ನಟ ಅಭಿಷೇಕ್ ಅಂಬರೀಶ್ ನಾಯಕನಾಗಿ ಅಭಿನಯಿಸುತ್ತಿರುವ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ಥಿಯೇಟರಿಗೆ ಬರಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ‘ದುನಿಯಾ’ ಸೂರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾದಲ್ಲಿ ಅಭಿಷೇಕ್ ಅಂಬರೀಶ್ ಕಂಪ್ಲೀಟ್ ಮಾಸ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಈಗಾಗಲೇ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾದ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿದ್ದರೂ, ಚಿತ್ರತಂಡದ ಕಡೆಯಿಂದ ಸಿನಿಮಾದ ಬಗ್ಗೆೆ ಹೆಚ್ಚೇನೂ ಮಾಹಿತಿ ಹೊರಬಂದಿರಲಿಲ್ಲ. ಈಗ ಚಿತ್ರತಂಡ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾದ ಕಡೆಯಿಂದ ಸಿನಿಪ್ರಿಯರಿಗೆ ಸ್ಪೆೆಷಲ್ ಗಿಫ್ಟ್ ಸಿಕ್ಕಿದೆ. ಅದೇನೆಂದರೆ, ಸಿನಿಮಾದ ಹಾಡು.

‘ಬ್ಯಾಡ್ ಮ್ಯಾನರ್ಸ್’ ಸಿನಿಮಾದ ಬಿಡುಗಡೆ ಯಾವಾಗ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿರುವಂತೆಯೇ, ಚಿತ್ರತಂಡ ಅಭಿಮಾನಿಗಳಿಗೆ ಖುಷಿ ನೀಡುವಂಥ ಹಾಡೊಂದನ್ನು ಬಿಡುಗಡೆ ಮಾಡಿದೆ. ‘ಓಗ… ಓಗ…’ ಎಂಬ ಈ ಹಾಡು ‘ಆನಂದ್ ಆಡಿಯೋ ಯೂ-ಟ್ಯೂಬ್’ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಹಾಡಿಗೆ ಮಾಸ್ ಆಡಿಯನ್ಸ್ ಕಡೆಯಿಂದ ಮೆಚ್ಚುಗೆ ಸಿಗುತ್ತಿದೆ.

ಈಗಾಗಲೇ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾದ ಟೈಟಲ್ ಟ್ರ್ಯಾಕ್ ಹಾಗೂ ಸಾರಾಯಿ ಎಂಬ ಹಾಡು ರಿಲೀಸ್ ಆಗಿ ಹಿಟ್‌ಲಿಸ್ಟ್ ಸೇರಿದೆ. ಈಗ ‘ಓಗ ಓಗ’ ಹಾಡು ಬಿಡುಗಡೆಯಾಗಿದ್ದು, ಚರಣ್ ರಾಜ್ ಸಂಗೀತ ಸಂಯೋಜನೆಯ ಈ ಹಾಡನ್ನು ಕಪಿಲ್ ಕಪಿಲನ್ ಹಾಡಿದ್ದು, ಜಯಂತ್ ಕಾಯ್ಕಿಣಿ ಸಾಹಿತ್ಯವಿದೆ. ಅಂದಹಾಗೆ, ‘ಓಗ… ಓಗ…’ ಎಂಬುದು ಗ್ರಿಬಿಶ್ ಪದವಂತೆ. ತುಂಬಾ ಸಂತೋಷವಾದಾಗ ಈ ಪದ ಗುನುಗುತ್ತಾರೆ ಎನ್ನುತ್ತದೆ ಚಿತ್ರತಂಡ.





