ಗುರುವಾರ, ಜುಲೈ 23, 2026
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

ಕೊರಳಲ್ಲಿ ತಾಳಿ, ಹಣೆಯಲ್ಲಿ ಕುಂಕುಮ, ಕೆಂಪು ಬಾರ್ಡರ್ ಸೀರೆಯುಟ್ಟು ರಣಬೀರ್ ಮುಂದೆ ನಾಚಿ ನೀರಾದ ರಶ್ಮಿಕಾ !

Vishalakshi Pby Vishalakshi P
23/09/2023
in Majja Special
Reading Time: 1 min read
ಕೊರಳಲ್ಲಿ ತಾಳಿ, ಹಣೆಯಲ್ಲಿ ಕುಂಕುಮ, ಕೆಂಪು ಬಾರ್ಡರ್ ಸೀರೆಯುಟ್ಟು ರಣಬೀರ್ ಮುಂದೆ ನಾಚಿ ನೀರಾದ ರಶ್ಮಿಕಾ !

ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಸೀರೆಯುಡುವುದೇನು ಹೊಸದಲ್ಲ. ಮಾಡ್ರನ್, ವೆಸ್ಟ್ರನ್ ಜೊತೆಗೆ ಇಂಡಿಯನ್ ಅಟೈರ್ ನಲ್ಲೂ ಮಿಂಚು ಹರಿಸುತ್ತಾರೆ. ಫ್ಯಾಮಿಲಿ ಫಂಕ್ಷನ್, ಫ್ರೆಂಡ್ಸ್ ಮದುವೆ ಸೇರಿದಂತೆ ಶುಭಾ ಸಮಾರಂಭಗಳಲೆಲ್ಲಾ ಸೀರೆಯಲ್ಲೇ ಕಂಗೊಳಿಸ್ತಾರೆ. ಇದೀಗ, ರೆಡ್ ಕಲರ್ ಬಾರ್ಡರ್ ಸ್ಯಾರಿಯಲ್ಲಿ ಕಾಣಿಸಿಕೊಂಡು ಸಪ್ರೈಸ್ ಕೊಟ್ಟಿದ್ದಾರೆ. ಹಣೆಗೆ ಕುಂಕುಮ ಇಟ್ಕೊಂಡು, ಕೊರಳಲ್ಲಿ ತಾಳಿ ಹಾಕ್ಕೊಂಡು ನಾಚಿ ನೀರಾಗುತ್ತಿರುವ ಫೋಟೋವೊಂದನ್ನು ರಶ್ಮಿಕಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಂದ್ಹಾಗೇ, ಇದು ಅನಿಮಲ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಆಗಿದ್ದು, ರಶ್ಮಿಕಾ ರಣಬೀರ್ ಕಪೂರ್‍ನ ನೋಡಿ ನಾಚಿಕೊಳ್ಳುತ್ತಿದ್ದಾರೆ ಅಂತ ನೆಟಿಜನ್ಸ್ ಕಮೆಂಟ್ ಹಾಕ್ತಿದ್ದಾರೆ.

ಇದೇ ಮೊದಲ ಭಾರಿಗೆ ರಣಬೀರ್ ಕಪೂರ್ ಜೊತೆ ರಶ್ಮಿಕಾ ಸ್ಕ್ರೀನ್ ಶೇರ್ ಮಾಡಿದ್ದಾರೆ. ಬಿಗ್ ಬಿ ಜೊತೆ ಗುಡ್‍ಬೈ, ಸಿದ್ದಾರ್ಥ್ ಮಲ್ಹೋತ್ರಾ ಜೊತೆ ಮಿಷನ್ ಮಜ್ನು ಚಿತ್ರದಲ್ಲಿ ರಶ್ಮಿಕಾ ಮಿಂಚಿದ್ದರು. ಇದೀಗ, ಬಾಲಿವುಡ್‍ನ ಚಾಕೋಲೇಟ್ ಹೀರೋ `ಅನಿಮಲ್’ ಚಿತ್ರಕ್ಕೆ ನಾಯಕಿಯಾಗಿದ್ದಾರೆ. ಗೀತಾಂಜಲಿ ಪಾತ್ರಕ್ಕೆ ಶ್ರೀವಲ್ಲಿ ಬಣ್ಣ ಹಚ್ಚಿದ್ದು ಚಿತ್ರತಂಡ ಫಸ್ಟ್ ಲುಕ್ ರಿವೀಲ್ ಮಾಡಿದೆ. ಕೊರಳಲ್ಲಿ ತಾಳಿ, ಹಣೆಯಲ್ಲಿ ಕುಂಕುಮ, ಕೆಂಪು ಬಾರ್ಡರ್ ಸೀರೆಯುಟ್ಟು ನಾಚಿ ನೀರಾಗುತ್ತಿರುವ ಮೊದಲ ನೋಟ ಇದಾಗಿದೆ. ಚಿತ್ರಕ್ಕೆ ಅರ್ಜುನ್ ರೆಡ್ಡಿ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶನವಿದ್ದು `ಅನಿಮಲ್’ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಅನಿಲ್ ಕಪೂರ್, ಶಕ್ತಿ ಕಪೂರ್, ಬಾಬಿ ಡಿಯೋಲ್, ಸುರೇಶ್ ಓಬೆರಾಯ್ ಸೇರಿದಂತೆ ಅತೀ ದೊಡ್ಡ ತಾರಾಬಳಗ ಈ ಚಿತ್ರದಲ್ಲಿದೆ.

ಸಂಜು ಸಿನಿಮಾದ ನಂತರ ತೆರೆಗೆ ಬಂದ ಶಂಶೇರಾ ಹಾಗೂ ಬ್ರಹ್ಮಾಸ್ತ್ರ ಅಂದುಕೊಂಡ ಮಟ್ಟಿಗೆ ಲಾಭ ತಂದುಕೊಟ್ಟಿಲ್ಲ. ಹೀಗಾಗಿ, ರಣಬೀರ್ `ಅನಿಮಲ್’ ಸಿನಿಮಾ ಮೇಲೆ ಸಾಕಷ್ಟು ಭರವಸೆಯಿಟ್ಟುಕೊಂಡಿದ್ದಾರೆ. ಪಕ್ಕಾ ಸುಕ್ಕಾ ಲುಕ್‍ನಲ್ಲಿ ಕಣಕ್ಕಿಳಿದಿರೋ ಕಪೂರ್, ಗ್ಯಾಂಗ್‍ಸ್ಟರ್ ಆಗಿ ಖದರ್ ತೋರಿಸಲು ಹೊರಟಿದ್ದಾರೆ. ಅಂದ್ಹಾಗೇ, ಅನಿಮಲ್ ತಂದೆ-ಮಗನ ಸಂಬಂಧದ ಕುರಿತಾದ ಸಿನಿಮಾ. ಭೂಗತ ಜಗತ್ತಿನ ಬ್ಯಾಕ್‍ಡ್ರಾಪ್‍ನಲ್ಲಿ ರಕ್ತಸಿಕ್ತದ ಸುತ್ತ ಸುತ್ತುವ ಚಿತ್ರಕಥೆ ಇದಾಗಿರೋದ್ರಿಂದ ಸಿನಿಮಾ ಪ್ರೇಮಿಗಳಲ್ಲಿ ಕುತೂಹಲ ಮೂಡಿದೆ. ಇದೇ ಸೆಪ್ಟೆಂಬರ್ 28ರಂದು ರಣಬೀರ್ ಹುಟ್ಟುಹಬ್ಬಕ್ಕೆ ಟೀಸರ್ ರಿಲೀಸ್ ಆಗಲಿದೆ. ಭೂಷಣ್ ಕುಮಾರ್ , ಕ್ರಿಶನ್ ಕುಮಾರ್ ಅವರ ಟಿ-ಸೀರೀಸ್, ಮುರಾದ್ ಖೇತಾನಿಯ ಸಿನಿ 1 ಸ್ಟುಡಿಯೋಸ್ ಮತ್ತು ಪ್ರಣಯ್ ರೆಡ್ಡಿ ವಂಗಾ ಅವರ ಭದ್ರಕಾಳಿ ಪಿಕ್ಚರ್ಸ್ ಅನಿಮಲ್ ಸಿನಿಮಾ ನಿರ್ಮಿಸಿದೆ. ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳಂನಲ್ಲಿ ಅನಿಮಲ್ ಡಿಸೆಂಬರ್ 1 ರಂದು ಥಿಯೇಟರ್‌ಗಳಿಗೆ ಬರಲು ಸಿದ್ಧವಾಗಿದೆ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
’ಅಲೆಕ್ಸಾ’  ಮೂಲಕ ಪೊಲೀಸ್ ಆಫೀಸರ್ ಆಗುವ ಕನಸು ನನಸಾಯಿತೆಂದ  ಅದಿತಿ!

’ಅಲೆಕ್ಸಾ’  ಮೂಲಕ ಪೊಲೀಸ್ ಆಫೀಸರ್ ಆಗುವ ಕನಸು ನನಸಾಯಿತೆಂದ  ಅದಿತಿ!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.