ಭಾರತೀಯ ಚಿತ್ರರಂಗದಲ್ಲಿ ಯಾರಂದ್ರೆ ಯಾರು ತಿಕ್ಕಿ ಅಳಿಸಲಾಗದ ದಾಖಲೆ ಕೆತ್ತಿದವ್ರಲ್ಲಿ..ಕೆತ್ತುತ್ತಿರುವವರಲ್ಲಿ ಒಬ್ರು ಎಸ್ ಎಸ್ ರಾಜಮೌಳಿ..ಹಾಲಿವುಡ್ ಸಿನಿಮಾಗಳಿಗೆ ಟಕ್ಕರ್ ಕೊಟ್ಟು ಆಸ್ಕರ್ ಗೆ ಮುತ್ತಿಟ್ಟು, ಹಾಲಿವುಡ್ ಸಿನಿಮಾ ಮೇಕರ್ಸ್ ಗಳಿಂದ ಬೆನ್ನುತಟ್ಟಿಸಿಕೊಂಡು ಗಹಗಹಿಸಿದ ಮಿಸ್ಟರ್ ಜಕ್ಕಣ್ಣಗಾರು ಹೊಸ ಸಿನಿಮಾ ಕನಸ್ಸನ್ನು ಸಿನಿಮಾ ಜಗತ್ತು ಕಣ್ ಅರಳಿಸಿ ಕಾಯ್ತಿದೆ. ಪ್ರಿನ್ಸ್ ಗೆ ಅದೆಂಥಾ ಸಿನಿಮಾ ಮಾಡಬಹುದು ಮೌಳಿಗಾರು ಅಂತಾ ಕುತೂಹಲದ ಕಣ್ಣುಗಳಿಂದ ಎದುರು ನೋಡ್ತಿದ್ದಾರೆ. ಜಕ್ಕಣ್ಣ ಪ್ರಿನ್ಸ್ ಜನ್ಮದಿನಕ್ಕೆ ತಮ್ಮ ಜಗದಗಲದ ಹೊಸ ಸಾಹಸ ಅನಾವರಣ ಮಾಡಲಿದ್ದಾರೆ ಅಂತಾನೇ ಎಲ್ಲರೂ ನಿರೀಕ್ಷಿಸಿದ್ದರು. ಹೂಹೂ.. ಹಾಗೇ ಆಗಲೇ ಇಲ್ಲ. ಮೌಳಿ ತಲೆಯಲ್ಲಿ ಅದೇನೂ ಓಡ್ತಿದೆಯೋ ಗೊತ್ತಿಲ್ಲ. ತಾವು ಮಹೇಶ್ ಬಾಬುಗೆ ಆಕ್ಷನ್ ಕಟ್ ಹೇಳ್ತಿದ್ದೇನೆ ಎಂಬುದನ್ನು ಬಿಟ್ಟು ಇಲ್ಲಿವರೆಗೆ ಯಾವ್ ಜಾನರ್ ಸಿನಿಮಾ? ಏನ್ ಕಥೆ? ಯಾವಾಗ ಶುರು? ಇನ್ನೀತರ ಗುಟ್ಟನ್ನು ರಟ್ಟು ಮಾಡದೇ ಕುತೂಹಲ ಕಾಯ್ದುಕೊಂಡಿರುವ ಮೌಳಿಗಾರು ಪ್ರಿನ್ಸ್ ಗಾಗಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಜಕ್ಕಣ್ಣನ ಈ ನಡೆಯೇ ಸೌತ್ ಮಂದಿಯನ್ನು ಹುಬ್ಬೇರಿಸಿದ್ದಾರೆ.

ರಾಜಮೌಳಿ ಸಿನಿಮಾಗಳೇ ಹಾಗೇ..ಸಿನಿಮಾಕ್ಕೊಂದು ಜಾನರ್..ಸಿನಿಮಾಕ್ಕೊಂದು ಬದಲಾವಣೆ..ಯಾರು ಮಾಡಿರದೆ, ಊಹೆ ಮಾಡಲಾಗದ ಟ್ವಿಸ್ಟ್ ಅಂಡ್ ಟರ್ನ್ ಎಲ್ಲವೂ ಮೌಳಿ ಚಿತ್ರಗಳ ಹೈಲೆಟ್ಸ್..ಅಂತಹದ್ದೇ ನಿರೀಕ್ಷೆಗಳೊಂದಿಗೆ ಮುಂದಿನ ಸಿನಿಮಾವೂ ತಯಾರಾಗ್ತಿದೆ. ಅದಕ್ಕಾಗಿಯೇ ಜಕ್ಕಣ್ಣ ಈ ಬಾರಿ ತಮ್ಮ ತಂಡವನ್ನೇ ಬದಲಿಸುವ ಲೆಕ್ಕಚಾರ ಹಾಕಿಕೊಂಡಿದ್ದಾರೆ ಎಂಬ ನಯಾ ಸಮಾಚಾರ ಹೊರಬಿದ್ದಿದೆ. ಮೌಳಿ ಸಿನಿಮಾದಲ್ಲಿ ಖಾಯಂ ಆಗಿ ಕೆಲಸ ಮಾಡ್ತಿರುವವರಲ್ಲಿ ಪ್ರಮುಖರು ಸಂಗೀತ ನಿರ್ದೇಶಕ ಎಂಎಂ ಕೀರವಾಣಿ, ಛಾಯಾಗ್ರಾಹಕ ಸೆಂಥಿಲ್ ಕುಮಾರ್..ತ್ರಿಬಲ್ ಆರ್, ಬಾಹುಬಲಿ, ಈಗ, ಮಗಧೀರ..ಜಕ್ಕಣ್ಣನ ಇಷ್ಟು ಸಿನಿಮಾಗಳ ಕಣ್ಣು ಸೆಂಥಿಲ್ ಕುಮಾರ್..ಮೌಳಿ ಹೇಳಿದಂತೆ ಅದ್ಭುತ ದೃಶ್ಯಗಳನ್ನು ಸೆರೆಹಿಡಿಯುವ ಸೆಂಥಿಲ್ ಕುಮಾರ್ ಈ ಬಾರಿ ಮಹೇಶ್ ಬಾಬು ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡೋದಿಲ್ವಂತೆ. ಸೆಂಥಿಲ್ ಗೆ ಗೆಟ್ ಪಾಸ್ ಕೊಟ್ಟು ಆ ಜಾಗಕ್ಕೆ ಪಿ ಎಸ್ ವಿನೋದ್ ಗೆ ಸ್ವಾಗತಿಸುವ ತಯಾರಿಸಲಿದ್ದಾರೆ ಎನ್ನಲಾಗ್ತಿದೆ.

ಸೀತಾರಾಮಂ, ವಿಕ್ರಂವೇದ, ಅಲಾ ವೈಕುಟಪುರಂಲೋ ಸಿನಿಮಾಗಳಲ್ಲಿ ಛಾಯಾಗ್ರಾಹಕರಾಗಿ ದುಡಿದಿರುವ ಪಿ ಎಸ್ ವಿನೋದ್ ರಾಜಮೌಳಿ ಹಾಗೂ ಪ್ರಿನ್ಸ್ ಚಿತ್ರದಲ್ಲಿ ಕ್ಯಾಮೆರಾ ಹಿಡಿಯಲಿದ್ದಾರಂತೆ. ಮೌಳಿ ಅದ್ಯಾಗೇ ಹೀಗ್ ಮಾಡ್ತಿದ್ದಾರೆ. ಸೆಂಥಿಲ್ ಅದ್ಭುತ ವಿಷನರಿ ಡಿಒಪಿ. ಅವ್ರೇಗೆ ಬಿಟ್ಟು ಇವ್ರನ್ನೂ ಏಕೆ ಸೆಲೆಕ್ಟ್ ಮಾಡಿಕೊಳ್ತಿದ್ದಾರೆ ಗೊತ್ತಿಲ್ಲ. ಹೀಗೊಂದು ಸುದ್ದಿ ಸೌತ್ ಅಂಗಳದಲ್ಲಿ ಹರಿದಾಡ್ತಿದೆ. ತ್ರಿಬಲ್ ಆರ್ ಮೂಲಕ ವರ್ಲ್ಡ್ ವೈಡ್ ಸಿನಿಮಾ ಜಗತ್ತು ನಿಬ್ಬೇರೆಗಾಗಿಸಿರುವ ಮೌಳಿ ಈ ಬಾರಿ ಗ್ಲೋಬಲ್ ಸಿನಿ ಮಾರುಕಟ್ಟೆ ಕಬ್ಜ ಮಾಡುವ ತವಕದಲ್ಲಿದ್ದಾರೆ. ಅದಕ್ಕಾಗಿಯೇ ಹಾಲಿವುಡ್ ತಂತ್ರಜ್ಞನರಿಗೆ ಮಣೆ ಹಾಕುವ ನಿರೀಕ್ಷೆಯೂ ಇದೆ. ಸೆಂಥಿಲ್ ಬದಲು ಹಾಲಿವುಡ್ ಡಿಒಪಿಯನ್ನು ಜಕ್ಕಣ್ಣ ಕರೆತಂದ್ದರು ಅಚ್ಚರಿಪಡಬೇಕಿಲ್ಲ. ಯಾಕಂದ್ರೆ ರಾಜಮೌಳಿ ತ್ರಿಬಲ್ ಆರ್ ಸಿನಿಮಾ ಮೂಲಕ ಹಾಲಿವುಡ್ ಸಿನಿಮೇಕರ್ಸ್ ಗಳನ್ನೇ ಚಕಿತಗೊಳಿಸಿ ಮೌಳಿಗಾರು. ಹೀಗಿದ್ಮೇಲೆ ನಿರೀಕ್ಷೆಗಳು ಇಮ್ಮಡಿಗೊಂಡಿಯಾಗದೇ ಇರುತ್ತಾ? ಆಫ್ ಕೋರ್ಸ್..ಆ ನಿರೀಕ್ಷೆ ತಕ್ಕಂತೆ ಅವ್ರು ಶ್ರಮಿಸ್ಬೇಕಿದೆ. ಮೌಳಿ ಅದೇ ಕೆಲಸದಲ್ಲಿ ನಿರತರಾಗಿದ್ದಾರೆ. ಮಹೇಶ್ ಬಾಬು 29 ಸಿನಿಮಾ ಈ ಎಲ್ಲಾ ಹಿಂದಿನ ಸಿನಿಮಾಗಳಿಗಿಂತ, ಸ್ವತಃ ಜಕ್ಕಣ್ಣ ನಿರ್ದೇಶಿಸಿದ ಈ ಹಿಂದಿನ ಎಲ್ಲಾ ಚಿತ್ರಗಳಿಗಿಂತ ವಿಶೇಷ ವಿಭಿನ್ನ ದುಬಾರಿಯಾಗಿರೋದು ನಿಶ್ಚಿತ.

ಬಾಹುಬಲಿ 200 ಕೋಟಿ ಬಜೆಟ್ ಸಿನಿಮಾ, ಆರ್ ಆರ್ ಆರ್ 550 ಕೋಟಿ ಬಜೆಟ್ ಚಿತ್ರ..ಈ ಚಿತ್ರಗಳಿಗಿಂತಲೂ ಹೊಸ ಸಿನಿಮಾದ ಬಜೆಟ್ ದುಪ್ಪಟ್ಟಾದ್ರೂ ಅಚ್ಚರಿಪಡಬೇಕಿಲ್ಲ. ಯಾಕಂದ್ರೆ ಪ್ರಿನ್ಸ್ ಸಿನಿಮಾ ಅಂಗಳಕ್ಕೆ ರಾಜಮೌಳಿ ಹಾಲಿವುಡ್ ಸೂಪರ್ ಸ್ಟಾರ್ ಕರೆ ತರುವ ತಯಾರಿಯಲಿದ್ದಾರಂತೆ. ಥಾರ್ ಸೇರಿದಂತೆ ಹಲವು ಹಾಲಿವುಡ್ ಮೆಗಾ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಕೊಟ್ಟಿರುವ ಕ್ರಿಸ್ ಹೆಮಸವರ್ತ್ ಮಹೇಶ್ ಬಾಬು ಚಿತ್ರದಲ್ಲಿ ನಟಿಸಲಿದ್ದಾರಂತೆ. ಬಟ್ ಗೆಸ್ಟ್ ಅಪಿಯರೆನ್ಸ್ ನಲ್ಲಿ ಮಾತ್ರ..ಒಂತಂತೂ ಖಚಿತ ಪ್ರಿನ್ಸ್ ಹಾಗೂ ಜಕ್ಕಣ್ಣನ ಪ್ಯಾನ್ ವರ್ಲ್ಡ್ ಪ್ರಾಜೆಕ್ಟ್ ನಲ್ಲಿ ಹಾಲಿವುಡ್ ಸ್ಟಾರ್ ಇರಲಿದ್ದಾರೆ ಅನ್ನೋದನ್ನು ಸ್ವತಃ ಕಥೆಗಾರ ವಿಜಯೇಂದ್ರ ಪ್ರಸಾದ್ ಬಿಚ್ಚಿಟ್ಟಿದ್ದಾರೆ. ಜಕ್ಕಣ್ಣ-ಪ್ರಿನ್ಸ್..ಈ ಕ್ರೇಜಿ ಕಾಂಬಿನೇಷನ್ ನ ಮೋಸ್ಟ್ ಎಕ್ಸ್ ಪೆಕ್ಟೇಡ್ ಪ್ರಾಜೆಕ್ಟ್ ಸದ್ಯ ಪ್ರೀ ಪ್ರೊಡಕ್ಷನ್ ಹಂತದಲ್ಲಿದೆ. ಈ ಚಿತ್ರಕ್ಕಾಗಿ ಮೂರು ತಿಂಗಳು ವರ್ಕ್ ಶಾಪ್ ಆಯೋಜಿಸಲಾಗಿದ್ದು, ಮಹೇಶ್ ಬಾಬು ಶೀಘ್ರದಲ್ಲಿಯೇ ವರ್ಕ್ ಶಾಪ್ ನಲ್ಲಿ ಭಾಗಿಯಾಗಲಿದ್ದಾರೆ. ಹಾಗಿದ್ರೆ ಪ್ರಿನ್ಸ್ ಪಾತ್ರ ಹೇಗಿಲಿದೆ ಎಂಬ ಕುತೂಹಲಕ್ಕೆ ಉತ್ತರವೂ ಸಿಕ್ಕಿದ್ದು, ಹನುಮಾನ್ ಪ್ರೇರೇಪಿತವಾಗಿರಲಿದೆಯಂತೆ.

ಅದು ದೊಡ್ಡ ಮಟ್ಟದಲ್ಲಿ…ಹಾಲಿವುಡ್ ಸ್ಟಾರ್ಸ್ ಜೊತೆಗೆ ಬಾಲಿವುಡ್ ಮಂದಿಯೂ ಪ್ರಿನ್ಸ್ ಅಡ್ಡ ಸೇರಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ. ದೀಪಿಕಾ ಪಡುಕೋಣೆಯನ್ನು ಮಹೇಶ್ ಬಾಬುಗೆ ಜೋಡಿಯಾಗಿ ನಿಲ್ಲಿಸುವ ಐಡಿಯಾ ಹಾಕಿರುವ ಮೌಳಿಗಾರು, ಮಿಸ್ಟರ್ ಫರ್ಪೆಕ್ಷನಿಸ್ಟ್ ಖಳನಾಯಕನಾಗಿ ಕರೆತರಲಿದ್ದಾರೆ ಎನ್ನಲಾಗ್ತಿದೆ. ನೋಡೋಣಾ ಎಲ್ಲವೂ ಅಂತೇ ಕಂತೇಗಳೇ.. ಸ್ಕ್ರೀಪ್ಟ್ ಕೆಲಸ ಫೈನಲ್ ಹಂತದಲ್ಲಿದ್ದು, ಜನವರಿ ಅಥವಾ ಏಪ್ರಿಲ್ ನಲ್ಲಿ ಮೌಳಿ ತಂಡ ಕಟ್ಟಿಕೊಂಡು ಶೂಟಿಂಗ್ ಅಖಾಡಕ್ಕೆ ಧುಮುಕಲಿದ್ದಾರಂತೆ. ಬಾಹುಬಲಿ ಸಿನಿಮಾದಂತೆ ಈ ಪ್ರಾಜೆಕ್ಟ್ ಕೂಡ ಎರಡು ಭಾಗದಲ್ಲಿ ತೆರೆಗೆ ತರುವ ಆಲೋಚನೆ ಮೌಳಿ ತಲೆಯಲ್ಲಿದೆ..ನೋಡೋಣಾ.. ಆದಷ್ಟು ಬೇಗ ಪ್ರಾಜೆಕ್ಟ್ ಟೇಕಾಫ್ ಆಗಲಿ ಅಂತಾ ಬೇಡೆತ್ತಿದೆ ಪ್ರಿನ್ಸ್ ಭಕ್ತಗಣ..





