ರಾಕಿಂಗ್ ಸುದ್ದಿಗೋಸ್ಕರ ಎಲ್ಲರೂ ರಾಕಿಭಾಯ್ ಕಡೆ ನೋಡ್ತಿದ್ದರೆ, ರಾಕಿ ಚೆಲುವೆ ರಾಕಿಂಗ್ ಸುದ್ದಿಕೊಟ್ಟು ಎಲ್ಲರೂ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಮಾನ್ಸ್ಟರ್ ತಮ್ಮ ಮುಂದಿನ ಸಿನಿಮಾ ಅನೌನ್ಸ್ ಮಾಡುವ ಮೊದಲೇ ತಮ್ಮ ಅಪ್ಕಮ್ಮಿಂಗ್ ಚಿತ್ರದ ಅಪ್ಡೇಟ್ ನೀಡಿದ್ದಾರೆ. ಇತ್ತೀಚೆಗಷ್ಟೇ ನೆಕ್ಸ್ಟ್ ಪ್ರಾಜೆಕ್ಟ್ ನ ಗ್ಲಿಂಪ್ಸ್ ಹಂಚಿಕೊಂಡು ಸರ್ಪೈಸ್ ಕೊಟ್ಟಿದ್ದರು. ಇದೀಗ ಮುಹೂರ್ತದ ಫೋಟೋಸ್ ನ ಶೇರ್ ಮಾಡಿ ಫ್ಯಾನ್ಸ್ ಥ್ರಿಲ್ಲಾಗುವಂತೆ ಮಾಡಿದ್ದಾರೆ.

ಹೌದು, ರಾಕಿಯ ರಾಣಿ ರೀನಾ ಉರುಫ್ ಶ್ರೀನಿಧಿ ಶೆಟ್ಟಿ ನಾಯಕಿಯಾಗಿರುವ `ತೆಲುಸು ಕದಾ’ ಚಿತ್ರದ ಮುಹೂರ್ತ ನೆರವೇರಿದೆ. ಡಿಜೆ ಟಿಲ್ಲು ಖ್ಯಾತಿಯ ಹೀರೋ ಸಿದ್ದು ಜೊನ್ನಲಗಡ್ಡಾಗೆ ಕೆಜಿಎಫ್ ಬ್ಯೂಟಿ ರೀನಾ ಜೋಡಿಯಾಗಿ ಕಾಣಿಸಿಕೊಳ್ತಿದ್ದಾರೆ. ತೆಲುಗು ಪಿಲ್ಲಾ ರಾಶಿ ಖನ್ನಾ ಕೂಡ ಮುಖ್ಯಭೂಮಿಕೆಯಲ್ಲಿದ್ದು ನಿನ್ನೆ ಸಿನಿಮಾ ಅದ್ದೂರಿಯಾಗಿ ಸೆಟ್ಟೇರಿದೆ. ನ್ಯಾಚುರಲ್ ಸ್ಟಾರ್ ನಾನಿ, ಟಿಟೌನ್ ಹೀರೋ ನಿಖಿಲ್ ಆಗಮನಿಸಿ `ತೆಲುಸು ಕದಾ’ ಚಿತ್ರಕ್ಕೆ ಚಾಲನೆ ನೀಡಿದ್ದಾರೆ.
`ತೆಲುಸು ಕದಾ’ ಚಿತ್ರಕ್ಕೆ ನೀರಜ್ ಕೋನಾ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಇಷ್ಟು ದಿನ ಕಾಸ್ಟ್ಯೂಮ್ ಡಿಸೈನರ್ ಆಗಿ ಗುರ್ತಿಸಿಕೊಂಡಿದ್ದ ಇವರು ಈಗ ನಿರ್ದೇಶಕಿಯಾಗಿ ಕಣಕ್ಕಿಳಿಯುತ್ತಿದ್ದಾರೆ. `ಪೀಪಲ್ ಮೀಡಿಯಾ ಫ್ಯಾಕ್ಟರಿ’ ಸಂಸ್ಥೆ ಬಂಡವಾಳ ಹೂಡ್ತಿದೆ. ಇಂಟ್ರೆಸ್ಟಿಂಗ್ ಅಂದರೆ ಕನ್ನಡದ ನಾಯಕಿಯರು ಒಬ್ಬರಾದ ಮೇಲೆ ಒಬ್ಬರು ಟಾಲಿವುಡ್ ಅಂಗಳ ಪ್ರವೇಶಿಸುತ್ತಿದ್ದಾರೆ. ಸದ್ಯಕ್ಕಂತೂ ಟಿಟೌನ್ನಲ್ಲಿ ಶ್ರೀವಲ್ಲಿ ಹಾಗೂ ಶ್ರೀಲೀಲಾ ಹವಾ ಜೋರಾಗಿದೆ. ಕಿಸ್ ಬ್ಯೂಟಿ ಕೈಯಲ್ಲಿ ಹತ್ತತ್ತು ಪ್ರಾಜೆಕ್ಟ್ಗಳಿದ್ದು ಸೈಲೆಂಟಾಗಿಯೇ ಸಾನ್ವಿ ಜೋಸೆಫ್ಗೆ ಸೆಡ್ಡು ಹೊಡೆದಿದ್ದಾರೆ. ಈಗ ಕೆಜಿಎಫ್ ಚಿತ್ರದ ಸೌಂದರ್ಯದ ಕಣಿಯ ಎಂಟ್ರಿಯಾಗಿದೆ. ಸ್ಪರ್ಧೆ ಶುರುವಾಗುವ ಎಲ್ಲಾ ಲಕ್ಷಣಗಳು ಕಾಣ್ತಿದೆ
ಅಂದ್ಹಾಗೇ, ಕೆಜಿಎಫ್ ಚಿತ್ರದ ಜನಪ್ರಿಯತೆಗೆ ಜೋತುಬೀಳದ ರೀನಾ, ಕೆಜಿಎಫ್ ಚಾಪ್ಟರ್2 ರಿಲೀಸ್ ಬೆನ್ನಲ್ಲೇ ಕಾಲಿವುಡ್ ಗೆ ಎಂಟ್ರಿಕೊಟ್ಟಿದ್ದರು. ಚಿಯಾನ್ ವಿಕ್ರಮ್ ನಟನೆಯ `ಕೋಬ್ರಾ’ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಿದ್ದರು. ಆದರೆ, ಆ ಸಿನಿಮಾದಿಂದ ಅಷ್ಟೇನು ಪಾಪ್ಯೂಲ್ಯಾರಿಟಿ ದಕ್ಕಲಿಲ್ಲ. ಅಲ್ಲಿಂದ ಕೊಂಚ ಬ್ರೇಕ್ ಪಡೆದಿದ್ದ ಶ್ರೀನಿಧಿ ಶೆಟ್ಟಿ ಈಗ ಟಾಲಿವುಡ್ ಕಡೆ ಮುಖ ಮಾಡಿದ್ದಾರೆ. ಅರಸಿಕೊಂಡು ಬಂದ ಎಲ್ಲಾ ಸಿನಿಮಾಗಳನ್ನು ಒಪ್ಪದೇ ಅಳೆದು ತೂಗಿ ಪಾತ್ರಗಳನ್ನ ಆಯ್ಕೆಮಾಡಿಕೊಳ್ತಿದ್ದಾರೆ. ಚಿತ್ರರಂಗಕ್ಕೆ ಬಂದು ಹೆಚ್ಚುಕಮ್ಮಿ 6 ವರ್ಷ ಕಳೆದಿದೆ. ಆದರೆ, ರೀನಾ ಮಾತ್ರ ನಂಬರ್ ಆಫ್ ಸಿನಿಮಾಸ್ ಕಡೆ ಗಮನಕೊಡ್ತಿಲ್ಲ. ಪ್ರೇಕ್ಷಕರ ಮನಸ್ಸಲ್ಲಿ ಅಚ್ಚಳಿಯದೇ ಉಳಿಯುವ ಪಾತ್ರವಾಗ್ಬೇಕು, ಅಂಥಾ ಸಿನಿಮಾದ ಭಾಗವಾಗಬೇಕು ಅಂತ ಮಂಗಳೂರು ಚೆಲುವೆ ಫಿಕ್ಸಾಗಿದ್ದಾರೆ.

ಸದ್ಯ, `ತೆಲುಸು ಕದಾ’ ಚಿತ್ರಕ್ಕೆ ಸೈ ಎಂದಿದ್ದು, ಕೆಜಿಎಫ್-3 ಗಾಗಿ ಆಕೆ ಕೂಡ ಎದುರುನೋಡ್ತಿದ್ದಾರೆ. ಆದಷ್ಟು ಬೇಗ ನೀಲ್ ಸಾಹೇಬ್ರು ಎನ್ಟಿಆರ್-31 ಮುಗಿಸಿ ಕೆಜಿಎಫ್-3 ಅಖಾಡಕ್ಕೆ ಧುಮ್ಕಲಿ. ಇಡೀ ಜಗತ್ತು ಕಣ್ಣರಳಿಸಿರೋ ಚಿನ್ನದ ಸಾಮ್ರಾಜ್ಯ ಭಾಗ-3ಕ್ಕೆ ಮುಹೂರ್ತ ಫಿಕ್ಸ್ ಮಾಡಲಿ ಅನ್ನೋದೇ ಮಜ್ಜಾ ಆಶಯ. ಅಟ್ ದಿ ಸೇಮ್ ಟೈಮ್ ಯಶ್ಬಾಸ್ ಕೂಡ ಅಪ್ಕಮ್ಮಿಂಗ್ ಸಿನಿಮಾ ಅನೌನ್ಸ್ ಮಾಡಬೇಕು. ಕಳೆದ ಒಂದೂವರೆ ವರ್ಷಗಳಿಂದ ಕಾಯಿಸಿರೋ ರಾಕಿಂಗ್ ಸಾಹೇಬ್ರು ವಿಶ್ವಸಿನಿದುನಿಯಾ ಥಂಡಾ ಹೊಡೆಯುವಂತಹ ಸರ್ಪೈಸ್ ಕೊಡಬೇಕು. ಕೊಡ್ತಾರೆನ್ನುವ ನಂಬಿಕೆ ಈ ಕ್ಷಣಕ್ಕೂ ಜೀವಂತ.





