ಬುಧವಾರ, ಜುಲೈ 22, 2026
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

’ಮಾಫಿಯಾ’ ಡಬ್ಬಿಂಗ್ ಮುಗಿಸಿದ ಖುಷಿಯಲ್ಲಿ ಅದಿತಿ ಪ್ರಭುದೇವ

Vishalakshi Pby Vishalakshi P
01/10/2023
in Majja Special
Reading Time: 1 min read
’ಮಾಫಿಯಾ’ ಡಬ್ಬಿಂಗ್ ಮುಗಿಸಿದ ಖುಷಿಯಲ್ಲಿ ಅದಿತಿ ಪ್ರಭುದೇವ

ನಟಿ ಅದಿತಿ ಪ್ರಭುದೇವ ಮತ್ತು ಪ್ರಜ್ವಲ್ ದೇವರಾಜ್ ಜೋಡಿಯಾಗಿ ಅಭಿನಯಿಸಿರುವ ‘ಮಾಫಿಯಾ’ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದೆ. ಇತ್ತೀಚೆಗೆ ನಟಿ ಅದಿತಿ ಪ್ರಭುದೇವ ಸಿನಿಮಾದಲ್ಲಿ ತಮ್ಮ ಪಾತ್ರದ ಡಬ್ಬಿಂಗ್ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.

‘ಬೆಂಗಳೂರು ಕುಮಾರ್ ಫಿಲಂಸ್’ ಲಾಂಛನದಲ್ಲಿ ಕುಮಾರ್ ಬಿ. ನಿರ್ಮಿಸಿರುವ, ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕರಾಗಿ, ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸಿರುವ ಹಾಗೂ ಲೋಹಿತ್ ಹೆಚ್ ನಿರ್ದೇಶಿಸಿರುವ ‘ಮಾಫಿಯಾ’ ಚಿತ್ರಕ್ಕೆ ಸಾಧುಕೋಕಿಲ ಅವರ ಲೂಪ್ ಸ್ಟುಡಿಯೋದಲ್ಲಿ ಡಬ್ಬಿಂಗ್ ಮುಕ್ತಾಯವಾಗಿದೆ. ಇದೇ ಅಕ್ಟೊಬರ್ ತಿಂಗಳಿನಲ್ಲಿ ‘ಮಾಫಿಯಾ’ ಟೀಸರ್ ಬರಲಿದ್ದು, ನವೆಂಬರ್ ಅಂತ್ಯದ ವೇಳೆಗೆ ಸಿನಿಮಾ ತೆರೆಗೆ ಬರಲಿದೆ.

ಆ್ಯಕ್ಷನ್ ಜಾನರ್ ಕಥಾಹಂದರ ಹೊಂದಿರುವ ‘ಮಾಫಿಯಾ’ ಚಿತ್ರಕ್ಕೆ ಬೆಂಗಳೂರು, ಮೈಸೂರು ಹಾಗೂ ಹೈದರಾಬಾದ್ ನಲ್ಲಿ ಚಿತ್ರೀಕರಣ ನಡೆದಿದೆ. ಅಪಾರವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಮೈನವಿರೇಳಿಸುವ ಐದು ಸಾಹಸ ಸನ್ನಿವೇಶಗಳಿದೆ. ಈ ಚಿತ್ರಕ್ಕಾಗಿ ಪ್ರಜ್ವಲ್ ಅವರು ಸಾಕಷ್ಟು ಶ್ರಮವಹಿಸಿದ್ದಾರೆ. ಈ ಚಿತ್ರದಲ್ಲಿ ನಾಲ್ಕು ಹಾಡುಗಳಿದೆ. ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಎಸ್ ಪಾಂಡಿಕುಮಾರ್ ಛಾಯಾಗ್ರಹಣವಿರುವ ಈ ಚಿತ್ರದ ತಾರಾಬಳಗದಲ್ಲಿ ಪ್ರಜ್ವಲ್ ದೇವರಾಜ್, ಅದಿತಿ ಪ್ರಭುದೇವ, ದೇವರಾಜ್ , ಸಾಧುಕೋಕಿಲ, ಶೈನ್ ಶೆಟ್ಟಿ, ವಿಜಯ್ ಚೆಂಡೂರ್, ವಾಸುಕಿ ವೈಭವ್ ಮುಂತಾದವರಿದ್ದಾರೆ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
ಇತಿಹಾಸ ಬರೆಯೋದೆ ತಾಕತ್ತು ಇರೋ ಮನುಷ್ಯನ ಬಗ್ಗೆ, ಸಲಾಂ ಹೊಡೆಯೋನ ಬಗ್ಗೆ ಒಂದೂ ಸಾಲು ಬರೆಯೋದಿಲ್ಲ ! ಮಾಸ್‍ಲೀಡರ್ ಮಸ್ತ್ ಕೌಂಟರ್

ಇತಿಹಾಸ ಬರೆಯೋದೆ ತಾಕತ್ತು ಇರೋ ಮನುಷ್ಯನ ಬಗ್ಗೆ, ಸಲಾಂ ಹೊಡೆಯೋನ ಬಗ್ಗೆ ಒಂದೂ ಸಾಲು ಬರೆಯೋದಿಲ್ಲ ! ಮಾಸ್‍ಲೀಡರ್ ಮಸ್ತ್ ಕೌಂಟರ್

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.