`ಮೀನಿನ ಹೆಜ್ಜೆನಾ ಬೇಕಾದರೆ ಕಂಡು ಹಿಡಿಯಬಹುದು, ಆದರೆ, ರಾಕಿಭಾಯ್ ಹೆಜ್ಜೆ ಗುರುತನ್ನು ಕಂಡುಹಿಡಿಯುವುದಕ್ಕೆ ಸಾಧ್ಯನೇ ಇಲ್ಲ’ ಈ ಮಾತನ್ನು ನಾವು ಪದೇ ಪದೇ ಹೇಳುವಂತೆ ಮಾಡುತ್ತಲೇ ಇದ್ದಾರೆ ಮಾನ್‍ಸ್ಟರ್. ಯಸ್, ಮೊನ್ನೆ ಮೊನ್ನೆ ಫ್ಯಾಮಿಲಿ ಜೊತೆ ಗೋವಾದ ಕಡಲತೀರದಲ್ಲಿ ಕಾಣಿಸಿಕೊಂಡಿದ್ದ ಯಶ್ ಈಗ ಲಂಡನ್‍ನಲ್ಲಿ ಪ್ರತ್ಯಕ್ಷ ಆಗಿದ್ದಾರೆ. ಹಾಲಿವುಡ್‍ನ ಆ್ಯಕ್ಷನ್ ಕಿಂಗ್ ಜೆಜೆ ಪೆರ್ರಿ ಹಾಗೂ ರಾಕಿಭಾಯ್ ಪರಸ್ಪರ ಭೇಟಿಯಾಗಿದ್ದು ಫೋಟೋ ಜೊತೆಗೆ `ಕಲಾಶ್ನಿಕೋವ್’ ಗನ್ ಸೀಕ್ರೇಟ್ ರಿವೀಲ್ ಆಗಿದೆ. ಕೋಲಾರ್ ಗೋಲ್ಡ್ ಫೀಲ್ಡ್ ನಲ್ಲಿ `ಕಲಾಶ್ನಿಕೋವ್’ ಗನ್ ಹಿಡಿದು ಗುಂಡಿನ ಸುರಿಮಳೆಗೈದಂತೆ, ಡ್ರಗ್ಸ್ ಮಾಫಿಯಾ ಮಟ್ಟಹಾಕೋಕೆ ರಾಕಿಭಾಯ್ `ಕಲಾಶ್ನಿಕೋವ್’ ಗನ್ ಕೈಗೆತ್ತಿಕೊಳ್ತಾರಾ? ಹೀಗೊಂದು ಕುತೂಹಲದ ಪ್ರಶ್ನೆ ಸಿನಿಮಾಪ್ರೇಮಿಗಳ ಹೃದಯದಲ್ಲಿ ಹಾಗೂ ಗೋವಾದ ಕಡಲ ತೀರದಲ್ಲಿ ಕೋಲಾಹಲ ಸೃಷ್ಟಿಸಿದೆ. `ಯಶ್-19′ ಮೇಲಿನ ನಿರೀಕ್ಷೆ ಮುಗಿಲು ಮುಟ್ಟಿದೆ.
`ಯಶ್-19’ಗಾಗಿ ಇಡೀ ಚಿತ್ರಜಗತ್ತು ಚಾತಕ ಪಕ್ಷಿಯಂತೆ ಕಾಯುತ್ತಿದೆ. ಧೀರ ಸುಲ್ತಾನ ಘೋಷಿಸಲಿರುವ ಅಪ್‍ಕಮ್ಮಿಂಗ್ ಸಿನಿಮಾಗಾಗಿ ಕಣ್ಣರಳಿಸಿ ಕೂತಿದೆ. ಸೆಲ್ಫ್ ಮೇಡ್ ಷೆಹಜಾದನ ಮುಂದಿನ ಸಿನಿಮಾ ಹೇಗಿರಬಹುದು? ಅದ್ಯಾರ ಜೊತೆ ಕೈ ಜೋಡಿಸಬಹುದು? ಅದೆನಿಂತಾ ಸಿನಿಮಾ ಮಾಡಬಹುದು ಅಂತ ಬೆರಗುಗಣ್ಣಿನಿಂದ ನೋಡುತ್ತಲೇ ಒಂದೂವರೆ ವರ್ಷ ಕಳೆದಿದ್ದಾರೆ. ಮಾನ್‍ಸ್ಟರ್ ಮೊದಲ ನೋಟ ಕಣ್ತುಂಬಿಕೊಳ್ಳಲು ಕಣ್ಣಿಗೆ ಎಣ್ಣೆಬಿಟ್ಟುಕೊಳ್ಳುತ್ತಲೇ ಇದ್ದಾರೆ. ಇನ್ನೇನು ಒಂದು ವಾರ, ಇನ್ನೇನು ಹದಿನೈದು, ಇನ್ನೇನು ಒಂದು ತಿಂಗಳು ಎನ್ನುತ್ತಾ, ಕಾದು ಕುಳಿತಿರುವ ಚಿತ್ರಪ್ರೇಮಿಗಳಿಗೆ ಕುತೂಹಲ ತಣಿಸಲು ಕೋಟಿ ಕನಸುಗಳ ಸರದಾರ ಸನ್ನದ್ದರಾಗಿದ್ದಾರೆ. ಆಸ್ಟ್ರೇಲಿಯಾ, ಅಮೇರಿಕಾ, ಸಿಡ್ನಿ, ನ್ಯೂಜಿಲ್ಯಾಂಡ್, ಇಟಲಿ, ಯುರೋಪ್, ಲಂಡನ್, ದುಬೈ, ಶ್ರೀಲಂಕಾ, ಮಲೇಷಿಯಾ ಸುತ್ತಿಬಂದ ಸುಲ್ತಾನ ಈಗ ಮತ್ತೊಮ್ಮೆ ಲಂಡನ್‍ಗೆ ಹೋಗಿದ್ದಾರೆ. ಹಾಲಿವುಡ್‍ನ ಜನಪ್ರಿಯ ಸಾಹಸ ನಿರ್ದೇಶಕರನ್ನ ಭೇಟಿಯಾಗುವ ಮೂಲಕ ದೊಡ್ಡದಾಗಿ ಸಿಗ್ನಲ್ ಕಳುಹಿಸಿದ್ದಾರೆ.

ಹೌದು, ಕಳೆದ ಒಂದೂವರೆ ವರ್ಷಗಳಲ್ಲಿ ಯಶ್ ಎರಡನೇ ಭಾರಿ ಹಾಲಿವುಡ್‍ನ ಸ್ಟಂಟ್ ಡೈರೆಕ್ಟರ್ ಜೆಜೆ ಪೆರ್ರಿಯವರನ್ನ ಭೇಟಿಯಾಗಿದ್ದಾರೆ. ಮೊದಲ ಭೇಟಿಯಲ್ಲೇ ಸುಲ್ತಾನ್ ಕಡೆಯಿಂದ ಸೂಚನೆ ಸಿಕ್ಕಿತ್ತು. ಮಾನ್‍ಸ್ಟರ್ ಮುಂದಿನ ಸಿನಿಮಾದಲ್ಲಿ ಪೆರ್ರಿ ಅಪಿಯರೆನ್ಸ್ ಇರುವ ಬಗ್ಗೆ ಅನುಮಾನ ಮೂಡಿತ್ತು. ಇದೀಗ, ಕನ್ಫರ್ಮ್ ಆದಂತೆ ಕಾಣುತ್ತಿದೆ. `ಯಶ್-19′ ಸಿನಿಮಾಗೆ ಹಾಲಿವುಡ್‍ನ ಯಶಸ್ವಿ ಸ್ಟಂಟ್ ಮಾಸ್ಟರ್ ವರ್ಕ್ ಮಾಡೋದು ಪಕ್ಕಾ ಎನಿಸ್ತಿದೆ. ಇದಕ್ಕೆ ಸ್ವತಃ ಸುಲ್ತಾನ್ ಕಡೆಯಿಂದ ಅಧಿಕೃತ ಘೋಷಣೆಗಾಗಿ ಕಾಯಬೇಕಾದರೂ, ಹಿಂದೊಮ್ಮೆ ಗನ್ ಪ್ರಾಕ್ಟೀಸ್ ಮಾಡಿ ಟ್ವೀಟ್ ಮಾಡಿದ್ದನ್ನ ನಾವೆಲ್ಲರೂ ನೆನಪು ಮಾಡಿಕೊಳ್ಳಬಹುದು. ಫಸ್ಟ್ ಟೈಮ್ ಪೆರ್ರಿನಾ ಭೇಟಿಯಾದಾಗ ಯಶ್ ಗನ್ ಶಾಟ್ ಅಭ್ಯಾಸ ಮಾಡಿದ್ದರು. ನೆಕ್ಸ್ಟ್ ಟೈಮ್ ಈ ಗನ್ ಕಲಾಶ್ನಿಕೋವ್ ಗನ್ ಆಗಿರಬೇಕು ಎಂದಿದ್ರು. ಈಗ ಮತ್ತೊಮ್ಮೆ ಪೆರ್ರಿನಾ ಭೇಟಿಯಾಗಿದ್ದಾರೆ. ಹೀಗಾಗಿ, ರಾಕಿಂಗ್ ಫ್ಯಾನ್ಸ್ ಪ್ಲಸ್ ಸಿನಿಮಾ ಫ್ಯಾನ್ಸ್ ಎಲ್ಲರೂ `ಕೋಲಾರ್ ಗೋಲ್ಡ್ ಫೀಲ್ಡ್‍ನಲ್ಲಿ `ಕಲಾಶ್ನಿಕೋವ್’ ಗನ್ ಹಿಡಿದು ಗುಂಡಿನ ಸುರಿಮಳೆಗೈದಂತೆ, ಡ್ರಗ್ಸ್ ಮಾಫಿಯಾ ಮಟ್ಟಹಾಕೋಕೆ ರಾಕಿಭಾಯ್ `ಕಲಾಶ್ನಿಕೋವ್’ ಗನ್ ಕೈಗೆತ್ತಿಕೊಳ್ತಾರಾ? ಅಂತ ಕುತೂಹಲದ ಪ್ರಶ್ನೆ ಹೊರಹಾಕುತ್ತಿದ್ದಾರೆ.
ಅಂದ್ಹಾಗೇ, `ಯಶ್-19′ ಸಿನಿಮಾ ಡ್ರಗ್ ಮಾಫಿಯಾ ಕುರಿತಾಗಿರುವ ಬಗ್ಗೆ ಸುದ್ದಿಯಾಗ್ತಿದೆ. ಕಡಲ ತಡಿಯ ಪುಟ್ಟ ದ್ವೀಪದಲ್ಲಿ ನಡೆಯುವ ದಂಧೆಯನ್ನು ಬಯಲು ಮಾಡಲು ಕೋಲಾರ್ ಗೋಲ್ಡ್ ಕಿಂಗ್ ಶಪಥ ಕೈಗೊಂಡಿದ್ದು, ಗೋವಾದಿಂದ ಎಲ್ಲೆಲ್ಲಿಗೆ ಡ್ರಗ್ಸ್ ಸಪ್ಲೈ ಆಗ್ತಿದೆಯೋ ಅಲ್ಲೆಲ್ಲಾ ಕಡೆ ಚಿತ್ರೀಕರಣ ನಡೆಸಬೇಕು ಅಂತ ಪ್ಲ್ಯಾನ್ ಮಾಡಿದ್ದಾರಂತೆ. ಹೀಗಾಗಿಯೇ ಯಶ್ ಆಸ್ಟ್ರೇಲಿಯಾದಿಂದ ಮಲೇಷಿಯಾ ತನಕ ಫಾರಿನ್ ಟ್ರಿಪ್ ಮಾಡಿದ್ದು ಎನ್ನಲಾಗ್ತಿದೆ. ಮೇಲ್ನೋಟಕ್ಕೆ ಫ್ಯಾಮಿಲಿ ಟ್ರಿಪ್ ಎನಿಸಿದರೂ ಕೂಡ ಲೋಕೇಷನ್ ಹಂಟಿಂಗ್ ರಹಸ್ಯ ರಾಕಿಂಗ್ ವಿದೇಶಿ ಪಯಣದಲ್ಲಿ ಅಡಗಿದೆಯಂತೆ. ಇದಕ್ಕೆ ಸಾಕ್ಷಿಯಾಗಿ ಹಿಂದೊಮ್ಮೆ ಶ್ರೀಲಂಕಾ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್‍ನ ಉಪಾಧ್ಯಕ್ಷ ದಿನೇಶ್ ವೀರಕ್ಕೋಡಿಯವರ ಟ್ವೀಟು ವೈರಲ್ ಆಗಿತ್ತು. ಶ್ರೀಲಂಕಾದಲ್ಲಿ ಚಿತ್ರೀಕರಣ ಮಾಡಲು ಯಶ್ ಅನುಮತಿ ಪಡೆದಿದ್ದಾರೆನ್ನುವ ಮ್ಯಾಟ್ರು ಹಲ್‍ಚಲ್ ಎಬ್ಬಿಸಿತ್ತು. ಇದೀಗ ಒಂದಕ್ಕೊಂದು ಲಿಂಕ್ ಸಿಗುತ್ತಿದೆ. ಗೋವಾ ಸಿಎಂ ಅವ್ರನ್ನ ಭೇಟಿಯಾಗಿದ್ದು, ಗ್ಲೋಬಲ್ ಸ್ಟಾರ್ ಆದ್ಮೇಲೆ ಇಡೀ ಜಗತ್ತು ಸುತ್ತಿಬಂದಿದ್ದು, ಗೋವಾದ ಕಡಲತಡಿಯಿಂದಲೇ ತೂಫಾನ್ ಎಬ್ಬಿಸಲಿಕ್ಕಾ ಎನ್ನುವ ಅನುಮಾನ ಈಗೀಗ ದಟ್ಟವಾಗುತ್ತಿದೆ. ಈ ಮಧ್ಯೆ ತಮಿಳಿನ ಟ್ರೇಡ್ ಅನಲಿಸ್ಟ್ ಮನೋಬಾಲ ವಿಜಯ್ ಬಾಲನ್ ಮಾಡಿರುವ ಟ್ವೀಟ್ ಸಂಚಲನ ಮೂಡಿಸಿದೆ
ಹೌದು, ಸೌತ್-ನಾರ್ತ್ ಸಿನಿಮಾಗಳ ಬಗ್ಗೆ ಬಿಗ್ ಅಪ್‍ಡೇಟ್ ಕೊಡುತ್ತಾ ಸೆನ್ಸೇಷನ್ ಕ್ರಿಯೇಟ್ ಮಾಡುವ ವಿಜಯ್ ಬಾಲನ್ ಅವರು `ಯಶ್-19′ ಬಗ್ಗೆ ಬಿಗ್ ಬ್ರೇಕಿಂಗ್ ನ್ಯೂಸ್‍ವೊಂದನ್ನ ಹೊರಹಾಕಿದ್ದಾರೆ. ರಾಕಿಭಾಯ್ ಹಾಗೂ ಜೆಜೆ ಪೆರ್ರಿ ಭೇಟಿಯಾಗಿರುವ ಫೋಟೋ ಹಂಚಿಕೊಂಡು ಅಕ್ಟೋಬರ್‍ನಲ್ಲಿ ಸಿನಿಮಾ ಘೋಷಣೆಯಾಗಲಿದೆ. `ಯಶ್-19′ ಸಿನಿಮಾಗೆ ಗೀತು ಮೋಹನ್ ದಾಸ್ ಆ್ಯಕ್ಷನ್ ಕಟ್ ಹೇಳಲಿದ್ದು ಡಿಸೆಂಬರ್‍ನಿಂದ ಶೂಟಿಂಗ್ ಶುರುವಾಗುವುದಾಗಿ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಇಂಟ್ರೆಸ್ಟಿಂಗ್ ಅಂದರೆ ಇಲ್ಲಿವರೆಗೂ ಇವರು ಹೇಳಿರೋ ಮಾತು, ಮಾಡಿರೋ ಟ್ವೀಟ್ ನಿಜವಾಗಿದೆ. ಹೀಗಾಗಿ, `ಯಶ್-19′ ಚಿತ್ರಕ್ಕೆ ಮಲೆಯಾಳಂ ನಿರ್ದೇಶಕಿ ಆ್ಯಕ್ಷನ್ ಕಟ್ ಹೇಳೋದು ಪಕ್ಕಾ ಎನಿಸ್ತಿದೆ. ಜೆಜೆ ಪೆರ್ರಿ ಆ್ಯಕ್ಷನ್ ಬ್ಲಾಕ್ ಕಂಪೋಸ್ ಮಾಡ್ತಾರೆನ್ನುವುದಕ್ಕೆ ಲಂಡನ್ ಭೇಟಿಯ ಫೋಟೋವೇ ಸಾಕ್ಷಿಯಾಗ್ತಿದೆ. ಒಟ್ನಲ್ಲಿ ನಾನೆಲ್ಲೂ ಹೋಗಲ್ಲ, ಎಲ್ಲರನ್ನೂ ಇಲ್ಲಿಯೇ ಕರೆಸ್ತೀನಿ ಎಂದಿರುವ ಅಣ್ತಮ್ಮ, ಯಾರ್ಯಾರನ್ನ ಎಲ್ಲೆಲ್ಲಿಂದ ಕರೆಸ್ತಾರೆ ಎನ್ನುವ ಕುತೂಹಲ ಎಲ್ಲರನ್ನೂ ಒಂಟಿಕಾಲಿನಲ್ಲಿ ನಿಲ್ಲಿಸಿದೆ. ಕೆವಿಎನ್ ಸಂಸ್ಥೆ ಜೊತೆ ಈ ಭಾರಿ ನಿರ್ಮಾಣಕ್ಕೂ ಕೈ ಜೋಡಿಸುವ ಮೂಲಕ ಪ್ರೊಡ್ಯೂಸರ್ ಕಮ್ ಆ್ಯಕ್ಟರ್ ಆಗಿ ಯಶ್ ಕಣಕ್ಕಿಳಿಯುತ್ತಿದ್ದಾರಂತೆ. ಈ ಬಗ್ಗೆ ಸ್ವತಃ ಯಶ್ ಅವ್ರೇ ಮಾತನಾಡಬೇಕು. `ಯಶ್-19′ ಬಗ್ಗೆ ಕಂಪ್ಲೀಟ್ ಪಿಕ್ಚರ್ ಅವರೇ ಕೊಡಬೇಕು. ಅಲ್ಲಿವರೆಗೂ ಕಾಯದೇ ಬೇರೆ ದಾರಿಯಿಲ್ಲ.





