ಹೈವೋಲ್ಟೇಜ್ ಆ್ಯಕ್ಷನ್ ಥ್ರಿಲ್ಲರ್ `ಸಲಾರ್’ ಗಾಗಿ ಇಡೀ ವಿಶ್ವ ಸಿನಿದುನಿಯಾವೇ ಕಣ್ಣರಳಿಸಿರೋದು ನಿಮಗೆಲ್ಲ ಗೊತ್ತೆಯಿದೆ. ಅಂದುಕೊಂಡ ಸಮಯಕ್ಕೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿಯದ ಕಾರಣಕ್ಕೆ `ಸಲಾರ್’ ರಿಲೀಸ್ ಡೇಟ್ನ ಮುಂದೂಡಲಾಗಿದೆ. ಸೆಪ್ಟೆಂಬರ್ 28ಕ್ಕೆ ತೆರೆಗೆ ಬರಬೇಕಿದ್ದ `ಸಲಾರ್’ ಸಿನಿಮಾ ಈಗ ಡಿಸೆಂಬರ್ 22ರಂದು ತೆರೆಗೆ ಅಪ್ಪಳಿಸೋಕೆ ಸಜ್ಜಾಗಿದೆ. ಸದ್ಯ, ಈ ಚಿತ್ರದ ಕುರಿತಾದ ಬಡಾಖಬರ್ ಲೀಕ್ ಆಗಿದೆ. `ಸಲಾರ್’ ಸಿನಿಮಾ ಟೀಮ್ ಎರಡೆರಡು ಟ್ರೈಲರ್ ಗಳನ್ನು ಕಟ್ ಮಾಡಿರುವುದಾಗಿ ಸೌತ್ ಸಿನಿಮಾ ಟ್ರೇಡ್ ಅನಲಿಸ್ಟ್ ಮನೋಬಲ ವಿಜಯಬಾಲನ್ ಟ್ವೀಟ್ ಮೂಲಕ ಜಗಜ್ಜಾಹೀರು ಮಾಡಿದ್ದಾರೆ.

ಮೊದಲ ಟ್ರೇಲರ್ `ಸಲಾರ್’ ಹೀರೋ ಹುಟ್ಟುಹಬ್ಬಕ್ಕೆ ಬಿಡುಗಡೆಯಾಗಲಿದೆ. ಅಕ್ಟೋಬರ್ 23ರಂದು ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಬರ್ತ್ಡೇ ಆಚರಣೆಯಿದ್ದು `ಸಲಾರ್’ ಟೀಮ್ ಟ್ರೇಲರ್ ನ ಗಿಫ್ಟ್ ಮಾಡಲಿದೆಯಂತೆ. ಇನ್ನೊಂದು ಟ್ರೇಲರ್ ನ ಸಿನಿಮಾ ರಿಲೀಸ್ಗೆ ಕೆಲವೇ ಕೆಲವು ದಿನಗಳು ಬಾಕಿಯಿರುವ ಹೊತ್ತಲ್ಲಿ ರಿಲೀಸ್ ಮಾಡಲು ಪ್ಲ್ಯಾನ್ ಮಾಡಿದೆಯಂತೆ. ಈಗಾಗಲೇ ಟೀಸರ್ ಆಲ್ ಇಂಡಿಯಾ ಸಿನಿಮಾಗಳ ರೆಕಾರ್ಡ್ನ ಬ್ರೇಕ್ ಮಾಡಿ ಯೂಟ್ಯೂಬ್ನಲ್ಲಿ ಹೊಸ ದಾಖಲೆ ಬರೆದಿದೆ. `ಸಲಾರ್’ ಟ್ರೈಲರ್ ಹೇಗಿರಬಹುದು ಎನ್ನುವ ಕ್ಯೂರಿಯಾಸಿಟಿಯೇ ಕಲಾಭಿಮಾನಿಗಳನ್ನು ಕಣ್ಣಿಗೆ ಎಣ್ಣೆಬಿಟ್ಕೊಂಡು ಕಾಯುವಂತೆ ಮಾಡಿದೆ.
ಇನ್ನೂ ಸಲಾರ್ ಚಿತ್ರದಲ್ಲಿ ರೆಬೆಲ್ ಸ್ಟಾರ್, ರಾಕಿಂಗ್ ಸ್ಟಾರ್, ಜೂನಿಯರ್ ಎನ್ ಟಿ ಆರ್ ಸಮಾಗಮಗೊಳ್ಳುವ ಸುದ್ದಿ ಸಂಚಲನ ಸೃಷ್ಟಿಸಿದೆ. ಕೆಜಿಎಫ್ ಯೂನಿವರ್ಸ್ ಕಾನ್ಸೆಪ್ಟ್ ಮೂಲಕ ಭಾರತೀಯ ಸಿನಿಮಾರಂಗದಲ್ಲಿ ಮಿಂಚಿನ ಸಂಚಲನ ಸೃಷ್ಟಿಸೋಕೆ ನಿರ್ದೇಶಕ ಪ್ರಶಾಂತ್ ನೀಲ್ ಪಣ ತೊಟ್ಟಿದ್ದಾರಂತೆ. ಹೀಗಾಗಿಯೇ, ಕೆಜಿಎಫ್ ಕಿಂಗ್ ರಾಕಿಭಾಯ್ ಹಾಗೂ ಯಂಗ್ ಟೈಗರ್ ಜೂನಿಯರ್ ಎನ್ ಟಿ ಆರ್ ನ ಸಲಾರ್ ಅಖಾಡಕ್ಕಿಳಿಸಿದ್ದಾರಂತೆ. ಈ ಸುದ್ದಿ ಎಷ್ಟು ಸತ್ಯಾನೋ, ಸುಳ್ಳೋ ಗೊತ್ತಿಲ್ಲ. ಆದರೆ, ಗಾಸಿಪ್ ಲೋಕದಲ್ಲಿ ಹಬ್ಬಿರೋ ಈ ಖಬರ್ ಕೇಳಿಯೇ ಪ್ರೇಕ್ಷಕರಿಗೆ ಗೂಸ್ಬಂಪ್ಸ್ ಬರ್ತಿದೆ. ಡಿಸೆಂಬರ್ 22ರ ದಿನಕ್ಕಾಗಿ ಒಂಟಿಕಾಲಿನಲ್ಲಿ ನಿಂತು ಕಾಯುವಂತಾಗಿದೆ.
ಇಂಟ್ರೆಸ್ಟಿಂಗ್ ಅಂದರೆ, ಫಾರ್ ದಿ ಫಸ್ಟ್ ಟೈಮ್ ಪ್ರಭಾಸ್ ಹಾಗೂ ಕಿಂಗ್ ಖಾನ್ ಶಾರುಖ್ ಮುಖಾಮುಖಿಯಾಗ್ತಿದ್ದಾರೆ. ಭರ್ತಿ 250 ಕೋಟಿ ಸುರಿದು ಕೆಂಡದಂತಹ ಸಿನಿಮಾ ಮಾಡಿರುವ ಹೊಂಬಾಳೆ ಮಾಲೀಕರು ಡಿಸೆಂಬರ್ 22ರಂದು ಕಿಂಗ್ ಖಾನ್ ಡಂಕಿ ಮುಂದೆ ಕಣಕ್ಕಿಳಿಸಲು ನಿರ್ಧರಿಸಿದ್ದಾರೆ. ಕೆಜಿಎಫ್ ಮುಂದೆ ಕಿಂಗ್ ಖಾನ್ ಜೀರೋ ಚಿತ್ರ ಮಕಾಡೆ ಮಲಗಿತ್ತು. ಇದೀಗ ಮತ್ತೊಮ್ಮೆ ಹೊಂಬಾಳೆ ಮಾಲೀಕರ ಸಲಾರ್ ಎದುರು ಬಾಕ್ಸ್ ಆಫೀಸ್ ಕಿಂಗ್ ಶಾರುಖ್ ಡಂಕಿ ಸೆಣಸಬೇಕಿದೆ. ಬಾಹುಬಲಿ ಬಂತರ ಸಾಲು ಸಾಲು ಸೋಲುಂಡಿರೋ ಪ್ರಭಾಸ್ ಬಾಲಿವುಡ್ ಬಾದ್ಷಾನ ಬೆಳ್ಳಿಭೂಮಿ ಅಂಗಳದಲ್ಲಿ ಬಗ್ಗುಬಡಿತಾರಾ? ಬಾಕ್ಸ್ ಆಫೀಸ್ನಲ್ಲಿ ಕಿಂಗ್ ಖಾನ್ ಹಿಂದಿಕ್ಕಿ ಇತಿಹಾಸ ಸೃಷ್ಟಿಸ್ತಾರಾ? ಡಿಸೆಂಬರ್ 22ರವರೆಗೆ ಕಾದುನೋಡಬೇಕು.






