ಕೆಜಿಎಫ್ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ರೀಚ್ ಆಗಿ ಇಂಡಿಯನ್ ಬಾಕ್ಸ್ ಆಫೀಸ್ಗೆ ಸಿಇಓ ಆಗಿರುವ ರಾಕಿಂಗ್ ಸ್ಟಾರ್ ಯಶ್, ಅಪ್ಕಮ್ಮಿಂಗ್ ಸಿನಿಮಾದ ಮೂಲಕ ಪ್ಯಾನ್ ವಲ್ರ್ಡ್ ರೀಚ್ ಆಗಿ ಗ್ಲೋಬಲ್ ಮಾರುಕಟ್ಟೆನಾ ಕಬ್ಜ ಮಾಡಿಕೊಳ್ಳಲಿಕ್ಕಿದ್ದಾರೆ ಎಂಬುದು ಇಡೀ ಜಗತ್ತಿರುವ ವಿಚಾರ. ಹೀಗಾಗಿ, ವಿಶ್ವ ಸಿನಿದುನಿಯಾವೇ ರಾಕಿಭಾಯ್ ಕಡೆ ಕಣ್ಣರಳಿಸಿ ನೋಡ್ತಿದೆ. ಮಾನ್ಸ್ಟರ್ ಮುಂದಿನ ಸಿನಿಮಾ ಹೇಗಿರಬಹುದು? ಕೆಜಿಎಫ್ ಕಿಂಗ್ ಅದ್ಯಾರ ಜೊತೆ ಕೈ ಜೋಡಿಸಬಹುದು. ಭರ್ತಿ ಒಂದೂವರೆ ವರ್ಷಗಳ ಕಾಲ ಕಲಾರಸಿರಕನ್ನು ಒಂಟಿಕಾಲಿನಲ್ಲಿ ನಿಲ್ಲಿಸಿರುವ ಸೆಲ್ಫ್ ಮೇಡ್ ಸೂಪರ್ ಸ್ಟಾರ್ ಅದಿನೆಂಥಾ ಸಿನಿಮಾ ಅನೌನ್ಸ್ ಮಾಡಬಹುದು ಅಂತ ಕುತೂಹಲದಿಂದಲೇ ಎದುರುನೋಡ್ತಿದೆ. ಕಳೆದೊಂದು ವರ್ಷದಲ್ಲಿ ರಾಕಿಭಾಯ್ ನೆಕ್ಸ್ಟ್ ಪ್ರಾಜೆಕ್ಟ್ ಬಗ್ಗೆ ನೂರೆಂಟು ಸುದ್ದಿಗಳು ಗಾಸಿಪ್ ಲೋಕದಲ್ಲಿ ಗಹಗಹಿಸಿವೆ. ಆದರೆ, ಇದೀಗ ಹೊರಬಿದ್ದಿರುವ ತಾಜಾ ಸಮಾಚಾರ ಗೋವಾ ದ್ವೀಪದಲ್ಲಿ ಸುನಾಮಿಯನ್ನೇ ಎಬ್ಬಿಸಿದೆ. ಇಂಡಿಯನ್ ಸಿನಿಮಾದ ಗೇಮ್ ಚೇಂಜರ್ ಸರದಾರನನ್ನು, ಅನ್ನದಾತನಾಗಿ ತನ್ನ ಕಡಲ ತೀರಕ್ಕೆ ಬರಮಾಡಿಕೊಳ್ಳೋಕೆ ಗೋವಾ ಬೀಚ್ ಕೂಡ ಬಿಕಿನಿಯನ್ನು ಸೈಡಿಗಿಟ್ಟಿದೆ. ಸಂಪ್ರದಾಯ ಬದ್ದವಾಗಿ ಸೀರೆಯುಟ್ಟು `ಸಲಾಂ ರಾಕಿಭಾಯ್… ರಾಕ್… ರಾಕ್… ರಾಕಿ’ ಅಂತ ಸೆಲ್ಯೂಟ್ ಹೊಡೆಯುತ್ತಿದೆ.
ಗೋವಾಗೂ, ರಾಕಿಂಗ್ ಸ್ಟಾರ್ ಯಶ್ಗೂ ಸ್ಪೆಷಲ್ ಕನೆಕ್ಷನ್ ಇರುವುದು ನಿಮಗೆಲ್ಲ ಗೊತ್ತೆಯಿದೆ. ಇದೇ ಜಾಗದಲ್ಲೇ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಎಂಗೇಜ್ ಆಗಿದ್ದು, ಲವ್ಲೈಫ್ನ ಸೆಲಬ್ರೇಟ್ ಮಾಡಿದ್ದು. ಹೀಗಾಗಿ, ಯಾವುದೇ ಸೆಲಬ್ರೇಷನ್ ಇರಲಿ, ಸರ್ಪೈಸ್ ಕೊಡುವುದಿರಲಿ ಈ ಮಾಸ್ಟರ್ ಪೀಸ್ ಜೋಡಿ ಇದೇ ಜಾಗದಿಂದಲೇ. ಹೀಗ್ಯಾಕೆ, ಗೋವಾ ಬಗ್ಗೆ ಮಾತನಾಡ್ತಿದ್ದೀವಿ ಅಂದರೆ ರಾಕಿಭಾಯ್ ನೆಕ್ಸ್ಟ್ ಪ್ರಾಜೆಕ್ಟ್ ಟೇಕ್ ಆಫ್ ಆಗೋದು ಇಲ್ಲಿಂದಲೇ ಅಂತ. `ಯಶ್-19′ ಸಿನಿಮಾ ಗೋವಾ ಡ್ರಗ್ ಮಾಫಿಯಾ ಕಥೆಯನ್ನೊಳಗೊಂಡಿದೆಯಂತೆ. ಕೆಜಿಎಫ್ನಲ್ಲಿ ಗೋಲ್ಡ್ ಸ್ಮಗ್ಲಿಂಗ್ ಕಥೆಗೆ ಬಣ್ಣ ಹಚ್ಚಿದ್ದರು, ಈಗ `ಯಶ್-19′ ಮೂಲಕ ಗೋವಾ ಕಡಲತಡಿಯ ಕರಾಳ ಕಥೆಯನ್ನ ಬಿಚ್ಚಿಡಲು ಸೆಟೆದು ನಿಂತಿದ್ದಾರೆ. ಈಗಾಗಲೇ ಈ ಸುದ್ದಿ ನಿಮ್ಮ ಕಿವಿಗೆ ಬಿದ್ದಿರುತ್ತೆ. ಆದರೆ, ಈ ಕಥೆಗೆ ರಾಕಿಭಾಯ್ ಕೋಟಿ ಕೋಟಿ ಬಂಡವಾಳ ಹೂಡೋದಕ್ಕೆ ಸಜ್ಜಾಗಿರುವ ಸ್ಟೋರಿ ನಿಮ್ಮೆಲ್ಲರಿಗೂ ಗೊತ್ತಿರಲಿಕ್ಕೆ ಸಾಧ್ಯವಿಲ್ಲ. ಹೀಗಾಗಿಯೇ, ಅಣ್ತಮ್ಮ ಅನ್ನದಾತರಾಗುತ್ತಿರುವ ಕಥನವನ್ನ ನಿಮ್ಮ ಮುಂದೆ ಹರವಿಡುತ್ತಿದ್ದೇವೆ. `ಯಶ್-19′ ಸಿನಿಮಾಗೆ ಯಶ್ ಅವರೇ ನಿರ್ಮಾಪಕರು ಎನ್ನುವ ಧಮಾಕೇದಾರ್ ಖಬರ್ನ ಬಿಚ್ಚಿಡುತ್ತಿದ್ದೇವೆ.
ಇಲ್ಲಿವರೆಗೂ `ಯಶ್-19′ ಸಿನಿಮಾಗೆ ಕನ್ನಡದ ಪ್ರತಿಷ್ಟಿತ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ಬಂಡವಾಳ ಹೂಡುವ ಬಗ್ಗೆ ಸುದ್ದಿಯಾಗಿತ್ತು. ಈಗಲೂ ಈ ಸುದ್ದಿ ಚಾಲ್ತಿಯಲ್ಲಿದೆ. ಇದಕ್ಕೀಗ ಅಪ್ಡೇಟ್ ಎನ್ನುವಂತೆ ಮಗದೊಂದು ಬ್ಲಾಕ್ಬಸ್ಟರ್ ಮ್ಯಾಟರ್ ಹೊರಬಿದ್ದಿದೆ. ಕೆವಿಎನ್ ಜೊತೆ ಕೆಜಿಎಫ್ ಕಿಂಗ್ ಕೈ ಜೋಡಿಸಿದ್ದು, ನಟನೆಯ ಜೊತೆಗೆ ನಿರ್ಮಾಣದಲ್ಲೂ ಸಾಥ್ ನೀಡುತ್ತಿದ್ದಾರಂತೆ. ಸಹ ನಿರ್ಮಾಪಕನಾಗಿ ತಮ್ಮ ಅಪ್ಕಮ್ಮಿಂಗ್ ಪ್ರಾಜೆಕ್ಟ್ಗೆ ಬಂಡವಾಳ ಸುರಿಯಲು ಮುಂದಾಗಿದ್ದಾರಂತೆ. ಹೀಗೊಂದು ಸುದ್ದಿ ಸಿನಿದುನಿಯಾದಲ್ಲಿ ಚಾಯ್ ಪೇ ಚರ್ಚೆಯಾಗಿದೆ. ಅಟ್ ದಿ ಸೇಮ್ ಟೈಮ್ ರೆಮ್ಯೂನರೇಷನ್ ಬಗ್ಗೆಯೂ ಬಿಗ್ ಬ್ರೇಕಿಂಗ್ ನ್ಯೂಸ್ವೊಂದು ಹರಿದಾಡ್ತಿದೆ. ಕೆಜಿಎಫ್ಗಿಂತ ದುಪ್ಪಟ್ಟು ಸಂಭಾವನೆಯನ್ನು ಮುಂದಿನ ಸಿನಿಮಾದಲ್ಲಿ ಪಡೆಯುತ್ತಿದ್ದು, ಲಾಭದಲ್ಲಿ ಶೇರ್ ಕೂಡ ತೆಗೆದುಕೊಳ್ಳುವುದಾಗಿ ಮಾತುಕತೆ ನಡೆದಿದೆಯಂತೆ. ಇನ್ನೂ ನ್ಯಾಷನಲ್ ಹೀರೋ ರಾಕಿಗೆ, ನ್ಯಾಷನಲ್ ಅವಾರ್ಡ್ ವಿನ್ನಿಂಗ್ ಡೈರೆಕ್ಟರ್ ಗೀತು ಮೋಹನ್ದಾಸ್ `ಯಶ್-19′ ಆ್ಯಕ್ಷನ್ ಕಟ್ ಹೇಳ್ತಾರೆನ್ನುವ ಸುದ್ದಿ ಸೌತ್ ಅಂಗಳದೆಲೆಲ್ಲಾ ಸುತ್ತಾಡಿ ಈಗ ಪ್ಯಾನ್ ವಲ್ರ್ಡ್ ತಲುಪಿದೆ. ನಿರೀಕ್ಷೆ ಆಕಾಶ ಮುಟ್ಟಿದ್ದು, ಮುಗಿಲು ಕೂಡ ರಾಕಿಂಗ್ ಪ್ರಾಜೆಕ್ಟ್ ನ ಎದುರುನೋಡ್ತಿದೆ.
ಹಾಗಾದ್ರೆ ಸಿನಿಮಾ ಯಾವಾಗ ಶುರು ? ಈ ಕುತೂಹಲದ ಪ್ರಶ್ನೆಗೆ ಕೆಜಿಎಫ್-2 ಮೊದಲ ವರ್ಷದ ಆ್ಯನಿವರ್ಸರಿ ಇಂದ ಹಿಡಿದು ಇಲ್ಲಿತನಕ ಉತ್ತರ ಸಿಕ್ಕಿಲ್ಲ. ಯುಗಾದಿ, ವರಮಹಾಲಕ್ಷ್ಮಿ, ಗೌರಿ ಗಣೇಶ ಹೀಗೆ ಮೂರು ಮೂರು ಹಬ್ಬಗಳು ಮುಗಿದವು. ಆದರೆ, `ಯಶ್-19′ ಯಾವಾಗ ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಗಲಿಲ್ಲ. ಈಗ ದಸರಾ ಹಬ್ಬಕ್ಕೆ ಸರ್ಪೈಸ್ ಕೊಡಬಹುದು? ಅಧಿಕೃತವಾಗಿ ಸಿನಿಮಾ ಘೋಷಣೆ ಮಾಡಬಹುದೆನ್ನುವ ನಿರೀಕ್ಷೆಯಂತೂ ಎಲ್ಲರಲ್ಲೂ ಇದೆ. `ರಕ್ತದ ವಾಸನೆ ಕಂಡು ಬೇಜಾನ್ ತಿಮಿಂಗಿಲಗಳು ಒಟ್ಟಿಗೆ ಬಂದುಬಿಡುತ್ತವೆ. ಆದರೆ ಆ ಮೀನುಗಳಿಗೆ ಗೊತ್ತಿಲ್ಲ, ಆ ರಕ್ತ ಮೀನುಗಳನ್ನ ಬೇಟೆಯಾಡೋ ತಿಮಿಂಗಿಲದ್ದು ಅಂತ’ ಹೀಗೊಂದು ಡೈಲಾಗ್ನ ಮಾನ್ಸ್ಟರ್ ಬಾಯಿಂದ ಕೇಳುವಾಸೆ ಎಲ್ಲರೊಳಗೂ ಮೂಡಿದೆ.

ಯಶ್-19 ಪ್ರಾಜೆಕ್ಟ್ ಗೂ, ಗೋವಾಗೂ ಕನೆಕ್ಷನ್ ಇರೋದ್ರಿಂದ ಗೋವಾದ ಕಡಲ ತೀರದಲ್ಲಿ ನಿಂತು ಮಾನ್ಸ್ಟರ್ ಹೀಗೊಂದು ಬೆಂಕಿ ಡೈಲಾಗ್ ಉಗುಳುತ್ತಾರಾ? ಸಿಡಿಲ ಭರವ ತಾಳು ಬಾರೋ ಸುಲ್ತಾನ ಅಂತ ಗೋವಾ ಸಿಎಂ ಯಶ್ನ ವೆಲ್ಕಮ್ ಮಾಡಿಕೊಳ್ತಾರಾ? ಕಡಲತಡಿಯಲ್ಲಿ ತೂಫಾನ್ ಎಬ್ಬಿಸಿ ಫಸ್ಟ್ ಲುಕ್ ಮೂಲಕವೇ ಎಲ್ರನ್ನೂ ಥಂಡಾ ಹೊಡೆಸುತ್ತಾರಾ? ಇದೆಲ್ಲದಕ್ಕೂ ಉತ್ತರ ಬೇಕು ಅಂದರೆ ಕಾಯಬೇಕು? ಬೆರಗುಗಣ್ಣಿನಿಂದ ಧೀರ ಸುಲ್ತಾನ ಬರುವ ದಿವ್ಯಗಳಿಗೆಗಾಗಿ ಎದುರುನೋಡಬೇಕು.





