ಸೋಮವಾರ, ಜುಲೈ 20, 2026
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

ನಾನ್ ನಡೆದ್ ಬಂದಿರೋ ದಾರೀಲಿ ನನ್ ಹೆಜ್ಜೆ ಗುರುತ್ ಮಾತ್ರ ಅಲ್ಲ; ನನ್ ಗುರುತೂ ಬಿಟ್ ಬಂದಿದೀನಿ!

Vishalakshi Pby Vishalakshi P
05/10/2023
in Majja Special
Reading Time: 1 min read
ನಾನ್ ನಡೆದ್ ಬಂದಿರೋ ದಾರೀಲಿ ನನ್ ಹೆಜ್ಜೆ ಗುರುತ್ ಮಾತ್ರ ಅಲ್ಲ; ನನ್ ಗುರುತೂ ಬಿಟ್ ಬಂದಿದೀನಿ!

ದೊಡ್ಮನೆ ಹೀರೋ, ರಾಘವೇಂದ್ರ ರಾಜ್ ಕುಮಾರ್ ಪುತ್ರ ವಿನಯ್ ರಾಜ್ ಕುಮಾರ್ ಅಭಿನಯದ ಗ್ರಾಮಾಯಣ ಸಿನಿಮಾಗೆ ಲೂಸ್‍ಮಾದ ಯೋಗಿ ಗ್ರ್ಯಾಂಡ್ ಎಂಟ್ರಿಕೊಟ್ಟಿದ್ದಾರೆ. ಕೂಲಿಂಗ್ ಗ್ಲಾಸ್ ತೊಟ್ಟು, ಸಿಗರೇಟ್ ಹೊತ್ತಿಸಿಕೊಂಡು ಬಾಯಿಗಿಟ್ಟುಕೊಂಡಿರುವ ಯೋಗಿ, ರಗಡ್ ಲುಕ್‍ನಲ್ಲಿ ಕಿಚ್ಚು ಹಚ್ಚಿದ್ದಾರೆ. `ನಾನ್ ನಡೆದ್ ಬಂದಿರೋ ದಾರೀಲಿ ನನ್ ಹೆಜ್ಜೆ ಗುರುತ್ ಮಾತ್ರ ಅಲ್ಲ; ನನ್ ಗುರುತೂ ಬಿಟ್ ಬಂದಿದೀನಿ’….ಹೀಗೊಂದು ಬೆಂಕಿ ಡೈಲಾಗ್ ಉಗುಳುವ ಮೂಲಕ `ಗ್ರಾಮಾಯಣ’ ತಂಡ ಸೇರಿದ್ದಾರೆ. ಫಸ್ಟ್ ಲುಕ್ ಜೊತೆಗೆ ಖಡಕ್ ಡೈಲಾಗ್ ರಿವೀಲ್ ಮಾಡುವ ಮೂಲಕ ಪಾತ್ರದ ನಿರೀಕ್ಷೆ ಹೆಚ್ಚಿಸಿದ್ದಾರೆ ನಟ ಲೂಸ್‍ಮಾದ ಯೋಗಿ

‘ಗ್ರಾಮಾಯಣ’ ಸಿನಿಮಾದಲ್ಲಿ ಬರುವ ಪ್ರಮುಖ ಪಾತ್ರವೊಂದರಲ್ಲಿ ನಟ ಲೂಸ್‌ಮಾದ ಯೋಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದ ಕಥೆಯಲ್ಲಿ ತಿರುವು ನೀಡುವಂಥ ಹೊಸಥರದ ಪಾತ್ರದಲ್ಲಿ ದುನಿಯಾ ಯೋಗಿ ಧಗಧಗಿಸಲಿದ್ದಾರೆಸದ್ಯ ಲೂಸ್‌ಮಾದ ಯೋಗಿ ಅವರ ಪಾತ್ರದ ಚಿತ್ರೀಕರಣಕ್ಕೆ ಚಿತ್ರತಂಡ ಪ್ಲಾನ್ ಮಾಡಿಕೊಂಡಿದ್ದು, ಇದೇ ಅಕ್ಟೋಬರ್ ಮೊದಲ ವಾರಾಂತ್ಯದಲ್ಲಿ ಯೋಗಿ ಅವರ ಚಿತ್ರೀಕರಣ ಶುರುವಾಗಲಿದೆ. ಆರಂಭಿಸಿದ್ದಾರೆ ರಾಯಲ್ ಸ್ಟಾರ್ ವಿನಯ್‍ಗೆ ಯೋಗಿ ಎದುರಾಳಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದ್ದು, ಯೋಗಿ ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.

“ಗ್ರಾಮಾಯಣ” ಇದು ಗ್ರಾಮದಲ್ಲೇ ನಡೆಯುವ ಕಥೆ. ದೇವನೂರು ಚಂದ್ರು ನಿರ್ದೇಶನ ಮಾಡ್ತಿದ್ದಾರೆ. ಈವರೆಗೂ ನೋಡಿರದ ಅವತಾರದಲ್ಲಿ ವಿನಯ್ ರಾಜಕುಮಾರ್ ಅವರನ್ನು ತೋರಿಸಲು ಹೊರಟಿದ್ದಾರೆ. ಜೊತೆ ಜೊತೆಯಲಿ ಸೀರಿಯಲ್ ಮೂಲಕ ಕರುನಾಡಿ‌ನ ಮನೆಮನ ತಲುಪಿದ ನಟಿ ಅನು ಸಿರಿಮನೆ ಉರುಫ್ ಮೇಘಾ ಶೆಟ್ಟಿ ಹೀರೋಯಿನ್ನಾಗಿ ಸೆಲೆಕ್ಟ್ ಆಗಿದ್ದಾರೆ. ರಾಯಲ್ ಸ್ಟಾರ್ ವಿನಯ್ ಗೆ ಜೋಡಿಯಾಗಿ ಗ್ರಾಮಾಯಣದ ಥೇರು ಎಳೆಯಲಿದ್ದಾರೆ. ಒಂದು ಸರಳ ಪ್ರೇಮಕಥೆ ಹಾಗೂ ಪೆಪೆ ಜೊತೆ ಗ್ರಾಮಾಯಣ ಚಿತ್ರದಲ್ಲೂ ವಿನಯ್ ತೊಡಗಿಸಿಕೊಳ್ತಿದ್ದಾರೆ. ಗೆದ್ದು ಬೀಗಲು, ಯಶಸ್ಸಿನ ಚುಕ್ಕಾಣಿ ಹಿಡಿಯಲು ರಾಯಲ್ ಸ್ಟಾರ್ ವಿನಯ್ ಹರಸಾಹಸ ಪಡ್ತಿದ್ದಾರೆ.

 

‘ಲಹರಿ ಫಿಲಂಸ್’ ಹಾಗೂ ‘ವೀನಸ್ ಎಂಟರ್‌ಟೈನರ್ಸ್’ ‌ಬ್ಯಾನರಿನಲ್ಲಿ ಜಂಟಿಯಾಗಿ ನಿರ್ಮಾಣವಾಗುತ್ತಿರುವ ‘ಗ್ರಾಮಾಯಣ’  ಸಿನಿಮಾದ ಒಂದಷ್ಟು ಚಿತ್ರೀಕರಣ ಕೋವಿಡ್‌ಗೂ ಮೊದಲೇ ಆರಂಭವಾಗಿತ್ತು. ಆದರೆ, ಕೋವಿಡ್‌ನಲ್ಲಿ ಚಿತ್ರದ ನಿರ್ಮಾಪಕರು ತೀರಿಕೊಳ್ಳುವ ಮೂಲಕ ಸಿನಿಮಾವೂ ಅರ್ಧಕ್ಕೆ ನಿಂತು ಹೋಯಿತು. ಬಳಿಕ ‘ಲಹರಿ ಫಿಲಂಸ್’ ಹಾಗೂ ‘ವೀನಸ್ ಎಂಟರ್‌ಟೈನರ್ಸ್’ ಸಂಸ್ಥೆಗಳು ಜಂಟಿಯಾಗಿ ಈ ಸಿನಿಮಾವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು, ಮತ್ತೊಮ್ಮೆ ಮುಹೂರ್ತ ನೆರವೇರಿಸಿ ಹೊಸದಾಗಿ ಸಿನಿಮಾ ಆರಂಭಿಸಿದ್ದಾರೆ. ಚಿಕ್ಕಮಗಳೂರು, ದೇವರಾಯಸಮುದ್ರ, ಅರಸಿಕೆರೆ, ಕಡೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ಪ್ಲ್ಯಾನ್ ಆಗಿದೆ. ಯಶಸ್ವಿನಿ ಅಂಚಲ್ ಛಾಯಾಗ್ರಹಣ ಹಾಗೂ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಅಚ್ಯುತಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಅರುಣ್ ಸಾಗರ್, ಅಪರ್ಣ(ನಿರೂಪಕಿ), ಸೀತಾ ಕೋಟೆ, ಶ್ರೀನಿವಾಸ ಪ್ರಭು, ಮಂಜುನಾಥ್ ಹೆಗೆಡೆ ಮುಂತಾದವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
 ಕುತೂಹಲ ಮೂಡಿಸಿದ ‘ವೇಷ’ ಟ್ರೇಲರ್ 

 ಕುತೂಹಲ ಮೂಡಿಸಿದ ‘ವೇಷ’ ಟ್ರೇಲರ್ 

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.