ಬುಧವಾರ, ಜುಲೈ 2, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

carnivorous plants: ಸಸ್ಯಗಳೂ ಬೇಟೆಯಾಡುತ್ತವೆ!

Majja Webdeskby Majja Webdesk
03/03/2025
in Majja Special
Reading Time: 1 min read
carnivorous plants: ಸಸ್ಯಗಳೂ ಬೇಟೆಯಾಡುತ್ತವೆ!

-ಇದು ಮಾಂಸಾಹಾರಿ ಸಸ್ಯಗಳ ಜಗತ್ತು!

-ಅವುಗಳದ್ದು ಅದ್ಭುತ ಲೋಕ!   

ಈ ಜಗತ್ತಿನ ಆಹಾರ ಕ್ರಮಗಳು, ಅವುಗಳ ವೈವಿಧ್ಯತೆಗಳ ಬಗ್ಗೆ ತಿಳಿದುಕೊಳ್ಳೋದೇ ಒಂದು ಅದ್ಭುತಾನುಭವ. ಈವತ್ತಿಗೂ ನಮ್ಮ ಸುತ್ತಮುತ್ತಲಿನ ಕೆಲವೇ ಕೆಲ ಆಹಾರ ಪದ್ಧತಿಗಳು ಮಾತ್ರವೇ ನಮ್ಮ ಅರಿವಿಗೆ ಬಂದಿರುತ್ತದೆ. ತೀರಾ ಮನುಷ್ಯರ ಆಹಾರ ಪದ್ಧತಿಗಳ ಬಗ್ಗೆಯೇ ನಾನಾ ವಿವಾದಗಳು ಆಗಾಗ ಎದ್ದುಕೊಳ್ಳುತ್ತವೆ. ಮಾಂಸಾಹಾರ ಕನಿಷ್ಠ ಮತ್ತು ಸಸ್ಯಾಹಾರವೇ ಶ್ರೇಷ್ಠ ಎಂಬ ಬಗ್ಗೆ ಚರ್ಚೆ ಹುಟ್ಟಿಕೊಂಡಾಗಲಂತೂ ಮಾರಾಮಾರಿಗಳೇ ನಡೆಯೋದಿದೆ. ಈ ಕ್ಷಣಕ್ಕೂ ನಮ್ಮ ದೇಶದಲ್ಲಿ ಮಾಂಸಾಹಾರಿಗಳ ಸಂಖ್ಯೆಯೇ ಹೆಚ್ಚಿದೆ. ಆದರೂ ಸಸ್ಯಾಹಾರ ಮಾತ್ರವೇ ಶ್ರೇಷ್ಠ ಎಂಬಂಥಾ ವಾದಗಳು ಮಾತ್ರ ಕೆನೆದಾಡುತ್ತಲೇ ಇದ್ದಾವೆ. ಇಂಥಾ ಘಳಿಗೆಯಲ್ಲಿ ವೈಜ್ಞಾನಿಕ ಜಗತ್ತು ಮಾಂಸಾಹಾರ ಅನ್ನೋದು ಹೇಗೆ ಈ ಪ್ರಕೃತಿಕಯ ಭಾಗವಾಗಿದೆ ಅನ್ನೋದನ್ನು ಸಾಬೀತು ಪಡಿಸುತ್ತಿದೆ.


ಸಾಮಾನ್ಯವಾಗಿ ಸಸ್ಯಗಳು ಪ್ರಚೋದನಾತ್ಮಕ ಗುಣ ಹೊಂದಿರೋದಿಲ್ಲ ಎಂಬಂಥಾ ಭಾವನೆ ಇದೆ.ಅಷ್ಟಕ್ಕೂ ಇಂಥಾ ಸಸ್ಯಗಳಿಗೂ ಜೀವವಿದೆ ಎಂಬ ಸಂದೇಶ ಬಲವಾಗಿ ಹಬ್ಬಿಕೊಂಡಿದ್ದೇ ಇತ್ತೀಚೆಗೆಂಬುದು ನಾಗರಿಕ ಜಗತ್ತು ತಲೆ ತಗ್ಗಿಸುವ ಸಂಗತಿ. ವಿಶೇಷವೆಂದರೆ, ಸಸ್ಯಾಹಾರ ಶ್ರೇಷ್ಠ ಎಂಬ ವಾದ ಒಂದು ಕಡೆ ಹುಟ್ಟಿಕೊಂಡಿರುವಾಗ, ಮತ್ತೊಂದು ದಿಕ್ಕಿನಿಂದ ಕೆಲ ಸಸ್ಯಗಳೇ ಮಾಂಸಾಹಾರ ಪ್ರಿಯವಾದವೆಂಬವ ಆಘಾತಕರ ಸತ್ಯವೂ ಜಾಹೀರಾಗುತ್ತಿದೆ. ಕೀಟಗಳನ್ನು ಹೊಂಚು ಹಾಕಿ ಲಬಕ್ಕನೆ ಹಿಡಿದು ತಿನ್ನುವ, ಅದನ್ನು ತಿಂದು ಜೀರ್ಣಿಸಿಕೊಳ್ಳುವ ಇಂಥಾ ಮಾಂಸಾಹಾರಿ ಸಸ್ಯಗಳ ಜಗತ್ತು ನಿಜಕ್ಕೂ ಅಚ್ಚರಿದಾಯಕವಾಗಿದೆ. ಅಂದಹಾಗೆ, ಇದುವರೆಗೂ ಅಂಥಾ ಕೆಲವೇ ಕೆಲ ಸಸ್ಯಗಳ ಬಗ್ಗೆ ಮಾತ್ರವೇ ವಿಜ್ಞಾನಿಗಳು ಮಾಹಿರತಿ ಕಲೆ ಹಾಕಿದ್ದಾರೆ. ಅಂಥಾ ಅದೆಷ್ಟೋ ಅನಾಮಿಕ ಮಾಂಸ ಭಕ್ಷಕ ಸಸ್ಯಗಳು ಈ ಜಗತ್ತಿನಲ್ಲಿವೆಯಂತೆ!

ಮಾಂಸ ಅಂದ್ರೆ ಬಲು ಇಷ್ಟ!


ಈ ಜಗತ್ತಿನ ಚರಾಚರ ಜೀವರಾಶಿಗಳೆಲ್ಲವೂ ಹೊಟ್ಟೆಪಾಡಿಗಾಗಿ ಥರ ಥರದ ಸರ್ಕಸ್ಸು ನಡೆಸುತ್ತವೆ. ಆದರೆ ಅತಿಯಾದ ಆಸೆಯೊಂದಿಗೆ ಮೆರೆಯುತ್ತಿರೋದು ಮನುಷ್ಯ ಪ್ರಾಣಿ ಮಾತ್ರ. ಬಟ್ಟೆಯೂ ಸೇರಿದಂತೆ ಕೆಲವೊಂದು ವಿಚಾರಗಳಲ್ಲಿ ಮನುಷ್ಯ ಪ್ರಾಣಿ ಭಿನ್ನವಾದರೂ ಆಹಾರದ ವಿಚಾರದಲ್ಲಿ ಎಲ್ಲ ಜೀವ ರಾಶಿಗಳಿಗೂ ಕೂಡಾ ಸಾಮ್ಯತೆಗಳಿದ್ದಾವೆ. ಹಸಿವೆಂಬುದು ಜೀವಿಗಳನ್ನು ನಾನಾ ಅವತಾರವೆತ್ತುವಂತೆ ಮಾಡುತ್ತವೆ. ಆದರೆ ಸಸ್ಯಗಳಿಗೂ ಕೂಡಾ ಇಂಥಾ ಹೊಟ್ಟೆ ಪಾಡಿನ ಮ್ಯಾಟರ್ ಬಲು ಮುಖ್ಯವಾಗುತ್ತೆ. ಅವು ಹೊಟ್ಟೆಪಾಡಿಗಾಗಿ ಮಾಂಸಹಾರ ಸೇವಿಸುತ್ತವೆ. ಗಾಳಿ, ಬೆಳಕು, ನೀರು ಮತ್ತು ಮಣ್ಣಿನ ಮೂಲಕವೇ ಸಸ್ಯಗಳು ಬದುಕುಳಿಯುತ್ತವೆಂಬುದು ನಂಬಿಕೆ. ಅದು ನಮ್ಮ ಅರಿವಿಗೂ ಬಂದಿರೋ ಸಾಮಾನ್ಯ ಸತ್ಯ.
ಆದರೆ, ನಮ್ಮ ಪಾಲಿಗೆ ದಕ್ಕಿರೋದು ಅರ್ಧ ಸತ್ಯ ಮಾತ್ರ. ಯಾಕೆಂದರೆ, ಈ ಸಸ್ಯಗಳ ಜೀವನ ಕ್ರಮ ಮತ್ತು ಪ್ರಬೇಧಗಳು ನಮ್ಮೆಲ್ಲರ ಅಂದಾಜನ್ನು ಮೀರಿಕೊಂಡಿವೆ. ಬಹುತೇಕ ಸಸಸ್ಯಗಳು ಮಣ್ಣಿನಿಂದ ದಕ್ಕುವ ನೀರು, ಪೋಶಕಾಂಶಗಳನ್ನು ಹೀರಿಕೊಂಡು ಬದುಕುತ್ತವೆ. ಅದು ಬಿಟ್ಟರೆ ಅವುಗಳಿಗೆ ಬೇರೆ ಆಹಾರ ಮೂಲಗಳಿಲ್ಲ. ಅವುಗಳಿಗೆ ಬೇರೆ ಆಹಾರದ ಅವಶ್ಯಕತೆಯೂ ಇಲ್ಲ. ಹಾಗಂತ ನಾವೆಲ್ಲ ಬಲವಾಗಿ ನಂಬಿಕೊಂಡಿದ್ದೇವೆ. ಆದರೆ ಕೆಲ ವಿಶೇಷವಾದ ಸಸ್ಯಗಳಿಗೆ ಮಣ್ಣಿನಿಂದ ಸಿಕ್ಕುವ ಸಾರಾಂಶಗಳಿಂದ ತೃಪ್ತಿಯಾಗೋದಿಲ್ಲ. ಅದಕ್ಕೆಂದೇ# ಬೇರೊಂದು ಮೂಲದ ಆಹಾರದತ್ತ ಆಕರ್ಷಿತವಾಗುತ್ತವೆ!
ಒಮ್ಮೊಮ್ಮೆ ಸಸ್ಯಗಳಿಗೆ ಬೇಕಾದ ಅತ್ಯಗತ್ಯ ಪೋಶಕಾಂಶಗಳ ಕೊರತೆ ಉಂಟಾಗುತ್ತದೆ. ಬಹು ಮುಖ್ಯವಾಗಿ ಸಾರಜನಕದ ಕೊರತೆ ಕೆಲ ಭಾಗದ ಮಣ್ಣಿನಲ್ಲಿ ಕಂಡುಬರುತ್ತದೆ. ಹಲವಾರು ಸಸ್ಯಗಳು ಇಂತಹ ಕಡಿಮೆ ಸಾರ ಇರುವ ಸ್ಥಳಗಳಲ್ಲಿ ಬೆಳೆಯುತ್ತವೆ. ಆದರೆ, ಯಾವ ರೀತಿಯಿಂದಲೂ ಜೀವ ಉಳಿಸಿಕೊಳ್ಳುವಷ್ಟು ಪೋಶಕಾಂಶಗಳು ಅವುಗಳಿಗೆ ಸಿಗೋದಿಲ್ಲ. ಈ ಕಾರಣದಿಂದ ಅವುಗಳು ಬದುಕುವ ಅನಿವಾರ್ಯತೆಯಿಂದಾಗಿ ಬೇರೆ ಆಹಾರದತ್ತ ವಾಲುತ್ತವೆ. ನಂತರ ಕೆಲ ಬಗೆಯ ಕೀಟಗಳನ್ನು ಹಿಡಿದು ತಿನ್ನುತ್ತವೆ. ಹಿಡಿದು ತಿನ್ನಲು ಬೇಕಾದ ಬಾಹ್ಯ ಆಂತರಿಕ ರಚನೆ ಸಸ್ಯಗಳಿಗಿಲ್ಲ. ಕೆಲ ಮಾಂಸಹಾರಿ ಸಸ್ಯಗಳು ಹೂವು, ಎಲೆಗಳಲ್ಲಿ ಪ್ರಕೃತಿಯಿಂದಲೇ ಕೆಲ ಮಾರ್ಪಾಟುಗಳಾಗಿವೆ. ಅದರ ಬಲದಿಂದಲೇ ಅವರು ಮಾಂಸಾಹಾರಿ ಸಸ್ಯಗಳಾಗಿ ಬದಲಾಗಿ ಬಿಟ್ಟಿವೆ.

ಕೊಲ್ಲಲು ಎಂಥಾ ಸಂಚು!


ಈ ಜಗತ್ತಿಒನಲ್ಲಿ ಅಂಥಾ ಒಂದಷ್ಟು ಮಾಂಸ ಭಕ್ಷಕ ಗಿಡಗಳು ಪತ್ತೆಯಾಗಿವೆ. ಹೂಜಿ ಗಿಡವೂ ಸೇರಿಕೊಳ್ಳುತ್ಗತೆ. ಸಸ್ಯ ಶಾಸ್ತ್ರೀಯವಾಗಿ ಅದನ್ನು ಪಿಚರ್ ಪ್ಲಾಂಟ್ ಅಂತ ಕರೆಯಲಾಗುತ್ತೆ. ಸದರಿ ಸಸ್ಯದ ಎಲೆ ಹೂಜಿಯ ಆಕಾರದಲ್ಲಿ ರೂಪಾಂತರ ಹೊಂದಿದೆ. ಈ ಹೂಜಿಯ ಕಂಠದಿಂದ ಮುಂದಿನ ಪ್ರದೇಶ ಟೊಳ್ಳಾಗಿದೆ. ಅದರ ತುಂಬೆಲ್ಲ ನೀರು ತುಂಬಿಕೊಂಡಿರುತ್ತದೆ. ಇಂಥಾ ಹೂಜಿಯ ಹೊರ ಭಾಗದಲ್ಲಿ ಒಂದು ಸಣ್ಣ ಎಲೆ ಮುಚ್ಚಳದಂತೆ ಕಾರ್ಯ ನಿರ್ವಹಿಸುತ್ತೆ. ಅಂಥಾ ಮುಚ್ಚಳದ ತಳಭಾಗದಲ್ಲಿ ಅತ್ಯಂತ ಸಿಹಿಯಾದ ಲೋಳೆ ರಸವೊಂದಿರುತ್ತೆ. ಅದು ಜೇನನ್ನೇ ಮೀರಿಸುವಂಥಾ ಸಿಹಿಯಾದ ರುಚಿಯನ್ನು ಹೊಂದಿರುತ್ತದೆ.
ಅಂಥಾ ಸಿಹಿ ಪರಿಮಳದ ಮೋಹಕ್ಕೊಳಗಾಗುವ ಇರುವೆಗಳು, ನೋಣಗಳು, ಕೀಟಗಳು, ಸಿಹಿ ಹೀರಲು ಬರುತ್ತವೆ. ಮೈ ಮರೆತು ಆ ಜೇನಿನಂಥಾದ್ದನ್ನು ಹೀರುವ ಸಂದರ್ಭದಲ್ಲಿ ಕೀಟಗಳು ಆಯ ತಪ್ಪಿ ಹೂಜಿಯೊಳಗೆ ಬೀಳುತ್ತವೆ. ಒಮ್ಮೆ ಬಿದ್ದ ನಂತರ ಆ ಕೀಟ ಜೀವ ಕಳೆದುಕೊಳ್ಳದೆ ಬದುಕಿ ಬರಲು ಸಾಧ್ಯವೇ ಇಲ್ಲ ಎಂಬಂಥಾ ಸ್ಥಿತಿ ನಿರ್ಮಾಣವಾಗುತ್ತೆ. ಹಾಗೆ ಹೂಜಿಯ ಒಳಗೆ ಇರುವ ಮತ್ತೊಂದು ದ್ರವಕ್ಕೆ ಬಿದ್ದ ನಂತರ ಕೀಟಗಳು ತಕ್ಷಣವೇ ಜೀವ ಬಿಡುತ್ತವೆ. ಆ ನಂತರದಲ್ಲಿ ಕೀಟಗಳ ದೇಹದಿಂದ ಆ ಸಸ್ಯ ತನ್ನ ಬೆಳವಣಿಗೆಗೆ ಬೇಕಾದ ಸಾರವನ್ನು ಸಣ್ಣ ನಳಿಕೆಯಂತಹ ಭಾಗದಿಂದ ಹೀರುತ್ತವೆ. ಇಂಥಾ ಸಸ್ಯಗಳ ಹೂಜಿಗಳು ಒಮ್ಮೊಮ್ಮೆ ಆಕಾರದಲ್ಲಿ ದೊಡ್ಡದಾಗಿರುತ್ತವೆ. ಅದು ಯಾವ ಪರಿಯಾಗಿ ದೊಡ್ಡದಿರುತ್ತವೆಂದರೆ ಇಲಿಯಂಥಾ ದೊಡ್ಡ ಜೀವಿಗಳು ಅದರೊಳಗೆ ಬಿದ್ದು ಸಾವಿಗೀಡಾಗೋದೂ ಇದೆ. ಹಾಗಾದರೂ ಕೂಡಾ ಇಂಥಾ ಸಸ್ಯಗಳು ಆ ಜೀವಿಗಳನ್ನು ಕರಗಿಸಿ ಪೋಶಕಾಂಶ ಹೀರಿಕೊಳ್ಳುತ್ತವೆ!
ಈ ಹೂಜಿ ಗಿಡವನ್ನು ಯಾರೇ ನೋಡಿದರೂ ಮೋಹಬಬಗೊಳ್ಳೋದು ಗ್ಯಾರೆಂಟಿ. ಹೂವಿನ ಪ್ರೇಮಿಗಳಂತೂ ಇದನ್ನು ಮನೆಯಂಗಳದಲ್ಲಿ ಬೆಳೆಸೆ ಬೇಕೆಂಬ ಆಸೆ ಹೊಂದಿದರೂ ಕೂಡಾ ಅಚ್ಚರಿಯೇನಿಲ್ಲ. ಈ ಸಸ್ಯದ ಆಕಾರ ಮತ್ತು ಬಣ್ಣ ಅತ್ಯಂತ ಸೊಗಸಾಗಿರುತ್ತದೆ. ಹೀಗೆ ಆಕರ್ಷಕವಾಗಿರುವುದರಿಂದ ಕೀಟಗಳು ಬಹುಬೇಗನೆ ಆಕರ್ಷಣೆಗೆ ಒಳಗಾಗುತ್ತವೆ. ಹಾಗಂಥಾ ಈ ಹೂಜಿ ಗಿಡಗಳು ಜಗತ್ತಿನ ತುಂಬೆಲ್ಲ ಒಂದೇ ಬಗೆಯಲ್ಲಿ, ಆಕಾರದಲ್ಲಿ ಕಾಣಿಸಿಕೊಳ್ಳುತ್ತವೆ ಅಂದುಕೊಳ್ಳುವಂತಿಲ್ಲ. ಇವು ಹಲವಾರು ವಿಧಗಳಲ್ಲಿ ಬಣ್ಣ, ಆಕಾರಗಳಲ್ಲಿ ಕಂಡು ಬರುತ್ತದೆ. ಆದರೆ ಅವೆಲ್ಲವೂ ಒಂದಕ್ಕಿಂತ ಒಂದು ಸುಂದರವಾಗಿ, ಅದರೊಳಗಿನ ವಿಷಕಾರಿ ದ್ರವ ಸಿಹಿಯಾಗಿಯೂ ಇರುತ್ತದೆಂಬುದನ್ನು ಸಂಶೋಧನೆಗಳು ಪತ್ತೆಹಚ್ಚಿದ್ದಾವೆ.

ಸಾವಿನ ಬಲೆ!


ಇಂಥಾ ಮಾಂಸಾಹಾರಿ ಸಸ್ಯಗಳು ಬೇಟೆಯಾಡಲು ಹೊಂದಿಒರುವ ದೇಹರಚನೆಗಳೇ ನಿಜಕ್ಕೂ ಬೆಚ್ಚಿ ಬೀಳಿಸುವಂತಿವೆ. ಅಂಥಾ ಅತ್ಯಂತ ಅಪಾಯಕರ ಗುಣ ಲಕ್ಷಣಗಳನ್ನು ಹೊಂದಿರುವ ಮಾಂಸ ಭಕ್ಷಕ ಸಸ್ಯ ವೀನಸ್. ಇದು ಕೂಡಾ ಇನ್ನೊಂದು ಬಗೆಯ ವಿಶೇಷವಾದ ಮಾಂಸಹಾರಿ ಸಸ್ಯ. ಇದು ಕೀಟಗಳನ್ನು ಸೆಳೆಯಲು ಎಲೆಯನ್ನೇ ಅಸ್ತ್ರವಾಗಿಸಿಕೊಂಡಿರುತ್ತದೆ. ಅದರ ಎಲೆಗಳು ಕೀಟಗಳನ್ನು ಬೇಟೆಯಾಡುವುದಕ್ಕೋಸ್ಕರ ವಿಶೇಷವಾದ ಬಲೆಯನ್ನು ನಿರ್ಮಿಸಿಕೊಳ್ಳುತ್ತದೆ. ಪರಸ್ಪರ ಮುಚ್ಚಿ ಕೊಳ್ಳುವ ಚಿಪ್ಪುಗಳಂತಹ ಆಕಾರವನ್ನು ಇದರ ಎಲೆಗಳು ಒಳಗೊಂಡಿರುತ್ತವೆ. ಈ ಸಸ್ಯಗಳು ನೋಡಲು ಬಹಳ ಆಕರ್ಷಕವಾಗಿರುತ್ತವೆ. ಅವುಗಳ ಒಳ ಮೈಯಲ್ಲಿ ಇತರೇ ಮಾಂಸ ಭಕ್ಷಕಗಳಂತೆಯೇ ಸಿಹಿಯಾದ ಜೇನಿನಂತಹ ಅಂವಿರುತ್ತದೆ. ಸುತ್ತ ಸುಳಿದಾಡೋ ಕೀಟಗಳು ಅನಾಯಾಸವಾಗಿ ಇದರ ಆಕರ್ಷಣೆಗೆ ಸಿಲುಕಿ, ಕ್ಷಣಾರ್ಧದಲ್ಲಿಯೇ ಪ್ರಾಣ ಕಳೆದುಕೊಳ್ಳುತ್ತವೆ.
ಹೀಗೆ ಆಕರ್ಷಣೆಗೊಳಗಾಗುವಂಥಾ ಬಡಪಾಯಿ ಕೀಟಗಳು ಈ ಸಸ್ಯದ ಎರಡು ಕವಾಟಗಳ ನಡುವಿನ ಭಾಗಕ್ಕೆ ಸುಳಿಯುತ್ತವೆ. ಅಲ್ಲಿ ಅತ್ಯಂತ ಸೂಕ್ಷ್ಮ ಗುಣ ಹೊಂದಿರುವ ತೆಳುವಾದ ಕಡ್ಡಿಗಳಂತಹ ಆಕಾರದ ಕೋಶಗಳಿರುತ್ತವೆ. ಅಲ್ಲಿ ಸುಳಿಯುವ ಕೀಟಗಳ ಕಾಲು ಅಥವಾ ಮೈಯ ಯಾವುದಾದರೂ ಭಾಗ ಆ ಕಡ್ಡಿಗಳಿಗೆ ತಾಗಿದಾಗ ಈ ಸಸ್ಯಗಳು ತಕ್ಷಣವೇ ಕವಾಟವನ್ನು ಮುಚ್ಚಿ ಬಿಡುತ್ತವೆ. ಆ ಕವಾಟದ ತುದಿಗಳಲ್ಲಿ ಮುಳ್ಳುಗಳಂಥಾ ಕೋಶಗಳಿರೋದರಿಂದ ಕೀಟ ಆ ಕವಾಟದೊಳಗೇ ಬಂಧಿಒಯಾಗಿ ಜೀವನ್ಮರಣಗಳ ಜೊತೆ ಹೋರಾಡುವಂತಾಗುತ್ತೆ. ಒಮ್ಮೆ ಕೀಟವೊಂದು ಆ ಕವಾಟ ಸೇರಿಕೊಂಡ ನಂತರ ತಿಪ್ಪರ ಲಾಗಾ ಹೊಡೆದರೂ ಕೂಡಾ ಹೊರ ಬರಲಾಗೋದಿಲ್ಲ. ಮಿಸುಕಾಡಿದಷ್ಟೂ ಆ ಬಂಧ ಬಿಗಿಯಾಗುತ್ತಾ ಹೋಗುತ್ತೆ. ಕೀಟ ಜೀವ ಕಳೆದುಕೊಂಡ ನಂತರ ಕವಾಟದ ಂಶಿನಲ್ಲಿರುವ ಕೋಶಗಳು ಕೀಟದ ದೇಹದಿಂದ ಸಾರವನ್ನು ಹೀರುತ್ತಾ ಸಸ್ಯಗಳಿಗೆ ದಷ್ಟಪುಷ್ಟವಾಗಿ ಬೆಳೆಯಲು ಅನುವು ಮಾಡಿ ಕೊಡುತ್ತವೆ!

ಸಾವು ಸುಂದರವಾಗಿರುತ್ತೆ!


ಇಂಥಾ ಮಾಂಸ ಭಕ್ಷಕ ಸಸ್ಯಗಳ ದೇಹ ರಚನೆಯೇ ಅತ್ಯಂತ ವಿಶಿಷ್ಟವಾಗಿರುತ್ತದೆ. ಅಂಥಾ ಮಾಂಸಾಹಾರಿ ಸಸ್ಯಗಳಲ್ಲಿ ಸನ್ ಡ್ಯೂ ಅಥವಾ ಡ್ರಾಸಿರಾ ಎಂಬ ಸಸ್ಯವೂ ಸೇರಿಕೊಳ್ಳುತ್ತೆ. ಇದೂ ಕೂಡಾ ಅತ್ಯಂತ ಆಕರ್ಷಕವಾಗಿರೋ ಸಸ್ಯ. ಇದನ್ನು ನೋಡಿದ ಯಾರಿಗಾದರೂ ಅರೆಕ್ಷಣ ಪ್ರೀತಿ ಮೂಡಿಕೊಳ್ಳುತ್ತೆ. ಈ ಸಸ್ಯದವ ಎಲೆಯ ಸುತ್ತಲೂ ಮಣಿಗಳಂತಹ ರಚನೆ ಇರುತ್ತದೆ. ಇದು ಮಂಜಿನ ಹನಿಗಳಂತೆ ಇರುತ್ತದೆ. ಅಂಥಾ ಎಲೆಯೇ ಈ ಸಸ್ಯದ ಬೇಟೆಯ ವೆಪನ್ನು. ಸೂರ್ಯನ ಬೆಳಕು ಇದರ ಮೇಲೆ ಬಿದ್ದಾಗ ಆಕರ್ಷಕವಾಗಿ ಹೊಳೆಯುತ್ತದೆ. ಈ ಕಾರಣದಿಂದ ಸದರಿ ಸಸ್ಯವನ್ನು ಸನ್ ಡ್ಯೂ ಎಂದೂ ಕರೆಯಲಾಗುತ್ತೆ. ಇಂಥಾ ಆಕರ್ಷಕ ಹನಿಗಳು ತಮ್ಮೊಳಗೆ ಅನಾಹುತಕಾರಿ ವಿಷವನ್ನು ಬಚ್ಚಿಟ್ಟುಕೊಂಡಿರುತ್ತವೆ. ಅದ್ರ ಮೋಹಕ್ಕೆ ಸಿಕ್ಕು ಬಳಿ ಬರುವ ಯಾವ ಕೀಟವೂ ಜೀವಂತವಾಗಿ ಮರಳಲು ಸಾಧ್ಯವೇ ಇಲ್ಲ!
ಅಂಥಾದ್ದೊಂದು ಅಪಾಯಕಾರಿ ವಿಷದ ಕೋಶಗಳು ಆ ಹನಿಗಳಲ್ಲಿರುತ್ತವೆ. ಈ ಹನಿಗಕೇವಲ ಸುಂದರವಾಗಿರೋದಿಲ್ಲ; ಅದಕ್ಕೆ ಜೇನಿನಂತಹ ಸಿಹಿಯಾದ ರುಚಿಯೂ ಮೆತ್ತಿಕೊಂಡಿರುತ್ತೆ. ಅತ್ಯಂತ ವಿಶೇಷವಾದ ಪರಿಮಳವೂ ಕೂಡಾ ಅದಕ್ಕಿರುತ್ತದೆ. ಈ ಸುಗಂಧಕ್ಕೆ ಆಕರ್ಷಿತವಾಗುವ ಕೀಟಗಳು ಈ ಸಸ್ಯದ ಮೇಲೆ ಕುಳಿತುಕೊಂಡು ಆ ಜೇನಿನ ರುಚಿಯನ್ನು ಸವಿಯಲು ಮುಂದಾಗುತ್ತವೆ. ತಕ್ಷಣವೇ ಅದಕ್ಕೆ ಇದೊಂದು ಸಾವಿನ ಬಲೆಯೆಂಬ ವಾಸ್ತವದ ಅರಿವಾಗುತ್ತೆ. ಆದರೆ ತಪ್ಪಿಸಿಕೊಳ್ಳಲು ಮಾತ್ರವ ಯಾವ ಮಾರ್ಗವೂ ಉಳಿದುಕೊಂಡಿರೋದಿಲ್ಲ. ಅದೇನೇ ಸಕ್ಕಸ್ಸು ಮಾಡಿದರೂ ಆ ವಿಷದಿಂದ ಬಿಡುಗಡೆಗೊಳ್ಳಲು ಸಾಧ್ಯವೇ ಇಲ್ಲ. ಆ ಹನಿಗಳು ಭಯಂಕರವಾಗಿ ಅಂಟುತನ ಹೊಂದಿರುತ್ತವೆ. ಆ ಅಂಟಿಗೆ ಕೀಟಗಳು ಒಮ್ಮೆ ಸಿಲುಕಿದರೆ ಮತ್ತೆ ಬಿಡಿಸಿಕೊಳ್ಳಲು ಸಾಧ್ಯವೇ ಇಲ್ಲ!
ಹೀಗೆ ಬರುವ ಕೀಟಗಳನ್ನು ಅತ್ಯಂತ ವ್ಯವಸ್ಥಿತವಾಗಿ ಸಂಹಾರ ಮಾಡುವಂಥಾ ಶಕ್ತಿ ಅಂಥಾ ಸಸ್ಯಗಳಿಗೆ ಧಾರಾಳವಾಗಿರುತ್ತದೆ. ಅತ್ಯಂತ ಕಡಿಮೆ ಅವಧಿಯಲ್ಲಿಯೇ ಆ ಸಸ್ಯದ ವಿಷಕಾರಿ ಕೋಶಗಳು ಕೀಟವನ್ನು ಆವರಿಸಿಕೊಳ್ಳುತ್ತವೆ. ನಂತರ ಆ ಕೀಟವನ್ನು ಸಾಯಿಸಿ ಯಥೇಚ್ಛವಾಗಿ ಅದರ ದೇಹದ ಸಾರವನ್ನು ಹೀರಿಕೊಳ್ಳುತ್ತದೆದಿಂಥಾ ಡೆಡ್ಲಿ ಹೂವಿಗೆ ಡ್ರಾಸಿರಾ ಸಸ್ಯವೆಂದೂ ಹೆಸರಿದೆ. ಈ ಸಸ್ಯಗಳಲ್ಲಿ ಸುಮಾರು ಇನ್ನೂರೈವತ್ತು ಬಗೆಯ ಪ್ರಭೇಧUಳನ್ನು ಈವರೆಗೂ ಪತ್ತೆಹಚ್ಚಲಾಗಿದೆ. ಇದರಲ್ಲಿ ಥರ ಥರದ ಸಸ್ಯಗಳಿದ್ದಾವೆ. ಬಿಳಿ, ನೀಲಿ ಮುಂತಾದ ಹೂ ಬಿಡುವ ಸಸ್ಯಗಳಿದ್ದಾವೆ. ಇವು ಹೆಚ್ಚಾಗಿ ಜೌಗು ಪ್ರದೇಶದಲ್ಲಿ ಕಂಡು ಬರುತ್ತವೆ. ಅಂಥಾ ಮಣ್ಣಿನ ಸಾರವೆಲ್ಲ ನೀರಿನಲ್ಲಿ ಬಸಿದು ಹೋಗಿರೋದರಿಂದ ಪೋಶಕಾಂಶ ಸಿಗದೆ ಈ ಸಸ್ಯಗ್ಳು ಮಾಂಸಾಹಾರಿಗಳಾಗಿ ಬದಲಾಗುತ್ತವೆಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ!
ಹೀಗೆ ಮಾಂಸಾಹಾರ ಭಕ್ಷಣೆ ಮಾಡುತ್ತಾ, ಅದನ್ನೇ ಜೀವನ ಕ್ರಮವಾಗಿಸಿಕೊಂಡಿರುವ ಹಲವಾರು ಸಸ್ಯಗಳು ಈ ಜಗತ್ತಿನಲ್ಲಿದ್ದಾವೆ. ಮಾಂಸಹಾರಿಯಾಗಿರುವ ಇನ್ನೂ ಒಂದಷ್ಟು ಭಯಾನಕ ಸಸ್ಯಗಳಿದ್ದಾವೆ. ತಾನು ಬದುಕೋ ಉದ್ದೇಶದಿಂದ ಬೇರೆ ಜೀವಿಗಳಮ್ಮು ಕೊಂದು ತಿನ್ನುವ ಇಂಥಾ ಈ ಸಸ್ಯಗಳ ಜೀವನ ಶೈಲಿಯೇ ಭಯಾನಕ. ಇವು ಓಡಾಡುವ ಜೀವಿಗಳಂತೆ ಮೆದುಳನ್ನು ಹೊಂದಿರೋದಿಲ್ಲ. ಆದ ಕಾರಣ ಆಲೋಚನಾ ಶಕ್ತಿಯೂ ಇರುವುದಿಲ್ಲ. ಬೇಟೆಯೊಂದನ್ನು ಬಲಿ ಬೀಳಿಸುವಂಥಾ ತಂತ್ರಗಳು ಈ ಸಸ್ಯಗಳ ಯಾವ ಭಾಗದಿಂದಲೂ ರವಾನೆಯಾಗೋದಿಲ್ಲ. ಅದನ್ನೂ ಮೀರಿಸುವಂಥಾ ಶಕ್ತಿಯನ್ನು ಈ ಪ್ರಕೃತಿಯೇ ಇಂಥಾ ಸಸ್ಯಗಳಿಗೆ ಕೊಡಮಾಡಿವೆ. ಆ ಬಲದಿಂದಲೇ ಈ ಸಸ್ಯಗಳು ಮಾಂಸಾಹಾರಿಗಳಾಗಿ ಬದುಕುತ್ತಿದ್ದಾವೆ.


ಇಂಥಾ ಅಪಾಯಕಾರಿ ಮಾಂಸಾಹಾರಿ ಸಸ್ಯಗಳು ವಿಶ್ವದ ನಾನಾ ದೇಶಗಲ್ಲಿದ್ದಾವೆ. ಅಂಥಾದ್ದೇ ಒಂದು ಪ್ರಬೇಧವನ್ನು ಇತ್ತೀಚೆಗೆ ಭಾರತದಲ್ಲಿಯೂ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಅಳಿವಿನಂಚಿನಲ್ಲಿರುವ ಸಸ್ಯ ಸಂಕುಲಗಳನ್ನು ಸಂರಕ್ಷಿಸಲು ಟೊಂಕ ಕಟ್ಟಿ ನಿಂತಿರುವ ಉತ್ತರಾಖಂಡ ಅರಣ್ಯ ಇಲಾಖೆಯ ಸಂಶೋಧನಾ ವಿಭಾಗ ಹಲವು ಸಾಧನೆಗಳಿಗೆ ಹೆಸರುವಾಸಿಯಾಗಿದೆ.ವಿತ್ತೀಚೆಗೆ ಸಂಶೋಧನಾ ಈ ತಂಡ ಚಮೋಲಿಯ ಗೋಪೇಶ್ವರ ಶ್ರೇಣಿಯ ಮಂಡಲ ಕಣಿವೆಯಲ್ಲಿ ಯುಟ್ರಿಕ್ಯುಲೇರಿಯಾ ಫರ್ಸೆಲ್ಲಾಟಾ ಎಂಬ ಮಾಂಸಾಹಾರಿ ಸಸ್ಯವೊಂದನ್ನು ಪತ್ತೆಹಚ್ಚಿದೆ. ಉತ್ತರಾಖಂಡ ಅರಣ್ಯ ಇಲಾಖೆಯ ಸಂಶೋಧನಾ ವಿಭಾಗದ ತಂq ಅತ್ಯಂತ ಅಪರೂಪದ ಮಾಂಸಾಹಾರಿ ಸಸ್ಯ ಪ್ರಭೇದವನ್ನು ಕಂಡುಹಿಡಿದಿದೆ. ಈ ಮೂಲಕ ಭಾರತದಲ್ಲಿಯೂ ಇಂಥಾ ಸಸ್ಯ ಪ್ರಬೇಧವಿರೋದು ಜಗತ್ತಿಗೆ ಗೊತ್ತಾದಂತಾಗಿದೆ.
ಉತ್ತರಾಖಂಡದಲ್ಲಿ ಈ ಮಾಂಸಾಹಾರಿ ಸಸ್ಯವನ್ನು ಪತ್ತೆ ಹಚ್ಚಿದ್ದೇ ಒಂದು ರೋಚಕ ಕಾರ್ಯಾಚರಣೆ. ಅರಣ್ಯ ಇಲಾಖೆಯ ಸಂಶೋಧನಾ ವಿಭಾಗದ ತಂಡ ಗೋಪೇಶ್ವರದ ಮಂಡಲ ಕಣಿವೆಯಲ್ಲಿ ಈ ಮಾಂಸಾಹಾರಿ ಸಸ್ಯ ಉಟ್ರಿಕ್ಯುಲೇರಿಯಾ ಫರ್ಸೆಲ್ಲಾಟಾವನ್ನು ಕಡೆಗೂ ಪತ್ತೆಹಚ್ಚುವಲ್ಲಿ ಯಶ ಕಂಡಿದೆ. ಈ ಕೀಟಹಾರಿ ಸಸ್ಯ ಉತ್ತರಾಖಂಡದಲ್ಲಿ ಮಾತ್ರವಲ್ಲದೆ ಇಡೀ ಭಾರತದ ಪಶ್ಚಿಮ ಹಿಮಾಲಯ ಪ್ರದೇಶದಲ್ಲಿದೆ. ಮೊದಲ ಬಾರಿಗೆ ಅಪರೂಪದ ಈ ಸಸ್ಯ ಇಲ್ಲಿ ಕಂಡುಬಂದಿದೆ. ಸಸ್ಯವು ಭಾರತದ ಯಾವುದೇ ಭಾಗದಲ್ಲಿ ಕಂಡುಬಂದಿರಲಿಲ್ಲ. ಉತ್ತರಾಖಂಡದ ಪ್ರವಾಸಿ ತಾಣದೊಳಗೆ ಜೈವಿಕ ಒತ್ತಡದಿಂದಾಗಿ ಈ ಜಾತಿಯ ಸಸ್ಯ ಅಪಾಯ ಎದುರಿಸುತ್ತಿz. ಅದನ್ನು ಸಂರಕ್ಷಿಸಿ ಆಹಾರ ಸರಪಳಿಯನ್ನು ಕಾಪಾಡಿಕೊಳ್ಳುವ ಪ್ರಾಮಾಣಿಕ ಪ್ರಯತ್ನಗಳೀಗ ಚಾಲ್ತಿಯಲ್ಲಿವೆ. ಹೀಗೆ ಪತ್ತೆಯಾಗಿರೋ ಸಸ್ಯ ಭಯಾನಕ ಜೀವನ ಕ್ರಮ ಹೊಂದಿದೆ. ಇದು ಬ್ಲಾಡರ್‌ವರ್ಟ್ಸ್ ಎಂದು ಕರೆಯಲ್ಪಡುವ ಪ್ರಬೇಧಕ್ಕೆ ಸೇರಿದೆ. ಇದು ಥರ ಥರದ ಕೀಟಗಳ ಲಾರ್ವಾಗಳನ್ನು ಭಕ್ಷಿಸಿ ಆ ಮೂಲಕ ಸಾರಜನಕ ಪಡೆದು ಬದುಕುತ್ತದೆಯಂತೆ!

 

Tags: #carnivorousplants#wonderfacts

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
wonderful life cycle of honey bee: ಒಂದು ಚಮಚ ಜೇನಿನ ಹಿಂದೆ ಅದೆಷ್ಟು ಶ್ರಮವಿರುತ್ತೆ ಗೊತ್ತಾ?

wonderful life cycle of honey bee: ಒಂದು ಚಮಚ ಜೇನಿನ ಹಿಂದೆ ಅದೆಷ್ಟು ಶ್ರಮವಿರುತ್ತೆ ಗೊತ್ತಾ?

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.