ಪರಿಸರ ಕಾಳಜಿ ಮತ್ತು ಅರಿವನ್ನು ಮೂಡಿಸುವ ಫ್ಯಾಮಿಲಿ ಡ್ರಾಮಾ ಶೈಲಿಯ ‘ಜಲಪಾತ’ ಸಿನಿಮಾದ ಬಿಡುಗಡೆಗೆ ಸೆನ್ಸಾರ್ ನಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಇತ್ತೀಚೆಗೆ ‘ಜಲಪಾತ’ ಸಿನಿಮಾವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಸಿನಿಮಾಕ್ಕೆ ಯಾವುದೇ ಕಟ್ಸ್ ಅಥವಾ ಮ್ಯೂಟ್ಸ್ ಹೇಳದೆ ‘ಯು’ ಪ್ರಮಾಣ ಪತ್ರ ನೀಡಿ ಬಿಡುಗಡೆಗೆ ಅಸ್ತು ಎಂದಿದೆ.

ಇದೇ ಖುಷಿಯಲ್ಲಿರುವ ಚಿತ್ರತಂಡ, ಇದೇ ಅಕ್ಟೋಬರ್ 13 ಕ್ಕೆ ‘ಜಲಪಾತ’ ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ. ‘ಇಂಡಸ್ ಹರ್ಬ್ಸ್’ ನ ಟಿ. ಸಿ ರವೀಂದ್ರ ತುಂಬರಮನೆ ನಿರ್ಮಿಸಿರುವ ಈ ಸಿನಿಮಾವನ್ನು ರಮೇಶ್ ಬೇಗಾರ್ ನಿರ್ದೇಶಿಸಿದ್ದಾರೆ.
‘ಜಲಪಾತ’ ಸಿನಿಮಾದಲ್ಲಿ ರಜನೀಶ್ ನಾಯಕನಾಗಿ ನಟಿಸಿದ್ದು, ನಾಗಶ್ರೀ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ನಟ ಪ್ರಮೋದ್ ಶೆಟ್ಟಿ ವಿಭಿನ್ನ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ. ರವಿಕುಮಾರ್ , ನಟರಾಜ್ , ವಿಶ್ವನಾಥ್ , ರೇಖಾ ಪ್ರೇಮ್ ಕುಮಾರ್ ದತ್ತಾತ್ರಿ , ಚಂದ್ರಶೇಖರ್ , ಎಂ. ಆರ್. ಸುರೇಶ್ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.





