ಗುರುವಾರ, ಜುಲೈ 23, 2026
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

ಗೆಲುವಿನ ಹಾದಿಯಲ್ಲಿ ‘13’ ಸಿನಿಮಾ! ಎರಡನೇ ವಾರದಲ್ಲೂ ಭರ್ಜರಿ ಪ್ರದರ್ಶನ

Vishalakshi Pby Vishalakshi P
23/09/2023
in Majja Special
Reading Time: 1 min read
ಸೆಪ್ಟೆಂಬರ್ 15ಕ್ಕೆ ರಾಘವೇಂದ್ರ ರಾಜಕುಮಾರ್-ಶ್ರುತಿ ಜೋಡಿಯ ‘13’ ಸಿನಿಮಾ ರಿಲೀಸ್!

ಹಣ ಮನುಷ್ಯನ ಜೀವನದಲ್ಲಿ ಏನೆಲ್ಲ ಆಟ ಆಡಿಸುತ್ತೆ ಎಂದು ಹೇಳುವ ‘13’ ಸಿನಿಮಾ ಸೆ. 15ರಂದು ತೆರೆಕಂಡಿತ್ತು. ಸದ್ಯ ಮೊದಲ ವಾರ ಯಶಸ್ವಿಯಾಗಿ ಪ್ರದರ್ಶನ ಪೂರೈಸಿರುವ ‘13’ ಸಿನಿಮಾ ಇದೀಗ ಎರಡನೇ ವಾರಕ್ಕೆ ಕಾಲಿಟ್ಟಿದೆ. ಇದೇ ವೇಳೆ ‘13’ ಸಿನಿಮಾಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಗಳ ಬಗ್ಗೆ ಮಾತನಾಡಿರುವ ಚಿತ್ರತಂಡ ತನ್ನ ಖುಷಿಯನ್ನು ಹಂಚಿಕೊಂಡಿತು. ‘ವಾರದ ಹಿಂದಷ್ಟೇ ಬಿಡುಗಡೆಯಾಗಿರುವ ನಮ್ಮ ‘13’ ಸಿನಿಮಾಕ್ಕೆ ವೀಕ್ಷಕರು ಹಾಗೂ ಮಾಧ್ಯಮಗಳಿಂದ ಪ್ರಶಂಸೆಗೆ ಪಾತ್ರವಾಗಿದೆ. ಸಿನಿಮಾ ಇಷ್ಟಪಟ್ಟು ನೋಡುತ್ತಿರುವ ವೀಕ್ಷಕರಿಗೆ ಕೃತಜ್ಞತೆ ಅರ್ಪಿಸುತ್ತಿದ್ದೇವೆ’ ಎಂದಿತು.

ನಟ ರಾಘವೇಂದ್ರ ರಾಜಕುಮಾರ್ ಮಾತನಾಡಿ, ‘ಮಾಧ್ಯಮಗಳಿಂದ ಪ್ರೇಕ್ಷಕರಿಗೆ ಏನು ತಲುಪಿಸಬೇಕೋ ಅದು ತಲುಪಿದೆ. ಸಿನಿಮಾದಲ್ಲಿ ಪ್ರತಿಯೊಬ್ಬರ ಕೆಲಸವನ್ನೂ ಜನರು ಮತ್ತು ಮಾಧ್ಯಮದವರು ಗುರುತಿಸಿದ್ದಾರೆ. ತಮಿಳುನಾಡಲ್ಲೂ ನನ್ನ ಫ್ರೆಂಡ್ಸ್ ಇದ್ದಾರೆ, ಅವರೆಲ್ಲ ಕಾಲ್ ಮಾಡಿ ಇಲ್ಲಿಯೂ ಸಿನಿಮಾ ಬರುತ್ತಾ ಅಂತ ಕೇಳ್ತಿದ್ದಾರೆ. ನಮ್ಮ ನಿಮ್ಮೆಲ್ಲರ ಕೆಲಸ ಆಗಿದೆ. ಇನ್ನೂ ಹೆಚ್ಚು ಜನ ನೋಡಿ ಹರಸಬೇಕು. ಸಿನಿಮಾ ನೋಡುತ್ತಿರುವ ಎಲ್ಲಾ ಪ್ರೇಕ್ಷಕರಿಗೆ ನನ್ನ ಕೋಟಿ ನಮನಗಳು’ ಎಂದು ಹೇಳಿದರು.

ನಟಿ ಶ್ರುತಿ, ನಟ ಪ್ರಮೋದ ಶೆಟ್ಟಿ, ನಿರ್ದೇಶಕ ನರೇಂದ್ರ ಬಾಬು, ನಿರ್ಮಾಪಕರಾದ ಮಂಜುನಾಥ್ ಗೌಡ, ಕೇಶವಮೂರ್ತಿ, ಮಂಜುನಾಥ ಹೆಚ್. ಎಸ್. ಸೇರಿದಂತೆ ಸಿನಿಮಾದ ಕಲಾವಿದರು ಮತ್ತು ತಂತ್ರಜ್ಞರು ಹಾಜರಿದ್ದು ‘13’ ಸಿನಿಮಾದ ಗೆಲುವಿನ ಸಂಭ್ರಮ ಹಂಚಿಕೊಂಡರು. ‘13′ ಕೋಟಿ ಹವಾಲ ಹಣದ ಸುತ್ತ ನಡೆಯುವ ಕುತೂಹಲಕರ ಕಥೆ ‘13’ ಚಿತ್ರದಲ್ಲಿದ್ದು, ಅದರ ಸುತ್ತ ಚಿತ್ರದ ಎಲ್ಲಾ ಪಾತ್ರಗಳು ಯಾವರೀತಿ ಕನೆಕ್ಟ್ ಆಗುತ್ತ ಹೋಗುತ್ತವೆ, ಕೊನೆಗೆ ಆ ಹಣ ಏನಾಯ್ತು ಎಂಬುದು ಈ ಚಿತ್ರದ ಕಥಾಹಂದರ

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
`ಕಣ್ಣಪ್ಪ’ ಚಿತ್ರದಲ್ಲಿ `ಶಿವ-ಪಾರ್ವತಿ’ಯಾಗಿ ಮಿಂಚಲಿದ್ದಾರಂತೆ ಡಾರ್ಲಿಂಗ್ ಪ್ರಭಾಸ್-ನಯನತಾರಾ!?

`ಕಣ್ಣಪ್ಪ' ಚಿತ್ರದಲ್ಲಿ `ಶಿವ-ಪಾರ್ವತಿ'ಯಾಗಿ ಮಿಂಚಲಿದ್ದಾರಂತೆ ಡಾರ್ಲಿಂಗ್ ಪ್ರಭಾಸ್-ನಯನತಾರಾ!?

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.