ಯಂಗ್ ಟೈಗರ್ ಜೂನಿಯರ್ ಎನ್‍ಟಿಆರ್ ಅಭಿನಯದ `ದೇವರ’ ಸಿನಿಮಾದ ಬಗ್ಗೆ ಬಿಗ್ ಬ್ರೇಕಿಂಗ್ ನ್ಯೂಸ್‍ವೊಂದು ಹೊರಬಿದ್ದಿದೆ. `ದೇವರ’ ಚಿತ್ರ ಎರಡು ಭಾಗಗಳಲ್ಲಿ ತಯಾರಾಗುತ್ತಿರುವ ತಾಜಾ ಸಮಾಚಾರವನ್ನ ಟ್ರೇಡ್ ಅನಲಿಸ್ಟ್ ಮನೋಬಲ ವಿಜಯಬಾಲನ್ ಅವರು ತಮ್ಮ ಟ್ವಿಟರ್ ಪೇಜ್‍ನಲ್ಲಿ ಹಂಚಿಕೊಂಡಿದ್ದಾರೆ. `ದೇವರ’ ಬಿಗ್ಗರ್ ಅಂಡ್ ಬಿಗ್ಗರ್ ಪ್ರಾಜೆಕ್ಟ್ ಆಗಿದ್ದು, ಚಿತ್ರದ ಕ್ಯಾನ್ವಾಸ್ ಕೂಡ ದೊಡ್ಡದಾಗ್ತಿದೆ. ಪ್ರತಿ ಪಾತ್ರಕ್ಕೂ ಅದರದ್ದೇ ಆದ ತೂಕವಿದ್ದು. ನಿರ್ದೇಶಕ ಕೊರಟಾಲ ಶಿವ ಅವರು ಬಿಗ್‍ಸ್ಕ್ರೀನ್ ಮೇಲೆ ಇನ್‍ಡೀಟೈಲ್ಡ್ ಆಗಿ ಎವರಿ ಕ್ಯಾರೆಕ್ಟರ್ ನ ಎಸ್ಟಾಬ್ಲಿಶ್ ಮಾಡ್ತಿದ್ದಾರೆ. ಫೆಬ್ರವರಿಯಿಂದ ಶೂಟಿಂಗ್ ಶುರು ಮಾಡಿರುವ ಚಿತ್ರತಂಡ ಏಪ್ರಿಲ್ 5ಕ್ಕೆ ಸಿನಿಮಾ ರಿಲೀಸ್ ಮಾಡುವ ಪ್ಲ್ಯಾನ್ ಹಾಕಿಕೊಂಡಿದೆ. `ದೇವರ’ ಸಿನಿಮಾದ ಶೂಟಿಂಗ್ ಭರದಿಂದ ಸಾಗಿದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ನಿಮಗೆಲ್ಲ ಗೊತ್ತಿರುವ ಹಾಗೇ ಈಗ ಸಿನಿದುನಿಯಾದಲ್ಲಿ ಪ್ಯಾನ್ ಇಂಡಿಯಾ ಟ್ರೆಂಡ್ ಜೊತೆಗೆ ಸೀಕ್ವೆಲ್ ಟ್ರೆಂಡ್ ಕೂಡ ಚಾಲ್ತಿಯಲ್ಲಿದೆ. ಬಾಹುಬಲಿ ಸಿನಿಮಾ ನಂತರ ಬಿಗ್ ಬಜೆಟ್‍ನಲ್ಲಿ ಮೂಡಿಬರುತ್ತಿರುವ ಬಹುತೇಕ ಸಿನಿಮಾಗಳು ಸೀಕ್ವೆಲ್ ನಲ್ಲೇ ಸಿದ್ದಗೊಳ್ತಿವೆ. ಅದರಂತೇ, `ದೇವರ’ ಸಿನಿಮಾ ಮೇಕರ್ಸ್‍ಗಳು ಕೂಡ ಎರಡು ಭಾಗಗಳಲ್ಲಿ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈ ಸದ್ದು ಸುದ್ದಿಯ ನಡುವೆ `ದೇವರ’ ವಿಶೇಷ ಹಾಡಿಗೆ ಹೆಜ್ಜೆ ಹಾಕುವುದಕ್ಕೆ ಚಿತ್ರತಂಡ ಪ್ಯಾನ್ ಇಂಡಿಯಾ ಬ್ಯೂಟಿಗೆ ಬಲೆಬೀಸಿರುವ ಬಗ್ಗೆ ಬಜಾರ್ ನಲ್ಲಿ ಚರ್ಚೆಯಾಗ್ತಿದೆ. ಆರ್ ಆರ್ ಆರ್ ನಂತರ ತಾರಕ್ ಗ್ಲೋಬಲ್ ಸ್ಟಾರ್ ಎನಿಸಿಕೊಂಡಿರುವುದರಿಂದ ಅವರ ಜೊತೆ ಸ್ಕ್ರೀನ್ ಶೇರ್ ಮಾಡಲಿಕ್ಕೆ ಪ್ಯಾನ್ ಇಂಡಿಯಾ ತುಂಬೆಲ್ಲಾ ಫೇಮಸ್ ಆಗಿರುವ ಪೋರಿನೇ ಬೇಕು ಅಂತ ಫಿಲ್ಮ್ ಟೀಮ್ ಹುಡುಕಾಟದಲ್ಲಿದೆಯಂತೆ. ಅಷ್ಟಕ್ಕೂ, `ದೇವರ’ ಅಂಗಳದಲ್ಲಿ ಕೊಮರಮ್ ಭೀಮ್ ಜೊತೆ ಮೈ ಬಳುಕಿಸುವ ಅದೃಷ್ಟ ಅದ್ಯಾವ ನಟಿಮಣಿಗೆ ಸಿಗುತ್ತೋ? ಏನೋ ಗೊತ್ತಿಲ್ಲ. ಆದರೆ, ಟಿಟೌನ್ ಫಿಲ್ಮ್ ನಗರದಲ್ಲಿ ಮಗಧೀರನ ಚೆಲುವೆ ಕಾಜಲ್, ಬಿಟೌನ್ ಪರಮ ಸುಂದರಿ ಕೃತಿಸೆನಾನ್ ಹೆಸರು ಕೇಳಿಬರುತ್ತಿದೆ. ಇಂಟ್ರೆಸ್ಟಿಂಗ್ ಅಂದರೆ ಸೆನ್ಸೇಷನ್ ಮ್ಯೂಸಿಕ್ ಕಂಪೋಸರ್ ಅನಿರುದ್ ರವಿಚಂದರ್ `ದೇವರ’ ಸಿನಿಮಾಗೆ ಸ್ಪೆಷಲ್ ಡ್ಯಾನ್ಸ್ ನಂಬರ್ ಕಂಪೋಸ್ ಮಾಡಿದ್ದಾರಂತೆ. ಬಿಗ್ ಸ್ಕ್ರೀನ್ ಗೆ ಕಿಚ್ಚು ಹಚ್ಚುವ ಹಾಡು ಇದಾಗಿದ್ದು, ಆಲ್ ಇಂಡಿಯಾ ಫ್ಯಾನ್ಸ್ ಗೆ ಕಿಕ್ಕೇರಲಿದೆಯಂತೆ.
ದೇವರ ಬಹುಕೋಟಿ ವೆಚ್ಚದ ಸಿನಿಮಾ. ಬರೀ ವಿಎಫೆಕ್ಟ್ಗೆ 150 ಕೋಟಿ ಬಂಡವಾಳ ಸುರಿದಿದ್ದಾರೆನ್ನುವ ನ್ಯೂಸ್ ಹೊರಬಂದಿತ್ತು. ಅಷ್ಟಕ್ಕೂ, ಈ ಸುದ್ದಿನಾ ಅಲ್ಲೆಗಳೆಯುವಂತಿಲ್ಲ. ಯಾಕಂದ್ರೆ, ತಾರಕ್ ಈಗ ಬರೀ ಸೌತ್ ಸ್ಟಾರ್ ಆಗಿ ಉಳಿದಿಲ್ಲ. ಬದಲಾಗಿ ನ್ಯಾಷನಲ್ ಸ್ಟಾರ್ ಪಟ್ಟಕ್ಕೇರಿದ್ದಾರೆ. ಆಸ್ಕರ್ ಅವಾರ್ಡ್ ಮುಡಿಗೇರಿಸಿಕೊಂಡ ಮೇಲೆ ಹಾಲಿವುಡ್ ಜಗತ್ತು ಕೂಡ ತಾರಕ್ ಸಿನಿಮಾದತ್ತ ಕಣ್ಣಿಟ್ಟಿದೆ. ಹೀಗಾಗಿಯೇ `ದೇವರ’ ಚಿತ್ರವನ್ನ ನಿರ್ದೇಶಕ ಕೊರಟಾಲ ಶಿವ ಅದ್ದೂರಿಯಾಗಿ ಕಟ್ಟಿಕೊಡಲು ಮುಂದಾಗಿದ್ದಾರೆ. ಜನತಾ ಗ್ಯಾರೇಜ್ ಸಿನಿಮಾದ ನಂತರ ತಾರಕ್ ಹಾಗೂ ಕೊರಟಾಲ ಶಿವ ಮತ್ತೆ ಒಂದಾಗಿದ್ದಾರೆ. ಇವರಿಬ್ಬರ ಕಾಂಬೋ ರಿಪೀಟ್ ಆಗಿರೋದ್ರಿಂದಲೂ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ. ಈಗಾಗಲೇ ಸಿನಿಮಾದ ಒನ್ಲೈನ್ ಕಥೆ ಹೊರಬಿದ್ದಿದ್ದು, ತಂದೆ-ಮಗನ ಪಾತ್ರದಲ್ಲಿ ಭೀಮ್ ಅಬ್ಬರಿಸಿ ಬೊಬ್ಬಿರಿಯಬಹುದಾ ಎನ್ನುವ ಸಂಶಯ ಕಾಡ್ತಿದೆ.
ಅಂದ್ಹಾಗೇ, ದೇವರ ಸಮುದ್ರ ತಟದಲ್ಲಿ ನಡೆಯುವ ಕತೆಯನ್ನು ಒಳಗೊಂಡಿದ್ದು, ಸಮುದ್ರದ ಮೇಲೆ ಅಧಿಕಾರಕ್ಕಾಗಿ ಪರಸ್ಪರ ಕಾದಾಟದಲ್ಲಿರುವ ಮೃಗಗಳ ಮಧ್ಯೆ ಜೂ ಎನ್‍ಟಿಆರ್ ಪಾತ್ರ ಸೆಣೆಸಲಿದೆ ಎನ್ನಲಾಗುತ್ತಿದೆ. ‘ದೇವರ’ ಸಿನಿಮಾ ಪಕ್ಕಾ ಆಕ್ಷನ್ ಭರಿತ ಹೊಡಿ-ಬಡಿ ಕತೆಯನ್ನು ಒಳಗೊಂಡಿರುವುದು ಇದಾಗಲೇ ಖಾತ್ರಿಯಾಗಿದೆ. ‘ದೇವರ’ ಚಿತ್ರತಂಡವು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಪ್ರೋಮೋ ವಿಡಿಯೋದ ಹಿನ್ನೆಲೆಯಲ್ಲಿರುವ ಧ್ವನಿಯೊಂದು ‘ದೇವರ’ ಸಿನಿಮಾದ ಕತೆಯ ಎಳೆಯನ್ನು ಹೇಳಿದೆ. ”ಕತೆಯಲ್ಲಿ ಮನುಷ್ಯರಿಗಿಂತಲೂ ಹೆಚ್ಚು ಮೃಗಗಳೇ ಇರುತ್ತಾರೆ. ಸಾವೆಂದರೆ ಭಯ ಇರದ, ದೇವರೆಂದರೆ ಭಯ ಇರದ ಮೃಗಗಳು ಅವರು. ಆದರೆ ಅವರಿಗೆಲ್ಲ ಒಬ್ಬರೆಂದರೆ ಭಯ. ಅದು ಯಾರೆಂದು ವಿವರಿಸಿ ಹೇಳಬೇಕಿಲ್ಲ. ಭಯ ಇರಬೇಕು, ಭಯ ಅವಶ್ಯಕ, ಭಯ ಪಡಿಸಲು ಈ ಸಿನಿಮಾದಲ್ಲಿ ಆತ ಯಾವ ರೇಂಜಿಗೆ ಬೇಕಾದರು ಹೋಗುತ್ತಾನೆ. ಇದು ಬಹಳ ಎಮೋಷನಲ್ ಪಯಣ” ಎಂದಿದೆ.
ದೇವರ’ ಸಿನಿಮಾದಲ್ಲಿ ಜೂ ಎನ್‍ಟಿಆರ್ ಜೊತೆಗೆ ಬಾಲಿವುಡ್ ಬೆಡಗಿ ಜಾನ್ಹವಿ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ. ಮುಖ್ಯ ವಿಲನ್ ಪಾತ್ರದಲ್ಲಿ ಸೈಫ್ ಅಲಿ ಖಾನ್ ಇದ್ದಾರೆ. ಸಿನಿಮಾದ ಸಾಹಸ ನಿರ್ದೇಶನಕ್ಕೆ ಹಾಲಿವುಡ್ನ ಜನಪ್ರಿಯ ಸಾಹಸ ನಿರ್ದೇಶಕರನ್ನು ಕರೆತರಲಾಗಿದೆ. ಎರಡು ಹಾಲಿವುಡ್ ರೇಂಜ್ನ ಫೈಟ್ ಸೀಕ್ವೆನ್ಸ್ಗಳನ್ನು ನಿರ್ದೇಶಕ ಕೊರಟಾಲ ಶಿವ ಸೃಷ್ಟಿಸಿದ್ದಾರಂತೆ. ಒಂದು ಫೈಟ್ ದೊಡ್ಡ ಹಡಗಿನಲ್ಲಿ ನಡೆದರೆ ಮತ್ತೊಂದು ಫೈಟ್ ಸಮುದ್ರದ ದಡದಲ್ಲಿ ನಡೆಯುತ್ತದೆ. ಎರಡಕ್ಕೂ ಹಾಲಿವುಡ್ನ ಅನುಭವಿ ಫೈಟ್ ಕಂಪೋಸರ್ ಅನ್ನು ಕರೆತರಲಾಗಿದೆ. ‘ದೇವರ’ ಸಿನಿಮಾ 2024 ರ ಏಪ್ರಿಲ್ 05ಕ್ಕೆ ಬಿಡುಗಡೆ ಆಗಲಿದೆ.





