆ ಸಂಚಲ ಸೃಷ್ಟಿಸೋದಕ್ಕೆ ಸಜ್ಜಾಗಿದ್ದಾರೆ.
ಈಗಾಗಲೇ ರಿಲೀಸ್ ಆಗಿರೋ ‘ಭೀಮ’ ಸಿನಿಮಾ ಟೀಸರ್ ಬಿಟ್ ನಲ್ಲೇ ವಿಜಯ್ ಮತ್ತು ಚರಣ್ ಜೋಡಿ ಮ್ಯೂಸಿಕ್ ಝಲಕ್ ನ ಬಿಟ್ಟು ಕುತೂಹಲ ಹುಟ್ಟಿಸಿದ್ದರು. ಈಗ ಹಾಡುಗಳು ಹೇಗಿರಲಿವೆ ಎಂಬ ಕುತೂಹಲಕ್ಕೆ ಶೀಘ್ರದಲ್ಲಿಯೇ ತೆರೆ ಬೀಳಲಿದೆ. ಅಂದಹಾಗೆ, ‘ಭೀಮ’ ಸಿನಿಮಾ ಔಟ್ ಅಂಡ್ ಔಟ್ ಎಂಟರ್ಟೈನ್ಮೆಂಟ್ ಪ್ಯಾಕೇಜ್ ಇರುವ ಸಿನಿಮಾವಾಗಿದ್ದು, ಕೃಷ್ಣ ಸಾರ್ಥಕ್, ಜಗದೀಶ್ ಗೌಡ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.





