ಉದ್ಯಮಿ ಮುಕೇಶ್ ಅಂಬಾನಿ ಮನೆಯಲ್ಲಿ ನಡೆದ ಅದ್ದೂರಿ ಗೌರಿ-ಗಣೇಶೋತ್ಸವದಲ್ಲಿ ಬಾಲಿವುಡ್ ಸ್ಟಾರ್ ನಟ-ನಟಿಯರ ದಂಡೇ ಸೇರಿತ್ತು. ಈ ಕಾರ್ಯಕ್ರಮಕ್ಕೆ ಕನ್ನಡತಿ, ಕೂರ್ಗ್ ಬ್ಯೂಟಿ ರಶ್ಮಿಕಾ ಕೂಡ ಹಾಜರಿ ಹಾಕಿದ್ದರು. ಎಂಟ್ರಿ ಕೊಡುವಾಗ್ಲೇ ಶ್ರೀವಲ್ಲಿನಾ ನೋಡಿ ಅಲ್ಲಿನ ಪಾಪರಾಜಿಗಳು ದಿಲ್ ಖುಷ್ ಆದರು. ಫೋಟೋಗೆ ಫೋಸ್ ಕೊಡುವಂತೆ ಕೇಳಿಕೊಂಡಿದ್ದರಿಂದ ರಶ್ಮಿಕಾ ಅಲ್ಲೇ ನಿಂತರು. ಅದೇ ಹಾದಿಯಲ್ಲಿ ಸಾಗಿದ ಬಿಟೌನ್ ಬ್ಯೂಟಿ ಶ್ರದ್ದಾಕಪೂರ್, ನಮ್ಮ ನ್ಯಾಷನಲ್ ಕ್ರಷ್‍ನ ನೋಡಿದ್ರೂ ನೋಡದೇ ಇರೋ ಥರ ಮುಖ ತಿರುಗಿಸಿಕೊಂಡು ಹೋಗಿದ್ದರು. ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಶ್ರೀವಲ್ಲಿ ಅಭಿಮಾನಿಗಳನ್ನ ಮಾತ್ರವಲ್ಲ ಆಕೆಯನ್ನ ದ್ವೇಷ ಮಾಡುವವರನ್ನೂ ಕೂಡ ಕೆರಳಿಸಿತ್ತು. ದೊಡ್ಡ ಕಾರ್ಯಕ್ರಮದಲ್ಲಿ ಕನ್ನಡತಿಯನ್ನ ಕಡೆಗಣಿಸಿದ ಆ ನಟಿ ಮೇಲೆ ಆಕ್ರೋಶ ವ್ಯಕ್ತವಾಗಿತ್ತು. ಇದೀಗ, ಸ್ವತಃ ಆ ನಟಿಯೇ ರಶ್ಮಿಕಾ ಬಗ್ಗೆ ಒಂದು ಟ್ವೀಟ್ ಮಾಡಿದ್ದಾರೆ. ರೊಚ್ಚಿಗೆದ್ದ ಲಿಲ್ಲಿ ಅಭಿಮಾನಿಗಳನ್ನ ತಣ್ಣಗಾಗಿಸಿದ್ದಾರೆ.
ಅಷ್ಟಕ್ಕೂ, ಏನದು ಟ್ವೀಟ್ ಅಂತೀರಾ? ಹೇಳ್ತೀವಿ ಕೇಳಿ. ನಟಿ ರಶ್ಮಿಕಾ ಬಾಲಿವುಡ್ ಅಂಗಳದಲ್ಲಿ ಸಿನಿಮಾ ಮಾಡ್ತಿರುವುದು ನಿಮಗೆಲ್ಲ ಗೊತ್ತೆಯಿದೆ. ಗುಡ್‍ಬೈ, ಮಿಷನ್ ಮಜ್ನು ನಂತರ ರಣಬೀರ್ ಕಪೂರ್ ಜೊತೆಗೆ `ಅನಿಮಲ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಫಸ್ಟ್ ಲುಕ್ ಮೊನ್ನೆ ಗೌರಿ-ಗಣೇಶ ಹಬ್ಬಕ್ಕೆ ಸ್ಪೆಷಲ್ಲಾಗಿ ರಿಲೀಸ್ ಆಯ್ತು. ಕೆಂಪು ಬಾರ್ಡರ್ ಸೀರೆಯುಟ್ಟು, ಕೊರಳಿಗೆ ತಾಳಿ ಹಾಕ್ಕೊಂಡು ನಾಚಿನೀರಾದ ನ್ಯಾಷನಲ್ ಕ್ರಷ್ ನೋಟ ಸಿನಿಮಾ ಪ್ರೇಮಿಗಳಿಗೆ ಕಿಕ್ ಕೊಟ್ಟಿತ್ತು. ಇದೇ ಕಿಕ್ಕು ಮುಖ ತಿರುಗಿಸಿಕೊಂಡು ಹೋಗಿದ್ದ ಶ್ರದ್ದಾಗೆ ಕೊಟ್ಟಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡಿದ್ದಾರೆ. ಶ್ರೀವಲ್ಲಿ ಇನ್ಸ್‍ಟಾ ಪೇಜ್‍ನಲ್ಲಿ ಅಪ್‍ಲೋಡ್ ಆಗಿರುವ `ಅನಿಮಲ್’ ಚಿತ್ರದ ಫಸ್ಟ್ ಲುಕ್ ನೋಡಿ `ವಾಟ್ ಎ ಬ್ಯೂಟಿ’ ಅಂತ ಕಮೆಂಟ್ ಹಾಕಿದ್ದಾರೆ. ಇದನ್ನ ನೋಡಿ ಕೆಲವರು ಕಕ್ಕಾಬಿಕ್ಕಿಯಾಗಿದ್ದಾರೆ. ಮೊನ್ನೆ ಅಂಬಾನಿ ಮನೆಯಲ್ಲಿ ಕನ್ನಡತಿ ರಶ್ಮಿಕಾನ ನೋಡಿ ಮುಖ ತಿರುಗಿಸಿಕೊಂಡು ಹೋದ ಶ್ರದ್ದಾ ಹೀಗ್ಯಾಕೆ ಟ್ವೀಟ್ ಮಾಡಿದ್ದಾರೆ ಅಂತ ತಲೆ ಕೆಡಿಸಿಕೊಂಡಿದ್ದಾರೆ.
ಅಷ್ಟಕ್ಕೂ, ಬಾಲಿವುಡ್ ನಟಿ ಶ್ರದ್ದಾಗೆ ಕನ್ನಡತಿ ನಟಿ ರಶ್ಮಿಕಾರ ಪರಿಚಯ ಇದೆಯೋ? ಇಲ್ಲವೋ ಗೊತ್ತಿಲ್ಲ? ಪರಸ್ಪರ ಪರಿಚಯ ಇಲ್ಲ ಎನ್ನುವ ಕಾರಣಕ್ಕೆ ನಟಿ ಶ್ರದ್ದಾಕಪೂರ್, ರಶ್ಮಿಕಾಗೆ ಹಾಯ್ ಹೇಳದೇ ಅಲ್ಲಿಂದ ಹೊರಟ್ರೋ ಏನೋ ಅದು ಗೊತ್ತಿಲ್ಲ. ಆದರೆ, ನೆಟ್ಟಿಗರು ಮಾತ್ರ ಗೊತ್ತಿಲ್ಲದೆ ಇದ್ದರೆ ಏನಂತೆ ಅಟ್‍ಲೀಸ್ಟ್ ಒಂದು ಸ್ಮೈಲ್ ಮಾಡಬಹುದಿತ್ತು. ಯಾಕಂದ್ರೆ, ಶ್ರದ್ದಾ ಬರುತ್ತಿದ್ದದ್ದನ್ನ ಗಮನಿಸಿದ ರಶ್ಮಿಕಾ, ಮಾತನಾಡಿಸಬಹುದು ಅಂತ ನಿರೀಕ್ಷೆ ಮಾಡಿದ್ದರು. ಮುಂಬೈ ಪಾಪರಾಜಿಗಳಿಗೆ ಆಶಿಕಿ ಬೆಡಗಿ ಫೋಟೋ ಫೋಸ್ ಕೊಡಲಿಕ್ಕೆ ದಾರಿ ಕೂಡ ಮಾಡಿಕೊಟ್ಟರು. ಆದರೆ, ಇದ್ಯಾವುದಕ್ಕೂ ಕೇರ್ ಮಾಡದೇ ಅಲ್ಲಿಂದ ಹೊರಟು ಹೋದ ಶಕ್ತಿಕಪೂರ್ ಅವರ ಮಗಳು, ಮತ್ಯಾಕೆ ರಶ್ಮಿಕಾ ಅನಿಮಲ್ ಚಿತ್ರದ ಲುಕ್ ನೋಡಿ ರಿಯಾಕ್ಟ್ ಮಾಡಿದ್ರೋ ಏನೋ ಗೊತ್ತಿಲ್ಲ. ಆದರೆ, ನೆಟಿಜನ್ಸ್ ಮಾತ್ರ ಡ್ಯಾಮೇಜ್ ಕಂಟ್ರೋಲ್ ಮಾಡಿಕೊಳ್ಳಲಿಕ್ಕೆ ಟ್ವೀಟ್ ಮಾಡವ್ರೆ ಅಷ್ಟೇ ಅಂತಿದ್ದಾರೆ. ಆದರೆ, ಅಸಲಿಯತ್ತೇನಿದೆ ಆ ದೇವರೇ ಬಲ್ಲ. ಯಾಕಂದ್ರೆ, ಕೂರ್ಗ್ ಚೆಲುವೆಗೆ ಬಿಟೌನ್‍ನಲ್ಲೂ ಈಗ ಡಿಮ್ಯಾಂಡ್ ಇದೆ. ಸಿನಿಮಾ ಹಾಗೂ ಜಾಹೀರಾತುಗಳಲ್ಲಿ ಸೂಪರ್ ಸ್ಟಾರ್‍ಗಳ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಸದ್ಯ, ಕಿಂಗ್ ಖಾನ್ ಜೊತೆ ರಸಗುಲ್ಲಾ, ಗುಲಾಬ್ ಜಾಮೂನ್ ಆ್ಯಡ್‍ನಲ್ಲಿ ಮಿಂಚುತ್ತಿದ್ದಾರೆ. ಹೀಗಾಗಿ, ಅಲ್ಲಿನ ಕೆಲ ನಟಿಯರಿಗೆ ಹೊಟ್ಟೇಲಿ ಅಸಿಡಿಟಿ ಶುರುವಾಗಿರುತ್ತೆ. ಅಭದ್ರತೆ ಅನ್ನೋದಕ್ಕಿಂತ ಅವಕಾಶಗಳು ಕೈ ತಪ್ಪುತ್ತಿರುವುದಕ್ಕೆ ಹೊಟ್ಟೆಕಿಚ್ಚು ಆರಂಭವಾಗಿರುತ್ತೆ. ಆ ಕಿಚ್ಚು ತಣ್ಣಗಾಗಬೇಕು ಅಂದರೆ ಅವರು ಕಿಚ್ಚು ಹಚ್ಚಿಕೊಂಡು ಕಣಕ್ಕಿಳಿಬೇಕು. ಅವಕಾಶ ಸಿಕ್ಕಾಗ ಕಮಾಲ್ ಮಾಡಬೇಕು ಅಷ್ಟೇ. ಅದು ಬಿಟ್ಟು ಒಬ್ಬ ನಟಿನಾ ಇಗ್ನೋರ್ ಮಾಡೋದ್ರಿಂದ ನೋ ಯೂಸ್ ಅಲ್ಲವೇ ?





