-ಕನ್ನಡಿಗರು ಮರೆತೆ ಅಪ್ಪಟ ಕನ್ನಡಿಗ ಕ್ರಿಕೆಟರ್!
-ಧೋನಿಯನ್ನೇ ಮೀರಿಸುವ ಅದ್ಭುತ ಕ್ರಿಕೆಟರ್!

ಬುಧಿ ಸಾಗರ್ ಅತ್ಯಂತ ಕಡಿಮೆ ಅವಧಿಯಲ್ಲಿ ಮಾಡಿರುವ ಸಾಧನೆ ಸಾಮಾನ್ಯದ್ದೇನಲ್ಲ. ಹದಿನೆಂಟು ಟೆಸ್ಟ್ ಪಂದ್ಯಗಳಲ್ಲಿ ೩೨.೭೦ರ ಸರಾಸರಿಯಲ್ಲಿ ೯೮೧ ರನ್ನುಗಳನ್ನು ಪೇರಿಸಿದ್ದರು. ಅದರಲ್ಲಿ ಎರಡು ಶತಕ ಮೂರು ಅರ್ಧಶತಕಗಳು ಒಳಗೊಂಡಿವೆ. ಆಡಿದ ೩೪ ಇನ್ನಿಂಗ್ಸ್’ನಲ್ಲಿ ಅವರು ೨೧ ಬಾರಿ ಆರಂಭಿಕ ಆಟಗಾರನಾಗಿ ಕಾಣಿಸಿಕೊಂಡಿದ್ದರು. ವಿಕೆಟ್ ಕೀಪರ್ ಆಗಿ ೭ ಸ್ಟಂಪಿಂಗ್ ಮತ್ತು ೨೩ ಕ್ಯಾಚ್’ಗಳನ್ನು ಪಡೆದಿದ್ದರು. ೧೨೯ ಮೊದಲ ದರ್ಜೆ ಪಂದ್ಯಗಳಲ್ಲಿ ೨೮.೯೭ರ ಸರಾಸರಿಯಲ್ಲಿ ಒಟ್ಟು ೫,೭೦೮ ರನ್ನುಗಳನ್ನು ಗಳಿಸಿದ್ದರು. ಅದರಲ್ಲಿ ೧೨ ಶತಕ, ೧೯ ಅರ್ಧಶತಕಗಳು. ೧೭೫ ಕ್ಯಾಚುಗಳು ಮತ್ತು ೮೫ ಸ್ಟಂಪಿಂಗ್’ಗಳು. ರಣಜಿಯಲ್ಲಿ ಅವರ ಒಟ್ಟು ಗಳಿಕೆ ೨,೩೬೭ ರನ್ನುಗಳನ್ನು ಪಡೆದಿದ್ದರು. ಈ ಅಂಕಿ ಅಂಶಗಳೇ ಆತ ಎಂಥಾ ಪ್ರತಿಭಾನ್ವಿತ ಕ್ರಿಕೆಟ್ ಆಟಗಾರನಾಗಿದ್ದರು ಎಂಬುದಕ್ಕೆ ಪುರಾವೆಯಂತಿದೆ.
Powered by Media One Solutions.