ಟೀಸರ್ ಮೂಲಕ ದರ್ಬಾರ್ ಶುರು ಮಾಡಿರುವ ಉಪಾಧ್ಯಕ್ಷ ಈಗ ಲವ್ಲಿ ಮೂಡ್ ಗೆ ಜಾರಿದ್ದಾನೆ. ಕಾಮಿಡಿ ಕಿಂಗ್ ಚಿಕ್ಕಣ್ಣ ನಾಯಕನಾಗಿ ಬಣ್ಣ ಹಚ್ಚಿರುವ ಉಪಾಧ್ಯಕ್ಷ ಸಿನಿಮಾದ ಪ್ರೇಮಗೀತೆ ಅನಾವರಣಗೊಂಡಿದೆ. ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿರುವ ನನಗೆ ನೀನು ಎಂಬ ಲವ್ ನಂಬರ್ ನಲ್ಲಿ ಮಲೈಕಾ ಜೊತೆ ಚಿಕ್ಕಣ್ಣ ಡ್ಯುಯೆಟ್ ಆಡಿದ್ದಾರೆ.
ಎಪಿ ಅರ್ಜುನ್ ಕ್ಯಾಚಿ ಮ್ಯಾಚಿ ಸಾಹಿತ್ಯದ ನನಗೆ ನೀನು ಎಂಬ ಗಾನಬಜಾನಕ್ಕೆ ವಿಜಯ್ ಪ್ರಕಾಶ್ ಹಾಗೂ ರಕ್ಷಿತಾ ಸುರೇಶ್ ಕಂಠ ಕುಣಿಸಿದ್ದು, ಅರ್ಜುನ್ ಜನ್ಯ ಟ್ಯೂನ್ ಹಾಕಿದ್ದಾರೆ. ಸುಂದರ ಲೋಕೇಷನ್ ನಲ್ಲಿ ಶೂಟ್ ಆಗಿರುವ ಹಾಡಿನಲ್ಲಿ ಚಿಕ್ಕಣ್ಣ ಹಾಗೂ ಮಲೈಕಾ ಜೋಡಿ ಮುದ್ದು ಮುದ್ದಾಗಿ ಕಾಣಿಸಿಕೊಂಡಿದೆ.
ಅಧ್ಯಕ್ಷ ಸಿನಿಮಾದ ಸೀಕ್ವೆಲ್ ಆಗಿರುವ ಉಪಾಧ್ಯಕ್ಷ ಸಿನಿಮಾಗೆ ಚಂದ್ರಮೋಹನ್ ಕಥೆ ಬರೆದಿದ್ದು, ಅನಿಲ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಉಮಾಪತಿ ಫಿಲ್ಮಂಸ್ ಲಾಂಛನದಡಿ ಉಮಾಪತಿ ಗೌಡ ಪತ್ನಿ ಸ್ಮಿತಾ ಉಮಾಪತಿ ಉಪಾಧ್ಯಕ್ಷನಿಗೆ ಫಂಡ್ ಮಾಡಿದ್ದಾರೆ. ರವಿಶಂಕರ್, ವೀಣಾ ಸುಂದರ್, ಸಾಧುಕೋಕಿಲಾ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ಸದ್ಯ ಲವ್ ನಂಬರ್ ಮೂಲಕ ಉಪಾಧ್ಯಕ್ಷ ನವಪ್ರೇಮಿಗಳ ಹೃದಯದಲ್ಲಿ ಚಿಟ್ಟಿ ಬಿಟ್ಟಿದ್ದಾನೆ.





