ನಟ ಧ್ರುವ ಸರ್ಜಾ ಇದೇ ಅಕ್ಟೊಬರ್ 6ರಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಸುಮಾರು ಮೂರು ವರ್ಷಗಳ ನಂತರ ಧ್ರುವ ತಮ್ಮ ಹುಟ್ಟು ಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸಲು ಮುಂದಾಗಿದ್ದು, ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಇದರ ನಡುವೆಯೇ ನಟ ಧ್ರುವ ಸರ್ಜಾ, ತಮ್ಮ ಅಭಿಮಾನಿಗಳಿಗಾಗಿ ವಿಶೇಷ ಮನವಿಯೊಂದನ್ನು ಮಾಡಿಕೊಂಡಿದ್ದಾರೆ. ತಮ್ಮ ಹುಟ್ಟು ಹಬ್ಬಕ್ಕೆೆ ಬರುವವರು ಕೇಕ್, ಹಾರ, ತುರಾಯಿಗಳನ್ನು ತರಬಾರದು ಎಂದು ಕೋರಿಕೊಂಡಿರುವ ಧ್ರುವ ಸರ್ಜಾ, ಅಂದು ಅಭಿಮಾನಿಗಳು ಶಾಲಾ ಮಕ್ಕಳಿಗೆ ಬೇಕಾಗುವ ಪುಸ್ತಕ, ಬ್ಯಾಗ್, ಪೆನ್ನು ಹೀಗೆ ಅಗತ್ಯ ಸಾಮಗ್ರಿಗಳನ್ನು ಉಡುಗೊರೆ ರೂಪದಲ್ಲಿ ಕೊಡುವಂತೆ ಕೇಳಿಕೊಂಡಿದ್ದಾರೆ.

ಈ ಹಿಂದೆ ನಟರಾದ ದರ್ಶನ್, ಸುದೀಪ್ ಸೇರಿದಂತೆ ಹಲವು ಕಲಾವಿದರು ತಮ್ಮ ಹುಟ್ಟು ಹಬ್ಬಕ್ಕೆೆ ಕೇಕ್, ಹಾರ ತರಬೇಡಿ ಎಂದು ಮನವಿ ಮಾಡಿಕೊಂಡಿದ್ದರು. ಅದೇ ಹಣವನ್ನು ಅನಾಥಾಶ್ರಮಕ್ಕೂ, ವೃದ್ಧಾಶ್ರಮಕ್ಕೊ ಅಥವಾ ನಿಮ್ಮ ಕುಟುಂಬದ ಒಳ್ಳೆೆಯ ಕೆಲಸಕ್ಕೂ ಉಪಯೋಗಿಸಿಕೊಳ್ಳಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದರು. ಇದೀಗ ಧ್ರುವ ಸರ್ಜಾ ಕೂಡ ಅದೇ ತಮ್ಮ ಅಭಿಮಾನಿಗಳಿಗೆ ಅಂಥದ್ದೇ ಮನವಿ ಮಾಡಿಕೊಂಡಿದ್ದಾಾರೆ.





