ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ `ಕಾಟೇರ’ ಸಿನಿಮಾಗೆ ರಿಲೀಸ್ ಡೇಟ್ ಫಿಕ್ಸಾಗಿದೆ. ಟ್ರೇಲರ್, ಸಾಂಗ್ಸ್ ಅಪ್ಡೇಟ್ಗಾಗಿ ಕಾಯ್ತಿದ್ದ ಫ್ಯಾನ್ಸ್ಗೆ ನಿರ್ದೇಶಕ ತರುಣ್ ಸುಧೀರ್ ಬಿಗ್ ಸರ್ ಪ್ರೈಸ್ ಕೊಟ್ಟಿದ್ದಾರೆ. ದಿಢೀರ್ ಅಂತ ಸಿನಿಮಾ ರಿಲೀಸ್ ಡೇಟ್ನ ಘೋಷಣೆ ಮಾಡಿದ್ದಾರೆ. ಇದೇ ಡಿಸೆಂಬರ್ 29ರಂದು ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ `ಕಾಟೇರ’ನಾಗಿ ಕಣಕ್ಕಿಳಿಯುತ್ತಿದ್ದಾರೆ.

ವರ್ಷದ ಆರಂಭದಲ್ಲಿ `ಕ್ರಾಂತಿ’ ಮೂಲಕ ಬೆಳ್ಳಿತೆರೆಗೆ ಕಿಚ್ಚು ಹಚ್ಚಿದ ದಾಸ, ವರ್ಷದ ಕೊನೆಯಲ್ಲಿ `ಕಾಟೇರ’ನಾಗಿ ಕಮಾಲ್ ಮಾಡಲು ಬರುತ್ತಿದ್ದಾರೆ. ಕಿಂಗ್ ಖಾನ್ ಶಾರುಖ್ ನಟನೆಯ `ಡಂಕಿ’ ಹಾಗೂ ಡಾರ್ಲಿಂಗ್ ಪ್ರಭಾಸ್ ನಟನೆಯ ಹೈವೋಲ್ಟೇಜ್ ಸಿನಿಮಾಗಳ ನಡುವೆ ಸೆಣಸಾಡಿ ಸುನಾಮಿ ಎಬ್ಬಿಸೋದಕ್ಕೆ ಸುಲ್ತಾನ್ ಸಜ್ಜಾಗಿದ್ದಾರೆ. ಡಿಸೆಂಬರ್ 22ರಂದು ಸಲಾರ್ ವರ್ಸಸ್ ಡಂಕಿ ಎನ್ನುವಂತಾಗಿದೆ. ಈ ಮಧ್ಯೆ ಒಂದು ವಾರ ಗ್ಯಾಪ್ನಲ್ಲಿ `ಕಾಟೇರ’ ಕಣಕ್ಕಿಳಿಯುತ್ತಿರೋದು ಅಚ್ಚರಿ ಮತ್ತು ಎದೆಗಾರಿಕೆಗೆ ಕಾರಣವಾಗಿದೆ

ಕಾಟೇರ 70ರ ದಶಕದ ಕಥೆಯನ್ನೊಳಗೊಂಡಿರೋ ಚಿತ್ರ ಎನ್ನಲಾಗ್ತಿದೆ. ‘ಉಳುವವನೆ ಭೂಮಿಯ ಒಡೆಯ’ ಕಾಯ್ದೆ ಜಾರಿಯಾದಾಗ ಹಳ್ಳಿಗಳಲ್ಲಿ ನಡೆದ ಸಂಘರ್ಷದ ಕತೆಯುಳ್ಳ ಸಿನಿಮಾದಲ್ಲಿ ದಾಸ ಹಳ್ಳಿಹೈದನಾಗಿ, ಸಖತ್ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ತಾಯಿ ಸೆಂಟಿಮೆಂಟ್ ಕೂಡ ಇರಲಿದ್ದು ಹಿರಿಯ ನಟಿ ಶ್ರುತಿ ಅಮ್ಮನ ಪಾತ್ರಕ್ಕೆ ಜೀವತುಂಬಿದ್ದಾರೆ. ಕನಸಿನ ರಾಣಿ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ದಚ್ಚುಗೆ ನಾಯಕಿಯಾಗಿ ಜೊತೆಯಾಗಿದ್ದಾರೆ. ಅವಿನಾಶ್, ಜಗಪತಿ ಬಾಬು, ವಿನೋದ್ ಆಳ್ವ, ಕುಮಾರ್ ಗೋವಿಂದ್ ಸೇರಿದಂತೆ ಹಿರಿ ಕಲಾವಿದರ ದಂಡೇ ಸಿನಿಮಾದಲ್ಲಿದೆ. ರಾಕ್ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಸಿನಿಮಾ ಅದ್ದೂರಿಯಾಗಿ ಮೂಡಿಬಂದಿದೆ.
‘ಚೌಕ’ ಮತ್ತು ‘ರಾಬರ್ಟ್’ ಚಿತ್ರಗಳ ಬಳಿಕ `ಕಾಟೇರ’ ಮೂಲಕ ಒಂದಾಗಿರೋ ತರುಣ್ ಹಾಗೂ ದಚ್ಚು ಕಾಂಬೋ ಕುತೂಹಲ ಕೆರಳಿಸಿದೆ. ಟೀಸರ್ ಹಾಗೂ ಮೇಕಿಂಗ್ `ಕಾಟೇರ’ ಚಿತ್ರದ ಮೇಲಿನ ನಿರೀಕ್ಷೆಯನ್ನ ಹೆಚ್ಚಿಸಿದ್ದು, ಈಗಾಗಲೇ ಚಿತ್ರದ ಡಿಜಿಟಲ್ ರೈಟ್ಸ್ ಹಾಗೂ ಸ್ಯಾಟಲೈಟ್ ರೈಟ್ಸ್ ದುಬಾರಿ ಮೊತ್ತಕ್ಕೆ ಸೇಲಾಗಿರೋ ಸುದ್ದಿ ಹೊರಬಿದ್ದಿದೆ.ವಿ. ಹರಿಕೃಷ್ಣ ಸಂಗೀತ, ಮಾಸ್ತಿ ಸಂಭಾಷಣೆ ಹಾಗೂ ಸುಧಾಕರ್ ರಾಜ್ ಛಾಯಾಗ್ರಹಣ ಚಿತ್ರಕ್ಕಿದೆ. ನಿರ್ದೇಶಕ ಜಡೇಶ್ ಹಾಗೂ ತರುಣ್ ಚಿತ್ರಕ್ಕೆ ಕತೆ ಸಿದ್ಧಪಡಿಸಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಕೊನೆಯ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿವೆ. ಅದರ ನಡುವೆ ಚಿತ್ರತಂಡ ‘ಕಾಟೇರ’ ರಿಲೀಸ್ ದಿನಾಂಕವನ್ನು ಡಿ. 29ಕ್ಕೆ ಅಂತಿಮಗೊಳಿಸಿದೆ.

ನಿರ್ದೇಶಕ ತರುಣ್ ಸುಧೀರ್ ಖಾಸಗಿ ಪತ್ರಿಕೆಗೆ ಮಾತನಾಡಿ ‘ಈ ವರ್ಷವೇ ಸಿನಿಮಾ ಬಿಡುಗಡೆ ಮಾಡಬೇಕು ಎಂಬ ಪ್ರಯತ್ನದಲ್ಲಿದ್ದೆವು. ಅದರಂತೆ ಈ ವರ್ಷದ ಕೊನೆಯ ಶುಕ್ರವಾರ ಸಿನಿಮಾ ರಿಲೀಸ್ ಮಾಡಲಿದ್ದೇವೆ. ಡಿ. 29ರಂದು ವರ್ಷದಂತ್ಯದ ಜತೆಗೆ ಹೊಸ ವರ್ಷವನ್ನು ಬರಮಾಡಿಕೊಳ್ಳುವ ಸಂಭ್ರಮವಿರಲಿದೆ. ಹಾಗೇ ಸೋಮವಾರ ಜ. 1ರಂದು ರಜೆಯಿರುವ ಕಾರಣ, ಸುದೀರ್ಘ ವೀಕೆಂಡ್ ಸಿಗಲಿದೆ. ಹೀಗಾಗಿ ನಿರ್ಮಾಣ ಸಂಸ್ಥೆ, ಚಿತ್ರತಂಡ ಎಲ್ಲರೂ ಸೇರಿ ಡಿ. 29ಕ್ಕೆ ರಿಲೀಸ್ ಡೇಟ್ ಫಿಕ್ಸ್ ಮಾಡಿದ್ದೇವೆ’ ಎಂದಿದ್ದಾರೆ. ಅಂದ್ಹಾಗೇ, ಡಿಸೆಂಬರ್ ತಿಂಗಳು ಕನ್ನಡದ ಅದೆಷ್ಟೋ ಸಿನಿಮಾಗಳಿಗೆ ಲಕ್ ತಂದುಕೊಟ್ಟಿದೆ. ಬ್ಲಾಕ್ಬಸ್ಟರ್ ಹಿಟ್ ಆಗಿ ಕೋಟಿ ಕೋಟಿ ದುಡ್ಡು ಮೂಟೆ ಕಟ್ಟುವಂತಾಗಿದೆ. ಅದರಂತೇ, ಇದೇ ಡಿಸೆಂಬರ್ 29ರಂದು ಅಖಾಡಕ್ಕೆ ಇಳಿಯುತ್ತಿರೋ ಕಾಟೇರ ಚಿತ್ರವನ್ನ, ಈ ಲಕ್ಕಿ ಮಂತ್ ಕೈ ಹಿಡಿಯುತ್ತಾ? ಜಸ್ಟ್ ವೇಯ್ಟ್ ಅಂಡ್ ವಾಚ್





