ನಟ ಪ್ರಮೋದ್ ಶೆಟ್ಟಿ ಅಭಿನಯದ ‘ಜಲಂಧರ’ ಸಿನಿಮಾದ ಕೆಲಸಗಳು ಭರದಿಂದ ನಡೆಯುತ್ತಿದೆ. ಚಿತ್ರತಂಡ ಇತ್ತೀಚೆಗೆ ಪ್ರಮೋದ್ ಶೆಟ್ಟಿ ಅವರ ಹುಟ್ಟು ಹಬ್ಬದ ಉಡುಗೊರೆಯಾಗಿ ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿ ಶುಭ ಕೋರಿತ್ತು. ಚಿತ್ರದ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಗಳಿಸಿದ ಬೆನ್ನಲ್ಲೆ ‘ಜಲಂಧರ’ ಚಿತ್ರತಂಡ, ಮಾತಿನ ಮರು ಜೋಡಣೆ (ಡಬ್ಬಿಂಗ್) ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಖುಷಿಯಲ್ಲಿದ್ದಾರೆ.
ಸ್ಟೇಪ್ ಅಪ್ ಲೋಕೇಶ್ ನಟಿಸಿ, ಕತೆ ಬರೆದು ಸ್ಟೇಪ್ ಅಪ್ ಪಿಚ್ಚರ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡುತ್ತಿರುವ ‘ಜಲಂಧರ’ ಚಿತ್ರಕ್ಕೆ ಮದನ್ ಎಸ್, ಚಂದ್ರಮೋಹನ್ ಸಿ. ಎಲ್, ರಮೇಶ್ ರಾಮಚಂದರ್ ಹಾಗೂ ಪದ್ಮನಾಭನ್ ಹಣ ಹಾಕಿ ಕೈ ಜೋಡಿಸಿದ್ದಾರೆ. ಹಲವು ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿ ಮೊದಲ ಬಾರಿಗೆ ವಿಷ್ಣು ವಿ. ಪ್ರಸನ್ನ ನಿರ್ದೇಶನ ಮಾಡಿದ್ದಾರೆ.

ಚಿತ್ರಕ್ಕೆ ಸಂಕಲನಕಾರ ವೆಂಕಿ ಯುಡಿವಿ ಸಂಕಲನ, ವಿದ್ಯಾಶಂಕರ್ ಮತ್ತು ಸರಿನ್ ರವೀಂದ್ರನ್ ಛಾಯಾಗ್ರಹಣವಿದೆ. ಯುವ ಸಂಗೀತ ನಿರ್ದೇಶಕ ಜತಿನ್ ದರ್ಶನ್ ‘ಜಲಂಧರ’ ಸಿನಿಮಾಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದ ಮುಖ್ಯ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ, ಟಗರು ಖ್ಯಾತಿಯ ರುಷಿಕಾ ರಾಜ್, ರಾಘು ರಾಮನಕೊಪ್ಪ, ಅರೋಹಿತಾ ಗೌಡ, ಬಲ ರಾಜ್ವಡಿ, ಆದಿ ಕೇಶವರೆಡ್ಡಿ, ಭೀಷ್ಮ ರಾಮಯ್ಯ, ಪ್ರತಾಪ ನೆನಪು, ನವೀನ್ ಸಾಗರ್, ವಿಶಾಲ್ ಪಾಟೀಲ್, ಪ್ರಸಾದ್ ಸೂರನಹಳ್ಳಿ, ಅಂಬು, ವಿಜಯ್ ರಾಜ್ ಮತ್ತು ನಂದಿನಿ ರಾಜ್ ಅಭಿನಯಿಸಿದ್ದಾರೆ.





