ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಜೋಡಿಯ `ಸಪ್ತ ಸಾಗರದಾಚೆ ಎಲ್ಲೋ’ ಸೈಡ್ ಬಿ ರಿಲೀಸ್ ಡೇಟ್ ಫಿಕ್ಸಾಗಿದೆ. ದಸರಾಗೆ ಬೆಳ್ಳಿಪರದೆ ಬೆಳಗಬೇಕಿದ್ದ ಶೆಟ್ರ ಪ್ರೇಮಕಥೆ, ದೀಪಾವಳಿಯಂದು ಬಿಗ್ ಸ್ಕ್ರೀನ್‍ಗೆ ಕಿಚ್ಚು ಹಚ್ಚೋದು ಪಕ್ಕಾ ಆಗಿದೆ. ಈ ಕುರಿತು ಸ್ವತಃ ಶೆಟ್ಟರೇ ಟ್ವೀಟ್ ಮಾಡಿದ್ದಾರೆ. ರಿಲೀಸ್ ಡೇಟ್ ಪೋಸ್ಟ್ ಪೋನ್ ಆಗಿದ್ದನ್ನು ಖಚಿತಪಡಿಸಿ ಹೊಸ ಡೇಟ್ ಕೊಟ್ಟಿದ್ದಾರೆ. ಆ ದಿನ ಅಖಾಡಕ್ಕಿಳಿಯುವುದನ್ನ ಶೆಟ್ರು ಕನ್ಫರ್ಮ್ ಮಾಡಿದ್ದಾರೆ

`ಸಪ್ತ ಸಾಗರದಾಚೆ ಎಲ್ಲೋ’ ಸೈಡ್ ಎ ರಿಲೀಸ್ ಮಾಡಿ ಏಳು ವಾರ ಕಳೆದ್ಮೇಲೆ, `ಸಪ್ತ ಸಾಗರದಾಚೆ ಎಲ್ಲೋ’ ಸೈಡ್ ಬಿ ಬಿಡುಗಡೆ ಮಾಡ್ಬೇಕು ಅಂತ ಡಿಸೈಡ್ ಮಾಡಿದ್ವಿ. ಆದರೆ, ಡೆಸ್ಟಿನಿ 77 ದಿನ ಕಾಲಾವಕಾಶ ಕೇಳ್ತಿದೆ. ಹೀಗಾಗಿ, ಅಕ್ಟೋಬರ್ 27ರ ಬದಲು ನವೆಂಬರ್ 17ರಂದು ನಿಮ್ಮೆಲ್ಲರ ಮುಂದೆ ಹಾಜರಾಗಲಿದ್ದೇವೆ. ಎಂದಿನಂತೆ ನಿಮ್ಮ ಪ್ರೀತಿ, ಪ್ರೋತ್ಸಾಹ, ಸಹಕಾರ ಇರಲೆಂದು ಕೇಳಿಕೊಳ್ಳುತ್ತೇವೆ ಅಂತ ನಟ ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.

ಅಷ್ಟಕ್ಕೂ, ರಿಲೀಸ್ ಡೇಟ್‍ನ ಪುನಃ ಮುಂದೂಡಿದ್ದಕ್ಕೆ ಕಾರಣ ದಸರಾ ಹಬ್ಬಕ್ಕೆ ಸ್ಪೆಷಲ್ಲಾಗಿ ದೊಡ್ಡ ದೊಡ್ಡ ಸಿನಿಮಾಗಳು ತೆರೆಕಂಡಿವೆ. ಕನ್ನಡದಲ್ಲಿ ಘೋಸ್ಟ್, ತೆಲುಗಿನಲ್ಲಿ ಭಗವಂತ್ ಕೇಸರಿ, ಟೈಗರ್ ನಾಗೇಶ್ವರ್ ರಾವ್, ತಮಿಳಿನಲ್ಲಿ ಲಿಯೋ ಸಿನಿಮಾಗಳು ಒಟ್ಟಿಗೆ ಬಿಡುಗಡೆಯಾಗಿರುವುದರಿಂದ ಬಾಕ್ಸ್ ಆಫೀಸ್‍ನಲ್ಲಿ ಸ್ಪರ್ಧೆ ಏರ್ಪಟ್ಟಿದೆ. ಥಿಯೇಟರ್ ಸಮಸ್ಯೆಯಿಂದ ದೊಡ್ಡ ಚಿತ್ರಗಳೇ ಹೊಡೆದಾಡುವಂತಾಗಿದೆ. ಈ ಪರಿಸ್ಥಿತಿ ಎದುರಾಗುತ್ತೆಂದು ಮೊದಲೇ ಅರಿತಿದ್ದ ಶೆಟ್ರ ಟೀಮ್ ಬಿಡುಗಡೆ ದಿನಾಂಕ ಮುಂದಕ್ಕೆ ಹಾಕಿದೆ. ದಸರಾ ಬದಲು ದೀಪಾವಳಿಗೆ ಧಗಧಗಿಸಲು ಪ್ಲ್ಯಾನ್ ಮಾಡಿದೆ. ಹೇಮಂತ್ ರಾವ್ ಕೈಚಳಕದ ಸೀಕ್ವೆಲ್ ಕಮಾಲ್ ಮಾಡುವ ಎಲ್ಲಾ ಲಕ್ಷಣಗಳು ಗೋಚರಿಸ್ತಿವೆ.

`ಸಪ್ತ ಸಾಗರಾಚೆ ಎಲ್ಲೋ’ ಸೈಡ್ ಎ ಸಿನಿಮಾ ಕನ್ನಡ ಮಾತ್ರವಲ್ಲದೇ ತೆಲುಗಿಗೆ ಡಬ್ ಆಗಿ ಗೆಲುವು ಕಂಡಿದೆ. ಹೀಗಾಗಿ, `ಸೈಡ್-ಬಿ’ ನಾ ದೊಡ್ಡಮಟ್ಟದಲ್ಲಿ ಪ್ರಮೋಷನ್ ಮಾಡಿ ಅದ್ದೂರಿಯಾಗಿ ರಿಲೀಸ್ ಮಾಡಬೇಕು ಎನ್ನುವ ಪ್ಲ್ಯಾನ್ ಕೂಡ ನಡೀತಿದೆಯಂತೆ. ಸೈಡ್- ಎ ಮೊದಲು ಕನ್ನಡದಲ್ಲಿ ರಿಲೀಸ್ ಆಗಿ ಗೆಲುವು ಕಂಡ ಮೇಲೆ ಸಪ್ತಸಾಗರ ದಾಟಿತ್ತು. ಬಹುಷಃ ಸೈಡ್- ಬಿ ಕನ್ನಡದ ಜೊತೆಗೆ ಪ್ಯಾನ್ ಇಂಡಿಯಾ ತುಂಬೆಲ್ಲಾ ಏಕಕಾಲಕ್ಕೆ ರಿಲೀಸ್ ಆದರೂ ಆಗಬಹುದು. ಯಾಕಂದ್ರೆ ಮೊದಲ ಭಾಗ ಕ್ಲಾಸ್ ನಿಂದ ಕೂಡಿತ್ತು. ಆದರೆ, ಎರಡನೇ ಭಾಗದಲ್ಲಿ ಮನು ಇನ್ನೊಂದು ಮುಖ ಅನಾವರಣಗೊಳ್ಳಲಿದೆ. ಹೌದು, ಸೈಡ್ ಎನಲ್ಲಿ ಲವ್ವರ್ಬಾಯ್ ಆಗಿ ನಿಮ್ಮೆಲ್ಲರ ಹೃದಯ ಗೆದ್ದಿರೋ ಮನು, ಸೈಡ್ ಬಿ ನಲ್ಲಿ ಮಾಸ್ ಹೀರೋ ಆಗಿ ನಿಮ್ಮೆಲ್ಲರ ಮುಂದೆ ಬರಲಿದ್ದಾರೆ. ಈಗಾಗಲೇ ಕ್ಲೈಮ್ಯಾಕ್ಸ್ ನಲ್ಲಿ ಬದಲಾದ ಮನು ಲುಕ್-ಗೆಟಪ್ ನ ನೀವೆಲ್ಲ ನೋಡಿದ್ದೀರಿ. ಅದು ಜಸ್ಟ್ ಸ್ಯಾಂಪಲ್ ಅಷ್ಟೇ ಪಿಕ್ಚರ್ ಅಭಿ ಬಾಕಿ ಹೈ.





